ಡೊನಾಲ್ಡ್ ಟ್ರಂಪ್ ಮೇಲೆ ಗುಂಡು ಹಾರಿಸಿದ್ದ ಯುವಕನಿಗೆ ಬರೀ 20 ವರ್ಷ: ಎಫ್‌ಬಿಐ

|

Updated on: Jul 14, 2024 | 12:54 PM

ಡೊನಾಲ್ಡ್ ಟ್ರಂಪ್ ಮೇಲೆ ಗುಂಡು ಹಾರಿಸಿದ್ದ ವ್ಯಕ್ತಿಯನ್ನು ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (ಎಫ್‌ಬಿಐ) ಪತ್ತೆ ಹಚ್ಚಿದ್ದು, ಆತನಿಗೆ ಕೇವಲ 20 ವರ್ಷ ಎಂದು ಬಹಿರಂಗ ಪಡಿಸಿದೆ. AR-15 ರೈಫಲ್‌ನಿಂದ ಟ್ರಂಪ್‌ಗೆ ಗುಂಡು ಹಾರಿಸಿದ್ದು, ಘಟನೆ ನಡೆದ ಕೆಲ ಹೊತ್ತಿನಲ್ಲೇ ಈತನನ್ನು ಪತ್ತೆ ಹಚ್ಚಿ ಕೊಲ್ಲಲಾಗಿದೆ ಎಂದು ತಿಳಿದುಬಂದಿದೆ.

ಡೊನಾಲ್ಡ್ ಟ್ರಂಪ್ ಮೇಲೆ  ಗುಂಡು ಹಾರಿಸಿದ್ದ ಯುವಕನಿಗೆ ಬರೀ 20 ವರ್ಷ: ಎಫ್‌ಬಿಐ
Follow us on

ಪಶ್ಚಿಮ ಪೆನ್ಸಿಲ್ವೇನಿಯಾದಲ್ಲಿ ಶನಿವಾರ ನಡೆದ ಚುನಾವಣಾ ರ‍್ಯಾಲಿಯಲ್ಲಿ ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೆ ಗುಂಡು ಹಾರಿಸಿದ್ದ ವ್ಯಕ್ತಿಯನ್ನು ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (ಎಫ್‌ಬಿಐ) ಪತ್ತೆ ಹಚ್ಚಿದ್ದು, ಆತನಿಗೆ ಕೇವಲ 20 ವರ್ಷ ಎಂದು ಬಹಿರಂಗ ಪಡಿಸಿದೆ. ಈ 20 ವರ್ಷದ ಯುವಕ ಮಾಜಿ ಅಧ್ಯಕ್ಷರನ್ನು 100 ಮೀಟರ್ ದೂರದಿಂದ ಗುರಿಯಾಗಿಸಿಕೊಂಡು, ಗುಂಡು ಹಾರಿಸಿದ್ದಾನೆ. ಗುಂಡಿನ ದಾಳಿಯಿದ ಕೂಡಲೇ ವೇದಿಕೆ ಬಳಿಯಿದ್ದ ಭದ್ರತಾ ಸಿಬ್ಬಂದಿ ಟ್ರಂಪ್‌ ನೆರವಿಗೆ ಧಾವಿಸಿ, ರಕ್ಷಣೆ ಮಾಡಿದ್ದಾರೆ. ಡೊನಾಲ್ಡ್‌ ಟ್ರಂಪ್ ಸುರಕ್ಷಿತವಾಗಿದ್ದಾರೆ ಎಂದು ಅಮೆರಿಕದ ಸೀಕ್ರೆಟ್ ಸರ್ವಿಸ್ ತಂಡ ತಿಳಿಸಿದೆ. ಈ ಸೆನ್ಸೇಷನಲ್ ಶೂಟಿಂಗ್ ಅಮೆರಿಕದಲ್ಲಿ ಸಂಚಲನ ಮೂಡಿಸಿದೆ.

ವಾಸ್ತವವಾಗಿ, ಟ್ರಂಪ್ ಮೇಲಿನ ದಾಳಿಯಲ್ಲಿ ಅನೇಕ ಶೂಟರ್‌ಗಳು ಭಾಗಿಯಾಗಿದ್ದರು. ಅದರಲ್ಲಿ ಇಬ್ಬರು ಶೂಟರ್ ಟ್ರಂಪ್ ವೇದಿಕೆಯ ಬಳಿಯ ಗುಂಪಿನಲ್ಲಿದ್ದು, ಇಬ್ಬರು ಶೂಟರ್‌ಗಳನ್ನು ಸೀಕ್ರೆಟ್ ಸರ್ವಿಸ್ ಸ್ಥಳದಲ್ಲೇ ಕೊಂದು ಹಾಕಿದೆ.

ಇದನ್ನೂ ಓದಿ: ಅಮೆರಿಕ: ರ್‍ಯಾಲಿಯಲ್ಲಿ ಗುಂಡಿನ ದಾಳಿ, ಮಾಜಿ ಅಧ್ಯಕ್ಷ ಟ್ರಂಪ್ ಬಲ ಕಿವಿಗೆ ಗಾಯ

20 ವರ್ಷಕ್ಕೆ ಅಮೆರಿಕಾದ ಮಾಜಿ ಅಧ್ಯಕ್ಷನ ಹತ್ಯೆಗೆ ಮುಂದಾದ ಯುವಕ:

ಟ್ರಂಪ್ ಮೇಲೆ ಗುಂಡು ಹಾರಿಸಿದ್ದ ಶೂಟರ್ 20 ವರ್ಷದ ಹುಡುಗ ಎಂದು ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಎಫ್‌ಬಿಐ) ತಿಳಿಸಿದೆ. ಈತನ ಹೆಸರು ಥಾಮಸ್ ಮ್ಯಾಥ್ಯೂ ಕ್ರೂಕ್ಸ್ . ಈತ ಪೆನ್ಸಿಲ್ವೇನಿಯಾದ ನಿವಾಸಿಯಾಗಿದ್ದು, 100 ಮೀಟರ್ ದೂರದಿಂದ ಟ್ರಂಪ್ ಮೇಲೆ ಗುಂಡು ಹಾರಿಸಿದ್ದಾನೆ. ಮತಪಟ್ಟಿಯ ದಾಖಲೆಗಳ ಪ್ರಕಾರ ಮ್ಯಾಥ್ಯೂ ರಿಪಬ್ಲಿಕನ್​ ಪಾರ್ಟಿಯ ಬೆಂಬಲಿಗ ಎಂದು ವರದಿಯಾಗಿದೆ.  AR ಶೈಲಿಯ (AR-15) ರೈಫಲ್‌ನಿಂದ ಟ್ರಂಪ್‌ಗೆ ಗುಂಡು ಹಾರಿಸಿದ್ದು, ಘಟನೆ ನಡೆದ ಕೆಲ ಹೊತ್ತಿನಲ್ಲೇ ಈತನನ್ನು ಪತ್ತೆ ಹಚ್ಚಿ ಕೊಲ್ಲಲಾಗಿದೆ ಎಂದು ತಿಳಿದುಬಂದಿದೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:12 pm, Sun, 14 July 24