ಈ ವಿಡಿಯೋ ನೋಡಿದ್ರೆ, ನೀವು ರಸ್ಕ್ ತಿನ್ನುವ ರಿಸ್ಕ್ ಬೇಡ ಅಂತೀರಾ
ಹೆಚ್ಚಿನವರಿಗೆ ರಸ್ಕ್ ಎಂದರೆ ತುಂಬಾ ಇಷ್ಟ. ಟೀ ಅಥವಾ ಕಾಫಿಯಲ್ಲಿ ರಸ್ಕ್ ಅನ್ನು ಅದ್ದಿ ತಿನ್ನುವುದೇ ಒಂದು ಮಜಾ. ಆದರೆ ನಾವು ಇಷ್ಟಪಟ್ಟು ತಿನ್ನುವ ರಸ್ಕ್ ಅನ್ನು ಹೇಗೆ ತಯಾರಿಸುತ್ತಾರೆ ಎಂಬುದು ನಿಮಗೆ ತಿಳಿದಿದೆಯಾ? ಈ ಕುರಿತ ವಿಡಿಯೋವೊಂದು ಇದೀಗ ವೈರಲ್ ಆಗಿದೆ. ಈ ವಿಡಿಯೋವನ್ನು ನೋಡಿದವರು ರಸ್ಕ್ ತಿನ್ನುವ ರಿಸ್ಕ್ ನಮಗಂತೂ ಬೇಡ ಅನ್ನುತ್ತಿದ್ದಾರೆ.
ರಸ್ಕ್ ಭಾರತದ ಜನಪ್ರಿಯ ತಿನಿಸುಗಳಲ್ಲಿ ಒಂದಾಗಿದೆ. ಬೆಳಗ್ಗೆ ಹಾಗೂ ಸಂಜೆಯ ಟೀ ಕಾಫಿ ಕುಡಿಯುವ ಸವಯದಲ್ಲಂತೂ ಕೆಲವರಿಗೆ ರಸ್ಕ್ ಇರಲೇಬೇಕು. ಹೀಗೆ ಮಕ್ಕಳಿರಲಿ, ದೊಡ್ಡವರಿರಲಿ ಹೆಚ್ಚಿನವರು ರಸ್ಕ್ನ್ನು ಬಹಳ ಇಷ್ಟಪಟ್ಟು ತಿನ್ನುತ್ತಾರೆ. ಟೀ ಅಥವಾ ಕಾಫಿಯಲ್ಲಿ ರಸ್ಕ್ ಅನ್ನು ಅದ್ದಿ ತಿನ್ನುವುದೇ ಒಂದು ಮಜಾ. ಆದರೆ ನಾವು ಇಷ್ಟಪಟ್ಟು ತಿನ್ನುವ ರಸ್ಕ್ ಅನ್ನು ಹೇಗೆ ತಯಾರಿಸುತ್ತಾರೆ ಎಂಬುದು ನಿಮಗೆ ತಿಳಿದಿದೆಯಾ? ಈ ಒಂದು ತಿನಿಸನ್ನು ಯಾವ ರೀತಿ ತಯಾರಿಸಲಾಗುತ್ತದೆ ಎಂಬುದನ್ನು ನೀವು ನೋಡಿದರೆ, ಖಂಡಿತವಾಗಿಯೂ ನೀವು ಓ ದೇವರೆ ನಾನು ಇಷ್ಟು ದಿನ ಇದನ್ನಾ ಇಷ್ಟಪಟ್ಟು ತಿಂದಿದ್ದು ಎಂದು ತಲೆ ಚಚ್ಚಿಕೊಳ್ಳುವುದಂತೂ ಗ್ಯಾರಂಟಿ.
ನಾವು ತಿನ್ನುವ ಯಾವುದೇ ಆಹಾರ ಪದಾರ್ಥಗಳನ್ನು ತಯಾರಿಸುವಾಗ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ನೈರ್ಮ್ಯಲ್ಯದ ವಿಚಾರಗಳನ್ನು ಗಾಳಿಗೆ ತೂರಿ ಆಹಾರಗಳನ್ನು ತಯಾರಿಸಿದರೆ ಜನರು ಅದನ್ನು ತಿನ್ನಲು ಇಷ್ಟಪಡುವುದಿಲ್ಲ. ಹೀಗೆ ನೈರ್ಮಲ್ಯವನ್ನು ಕಾಪಾಡಿಕೊಳ್ಳದೆ ಫ್ಯಾಕ್ಟರಿಗಳಲ್ಲಿ ನೂಡಲ್ಸ್ ತಯಾರಿಸುವ, ಕೇಕ್ ತಯಾರಿಸುವ ವಿಡಿಯೋಗಳನ್ನು ನಾವು ನೋಡಿರುತ್ತೇವೆ. ಈಗ ಇದೇ ಇಂತಹದ್ದೆ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ನೈರ್ಮಲ್ಯ ಕ್ರಮಗಳನ್ನು ಪಾಲಿಸದೆ ರಸ್ಕ್ ತಯಾರಿಸುವುದನ್ನು ಕಾಣಬಹುದು.
ಭಾರತೀಯ ರೈಲ್ವೈ ಅಧಿಕಾರಿ ಅನಂತ್ ರೂಪನಗುಡಿ ಅವರು ತಮ್ಮ ಎಕ್ಸ್ (X) ಖಾತೆಯಲ್ಲಿ ಹಂಚಿಕೊಂಡಿರುವ ಈ ವಿಡಿಯೋದಲ್ಲಿ ಫುಡ್ ಫ್ಯಾಕ್ಟರಿಯಲ್ಲಿ ಯಾವುದೇ ನೈರ್ಮಲ್ಯ ಕ್ರಮಗಳನ್ನು ಪಾಲಿಸದೆ ರಸ್ಕ್ ತಯಾರಿಸುವುದನ್ನು ಕಾಣಬಹುದು.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
If this is true, I dread having a toast again! 🙄 #Food #hygiene pic.twitter.com/VXP9dkFp8A
— Ananth Rupanagudi (@Ananth_IRAS) November 20, 2023
X ನಲ್ಲಿ ಹಂಚಿಕೊಳ್ಳಲಾದ 35 ಸೆಕೆಂಡುಗಳ ಈ ವಿಡಿಯೋದಲ್ಲಿ ಯಾವುದೇ ನೈರ್ಮಲ್ಯ ಕ್ರಮವನ್ನು ಪಾಲಿಸದೆ ಕೆಲಸಗಾರರು ರಸ್ಕ್ ತಯಾರಿಸುವ ಸಂಪೂರ್ಣ ಪ್ರಕ್ರಿಯೆಯನ್ನು ಕಾಣಬಹುದು. ಮುಖ್ಯವಾಗಿ ಯಾವುದೇ ಹಿಟನ್ನು ಕಲಸುವಾಗ ಕೆಲಸಗಾರರು ಕೈಗವಸುಗಳನ್ನು ಧರಿಸುವುದು ತುಂಬಾ ಮುಖ್ಯ. ಆದರೆ ಇಲ್ಲಿ ಕೆಲಸಗಾರರು ಕೈಗವಸುಗಳನ್ನು ಧರಿಸದೆ, ರಸ್ಕ್ ತಯಾರಿಸಲು ಹಿಟ್ಟನ್ನು ಕಲಸುವುದನ್ನು ಕಾಣಬಹುದು. ಅದರಲ್ಲೂ ಒಬ್ಬಾತ ಬೀಡಿ ಸೇದುತ್ತಲೇ ಹಿಟ್ಟನ್ನು ಕಲಸುತ್ತಿರುತ್ತಾನೆ. ಹೀಗೆ ರಸ್ಕ್ ತಯಾರಿಸುವ ಸಂಪೂರ್ಣ ವಿಧಾನವನ್ನು ಕಾಣಬಹುದು.
ಇದನ್ನೂ ಓದಿ: ಹಾಯ್ ಮೋದಿ ತಾತ ಎಂದ ಪುಟಾಣಿ, ಪ್ರಧಾನಿ ಮೋದಿ ಪ್ರತಿಕ್ರಿಯೆ ಹೇಗಿತ್ತು ನೋಡಿ?
ನವೆಂಬರ್ 20 ರಂದು ಹಂಚಿಕೊಳ್ಳಲಾದ ಈ ವೀಡಿಯೋ ಇಲ್ಲಿಯವರೆಗೆ 697.9K ವೀಕ್ಷಣೆಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್ಸ್ಗಳೂ ಹರಿದು ಬಂದಿವೆ. ಒಬ್ಬ ಬಳಕೆದಾರರು ʼಕೆಲಸಗಾಗಗರು ಸ್ವಚ್ಛವಾಗಿರದೆ ಇರಬಹುದು ಆದರೆ ಅವರು ಕೆಟ್ಟವರಲ್ಲʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ಹಾಗಾದರೆ ʼಬ್ರಿಟಾನಿಯ ಮತ್ತು ಪಾರ್ಲೆ ಬ್ರಾಂಡಿನ ರಸ್ಕ್ಗಳನ್ನೂ ಇದೇ ರೀತಿ ತಯಾರಿಸಲಾಗುತ್ತಾʼ ಎಂದು ಪ್ರಶ್ನಿಸಿದ್ದಾರೆ. ಮತ್ತೊಬ್ಬ ಬಳಕೆದಾದರು “ನೀವ್ಯಾರೂ ಚಿಂತಿಸಬೇಡಿ ರಸ್ಕ್ಗಳನ್ನು ಬಿಸಿ ಮಾಡುವ ಸಂದರ್ಭದಲ್ಲಿ ಅದರ ಎಲ್ಲಾ ಸೂಕ್ಷ್ಮ ಜೀವಿಗಳು ಮತ್ತು ವೈರಸ್ಗಳು ನಾಶವಾಗುತ್ತವೆ’ ಎಂದು ಹೇಳಿದ್ದಾರೆ. ಇನ್ನೂ ಹಲವರು ಆಹಾರಗಳನ್ನು ತಯಾರಿಸುವ ಸ್ಥಳಗಳಲ್ಲಿ ಉತ್ತಮ ಗುಣಮಟ್ಟದ ನೈರ್ಮಲ್ಯವನ್ನು ಕಾಪಾಡಬೇಕು ಎಂದು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ