Viral Video: ಅಮ್ಮ ಸೆಲ್ಫಿ ಮತ್ತೆ ಒಮ್ಮೆ ಹಿಂದೆ ನೋಡು ಪಟಾಕಿ, ಓಡೋ.. ಓಡೋ ಓಡಲೇ ಎಂದ ಮಹಿಳೆಯರು 

ಕೆಲವೊಬ್ಬರಿಗೆ, ಇನ್ನೊಬ್ಬರ ಕಾಲೆಳೆಯುವುದು,  ಕೀಟಲೆ ಮಾಡುವುದೆಂದರೆ ಬಲು ಇಷ್ಟ. ಇಂತಹ ತರ್ಲೆ ತಮಾಷೆಯ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ಹರಿದಾಡುತ್ತಿರುತ್ತದೆ. ಕೆಲವು ವೀಡಿಯೋಗಳು ಅತಿರೇಕವಾಗಿ ಕಂಡರೂ, ಅದು ಜನರನ್ನು ಮನರಂಜಿಸುವುದಂತೂ ನಿಜ. ಈಗ ಅಂತಹದ್ದೇ ಒಂದು ಹಾಸ್ಯಮಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು,  ಸ್ಟೈಲ್ ಆಗಿ ಸೆಲ್ಫಿ ಕ್ಲಿಕ್ಕಿಸುತ್ತಿದ್ದ,  ಮೂವರು ಮಹಿಳೆಯರು ಪಟಾಕಿ ಸದ್ದಿಗೆ ಭಯಪಟ್ಟು, ಅಬ್ಬಬ್ಬಾ ಪ್ರಾಣ  ಉಳಿದರೆ ಸಾಕೆಂದು ಓಡಿ ಹೋಗುವುದನ್ನು ಕಾಣಬಹುದು. 

Viral Video: ಅಮ್ಮ ಸೆಲ್ಫಿ ಮತ್ತೆ ಒಮ್ಮೆ ಹಿಂದೆ ನೋಡು ಪಟಾಕಿ, ಓಡೋ.. ಓಡೋ ಓಡಲೇ ಎಂದ ಮಹಿಳೆಯರು 
ವೈರಲ್​​ ವಿಡಿಯೋ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Nov 20, 2023 | 5:57 PM

ವಾರಗಳ ಹಿಂದೆ ದೇಶದೆಲ್ಲೆಡೆ ದೀಪಾವಳಿ ಹಬ್ಬವನ್ನು ಬಹಳ ವಿಜೃಂಭನೆಯಿಂದ ಆಚರಿಸಲಾಯಿತು. ಕೆಲವರು ದೀಪಗಳನ್ನು ಹಚ್ಚಿ ಪರಿಸರ ಸ್ನೇಹಿ ದೀಪಾವಳಿ ಹಬ್ಬವನ್ನು ಆಚರಿಸಿದರೆ, ಇನ್ನೂ ಕೆಲವರು ಪಟಾಕಿಗಳನ್ನು ಸಿಡಿಸಿ ಬಹಳ ವಿಜೃಂಭನೆಯಿಂದ ಹಬ್ಬವನ್ನು ಆಚರಿಸಿದ್ದಾರೆ. ಇನ್ನೂ ದೀಪಾವಳಿ ಹಬ್ಬದಲ್ಲಿ ಉಳಿದಂತಹ ಪಟಾಕಿಗಳನ್ನು ಮರುದಿನವೂ ಕೆಲವರು ಸಿಡಿಸುತ್ತಾರೆ. ಅದರಲ್ಲೂ ಕೆಲವು ಹುಡುಗರು, ತಮ್ಮ ಮನರಂಜನೆಗಾಗಿ  ರಸ್ತೆಯಲ್ಲಿ ಓಡಾಡುವವರ ಹತ್ತಿರ ಪಟಾಕಿ ಸಿಡಿಸುವುದು, ತಮ್ಮ ಸ್ನೇಹಿತರ ಮೇಲೆ ಪಟಾಕಿ ಎಸೆಯುತ್ತಾ ತಮಾಷೆ ಮಾಡುತ್ತಿರುತ್ತಾರೆ. ಇಂತಹ ತಮಾಷೆ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ಹರಿದಾಡುತ್ತಿರುತ್ತವೆ. ಅದೇ ರೀತಿ ಇಲ್ಲೊಂದು ಹಾಸ್ಯಮಯ ವೀಡಿಯೋ ಹರಿದಾಡುತ್ತಿದ್ದು, ವ್ಯಕ್ತಿಯೊಬ್ಬ ಮಹಿಳೆಯರು ಸೆಲ್ಫಿ ಕಿಕ್ಕಿಸುತ್ತಿದ್ದ ವೇಳೆಯಲ್ಲಿ, ಅವರ ಪಕ್ಕದಲ್ಲಿಯೇ ಪಟಾಕಿ ಸಿಡಿಸಿದ್ದಾನೆ. ಪಟಾಕಿ ಸದ್ದಿಗೆ  ಭಯಪಟ್ಟು ಪ್ರಾಣ ಉಳಿದರೆ ಸಾಕೆಂದು ಆ ಮಹಿಳೆಯರು ಕಕ್ಕಾಬಿಕ್ಕಿಯಾಗಿ ಓಡಿ ಹೋಗಿದ್ದಾರೆ.  ಈ  ತಮಾಷೆಯ ವೀಡಿಯೋವನ್ನು ಕಂಡು ನೋಡುಗರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.

ಈ ಹಾಸ್ಯಮಯ ವೀಡಿಯೋವನ್ನು ಸತ್ಯಸಾಯಿ ರಾಮಕೃಷ್ಣ  (@sathyasai_krishnan) ಎಂಬವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ವೀಡಿಯೋದಲ್ಲಿ ಮೂವರು   ಮಹಿಳೆರು ಪಟಾಕಿ ಸದ್ದಿಗೆ ಹೆದರಿ, ಪ್ರಾಣ ಉಳಿದರೆ ಸಾಕೆಂದು ಓಡಿ ಹೋಗುವುದನ್ನು ಕಾಣಬಹುದು.

ವೈರಲ್​​​ ವಿಡಿಯೋ ಇಲ್ಲಿದೆ:

ವೀಡಿಯೋದಲ್ಲಿ ಒಂದು ರಸ್ತೆಯ ಮೂಲೆಯಲ್ಲಿ ಮೂವರು ಮಹಿಳೆಯರು ತಮ್ಮ ಪಾಡಿಗೆ ನಿಂತುಕೊಂಡು ಸೆಲ್ಫಿ ಕ್ಲಿಕ್ಕಿಸುತ್ತಿರುತ್ತಾರೆ.  ಅಲ್ಲಿಯೇ ಸ್ವಲ್ಪ ದೂರದಲ್ಲಿ ನಿಂತಿದ್ದ ಯುವಕನೊಬ್ಬ, ಅಪಾಯಕಾರಿಯಲ್ಲದ ಪಟಾಕಿಯನ್ನು ತೆಗದುಕೊಂಡು, ಅದಕ್ಕೆ ಬೆಂಕಿ ಹಚ್ಚಿ ಆ ಮಹಿಳೆಯ ಪಕ್ಕಕ್ಕೆ ಎಸೆಯುತ್ತಾನೆ. ಅಲ್ಲೇ ಹಿಂದೆ ಇದ್ದ ಪುಟ್ಟ ಮಗುವೊಂದು ತನ್ನ ತಾಯಿಯನ್ನು ಕಾಪಾಡಲು, ಅಮ್ಮಾ ಅಮ್ಮಾ ಪಟಾಕಿ ಸಿಡಿಸುತ್ತಿದ್ದಾರೆ ಎಂದು ಕಿರುಚುತ್ತಿದ್ದರೂ, ಇದರ ಪರಿವೇ ಇಲ್ಲದ ಆ ಮಹಿಳೆಯರು ಸ್ಪೆಲ್ಫಿ ಕ್ಲಿಕ್ಕಿಸುವುದರಲ್ಲಿಯೇ ನಿರತರಾಗಿರುತ್ತಾರೆ. ಆದರೆ ಪಟಾಕಿ ಡಮ್ಮೆಂದು ಸಿಡಿದಾಗ  ಮಹಿಳೆಯರು ಆ ಪಟಾಕಿ ಸದ್ದಿಗೆ ಭಯಪಟ್ಟು, ದಿಕ್ಕಾಪಾಲಾಗಿ ಓಡಿ ಹೋಗುವುದನ್ನು ಕಾಣಬಹುದು. ಈ ಹಾಸ್ಯಮಯ ವೀಡಿಯೋವನ್ನು ಕಂಡು ನೋಡುಗರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.

ಇದನ್ನೂ ಓದಿ: ವಿದ್ಯಾರ್ಥಿ ಜೀವನದ ನೆನಪು, ಅಮ್ಮನಂತೆ ಅಕ್ಕರೆ ತೋರಿಸುವ ಶಿಕ್ಷಕಿಯ ಬರ್ತ್​​​ ಡೇ ಸರ್ಪ್ರೈಸ್ ಹೇಗಿತ್ತು ನೋಡಿ 

ನವೆಂಬರ್ 12 ರಂದು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಳ್ಳಲಾದ ಈ ವೀಡಿಯೋ  2.9 ಮಿಲಿಯನ್ ವೀಕ್ಷಣೆಗಳನ್ನು ಹಾಗೂ  223k ಲೈಕ್ಸ್ಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್ಸ್ಗಳೂ ಹರಿದುಬಂದಿವೆ. ಒಬ್ಬ ಬಳಕೆದಾರರು, ಆ ಮಗು ತನ್ನ ತಾಯಿಯನ್ನು ಉಳಿಸಲು ಪ್ರಯತ್ನಿಸುವ ರೀತಿ ಮುದ್ದಾಗಿದೆ  ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ಆ ಮೂವರು ಮಹಿಳೆಯರು ಓಡಿ ಹೋಗುವ ದೃಶ್ಯ ತುಂಬಾ ತಮಾಷೆಯಾಗಿ ಕಂಡಿತು ಎಂದು ಹೇಳಿದ್ದಾರೆ. ಇನ್ನೂ ಅನೇಕರು ಈ ಹಾಸ್ಯಮಯ ದೃಶ್ಯವನ್ನು ಕಂಡು ನಕ್ಕು ನಕ್ಕು ಸಾಕಾಯಿತು ಎಂದು ಹೇಳಿದ್ದಾರೆ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ