Viral News: ತಮಿಳುನಾಡಿನ ಈ ಮಹಿಳೆಗೆ 38 ಹಲ್ಲುಗಳು, ಇದೀಗ ಈಕೆಯ ಹಲ್ಲು ವಿಶ್ವ ದಾಖಲೆಗೆ ಸೇರಿದೆ
ಸಾಮಾನ್ಯವಾಗಿ ಪ್ರತಿಯೊಬ್ಬ ವ್ಯಕ್ತಿಗೂ 32 ಶಾಶ್ವತ ಹಲ್ಲುಗಳಿರುತ್ತವೆ. ಇದಕ್ಕಿಂತ ಹೆಚ್ಚು ಹಲ್ಲುಗಳು ಬೆಳೆಯುವುದಿಲ್ಲ. ಆದರೆ ತಮಿಳುನಾಡಿನ ಈ ಮಹಿಳೆಯೊಬ್ಬರಿಗೆ ಬರೋಬ್ಬರಿ 38 ಹಲ್ಲುಗಳಿದ್ದು, ಇದೀಗ ಆಕೆ ಜಗತ್ತಿನಲ್ಲಿ ಅತೀ ಹೆಚ್ಚು ಹಲ್ಲುಗಳನ್ನು ಹೊಂದಿರುವ ಮಹಿಳೆ ಎಂಬ ಗಿನ್ನೆಸ್ ವಿಶ್ವ ದಾಖಲೆಯನ್ನು ಮಾಡಿದ್ದಾರೆ.
ಸಾಮಾನ್ಯವಾಗಿ ಒಬ್ಬ ಮನುಷ್ಯನಿಗೆ ಎಷ್ಟು ಹಲ್ಲುಗಳಿವೆ ಎಂದು ಕೇಳಿದರೆ, ಎಲ್ಲರೂ ಒಬ್ಬ ವ್ಯಕ್ತಿಗೆ 32 ಶಾಶ್ವತ ಹಲ್ಲುಗಳಿರುತ್ತವೆ ಎಂದು ಥಟ್ಟನೆ ಹೇಳುತ್ತಾರೆ. ಆದರೆ ಅದಕ್ಕಿಂತ ಹೆಚ್ಚಿನ ಹಲ್ಲುಗಳು ಬೆಳೆಯುವುದು ಅಚ್ಚರಿಯ ಸಂಗತಿಯೇ ಸರಿ. ಇದೀಗ ಅಂತಹದ್ದೇ ಅಚ್ಚರಿಯ ಸುದ್ದಿಯೊಂದು ವೈರಲ್ ಆಗುತ್ತಿದೆ. ಹೌದು ತಮಿಳುನಾಡಿನ ಈ ಮಹಿಳೆಯೊಬ್ಬರು ಬರೋಬ್ಬರಿ 38 ಹಲ್ಲುಗಳನ್ನು ಹೊಂದಿದ್ದು, ಇದೀಗ ಆಕೆ ಅತೀ ಹೆಚ್ಚು ಹಲ್ಲುಗಳನ್ನು ಹೊಂದಿರುವ ಮಹಿಳೆ ಎಂಬ ಗಿನ್ನೆಸ್ ವಿಶ್ವ ದಾಖಲೆಯನ್ನು ಮಾಡಿದ್ದಾರೆ.
ತಮಿಳುನಾಡಿನ ತಂಜಾವೂರು ಮೂಲದ 26 ವರ್ಷ ವಯಸ್ಸಿನ ಕಲ್ಪನಾ ಬಾಲನ್ ಎಂಬವರು 38 ಹಲ್ಲುಗಳನ್ನು ಹೊಂದಿದ್ದು ಇದೀಗ ಅತೀ ಹೆಚ್ಚು ಹಲ್ಲುಗಳನ್ನು ಹೊಂದಿರುವ ಮಹಿಳೆ ಎಂಬ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಕಲ್ಪನಾ ಅವರು ತಮ್ಮ ಕೆಳಗಿನ ದವಡೆಯ ಮೇಲೆ ನಾಲ್ಕು ಹೆಚ್ಚುವರಿ ಹಲ್ಲುಗಳನ್ನು ಮತ್ತು ಮೇಲಿನ ದವಡೆಯ ಮೇಲೆ ಎರಡು ಹೆಚ್ಚುವರಿ ಮ್ಯಾಕ್ಸಿಲ್ಲರಿ ಹಲ್ಲುಗಳನ್ನು ಹೊಂದಿದ್ದಾರೆ. ಹೀಗೆ ಅವರು ಒಟ್ಟು 38 ಹಲ್ಲುಗಳನ್ನು ಹೊಂದಿದ್ದು, ಈ ಮೂಲಕ ಅತೀ ಹೆಚ್ಚು ಹಲ್ಲುಗಳನ್ನು ಹೊಂದಿರುವ ಮಹಿಳೆ ಎಂಬ ಗಿನ್ನೆಸ್ ವಿಶ್ವ ದಾಖಲೆಯನ್ನು ಮಾಡಿದ್ದಾರೆ. ಈ ಮೊದಲು 41 ಹಲ್ಲುಗಳನ್ನು ಹೊಂದಿದ್ದ ಇವಾನೊ ಮೆಲೋನ್ ಎಂಬ ಕೆನಡಾ ಮೂಲದ ವ್ಯಕ್ತಿಯೊಬ್ಬರು ಅತೀ ಹೆಚ್ಚು ಹಲ್ಲುಗಳನ್ನು ಹೊಂದಿರುವ ಪುರುಷ ಎಂಬ ಬಿರುದನ್ನು ತಮ್ಮದಾಗಿಸಿಕೊಂಡಿದ್ದರು.
ವರದಿಗಳ ಪ್ರಕಾರ ಕಲ್ಪನಾ ಅವರು ಹದಿಹರೆಯದವರಾಗಿದ್ದಾಗ, ಆಕೆಯ ಹೆಚ್ಚುವರಿ ಹಲ್ಲುಗಳು ಬೆಳೆಯಲು ಪ್ರಾರಂಭಿಸಿದವು, ಇದರಿಂದ ಆತಂಕಕ್ಕೊಳಗಾದ ಕಲ್ಪನಾ ಪೋಷಕರು, ಆಕೆಯ ಹೆಚ್ಚುವರಿ ಹಲ್ಲುಗಳನ್ನು ತೆಗೆಯಲು ನಿರ್ಧರಿಸಿದರು. ಆದರೆ ಹೆಚ್ಚುವರಿ ಹಲ್ಲುಗಳನ್ನು ತೆಗೆದುಹಾಕುವುದು ಕಷ್ಟಕರವಾದ ಕಾರಣ, ಆ ಹಲ್ಲುಗಳು ಸಂಪೂರ್ಣವಾಗಿ ಬೆಳೆಯುವವರೆಗೆ ಕಾಯಬೇಕು ಆ ನಂತರವೇ ಹಲ್ಲುಗಳನ್ನು ತೆಗೆಯಲು ಸಾಧ್ಯ ಎಂದು ವೈದ್ಯರು ಸಲಹೆ ನೀಡಿದರು. ಇದಾದ ನಂತರ ಕಲ್ಪನಾ ಅವರ ಹೆಚ್ಚುವರಿ ಹಲ್ಲುಗಳು ಬೆಳೆದಾಗ, ಆ ಹಲ್ಲುಗಳ ಕಾರಣದಿಂದ ಯಾವುದೇ ನೋವು ಅಥವಾ ಅಸ್ವಸ್ಥತೆಯನ್ನು ಅನುಭವಿಸದ ಕಾರಣ ಅವುಗಳನ್ನು ತೆಗೆಯುವುದು ಬೇಡ ಎಂದು ನಿರ್ಧರಿಸಿದರು. ಇದೀಗ ಅವರ ಈ ನಿರ್ಧಾರದಿಂದಾಗಿ ಹೊಸ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಇದನ್ನೂ ಓದಿ: ಹಾಯ್ ಮೋದಿ ತಾತ ಎಂದ ಪುಟಾಣಿ, ಪ್ರಧಾನಿ ಮೋದಿ ಪ್ರತಿಕ್ರಿಯೆ ಹೇಗಿತ್ತು ನೋಡಿ?
ಅತೀ ಹೆಚ್ಚು ಹಲ್ಲುಗಳನ್ನು ಹೊಂದಿರುವ ಮಹಿಳೆ ಎಂಬ ಗಿನ್ನೆಸ್ ವಿಶ್ವ ದಾಖಲೆಯನ್ನು ಮಾಡಿದ ನಂತರ ಹೆಚ್ಚುವರಿ ಹಲ್ಲುಗಳನ್ನು ತೆಗೆಯದಿರುವ ಆ ನನ್ನ ನಿರ್ಧಾರದಿಂದ ಈ ದಾಖಲೆಯನ್ನು ಮಾಡಲು ಸಾಧ್ಯವಾಯಿತು. ಗಿನ್ನೆಸ್ ವಿಶ್ವ ದಾಖಲೆಯ ಪ್ರಶಸ್ತಿಯನ್ನು ಪಡೆದಿರುವುದಕ್ಕೆ ನನಗೆ ತುಂಬಾ ಸಂತೋಷವಿದೆ. ಇದು ನನ್ನ ಜೀವಮಾನದ ಸಾಧನೆ ಎಂದು ಕಲ್ಪನಾ ಹೇಳಿದ್ದಾರೆ.
ಹೆಚ್ಚುವರಿ ಹಲ್ಲುಗಳು ಹೇಗೆ ಬೆಳೆಯುತ್ತವೆ?
ವೈದ್ಯಕೀಯ ಭಾಷೆಯಲ್ಲಿ ಸೂಪರ್ನ್ಯೂಮರರಿ ಹಲ್ಲುಗಳಿಗೆ (ಹೆಚ್ಚುವರಿ ಹಲ್ಲುಗಳು) ಹೈಪರ್ಡಾಂಟಿಯಾ ಅಥವಾ ಪಾಲಿಡೋಂಟಿಯಾ ಎಂದು ಕರೆಯಲಾಗುತ್ತದೆ. ಹಲ್ಲಿನ ರಚನೆಯ ಪ್ರಕ್ರಿಯೆಯಲ್ಲಿನ ದೋಷದಿಂದ ಹೆಚ್ಚುವರಿ ಹಲ್ಲುಗಳು ಬೆಳೆಯುತ್ತದೆ ಮತ್ತು ಇದು ಅನುವಂಶಿಕ ಪರಿಸ್ಥಿತಿಗಳಿಗೆ ಸಂಬಂಧಿಸಿದೆ ಎಂದು ಹೇಳಲಾಗುತ್ತದೆ. ಎಂದು ಹೇಳಲಾಗುತ್ತದೆ. ಆದರೂ ಹೈಪರ್ಡಾಂಟಿಯಾಕ್ಕೆ ನಿಖರವಾದ ಕಾರಣ ಏನು ಎಂಬುದು ಇನ್ನೂ ತಿಳಿದಿಲ್ಲ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 5:24 pm, Wed, 22 November 23