Viral News: ಬಿಯರ್‌ಗಾಗಿ 3 ತಿಂಗಳ ಮಗುವನ್ನೇ ಮಾರಿದ ದಂಪತಿ

|

Updated on: Oct 01, 2024 | 10:55 AM

ಈ ದಂಪತಿ ಹಸುಗೂಸನ್ನು ಸುಮಾರು 83 ಸಾವಿರ ರೂ. ನಗದು ಹಣ ಮತ್ತು ಬಿಯರ್​ಗಾಗಿ ಮಾರಾಟ ಮಾಡಲು ಒಪ್ಪಿ ಸಹಿ ಹಾಕಿರುವ ಪತ್ರ ವಾಸಿಸುತ್ತಿದ್ದ ಟೆಂಟ್‌ನಲ್ಲಿ ಪತ್ತೆಯಾಗಿದೆ. ಪೊಲೀಸರು ಮಗುವನ್ನು ರಕ್ಷಿಸಿದ್ದು, ದಂಪತಿಯನ್ನು ಬಂಧಿಸಿರುವುದಾಗಿ ವರದಿಯಾಗಿದೆ.

Viral News: ಬಿಯರ್‌ಗಾಗಿ 3 ತಿಂಗಳ ಮಗುವನ್ನೇ ಮಾರಿದ ದಂಪತಿ
ಬಿಯರ್‌ಗಾಗಿ 3 ತಿಂಗಳ ಮಗುವನ್ನೇ ಮಾರಿದ ದಂಪತಿ
Follow us on

ವಾಷಿಂಗ್ಟನ್: ಬಿಯರ್‌ಗಾಗಿ ದಂಪತಿಯೊಂದು ತಮ್ಮ ಮೂರು ತಿಂಗಳ ಹಸುಗೂಸನ್ನೇ ಮಾರಾಟ ಮಾಡಿರುವ ಘಟನೆ ಅಮೆರಿಕದ ವಾಷಿಂಗ್ಟನ್​​​ನಲ್ಲಿ ನಡೆದಿದೆ. ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ರೋಜರ್ಸ್‌ನ ಕ್ಯಾಂಪ್‌ಗ್ರೌಂಡ್​​ಗೆ ತೆರಳಿ ಮಗುವನ್ನು ರಕ್ಷಿಸಿದ್ದಾರೆ. ಮಗುವಿನ ಪೋಷಕರಾದ ಡೇರಿಯನ್ ಅರ್ಬನ್ ಮತ್ತು ಶಲೇನ್ ಎಹ್ಲರ್​ನ್ನು ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.

ಸೆಪ್ಟೆಂಬರ್ 21 ರಂದು ಹಸುಗೂಸನ್ನು ಸುಮಾರು 83 ಸಾವಿರ ರೂ. ನಗದು ಹಣ ಮತ್ತು ಬಿಯರ್ ಗೆ ಮಾರಾಟ ಮಾಡಿದ್ದರು. ಈ ಬಗ್ಗೆ ಸ್ಥಳೀಯರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದು,ದೂರಿನ ಆಧಾರದ ಮೇಲೆ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಮಗುವನ್ನು ರಕ್ಷಿಸಿದ್ದಾರೆ. ಆದರೆ ಅದಾಗಲೇ ಮಗುವಿನ ಪೋಷಕರು ಅಲ್ಲಿಂದ ಪರಾರಿಯಾಗಿದ್ದಾರೆ.

ಇದನ್ನೂ ಓದಿ: ವೇಗವಾಗಿ ಬಂದ ಕಾರು ಬೈಕಿಗೆ ಡಿಕ್ಕಿ ಹೊಡೆದು ಪಲ್ಟಿ; ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಈ ದಂಪತಿ ಸಾವಿರ ಡಾಲರ್‌ಗಳಿಗೆ ಮಾರಾಟ ಮಾಡಲು ಒಪ್ಪಿದ ಪತ್ರ ವಾಸಿಸುತ್ತಿದ್ದ ಟೆಂಟ್‌ನಲ್ಲಿ ಪತ್ತೆಯಾಗಿವೆ. ಇದರಲ್ಲಿ ನಗದು ಜೊತೆಗೆ ಬಿಯರ್ ನೀಡಲು ಒಪ್ಪಂದ ಮಾಡಿಕೊಂಡಿರುವುದನ್ನು ಕಂಡು ಪೊಲೀಸರು ದಂಗಾಗಿ ಹೋಗಿದ್ದಾರೆ. ಇಬ್ಬರೂ ಪೋಷಕರು ಪತ್ರಕ್ಕೆ ಸಹಿ ಹಾಕಿರುವ ಸೆಲ್‌ಫೋನ್ ವಿಡಿಯೋವನ್ನು ಅಧಿಕಾರಿಗಳು ಸಂಗ್ರಹಿಸಿದ್ದಾರೆ. ಇದೀಗ ಮಗುವಿನ ಪೋಷಕರಾದ ಡೇರಿಯನ್ ಅರ್ಬನ್ ಮತ್ತು ಶಲೇನ್ ಎಹ್ಲರ್​ನ್ನು ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.

ಮತ್ತಷ್ಟು ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ