ಅಯ್ಯೋ ವಿಧಿಯೇ: ಆನ್ಲೈನ್ನಲ್ಲಿ ಆರ್ಡರ್ ಮಾಡಿದ್ದು 46 ಸಾವಿರದ ಸ್ಮಾರ್ಟ್ ಫೋನ್, ಬಂದಿದ್ದು ಸಾಬೂನು
ಆನ್ಲೈನ್ ಶಾಪಿಂಗ್ನಲ್ಲಿ ನಡೆಯುವ ಸ್ಕ್ಯಾಮ್ಗಳು ಕುರಿತ ಸುದ್ದಿಗಳ ಬಗ್ಗೆ ನಾವು ಆಗಾಗ್ಗೆ ಕೇಳುತ್ತಿರುತ್ತೇವೆ. ಅದೇ ರೀತಿಯ ವಂಚನೆಯ ಘಟನೆಯೊಂದು ನಡೆದಿದೆ. ಮಹಾರಾಷ್ಟ್ರದ ಥಾಣೆ ಜಿಲ್ಲೆಯ ವ್ಯಕ್ತಿಯೊಬ್ಬರು, ಆನ್ಲೈನ್ ಶಾಪಿಂಗ್ ಫ್ಲಾಟ್ಫಾರ್ಮ್ನಲ್ಲಿ 46 ಸಾವಿರ ರೂಪಾಯಿಯ ಐಫೋನ್ ಆರ್ಡರ್ ಮಾಡಿದ್ದು, ಆದರೆ ಅವರಿಗೆ ಪಾರ್ಸೆಲ್ ಬಂದಿದ್ದು ಮಾತ್ರ ಮೂರು ಬಾರ್ ಸೋಪ್. ಇದನ್ನು ಕಂಡು ಗಾಬರಿಯಾದ ಆ ವ್ಯಕ್ತಿ ಪೋಲಿಸ್ ಠಾಣೆಗೆ ಹೋಗಿ ದೂರನ್ನು ನೀಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ಆನ್ಲೈನ್ ಶಾಪಿಂಗ್ ಫ್ಲಾಟ್ಫಾರ್ಮ್ನಲ್ಲಿಯೇ ತಮಗೆ ಬೇಕಾದ ವಸ್ತುಗಳನ್ನು ಖರೀದಿಸುತ್ತಾರೆ. ಒಂದು ಲೆಕ್ಕದಲ್ಲಿ ಆನ್ಲೈನ್ ಶಾಪಿಂಗ್ ನಮ್ಮ ಜೀವನವನ್ನು ಸುಲಭಗೊಳಿಸಿದೆ ಅಂತಾನೇ ಹೇಳಬಹುದು. ದಿನನಿತ್ಯದ ಬಳಕೆಯ ಹಣ್ಣು ತರಕಾರಿಗಳಿಂದ ಹಿಡಿದು ಬಟ್ಟೆಗಳು, ಮೇಕಪ್ ಉತ್ಪನ್ನಗಳು, ಟಿವಿ, ಫ್ರಿಡ್ಜ್, ಮೊಬೈಲ್ ಫೋನ್ ಸೇರಿದಂತೆ ಎಲ್ಲಾ ಬಗೆಯ ಗ್ಯಾಜೆಟ್ಗಳನ್ನು ಕೂಡಾ ಆನ್ಲೈನ್ ಶಾಪಿಂಗ್ ಮೂಲಕ ತರಿಸಿಕೊಳ್ಳಬಹುದು. ಅಷ್ಟೇ ಯಾಕೆ ನಾವು ತಿನ್ನುವ ಆಹಾರಗಳನ್ನು ಕೂಡಾ ಆನ್ಲೈನ್ ಮೂಲಕವೇ ತರಿಸಿಕೊಳ್ಳಬಹುದು. ಆನ್ಲೈನ್ ಶಾಪಿಂಗ್ನಿಂದ ನಮ್ಮ ಸಮಯವನ್ನು ಉಳಿಸಬಹುದಲ್ಲದೆ, ಇದರಿಂದ ಹಣವನ್ನು ಕೂಡಾ ಉಳಿತಾಯ ಮಾಡಬಹುದು. ಅದರಲ್ಲೂ ಹಬ್ಬದ ಸಂದರ್ಭಗಳಲ್ಲಿ ಭಾರಿ ರಿಯಾಯಿತಿ ದರಗಳಲ್ಲಿ ಬೆಳೆಬಾಳುವ ವಸ್ತುಗಳನ್ನು ಮಾರಾಟ ಮಾಡುತ್ತಾರೆ. ಹೀಗಿರುವಾಗ ಆನ್ಲೈನ್ ಶಾಪಿಂಗ್ ಫ್ಲಾಟ್ ಫಾರ್ಮ್ನಿಂದ ಬೆಲೆಬಾಳುವ ವಸ್ತುಗಳನ್ನು ಖರೀದಿಸುವುದು ಸೂಕ್ತವೇ? ಎಂಬ ಪ್ರಶ್ನೆ ಹಲವರಲ್ಲಿ ಮೂಡುತ್ತದೆ. ಏಕೆಂದರೆ ಈ ರೀತಿಯ ಹಲವಾರು ಆನ್ಲೈನ್ ಶಾಪಿಂಗ್ ಸ್ಕ್ಯಾಮ್ಗಳು ನಡೆದಿವೆ. ಮತ್ತು ಹಲವರು ಇಂತಹ ವಂಚನೆಗೆ ಬಲಿಯಾಗಿ ತಮ್ಮ ಹಣವನ್ನು ಕಳೆದುಕೊಂಡಿದ್ದಾರೆ. ಇದೇ ರೀತಿಯ ಆನ್ಲೈನ್ ಸ್ಕ್ಯಾಮ್ ಮಹಾರಾಷ್ಟ್ರದಲ್ಲಿ ದೀಪಾವಳಿ ಹಬ್ಬದ ಸಮಯದಲ್ಲಿ ನಡೆದಿದೆ. ಹೌದು ಮಹಾರಾಷ್ಟ್ರದ ವ್ಯಕ್ತಿಯೊಬ್ಬರು ಆನ್ಲೈನ್ ಶಾಪಿಂಗ್ ಫ್ಲಾಟ್ಫಾರ್ಮ್ನಿಂದ 46 ಸಾವಿರ ರೂಪಾಯಿ ಮೌಲ್ಯದ ಮೊಬೈಲ್ ಫೋನ್ ಒಂದನ್ನು ಆರ್ಡರ್ ಮಾಡಿರುತ್ತಾರೆ. ಆದರೆ ಅವರಿಗೆ ಪಾರ್ಸೆಲ್ ಬಂದಿದ್ದು ಮಾತ್ರ ಮೊಬೈಲ್ ಬದಲಿಗೆ ಮೂರು ಬಾರ್ ಸೋಪ್.
ಈ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ನಡೆದಿದ್ದು, ಇಲ್ಲಿನ ವ್ಯಕ್ತಿಯೊಬ್ಬರು ದೀಪಾವಳಿ ಹಬ್ಬದ ಸಮಯದಲ್ಲಿ ಆನ್ಲೈನ್ ಶಾಪಿಂಗ್ ಫ್ಲಾಟ್ಫಾರ್ಮ್ನಿಂದ 46 ಸಾವಿರ ರೂಪಾಯಿ ಮೌಲ್ಯದ ಐಫೋನ್ ಒಂದನ್ನು ಆರ್ಡರ್ ಮಾಡಿರುತ್ತಾರೆ. ಪಾರ್ಸೆಲ್ ಬಂದಾಗ ತನ್ನ ಮೊಬೈಲ್ ಬಂತಲ್ಲಾ ಎಂದು ಸಂತೋಷದಿಂದ ಆ ಪಾರ್ಸೆಲ್ ತೆರೆದಾಗ ಬಾಕ್ಸ್ನಲ್ಲಿ ಇದ್ದಿದ್ದು ಮೊಬೈಲ್ ಬದಲಿಗೆ ಮೂರು ಬಾರ್ ಡಿಶ್ವಾಶ್ ಸೋಪ್. ಇದನ್ನು ಕಂಡು ಶಾಕ್ ಆದ ಆ ವ್ಯಕ್ತಿ ತಕ್ಷಣವೇ ಭಾಯಂದರ್ ಪೋಲಿಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ.
ಇದನ್ನೂ ಓದಿ: ತಮಿಳುನಾಡಿನ ಈ ಮಹಿಳೆಗೆ 38 ಹಲ್ಲುಗಳು, ಇದೀಗ ಈಕೆಯ ಹಲ್ಲು ವಿಶ್ವ ದಾಖಲೆಗೆ ಸೇರಿದೆ
ಈ ವ್ಯಕ್ತಿ ನೀಡಿದ ದೂರನ್ನು ಉಲ್ಲೇಖಿಸಿದ ಪೋಲಿಸರು ಪಾರ್ಸೆಲ್ ಪ್ಯಾಕೇಜ್ ಓಪನ್ ಮಾಡಿದಾಗ ಮೊಬೈಲ್ ಫೋನ್ ಬದಲಿಗೆ ಮೂರು ಬಾರ್ ಡಿಶ್ವಾಶ್ ಸೋಪ್ ಪತ್ತೆಯಾಗಿದೆ ಎಂದು ಹೇಳಿದ್ದಾರೆ. ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 420 (ವಂಚನೆ) ಅಡಿಯಲ್ಲಿ ಪೋಲಿಸರು ಆ ವ್ಯಕ್ತಿಗೆ ವಂಚನೆ ಮಾಡಿದವರ ವಿರುದ್ಧ ದೂರನ್ನು ದಾಖಲಿಸಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸಲಾಗುತ್ತದೆ ಎಂದು ಪೋಲಿಸರು ಹೇಳಿದ್ದಾರೆ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ