Viral: ನನ್ನ ಸೌಂದರ್ಯ ಹೊಗಳಲು ಶುರುಮಾಡಿದ; ಮಹಿಳೆಯ ಜತೆಗೆ ಅನುಚಿತವಾಗಿ ವರ್ತಿಸಿದ ಡೆಲಿವರಿ ಬಾಯ್

ಸೋಶಿಯಲ್ ಮೀಡಿಯಾದಿಂದ ಎಷ್ಟು ಒಳ್ಳೆಯದೆಯೋ ಅಷ್ಟೇ ಕೆಟ್ಟದು ಇದೆ. ಇದಕ್ಕೆ ಉದಾಹರಣೆಯಂತಿದೆ ಈ ಘಟನೆ. ಮಹಿಳೆಯೊಬ್ಬರಿಗೆ ಡೆಲಿವರಿ ಬಾಯ್‌ ವಾಟ್ಸಪ್ ನಲ್ಲಿ ವೈಯಕ್ತಿಕ ಮೆಸೇಜ್ ಕಳುಹಿಸಿದ್ದಾನೆ. ಆರ್ಡರ್‌ ತಲುಪಿಸಲು ಬಂದ ಡೆಲಿವರಿ ಬಾಯ್‌ನ ನಡೆ ಬಗ್ಗೆ ಈ ಮಹಿಳೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಪೋಸ್ಟ್ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಹುಟ್ಟು ಹಾಕಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Viral: ನನ್ನ ಸೌಂದರ್ಯ ಹೊಗಳಲು ಶುರುಮಾಡಿದ; ಮಹಿಳೆಯ ಜತೆಗೆ ಅನುಚಿತವಾಗಿ ವರ್ತಿಸಿದ ಡೆಲಿವರಿ ಬಾಯ್
Trending News
Image Credit source: apos tophy/Moment/ Getty Images

Updated on: Nov 11, 2026 | 6:23 PM

ಇತ್ತೀಚೆಗಿನ ದಿನಗಳಲ್ಲಿ ಆನ್ಲೈನ್ ನಲ್ಲಿ ಆರ್ಡರ್ ಮಾಡುವವರೇ ಹೆಚ್ಚು. ಡೆಲಿವರಿ ಬಾಯ್ಸ್ (delivery boy) ಗ್ರಾಹಕರಿಗೆ ಆರ್ಡರ್ ತಲುಪಿಸುವಾಗ ಅಥವಾ ಆರ್ಡರ್‌ ಸಂಬಂಧಿತ ಮಾಹಿತಿ ನೀಡಲು ಕರೆ ಮಾಡುವುದು ಸಹಜ. ಆದರೆ ಇಲ್ಲೊಬ್ಬ ಮಹಿಳೆಯ ಫೋನ್ ನಂಬರ್ ಬಳಸಿ ಅನುಚಿತವಾಗಿ ವರ್ತಿಸಿದ್ದಾನೆ. ಟಿಪ್ಸ್ ಕೊಡದಿದ್ದಕ್ಕೆ ಆರ್ಡರ್ ತಲುಪಿಸಿದ ಬಳಿಕ ವಾಟ್ಸಾಪ್‌ನಲ್ಲಿ ಕರೆ ಮಾಡಿದ್ದಾನೆ. ಆಕೆಯ ಸೌಂದರ್ಯ ಹೊಗಳಿ ಸಂದೇಶ ಕಳುಹಿಸಿದ್ದಾನೆ ಎಂದು ಮಹಿಳೆ ಬೇಸರ ವ್ಯಕ್ತಪಡಿಸಿದ್ದಾರೆ. ನೀವು ನನ್ನ ಪರಿಸ್ಥಿತಿಯಲ್ಲಿ ಇದ್ದಿದ್ರೆ ಏನು ಮಾಡುತ್ತಿದ್ದರೆ ಏನು ಮಾಡುತ್ತಿದ್ದೀರಿ ಎಂದು ನೆಟ್ಟಿಗರಲ್ಲಿ ಸಲಹೆ ಕೇಳಿದ್ದಾರೆ. ಈ ಪೋಸ್ಟ್ ಸದ್ಯ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.

ಆರ್ಡರ್‌ ತಲುಪಿಸಲು ಬಂದ ಡೆಲಿವರಿ ಬಾಯ್‌ನ ಅನುಚಿತ ವರ್ತನೆ

ಪಿಂಕಿ (Pinki) ಹೆಸರಿನ ಎಕ್ಸ್ ಖಾತೆಯಲ್ಲಿ ಈ ಘಟನೆಯ ಬಗ್ಗೆ ಹಂಚಿಕೊಳ್ಳಲಾಗಿದೆ. ಈ ಪೋಸ್ಟ್‌ನಲ್ಲಿ ನಾನು ಫ್ಲಿಪ್‌ಕಾರ್ಟ್ ಮಿನಿಟ್ಸ್ ಮೂಲಕ ಸಾಸಿವೆ ಎಣ್ಣೆಯನ್ನು ಆರ್ಡರ್ ಮಾಡಿದ್ದೆ. ಡೆಲಿವರಿ ತಲುಪಿಸಲು ಬಂದ ವ್ಯಕ್ತಿ ಸುಮಾರು 50 ನಿಮಿಷಗಳ ಕಾಲ ತಡವಾಗಿ ಬಂದನು. ಅವನು ನನ್ನ ಸೌಂದರ್ಯ ಹೊಗಳಲು ಪ್ರಾರಂಭಿಸಿದನು. ಒಂಥರಾ ಫ್ಲರ್ಟ್ ಮಾಡುತ್ತಿರುವಂತೆ ಇತ್ತು ಎಂದು ಹೇಳಿದ್ದಾರೆ.

Loading...

ವೈರಲ್‌ ಪೋಸ್ಟ್‌ ಇಲ್ಲಿದೆ

ಟಿಪ್ಸ್‌ ಕೊಡಲು ನಿರಾಕರಿಸಿದ ಮಹಿಳೆ

ದೀಪಾವಳಿಯಂದು ತಡರಾತ್ರಿ ಕೆಲಸ ಮಾಡುತ್ತಿರುವುದಾಗಿ ಹೇಳಿ, ಸಹಜವಾಗಿಯೇ ‘ಟಿಪ್’ ಕೇಳಿದನು. ನಾನು ಅವನಿಗೆ, ನಿಮ್ಮ ಕೆಲಸಕ್ಕೆ ನಿಮಗೆ ಈಗಾಗಲೇ ಹಣ ಸಿಗುತ್ತಿದೆ. ನಾನು ಹೆಚ್ಚುವರಿಯಾಗಿ ಏಕೆ ಹಣ ನೀಡಬೇಕು ಎಂದು ಕೇಳಿದೆ. ಅವನು ಅಲ್ಲಿಂದ ಹೊರಟು ಕೇವಲ 10 ನಿಮಿಷಗಳ ಬಳಿಕ ಅವನು ನನಗೆ ವಾಟ್ಸಾಪ್‌ನಲ್ಲಿ ಕರೆ ಮಾಡಿದ. ‘ಟಿಪ್’ ನೀಡಲು ನಿರಾಕರಿಸುವ ಮೂಲಕ ನಾನು ಏನಾದರೂ ತಪ್ಪಾಗಿ ಹೇಳಿದೆನಾ. ಡೆಲಿವರಿ ಪೂರ್ಣಗೊಂಡ ನಂತರ ಅವನು ನನ್ನನ್ನು ವೈಯಕ್ತಿಕವಾಗಿ ಏಕೆ ಸಂಪರ್ಕಿಸುತ್ತಿದ್ದಾನೆ. ನಾನು ಆತನ ಮೊಬೈಲ್ ನಂಬರ್ ಅನ್ನು ಬಹಿರಂಗಪಡಿಸಬೇಕೇ ಅಥವಾ ಸುಮ್ಮನೆ ಬಿಟ್ಟುಬಿಡಬೇಕು ಅಥವಾ ನೀವು ಏನು ಮಾಡುತ್ತಿದ್ದಿರಿ ಎಂದು ಕೇಳಿದ್ದಾರೆ.

ಇದನ್ನೂ ಓದಿ: ದೈಹಿಕ ನೂನ್ಯತೆಯಿದ್ರೂ ಮಾಸದ ನಗು; ಡೆಲಿವರಿ ಬಾಯ್ ಕೆಲ್ಸದಲ್ಲೇ ಖುಷಿ ಕಾಣುವ ವ್ಯಕ್ತಿ

ಈ ಪೋಸ್ ನಲವತ್ತು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಆ ವ್ಯಕ್ತಿಯ ನಂಬರ್ ಬ್ಲಾಕ್ ಮಾಡಿ ಎಂದಿದ್ದಾರೆ. ಇನ್ನೊಬ್ಬರು, ಅವನಿಗೆ ವಾರ್ನಿಂಗ್ ಕೊಡಿ. ಮೊದಲ ನೋಟಕ್ಕೆ ಕಳೆದು ಹೋಗಿರಬಹುದು ಎಂದು ತಮಾಷೆ ಮಾಡಿದ್ದಾರೆ. ಮತ್ತೊಬ್ಬರು, ದೂರು ದಾಖಲಿಸಿ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Loading...
Unable to load recommendations.
Follow Us