Video: ಮೊದಲ ಬಾರಿಗೆ ಅಜ್ಜ ಅಜ್ಜಿಯನ್ನು ಲಂಡನ್‌ಗೆ ಕರೆದೊಯ್ದ ಮೊಮ್ಮಗಳು

ಮೊಮ್ಮಕ್ಕಳಿಗೆ ಅಜ್ಜ ಅಜ್ಜಿಯರೆಂದರೆ ಎಲ್ಲಿಲ್ಲದ ಪ್ರೀತಿ. ಹೀಗಾಗಿ ಅವರ ಆಸೆಗಳನ್ನು ಈಡೇರಿಸುವಲ್ಲಿ ಮೊಮ್ಮಕ್ಕಳು ಒಂದು ಹೆಜ್ಜೆ ಮುಂದೆ ಇಡುತ್ತಾರೆ. ಇದೀಗ ದೆಹಲಿ ಮಹಿಳೆಯೊಬ್ಬರು ಮೊದಲ ಲಂಡನ್‌ ಪ್ರವಾಸದಲ್ಲೇ ಅಜ್ಜ ಅಜ್ಜಿಯನ್ನು ವಿದೇಶಕ್ಕೆ ಕರೆದುಕೊಂಡು ಹೋಗಿದ್ದಾರೆ. ಈ ವಿಡಿಯೋ ಸದ್ಯ ವೈರಲ್ ಆಗಿದ್ದು, ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಮೊದಲ ಬಾರಿಗೆ ಅಜ್ಜ ಅಜ್ಜಿಯನ್ನು ಲಂಡನ್‌ಗೆ ಕರೆದೊಯ್ದ ಮೊಮ್ಮಗಳು
ವೈರಲ್‌ ವಿಡಿಯೋ
Image Credit source: Instagram

Updated on: Jun 22, 2026 | 4:26 PM

ಚೆನ್ನಾಗಿ ಓದಿ, ಒಂದೊಳ್ಳೆ ಉದ್ಯೋಗ ಪಡೆದುಕೊಂಡು ತನ್ನ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಅಮ್ಮ ಅಪ್ಪ, ಅಜ್ಜ, ಅಜ್ಜಿಯನ್ನು (grandparents) ಊರು ಸುತ್ತಿಸಬೇಕು. ಅವರ ಆಸೆಗಳನ್ನು ಈಡೇರಿಸಬೇಕು ಹೀಗೆ ಸಾಕಷ್ಟು ಕನಸುಗಳಿರುತ್ತವೆ. ಅಂತಹ ಕ್ಷಣ ಬಂದರೆ ಅದನ್ನು ಪದಗಳಲ್ಲಿ ವಿವರಿಸಲು ಅಸಾಧ್ಯ. ಇದೀಗ ದೆಹಲಿ ಮಹಿಳೆಯೊಬ್ಬರು ಮೊದಲ ಲಂಡನ್ (London) ಪ್ರವಾಸದಲ್ಲೇ ತನ್ನ 90 ವರ್ಷದ ಅಜ್ಜ ಹಾಗೂ 80 ವರ್ಷದ ಅಜ್ಜಿಯನ್ನು ಕರೆದುಕೊಂಡು ಹೋಗಿದ್ದಾರೆ. ಈ ಹೃದಯಸ್ಪರ್ಶಿ ವಿಡಿಯೋ ವೈರಲ್ ಆಗಿದ್ದು ನೆಟ್ಟಿಗರು ಇದನ್ನು ಮೆಚ್ಚಿಕೊಂಡಿದ್ದಾರೆ.

ದೆಹಲಿ ನಿವಾಸಿ ಆಯುಷಿ ನೇಗಿ (Ayushi Negi) ಅವರು ತಮ್ಮ ಅಜ್ಜ-ಅಜ್ಜಿಯರನ್ನು ತಮ್ಮ ಮೊದಲ ಅಂತಾರಾಷ್ಟ್ರೀಯ ಪ್ರವಾಸಕ್ಕೆ ಕರೆದೊಯ್ಯುವುದನ್ನು ದಾಖಲಿಸಿದ ವಿಡಿಯೋ ಹಂಚಿಕೊಂಡಿದ್ದಾರೆ. ಈ ಕ್ಲಿಪಿಂಗ್ ನಲ್ಲಿ ವಿದೇಶಿ ಪ್ರಯಾಣದ ಅವಿಸ್ಮರಣೀಯ ಕ್ಷಣಗಳನ್ನು ಸೆರೆ ಹಿಡಿದಿದ್ದಾರೆ. ಬ್ಯಾಗ್‌ಗಳನ್ನು ಪ್ಯಾಕ್ ಮಾಡುವುದು, ಪ್ರಯಾಣ ದಾಖಲೆಗಳನ್ನು ಸಿದ್ಧಪಡಿಸುವುದರಿಂದ ಹಿಡಿದು ಮೊದಲ ಬಾರಿಗೆ ವಿಮಾನ ಹತ್ತುವುದು. ಅಂತಿಮವಾಗಿ ಲಂಡನ್‌ಗೆ ತಲುಪಿರುವುದು, ಈ ವೃದ್ಧ ದಂಪತಿ ವಿಮಾನದಲ್ಲಿ ಊಟವನ್ನು ಆನಂದಿಸುವುದು, ಕುಟುಂಬ ಸದಸ್ಯರಿಗೆ ವೀಡಿಯೊ ಕರೆಗಳನ್ನು ಮಾಡುವುದು ಹಾಗೂ ಲಂಡನ್‌ನ್ನು ಕಣ್ತುಂಬಿಸಿಕೊಳ್ಳುವ ದೃಶ್ಯವಿದೆ.

ಈ ವಿಡಿಯೋದಲ್ಲಿ ತಮ್ಮ ಅಜ್ಜ-ಅಜ್ಜಿಯರು ತಮ್ಮ ಸೌಕರ್ಯ ವಲಯಗಳಿಂದ ಹೊರಗೆ ಹೆಜ್ಜೆ ಹಾಕಲು ಹಿಂಜರಿಯುವ ವಯಸ್ಸಿನಲ್ಲಿ ಪರಿಚಯವಿಲ್ಲದದ್ದನ್ನು ಸ್ವೀಕರಿಸಲು ಸಿದ್ಧರಿರುವುದು ಈ ಪ್ರವಾಸವನ್ನು ಇನ್ನಷ್ಟು ವಿಶೇಷವಾಗಿಸಿದೆ. ಮೊದಲ ಬಾರಿಗೆ ಪಾಸ್‌ಪೋರ್ಟ್‌ಗಳು, ದೀರ್ಘ-ಪ್ರಯಾಣದ ವಿಮಾನಗಳು ಮತ್ತು ಸಂಪೂರ್ಣವಾಗಿ ಹೊಸ ಪ್ರದೇಶದೊಂದಿಗೆ ಪ್ರಯಾಣಿಸಲು ಅವರಿಗೆ ಧೈರ್ಯವಿತ್ತು.

ವೈರಲ್‌ ವಿಡಿಯೋ ಇಲ್ಲಿದೆ

ವೀಸಾ ಅಡೆತಡೆಗಳು, ವಿಳಂಬವಾದ ಯೋಜನೆಗಳ ಹೊರತಾಗಿಯೂ ಅಂತಿಮವಾಗಿ ವಿಮಾನವನ್ನು ಹತ್ತುವುದನ್ನು, ಪ್ರತಿ ಹೊಸ ಕ್ಷಣವನ್ನು ಅನುಭವಿಸುವುದನ್ನು ನೋಡುವುದನ್ನು ಕಂಡು ನನ್ನ ಜೀವನ ಸಾರ್ಥಕಗೊಳಿಸಿತು. ಈ ಪ್ರಯಾಣವು ಮೊದಲ ಬಾರಿಗೆ ಏನನ್ನಾದರೂ ಕಂಡುಹಿಡಿಯಲು ಯಾವುದೇ ವಯಸ್ಸಿನ ಮಿತಿಯಿಲ್ಲ ಎಂಬುವುದನ್ನು ಈ ದೃಶ್ಯ ಮತ್ತೆ ಮತ್ತೆ ನೆನಪಿಸಿತು ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: 87ರ ವಯಸ್ಸಿನಲ್ಲಿ ಮೊದಲ ಬಾರಿ ಸಮುದ್ರ ತೀರಕ್ಕೆ ಹೋದ ಅಜ್ಜಿ, ರಿಯಾಕ್ಷನ್ ಹೇಗಿತ್ತು ನೋಡಿ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಅಜ್ಜ ಅಜ್ಜಿಯಂದಿರನ್ನು ಖುಷಿ ಪಡಿಸಿದ್ದಕ್ಕೆ ನಿಮಗೆ ಧನ್ಯವಾದಗಳು ಎಂದಿದ್ದಾರೆ. ಮತ್ತೊಬ್ಬರು, ಅವಕಾಶಗಳು ಇರುವಾಗಲೇ ಪ್ರೀತಿ ಪಾತ್ರರ ಜತೆಗೆ ಸಮಯ ಕಳೆಯಿರಿ ಎಂದು ಹೇಳಿದ್ದಾರೆ. ಇನ್ನೊಬ್ಬರು, ಹಿರಿಜೀವಗಳನ್ನು ಖುಷಿ ಪಡಿಸಿದಾಗ ಸಿಗುವ ಖುಷಿಯೇ ಬೇರೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:23 pm, Mon, 22 June 26

Follow Us