Viral Video: ಈ ಪ್ರಾಣಿ ಅಕ್ರಮವಾಗಿ ಮರ ಕಡಿಯುತ್ತಿದೆ, ಮೂರ್ತಿ ಚಿಕ್ಕದಾದರೂ, ಶಕ್ತಿ ದೊಡ್ಡದು

ನೋಡಲು ಥೇಟ್ ಇಲಿಯಂತೆ ಕಾಣುವ ಬೀವರ್ (Beaver) ಎಂದು ಕರೆಯಲ್ಪಡುವ ಪ್ರಾಣಿಯೊಂದು ಬೃಹದಾಕಾರದ ಮರವನ್ನು ಕೇವಲ ತನ್ನ ಹಲ್ಲುಗಳಿಂದ ಕಚ್ಚಿ ಕಡಿದು, ಆ ಮರವನ್ನು ಧರೆಗುರುಳಿಸುವಂತಹ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಪುಟ್ಟ ಪ್ರಾಣಿ ಇಷ್ಟೊಂದು ಬಲಶಾಲಿಯೇ ಎಂದು ನೋಡುಗರು ಆಶ್ಚರ್ಯಚಕಿತರಾಗಿದ್ದಾರೆ.

Viral Video: ಈ ಪ್ರಾಣಿ ಅಕ್ರಮವಾಗಿ ಮರ ಕಡಿಯುತ್ತಿದೆ, ಮೂರ್ತಿ ಚಿಕ್ಕದಾದರೂ, ಶಕ್ತಿ ದೊಡ್ಡದು
ವೈರಲ್​​ ವಿಡಿಯೋ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Nov 23, 2023 | 4:50 PM

ಈ ಜಗತ್ತಿನಲ್ಲಿ ಕೆಲವೊಂದು ಪ್ರಾಣಿಗಳಿವೆ. ಅವುಗಳು ಕಾಣಲು ತುಂಬಾ ಸೌಮ್ಯ ಸ್ವಾಭಾವ ಹಾಗೂ ದುರ್ಬಲವಿರುವಂತೆ ಕಾಣುತ್ತದೆ. ಆದರೆ ಅವುಗಳ ನಿಜವಾದ ಶಕ್ತಿ, ಯುಕ್ತಿ ಹಾಗೂ ಧೈರ್ಯವನ್ನು ಕಂಡರೆ ನಾವು ಅಚ್ಚರಿಪಡುವುದಂತೂ ನಿಜ. ಅಂತಹ ಶಕ್ತಿ ಮತ್ತು ಯುಕ್ತಿಯನ್ನು ಹೊಂದಿರುವ ಪ್ರಾಣಿಗಳಲ್ಲಿ ಬೀವರ್ (Beaver) ಕೂಡಾ ಒಂದು. ನೋಡಲು ಇಲಿಗಳಂತೆ ಕಾಣುವ ಈ ಪ್ರಾಣಿ ಸುಮಾರು 18 ರಿಂದ 30 ಕೆಜಿಯಷ್ಟು ತೂಕವನ್ನು ಹೊಂದಿರುತ್ತವೆ. ಹೆಚ್ಚಾಗಿ ಜಲಮೂಲಗಳ ಸುತ್ತಲೂ ವಾಸಿಸುವ ಈ ಪ್ರಾಣಿಯನ್ನು ಪರಿಸರ ವ್ಯವಸ್ಥೆಯ ಎಂಜಿನಿಯರ್ ಎಂದು ಕರೆಯುತ್ತಾರೆ. ಈ ಪುಟ್ಟ ಪ್ರಾಣಿಗಳು ಕೇವಲ ತಮ್ಮ ಹಲ್ಲುಗಳಿಂದ ಮರಗಳನ್ನು ಕಚ್ಚಿ, ಕಡಿದು ಧರೆಗುರುಳಿಸುತ್ತವೆ. ಈಗ ಇಂತಹದ್ದೇ ಈ ಪುಟ್ಟ ಪ್ರಾಣಿಯ ಶಕ್ತಿಪ್ರದರ್ಶನದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಈ ಪ್ರಾಣಿಯ ಶಕ್ತಿಪ್ರದರ್ಶನ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.

ಮನುಷ್ಯರು ಬಿಡಿ, ಬೇರೆ ಯಾವ ಪ್ರಾಣಿಯಾದರು ಕೇಲವ ತನ್ನ ಹಲ್ಲುಗಳಿಂದ ಮರವನ್ನು ಕಚ್ಚಿ ಕಡಿದು ತುಂಡರಿಸುವುದನ್ನು ನೋಡಿದ್ದೀರಾ? ಬಹುತೇಕ ಎಲ್ಲರೂ ಇಲ್ಲ ಎಂದೇ ಹೇಳುತ್ತಾರೆ. ಆದರೆ ಈ ವಿಡಿಯೋದಲ್ಲಿ ಬೀವರ್ ಎಂಬ ಪ್ರಾಣಿ ಕೇಲವ ತನ್ನ ಹಲ್ಲುಗಳ ಸಹಾಯದಿಂದ ಬೃಹದಾಕಾರದ ಮರವೊಂದನ್ನು ಬಾಯಿಯಿಂದ ಕಚ್ಚಿ, ಕಡಿದು ತುಂಡರಿಸುತ್ತದೆ. ಈ ವಿಡಿಯೋವನ್ನು @gunsnrosesgirl13 ಎಂಬ X ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಇಲ್ಲಿ ಬೀವರ್ ಕೇವಲ ತನ್ನ ಹಲ್ಲುಗಳಿಂದ ಮರವನ್ನು ಕಡಿಯುತ್ತಾ ಕೊನೆಗೆ ಮರವನ್ನು ಹೇಗೆ ಧರೆಗುರುಳಿಸುತ್ತದೆ ಎಂಬುದನ್ನು ಕಾಣಬಹುದು.

ವೈರಲ್​​​ ವಿಡಿಯೋ ಇಲ್ಲಿದೆ ನೋಡಿ:

ವೀಡಿಯೋದಲ್ಲಿ ಬೀವರ್ ಬೃಹದಾಕಾರದ ಮರದ ಬಳಿ ಬಂದು, ಆ ಮರದ ಕೆಳಭಾಗವನ್ನು ಕೇವಲ ತನ್ನ ಹಲ್ಲುಗಳ ಸಹಾಯದಿಂದ ಕಚ್ಚಿ, ಮರದ ತೊಗಡೆ, ತಿರುಳುಗಳನ್ನೆಲ್ಲಾ ಕಿತ್ತು ಹಾಕಿ ಕೊನೆಗೆ ಮರವನ್ನೇ ಧರೆಗುರುಳಿಸುತ್ತದೆ. ಈ ಪ್ರಾಣಿಯ ಬುದ್ಧಿ ಶಕ್ತಿ ಹಾಗೂ ತಾಳ್ಮೆಯನ್ನು ಕಂಡು ನೆಟ್ಟಿಗರು ಅಚ್ಚರಿಪಟ್ಟಿದ್ದಾರೆ. ನವೆಂಬರ್ 22 ರಂದು X ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ 17.4 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್​​ಗಳನ್ನು ಪಡೆದುಕೊಂಡಿದೆ.

ಇದನ್ನೂ ಓದಿ:ಬರಿಗೈಯಲ್ಲಿ ದೈತ್ಯ ಅನಕೊಂಡ ಹಿಡಿದು, ಒಲವಿನ ಮುತ್ತಿಟ್ಟ ಎಂಟೆದೆ ಭಂಟ

ಅಷ್ಟಕ್ಕೂ ಬೀವರ್ ಮರಗಳನ್ನೇಕೆ ತುಂಡರಿಸುತ್ತದೆ?

ಸಸ್ಯಹಾರಿಗಳಾಗಿರುವ ಈ ಪ್ರಾಣಿಗಳು ಹಣ್ಣು, ನೆನೆದ ಎಲೆ, ಹುಲ್ಲುಗಳು ಹಾಗೂ ಮರದ ತಿರುಗಳುಗಳನ್ನು ತಿಂದು ಬದುಕುತ್ತವೆ. ತನ್ನ ಆಹಾರಕ್ಕಾಗಿ ಈ ಪ್ರಾಣಿಗಳು ಬೃಹದಾಕಾರದ ಮರಗಳನ್ನು ಕೆಡವಿ ಹಾಕುತ್ತವೆ. ಅಷ್ಟೇ ಅಲ್ಲದೆ ಇವುಗಳು ನೀರಿರುವ ಪ್ರದೇಶದಲ್ಲಿ ವಾಸಿಸುವ ಕಾರಣ ತಮ್ಮ ರಕ್ಷಣೆಗಾಗಿ ಅಲ್ಲಿ ಸುವ್ಯವಸ್ಥಿತವಾದ ಅಣೆಕಟ್ಟುಗಳನ್ನು ಕಟ್ಟುವ ಸಲುವಾಗಿ ಮರಗಳನ್ನು ಕೆಡವಿ ಹಾಕುತ್ತವೆ. ಮತ್ತು ಈ ಮರದ ದಿಮ್ಮಿಗಳ ಸಹಾಯದಿಂದ ಭದ್ರವಾದ ಅಣೆಕಟ್ಟುಗಳನ್ನು ನಿರ್ಮಿಸುತ್ತವೆ. ಹಾಗೂ ಈ ಮರದ ದಿಮ್ಮಿಗಳಿಂದ ತಮಗಾಗಿ ವ್ಯವಸ್ಥಿತವಾದ ಸೂರುಗಳನ್ನು ಸಹ ಕಟ್ಟಿಕೊಳ್ಳುತ್ತವೆ. ಈ ಕಾರಣಕ್ಕಾಗಿಯೇ ಈ ಪ್ರಾಣಿಯನ್ನು ಪರಿಸರ ವ್ಯವಸ್ಥೆಯ ಎಂಜಿನಿಯರ್ ಎಂದು ಕರೆಯಲಾಗುತ್ತದೆ.

ಟ್ರೀ ಜರ್ನಿ ವೆಬ್ಸೈಟ್ನ ವರದಿಯ ಪ್ರಕಾರ, ಬೀವರ್ ಪ್ರಾಣಿಗಳು ಒಂದು ಮರವನ್ನು ಕೇವಲ 8 ನಿಮಿಷಗಳಲ್ಲಿ ಸಂಪೂರ್ಣವಾಗಿ ಕತ್ತರಿಸಿ, ಆ ಮರಗಳನ್ನು ಧರೆಗುರುಳಿಸುತ್ತವಂತೆ. ಹಾಗಾದರೆ ನೀವೇ ಯೋಚಿಸಿ ಈ ಪ್ರಾಣಿ ಎಷ್ಟು ಬಲಶಾಲಿಯಾಗಿರಬಹುದು ಎಂದು.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ