Viral Video : ಭಾರತೀಯರಾದ ನಾವು ಸಿಹಿತಿಂಡಿಪ್ರಿಯರು. ಅಂಗಡಿಗಳಿಗೆ ಹೋದಾಗ ಗಂಟೆಗಟ್ಟಲೆ ನಿಂತು ಕಾಯ್ದು ಖರೀದಿಸಿ ತರುತ್ತೇವೆ. ನಮ್ಮಲ್ಲಿರುವ ಥರಾವರಿ ತಿಂಡಿತಿನಿಸುಗಳಲ್ಲಿ ಈ ಜಿಲೇಬಿಯಂತೂ ಬಹುತೇಕರಿಗೆ ಪ್ರೀತಿಯ ಖಾದ್ಯ. ಜಿಲೇಬಿ ತಿನ್ನುವುದು ನಮಗೆ ಮಾಮೂಲಿ. ಆದರೆ ವಿದೇಶಿಯರಿಗೆ? ಅದೂ ಮೊದಲ ಸಲ ಪ್ರಯತ್ನಿಸಿದಾಗ ಅವರ ಪ್ರತಿಕ್ರಿಯೇ ಹೇಗಿರುತ್ತದೆ ನೋಡಬೇಕೆ? ಕೊಲಂಬಿಯಾದ ಮಹಿಳೆಯೊಬ್ಬರು ಜಿಲೇಬಿಯನ್ನು ತಿನ್ನುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ. ನೆಟ್ಟಿಗರು ಈ ವಿಡಿಯೋಕ್ಕೆ ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ.
ಕೊಲೀನ್ ಗೌಡ (@colleengowda) ಎಂಬ ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋ ಅಪ್ಲೋಡ್ ಮಾಡಲಾಗಿದೆ. ಈ ಜಿಲೇಬಿ ಯಾಕೆ ಇಷ್ಟೊಂದು ತೆಳ್ಳಗಿದೆ ಎಂದು ಕೊಲಂಬಿಯಾದ ಕೊಲೀನ್ ನಗುತ್ತ ತನ್ನ ಭಾರತೀಯ ಪತಿಗೆ ಕೇಳುತ್ತಾಳೆ. ಈ ವಿಡಿಯೋ ನೋಡುತ್ತಿದ್ದರೆ ಈಕೆಗೆ ಈ ಜಿಲೇಬಿ ಅಷ್ಟೊಂದು ಇಷ್ಟವಾಗಿಲ್ಲವೆಂದು ತೋರುತ್ತದೆ.
ಸೆ.11ರಂದು ಹಂಚಿಕೊಂಡ ಈ ವಿಡಿಯೋ ಈತನಕ 28 ಮಿಲಿಯನ್ ಜನರಿಂದ ವೀಕ್ಷಿಸಲ್ಪಟ್ಟಿದೆ. 47,000 ಕ್ಕೂ ಹೆಚ್ಚು ಜನರು ಇದನ್ನು ಇಷ್ಟಪಟ್ಟಿದ್ದಾರೆ. ‘ನೀವು ಭಾರತೀಯ ಆಹಾರವನ್ನು ತಿನ್ನಲು ಪ್ರಯತ್ನಿಸುವಾಗೆಲ್ಲ ಮುಕ್ತ ಮನಸಿನಿಂದ ಅನುಭವಿಸುತ್ತ ತಿನ್ನಿ’ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ‘ನಿಮಗೆ ಜಿಲೇಬಿಯ ವಿನ್ಯಾಸ ಇಷ್ಟವಾಗದಿದ್ದರೆ ವೆನಿಲ್ಲಾ ಐಸ್ಕ್ರೀಮ್ನಲ್ಲಿ ಪುಡಿಪುಡಿ ಮಾಡಿಕೊಂಡು ತಿನ್ನಿರಿ’ ಎಂದಿದ್ದಾರೆ ಮತ್ತೊಬ್ಬರು. ‘ಕೊನೇಪಕ್ಷ ಈಕೆ ಇದನ್ನು ತಿನ್ನಲಾದರೂ ಪ್ರಯತ್ನಿಸುತ್ತಿದ್ದಾಳೆ!’ ಎಂದು ಮಗದೊಬ್ಬರು ಬೆಂಬಲಿಸಿದ್ದಾರೆ.
ನಿಮಗೇನು ಅನ್ನಿಸಿತು ಈ ವಿಡಿಯೋ ನೋಡಿ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 4:45 pm, Sat, 1 October 22