Viral Post: 10 ಸೆಕೆಂಡಿನಲ್ಲಿ ಜಿಂಕೆ ಎಲ್ಲಿದೆ ಎಂದು ಕಂಡುಹಿಡಿಯುತ್ತೀರಾ?

Trending: ಈ ಪರ್ವತದ ಹಾದಿಯಲ್ಲಿ ಜಿಂಕೆಯೊಂದು ಅಡಗಿ ಕುಳಿತಿದೆ. ನಿಮ್ಮ ಕಣ್ಣು ಮತ್ತು ಮೆದುಳು ಎಷ್ಟು ಚುರುಕುತನದಿಂದ ಕೂಡಿದೆ? ಪರೀಕ್ಷಿಸಿಕೊಳ್ಳಿ.

Viral Post: 10 ಸೆಕೆಂಡಿನಲ್ಲಿ ಜಿಂಕೆ ಎಲ್ಲಿದೆ ಎಂದು ಕಂಡುಹಿಡಿಯುತ್ತೀರಾ?
ಎಲ್ಲಿದೆ ಇಲ್ಲಿ ಜಿಂಕೆ?
Edited By: ಶ್ರೀದೇವಿ ಕಳಸದ

Updated on: Aug 04, 2022 | 5:12 PM

Trending : ಊಟ ಮಾಡಿ ಮತ್ತೆ ಆಫೀಸು ಕೆಲಸದಲ್ಲಿ ತೊಡಗಿಕೊಂಡಿರುತ್ತೀರಿ. ಹೊಟ್ಟೆ ತುಂಬಿದ ಕಾರಣ ಮನಸ್ಸನ್ನು ಹಿಡಿತಕ್ಕೆ ತಂದು ಕೆಲಸ ಮಾಡಲು ಆಲಸ್ಯ ಉಂಟಾಗುತ್ತಿರಬಹುದು. ಮನೆಯಲ್ಲಿರುವ ಕೆಲವರಿಗೆ ನಿದ್ದೆ ಎಳೆಯುತ್ತಿರಬಹುದು. ಆದರೆ ಮಲಗಿದರೆ ದೇಹಕ್ಕೆ ಜಿಡ್ಡು ಹಿಡಿಯುತ್ತದೆ. ಹಾಗಿದ್ದರೆ ಇದಕ್ಕೇನು ಉಪಾಯ? ಮೆದುಳಿಗೆ ಕಸರತ್ತು ನೀಡುವುದು! ಇಲ್ಲಿದೆಯಲ್ಲ ಈ ಫೋಟೋ ಈಗ ಅಂತರ್ಜಾಲದಲ್ಲಿ ಜನಪ್ರಿಯವಾಗಿದೆ.  ಈ
ಬೆಟ್ಟದಲ್ಲಿ ಅಡಗಿರುವ ಜಿಂಕೆಯನ್ನು ಕೆಲವರು 10 ಸೆಕೆಂಡುಗಳಲ್ಲಿ ಕಂಡುಹಿಡಿದಿದ್ದಾರೆ. ಇನ್ನೂ ಕೆಲವರು 5 ನಿಮಿಷಗಳಾದರೂ ಹುಡುಕಲು ಸಾಧ್ಯವಾಗಿಲ್ಲ.  ಯಾಕೆ ಈ ಜಿಂಕೆಯನ್ನು ಗುರುತಿಸುವುದು ಕಷ್ಟವಾಗುತ್ತಿದೆ?

ಜಿಂಕೆಯ ಮೈಬಣ್ಣ ಮತ್ತು ಬೆಟ್ಟದ ಮೇಲ್ಮೈ ಹೊದಿಕೆ ಒಂದೇ ಬಣ್ಣದಿಂದ ಕೂಡಿರುವುದರಿಂದ ಗುರುತಿಸುವುದು ನಿಮಗೆ ಕಷ್ಟವಾಗುತ್ತಿದೆ. ಜಿಂಕೆಯು ಬೇಟೆಗಾರರಿಂದ ತಪ್ಪಿಸಿಕೊಳ್ಳಲು ಹೂಡುವ ಉಪಾಯವಿದು. ತಪ್ಪಲು ಪ್ರದೇಶದಿಂದ ದೂರಬಂದು, ಬೆಟ್ಟಪ್ರದೇಶಗಳಲ್ಲಿ ಓಡಾಡಿಕೊಂಡು ತನ್ನನ್ನು ತಾ ರಕ್ಷಿಸಿಕೊಳ್ಳುವುದು ಇದರ ಸ್ವಭಾವ. ಮನುಷ್ಯರದ್ದಷ್ಟೇ ಭಯ ಇದಕ್ಕಿಲ್ಲ. ಹುಲಿ, ಚಿರತೆ, ಸಿಂಹಗಳ ಪ್ರಿಯ ಆಹಾರವೂ ಇದೇ ಅಲ್ಲವೆ? ಹಾಗಾಗಿ ಜಿಂಕೆ ತನ್ನ ಮೈಬಣ್ಣದ ಪರ್ವತವನ್ನೇರುತ್ತ ಏರುತ್ತ ಸ್ವಯಂರಕ್ಷಣೆ ಮಾಡಿಕೊಳ್ಳುತ್ತದೆ.

ಸರಿ ಈಗ ಮತ್ತೊಮ್ಮೆ ಚಿತ್ರವನ್ನು ನೋಡಿ. ಸಿಕ್ಕಲ್ಲಿ ನಿಮ್ಮ ಕಣ್ಣು ಚುರುಕಾಗಿದೆ ಎಂದರ್ಥ! ಇಲ್ಲವಾದಲ್ಲಿ ಬೇಸರಿಕೊಳ್ಳದೆ ಈ ಕೆಳಗಿನ ಫೋಟೋ ನೋಡಿ. ಕಾಣುತ್ತಿದೆಯಾ? ಕಾಣಲೇಬೇಕು. ಆದರೆ ನಿಮ್ಮ ಆಲಸ್ಯ ಮುಂದುವರಿದಿದೆಯಾ? ಸ್ವಲ್ಪ ಸಮಯವಿದ್ದರೆ ಹತ್ತಿರದ ಮೃಗಾಲಯಕ್ಕೆ ಭೇಟಿ ನೀಡಿ. ನಿಜವಾದ ಜಿಂಕೆಯನ್ನು ಕಣ್ತುಂಬಿಕೊಂಡು ಬನ್ನಿ. ಇಲ್ಲವಾದರೆ ಮನೆಯಲ್ಲಿ ಪ್ರಾಣಿಗಳನ್ನು ಸಾಕಿರದೇ ಇದ್ದರೆ ಅಕ್ಕಪಕ್ಕ ಅಥವಾ ರಸ್ತೆಬದಿಯಲ್ಲಿ ಪ್ರಾಣಿ ಪಕ್ಷಿಗಳ ಚಲನವಲನವನ್ನು ಗಮನಿಸಿ. ಅವುಗಳೊಂದಿಗೆ ಸಂಭಾಷಣೆ ನಡೆಸಿ. ಆಗ ನೋಡಿ ನಿಮ್ಮ ಮನಸ್ಸು ಉಲ್ಲಾಸದಿಂದ ಪುಟಿಯುತ್ತದೆ.

ಇದನ್ನೂ ಓದಿ
Literature: ನೆರೆನಾಡ ನುಡಿಯೊಳಗಾಡಿ; ‘ಈಗಲೇ ರಿಕಾರ್ಡ್ ಹಚ್ಚಬಾರದು, ಇನ್ನೂ ಅಪ್ಪನ ಖತಮು ಮುಗಿದಿಲ್ಲ’
Literature : ನೆರೆನಾಡ ನುಡಿಯೊಳಗಾಡಿ; ಬಿಎಂ ಶರ್ಮಾ ಅನುವಾದಿಸಿದ ರಾಹುಲ ಸಾಂಕೃತ್ಯಾಯನ ಕಥೆ ‘ನಿಶಾ‘
Literature: ನೆರೆನಾಡ ನುಡಿಯೊಳಗಾಡಿ; ‘ಉಭಯ ಜೀವನ’ ಕೆಕೆ ಗಂಗಾಧರನ್ ಅನುವಾದಿಸಿದ ಮಲಯಾಳ ಕಥೆ
Literature: ನೆರೆನಾಡ ನುಡಿಯೊಳಗಾಡಿ; ಪಾವಣ್ಣನ್ ಚಿಂತಾಮಣಿ ಕೊಡ್ಲೆಕೆರೆ ಅನುವಾದಿಸಿದ ಬಿ ಜಯಮೋಹನ್ ಕಥೆ ‘ವಿಷಸರ್ಪ’
Can you find the deer hidden in this picture within 10 seconds?

ಇಲ್ಲಿದೆ ಜಿಂಕೆ!

 

Published On - 3:35 pm, Thu, 4 August 22

Follow Us