Viral Video: ಬರಿಗೈಯಲ್ಲಿ ದೈತ್ಯ ಅನಕೊಂಡ ಹಿಡಿದು, ಒಲವಿನ ಮುತ್ತಿಟ್ಟ ಎಂಟೆದೆ ಭಂಟ

ಅನಕೊಂಡ  ಈ ಪ್ರಪಂಚದಲ್ಲಿನ ದೈತ್ಯ ಹಾವುಗಳಲ್ಲಿ ಒಂದು.  ಈ ಹಾವಿನ ತಂಟೆಗೆ ಅಷ್ಟಾಗಿ ಯಾರು ಹೋಗುವುದಿಲ್ಲ.  ಆದರೆ ಸಾಮಾಜಿಕ ಜಾಲತಾಣದಲ್ಲಿ  ಇದೀಗ ವೈರಲ್ ಆಗಿರುವ  ವಿಡಿಯೋದಲ್ಲಿ ಅಮೇರಿಕಾದ ಪ್ರಜೆಯೊಬ್ಬ, ಆತನಿಗಿಂತ ಎರಡುಪಟ್ಟು ದೊಡ್ಡದಾಗಿರುವ ದೈತ್ಯ  ಅನಕೊಂಡವನ್ನು ಬರಿಗೈಯಲ್ಲಿ ಹಿಡಿದಿದ್ದು ಮಾತ್ರವಲ್ಲದೆ, ಆ ಹಾವಿಗೆ ಪ್ರೀತಿಯಿಂದ ಮುತ್ತು ನೀಡುತ್ತಾನೆ. ಈತನ ಈ ಹುಚ್ಚು ಸಾಹಸವನ್ನು ಕಂಡು ಹಲವರು ಆಶ್ಚರ್ಯಚಕಿತರಾಗಿದ್ದಾರೆ. 

Viral Video: ಬರಿಗೈಯಲ್ಲಿ ದೈತ್ಯ ಅನಕೊಂಡ ಹಿಡಿದು, ಒಲವಿನ ಮುತ್ತಿಟ್ಟ ಎಂಟೆದೆ ಭಂಟ
ವೈರಲ್​​ ವಿಡಿಯೋ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on:Nov 21, 2023 | 12:55 PM

ಹಾವುಗಳೆಂದರೆ ಯಾರಿಗೆ ಭಯವಿಲ್ಲ ಹೇಳಿ. ಬಹುತೇಕ ಎಲ್ಲರೂ ಹಾವುಗಳನ್ನು ಕಂಡರೆ ಬೆಚ್ಚಿಬಿದ್ದು ಓಡಿ ಹೋಗುತ್ತಾರೆ.  ಒಂದು ಸಣ್ಣ ಕೆರೆ ಹಾವಿಗೂ ಭಯಪಡುವವರ ಮಧ್ಯೆ, ಹಾವುಗಳನ್ನು ಪ್ರೀತಿಸುವ ಜನರೂ ಇದ್ದಾರೆ. ಹೌದು ಕೆಲವೊಬ್ಬರು ವಿವಿಧ ಬಗೆಯ ಹಾವುಗಳನ್ನು ಸಾಕು ಪ್ರಾಣಿಗಳಂತೆ ಮನೆಯಲ್ಲಿ ಸಾಕುತ್ತಾರೆ. ಇನ್ನೂ ಕೆಲವರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ವಿಷಪೂರಿತ ಹಾವುಗಳನ್ನು ಕೈಯಲ್ಲಿ ಹಿಡಿದು ಸಾಹಸ ಮೆರೆಯುತ್ತಾರೆ.  ಇಂತಹ ಹಲವಾರು ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ಹರಿದಾಡುತ್ತಿರುತ್ತವೆ.  ಅಂತಹದ್ದೇ ವಿಡಿಯೋ  ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅಮೇರಿಕಾದ ವ್ಯಕ್ತಿಯೊಬ್ಬ ಆತನಿಗಿಂತ ಎರಡು ಪಟ್ಟು ದೊಡ್ಡದಾಗಿರುವ ದೈತ್ಯ ಅನಕೊಂಡ ಹಾವನ್ನು ಬರಿಗೈಯಲ್ಲಿ ಎತ್ತಿ ಹಿಡಿದಿದ್ದು ಮಾತ್ರವಲ್ಲದೆ, ಪ್ರೀತಿಯಿಂದ ಆ ಅನಕೊಂಡದ ತಲೆಗೆ ಮುತ್ತಿಟ್ಟಿದ್ದಾನೆ. ಈತನ ಈ ಭಂಡ ಧೈರ್ಯವನ್ನು ಕಂಡು ಹಲವರು ಆಶ್ಚರ್ಯಚಕಿತರಾಗಿದ್ದಾರೆ.

ತನ್ನನ್ನು ತಾನು ದಿ ರಿಯಲ್ ಟಾರ್ಜನ್ ಮತ್ತು ದಿ ಕಿಂಗ್ ಆಫ್ ದಿ ಜಂಗಲ್ ಎಂದು ಕರೆದುಕೊಳ್ಳುವ ಅಮೇರಿಕಾದ ಫ್ಲೋರಿಡಾದಲ್ಲಿನ  ಮೈಕ್ ಹೋಲ್ಸ್ಟಲ್ ಎಂಬವರು ಈ  ವೀಡಿಯೋವನ್ನು  ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು,  ವೀಡಿಯೋದಲ್ಲಿ ಹೋಲ್ಸ್ಟಲ್ ಅವರು ದೈತ್ಯ ಅನಕೊಂಡವನ್ನು  ಯಾವುದೇ ಅಂಜಿಕೆ ಅಥವಾ ಭಯವಿಲ್ಲದೆ ಬರಿಗೈಯಲ್ಲಿ ಹಿಡಿದು, ಆ ವಿಷಪೂರಿತ ಹಾವಿನ ತಲೆಗೆ  ಮುತ್ತಿಡುವುದನ್ನು ಕಾಣಬಹುದು.

ವೈರಲ್​​ ವಿಡಿಯೋ ಇಲ್ಲಿದೆ, ಅಪಾಯಕಾರಿಯಾಗಿದ್ದು ವೀಕ್ಷಕರಿಗೆ ಎಚ್ಚರಿಕೆ

ಈ ವೈರಲ್ ವೀಡಿಯೋದಲ್ಲಿ   ವಿಶಾಲವಾದ ಹುಲ್ಲುಗಾವಲಿನ ಪ್ರದೇಶವೊಂದರಲ್ಲಿ ದೈತ್ಯಾಕಾರದ ಅನಕೊಂಡವೊಂದು ಸರಸರನೆ ಹೋಗುತ್ತಿತ್ತು. ಇದನ್ನು ಕಂಡ ಮೈಕ್ ಆ ಹಾವಿನ ಬಳಿ ಹೋಗಿ,  ಅದರ ಬಾಲವನ್ನು ಮೆಲ್ಲಗೆ ಹಿಡಿದು, ಈ ಬದಿಗೆ ಎಳೆದು ತರುತ್ತಾರೆ. ನಂತರ ಹಾವಿನ ತಲೆಯನ್ನು ಹಿಡಿದುಕೊಳ್ಳಲು ಪ್ರಯತ್ನಿಸುತ್ತಾರೆ. ಅಷ್ಟರಲ್ಲಿ  ಆ ದೈತ್ಯ ಅನಕೊಂಡ, ತನ್ನ ಬಾಲದಿಂದ ಮೈಕ್ ಅವರ ಕೈಯನ್ನು ಸುತ್ತಿಕೊಳ್ಳುತ್ತದೆ. ಮೈಕ್  ಜಾಣ್ಮೆಯಿಂದ ಹಾವಿನ ಬಲೆಯಿಂದ ತನ್ನ ಕೈಯನ್ನು ಬಿಡಿಸಿಕೊಂಡು,  ತನ್ನ ಎರಡೂ ಕೈಗಳಿಂದ ನಿಧಾನಕ್ಕೆ ಹಾವಿನ ತಲೆಯನ್ನು ಹಿಡಿದು, ಹಾವಿಗೆ ಪ್ರೀತಿಯಿಂದ ಮುತ್ತಿಡುತ್ತಾರೆ. ಬಳಿಕ ಆ ದೈತ್ಯ ಸರೀಸೃಪವನ್ನು  ಬಾಹುಬಲಿಯಂತೆ ಎತ್ತಿಕೊಂಡು ಕ್ಯಾಮರಾಗೆ ಪೋಸ್ ನೀಡುತ್ತಾರೆ.   ಇವರ ಈ ಧೈರ್ಯ, ಸಾಹಸ ಅನೇಕರನ್ನು ಅಚ್ಚರಿಗೊಳಿಸಿದೆ.  ಇದೊಂದೇ ಮಾತ್ರವಲ್ಲದೆ, ಇಂತಹ ಅನೇಕ ಸಾಹಸಮಯ ವೀಡಿಯೋಗಳನ್ನು ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯನ್ನು ಹಂಚಿಕೊಳ್ಳುತ್ತಿರುತ್ತಾರೆ.

ಇದನ್ನೂ ಓದಿ: ಅಮ್ಮ ಸೆಲ್ಫಿ ಮತ್ತೆ ಒಮ್ಮೆ ಹಿಂದೆ ನೋಡು ಪಟಾಕಿ, ಓಡೋ.. ಓಡೋ ಓಡಲೇ ಎಂದ ಮಹಿಳೆಯರು 

ಆರು ದಿನಗಳ ಹಿಂದೆ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಳ್ಳಲಾದ ಈ ವೀಡಿಯೋ 13.1 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 357K ಲೈಕ್ಸ್ ಗಳನ್ನು ಪಡೆದುಕೊಂಡಿದೆ.  ಇವರ ಈ ಸಾಹಕ್ಕೆ ಹಲವಾರು ಕಮೆಂಟ್ಸ್​ಗಳು ಬಂದಿದೆ.  ಒಬ್ಬ ಬಳಕೆದಾರರು “ಹಾವಿಗೆ ಮುತ್ತನ್ನು ನೀಡುವ ದೃಶ್ಯ ಬಹಳ ಅದ್ಭುತವಾಗಿತ್ತು” ಎಂದು ತಮಾಷೆ ಮಾಡಿದ್ದಾರೆ. ಇನ್ನುಬ್ಬ ಬಳಕೆದಾರರು “ಈ ಯುವಕ ಬಹಳ ಧೈರ್ಯಶಾಲಿ” ಎಂದು ಮೆಚ್ಚುಗೆ ಸೂಚಿಸಿದ್ದಾರೆ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 12:53 pm, Tue, 21 November 23

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ