ತಾನು ಅನ್ಯಲೋಕದವಳು ಎಂದು ಹೇಳಿಕೊಳ್ಳುವ ಯುವತಿಯೊಬ್ಬಳು ಮನುಷ್ಯಳಾಗಿ ರೂಪ ತಳೆದಿರುವ ನನಗೆ ನೆಮ್ಮದಿಯಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ, ದಿನವೂ ಏಲಿಯನ್ ರೀತಿ ತನ್ನ ಮೈ ಮೇಲೆ ನೀಲಿ ಬಣ್ಣವನ್ನು ಬಳಿದುಕೊಂಡು ಹೊರಗೆ ಕಾಣಿಸಿಕೊಳ್ಳುತ್ತಾರೆ. ಇಂಗ್ಲೆಂಡ್‌ನ ವೆಸ್ಟ್ ಯಾರ್ಕ್‌ಷೈರ್‌ನ ಬ್ರಾಡ್‌ಫೋರ್ಡ್‌ನ ಲುರೈ ಲಿ ಎಂಬಾಕೆ ಈ ರೀತಿ ವಿಚಿತ್ರವಾಗಿ ವರ್ತಿಸುವ ಯುವತಿ. ತಾನು ಅನ್ಯಜೀವಿಯಂತೆ ಕಾಣಬೇಕು ಎಂದು ಲುರೈ ಲಿ ದಿನಕ್ಕೆ ಗಂಟೆಗಟ್ಟಲೆ ಮೈಗೆ ಬಣ್ಣ ಬಳಿದುಕೊಳ್ಳುತ್ತಾರೆ.
ನಾನು ಆಕಸ್ಮಿಕವಾಗಿ ಮಾನವನ ರೂಪ ತಳೆದಿದ್ದೇನೆ ಎಂದು ಭಾವಿಸುವ ಲುರೈ ಲಿ, ತನ್ನ ನೈಜ ರೂಪವನ್ನು ವ್ಯಕ್ತಪಡಿಸಲು 5 ವರ್ಷಗಳ ಹಿಂದೆ ಸ್ವತಃ ಮೈಗೆ ನೀಲಿ ಬಣ್ಣ ಹಚ್ಚಿಕೊಳ್ಳುವ ಆಚರಣೆಯನ್ನು ಪ್ರಾರಂಭಿಸಿದರು. ಸೇಮ್ ಏಲಿಯನ್ ರೀತಿ ಮೇಕಪ್ ಮಾಡಿಕೊಳ್ಳತೊಡಗಿದರು.
ಇದನ್ನೂ ಓದಿ: ಸಿಡ್ನಿ: ಭ್ರೂಣದ ರೀತಿಯ ಏಲಿಯನ್ ಆಕೃತಿಯನ್ನು ಕಂಡು ಬೆರಗಾದ ವಿಜ್ಞಾನಿಗಳು
ನಾನು ಆಕಸ್ಮಿಕವಾಗಿ ಮಾನವ ದೇಹಕ್ಕೆ ಸೇರಿಸಲ್ಪಟ್ಟಿದ್ದೇನೆ ಎಂದು ನನಗೆ ಅನಿಸುತ್ತದೆ. ಇಷ್ಟು ವರ್ಷಗಳ ನಂತರವೂ ನಾನು ಬೇರೆ ಲೋಕದವಳು ಎಂದು ಭಾಸವಾಗುತ್ತಿದೆ ಎಂದು ಆಕೆ ಡೈಲಿ ಸ್ಟಾರ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ನನ್ನ ರೂಪ, ನನ್ನ ದೇಹದ ಅಂಗಗಳ ಬಗ್ಗೆ ನನಗೆ ಇಷ್ಟವಿಲ್ಲ. ಇದು ನನ್ನ ದೇಹವಲ್ಲ. ನಾನು ಟೆಂಡ್ರಿಲ್‌ಗಳನ್ನು ಬಯಸುತ್ತೇನೆ. ನಾನು ಬೆಳಕಿನ ತೇಲುವ ಮಂಡಲವಾಗಿರಲು ಬಯಸುತ್ತೇನೆ ಎಂದು ಆಕೆ ಹೇಳಿದ್ದಾರೆ. ಆಕೆ ಅನ್ಯ ಭಾಷೆ ಕ್ಲಿಂಗನ್ ಅನ್ನು ಮಾತನಾಡುತ್ತಾರೆ.
ಇದನ್ನೂ ಓದಿ: ಒಬ್ಬರಿಂದ ಅತ್ಯಾಚಾರ ಮಾಡಲು ಸಾಧ್ಯವಿಲ್ಲ: ಕಾಂಗ್ರೆಸ್ ಮಾಜಿ ಶಾಸಕನ ಆಡಿಯೋ ವೈರಲ್
ಭೂಮಿ ಮೇಲಿನ ಬಹಳಷ್ಟು ವಿಷಯಗಳು ನನಗೆ ಅರ್ಥವಾಗುವುದಿಲ್ಲ. ಗುರುತ್ವಾಕರ್ಷಣೆಯು ನನ್ನನ್ನು ಕೆರಳಿಸುತ್ತದೆ. ನನಗೆ ಮನುಷ್ಯರೊಂದಿಗೆ ಬೆರೆಯುವುದು ಇಷ್ಟವಾಗುವುದಿಲ್ಲ ಎಂದಿರುವ ಲಿ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಅನ್ಯಲೋಕದ ತನ್ನ ಜೀವನದ ಗ್ಲಿಂಪ್‌ಗಳನ್ನು ಹಂಚಿಕೊಂಡಿದ್ದಾರೆ.
ಇನ್ನಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ