AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral News: ವ್ಯಕ್ತಿಯೊಬ್ಬನ ಕರುಳಿನಲ್ಲಿ ಜೀವಂತ ನೊಣ ಪತ್ತೆ

ಅಮೆರಿಕದ ಮಿಸೌರಿಯಲ್ಲಿ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿ, 63 ವರ್ಷದ ವ್ಯಕ್ತಿಯ ಕರುಳಿನಲ್ಲಿ ಜೀವಂತ ನೊಣ ಪತ್ತೆಯಾಗಿದ್ದು, ಇದು ವೈದ್ಯರನ್ನೂ ಆಶ್ಚರ್ಯಗೊಳಿಸಿದೆ. ಆ ನೊಣ ವ್ಯಕ್ತಿಯ ಕರುಳನ್ನು ಹೇಗೆ ಪ್ರವೇಶಿಸಿತು ಎಂಬುದೇ ವೈದ್ಯರಿಗೂ ನಿಗೂಢವಾಗಿದೆ.

Viral News: ವ್ಯಕ್ತಿಯೊಬ್ಬನ ಕರುಳಿನಲ್ಲಿ ಜೀವಂತ ನೊಣ ಪತ್ತೆ
ಸಾಂದರ್ಭಿಕ ಚಿತ್ರImage Credit source: Pinterest
ಅಕ್ಷತಾ ವರ್ಕಾಡಿ
|

Updated on: Nov 24, 2023 | 11:37 AM

Share

ಅಮೆರಿಕದ ಮಿಸೌರಿಯಾದ 63 ವರ್ಷದ ವ್ಯಕ್ತಿ ಕುರುಳಿನ ಕ್ಯಾನ್ಸರ್​ನಲ್ಲಿ ಬಳಲುತ್ತಿದ್ದು, ಪ್ರತೀ ತಿಂಗಳ ಅಂತ್ಯದಲ್ಲಿ ತಪಾಸಣೆಗಾಗಿ ಆಸ್ಪತ್ರೆಗೆ ಹೋಗುತ್ತಿದ್ದ. ಈ ಚೆಕ್​​​ಅಪ್​​​​ ಸಮಯದಲ್ಲಿ ಕರುಳಿನೊಳಗೆ ಕ್ಯಾಮೆರಾವನ್ನು ಇರಿಸಿ ತಪಾಸಣೆಗಾಗಿ ಮಾಡಲಾಗುತ್ತಿತ್ತು. ಆದರೆ ಈ ಬಾರಿ ತಪಾಸಣೆ ಮಾಡುತ್ತಿರುವ ವೇಳೆ ವ್ಯಕ್ತಿಯ ಕರುಳಿನ ಒಳಗೆ ಜೀವಂತ ನೊಣ ಇರುವುದು ಪತ್ತೆಯಾಗಿದೆ. ಆದರೆ ಆ ನೊಣ ವ್ಯಕ್ತಿಯ ಕರುಳನ್ನು ಹೇಗೆ ಪ್ರವೇಶಿಸಿತು ಎಂಬುದೇ ವೈದ್ಯರಿಗೂ ತಿಳಿದಿಲ್ಲ. ಸದ್ಯ ಈ ಘಟನೆ ಎಲ್ಲೆಡೆ ಭಾರೀ ವೈರಲ್​ ಆಗಿದೆ.

ಲ್ಯಾಡ್ಬೈಬಲ್ ವರದಿಯ ಪ್ರಕಾರ, ಮಿಸೌರಿ ಸ್ಕೂಲ್ ಆಫ್ ಮೆಡಿಸಿನ್ ವಿಶ್ವವಿದ್ಯಾಲಯದ ತಜ್ಞರು ರೋಗಿಯನ್ನು ವಿಚಾರಣೆ ನಡೆಸಿ ನೊಣವು ಅವನ ಕರುಳನ್ನು ಹೇಗೆ ಪ್ರವೇಶಿಸಿತು ಎಂಬುದನ್ನು ಕಂಡುಹಿಡಿಯಲು ಪ್ರಯತ್ನಿಸಿದ್ದಾರೆ. ಆದರೆ ನೊಣ ತನ್ನ ದೇಹವನ್ನು ಹೇಗೆ ಪ್ರವೇಶಿಸಿದೆ ಎಂದು ಆ ವ್ಯಕ್ತಿಗೂ ತಿಳಿದಿಲ್ಲ. ತನಗೆ ಯಾವುದೇ ರೀತಿಯ ಸಮಸ್ಯೆ ಇಲ್ಲ ಎಂದು ವ್ಯಕ್ತಿ ಹೇಳಿದ್ದಾನೆ. ಕುರುಳಿನ ಕ್ಯಾನ್ಸರ್​​​ನ ತಪಾಸಣೆಗೂ ಮುನ್ನ ಒಂದು ದಿನ ಪೂರ್ತಿಯಾಗಿ ಉಪವಾಸದಿಂದಿರಬೇಕು. ಆದ್ದರಿಂದ ಈ ವ್ಯಕ್ತಿ ಹಿಂದಿನ ದಿನ ಜೀರ್ಣಾಂಗವನ್ನು ಖಾಲಿ ಮಾಡಲು ಅಗತ್ಯವಾದ ಕೊಲೊನೋಸ್ಕೋಪಿಯ ದ್ರವಗಳನ್ನು ಮಾತ್ರ ಸೇವಿಸಿದ್ದರು. 24 ಗಂಟೆಗಳ ಉಪವಾಸದ ಹಿಂದಿನ ದಿನ ಸಂಜೆ ಪಿಜ್ಜಾ ಮತ್ತು ಸಲಾಡ್ ಅನ್ನು ಸೇವಿಸಿದ್ದರೂ, ಆಹಾರದಲ್ಲಿ ನೊಣಗಳಿವೆಯೇ ಎಂದು ಅವರಿಗೆ ತಿಳಿದಿರಲಿಲ್ಲ.

ಇದನ್ನೂ ಓದಿ: ಕದಿಯಲು ಬಂದಿದ್ದ ಕಳ್ಳ ನಿದ್ರೆಗೆ ಜಾರಿದ, ಗೊರಕೆಯ ಸದ್ದಿಗೆ ಪೊಲೀಸರಿಗೆ ಮಾಹಿತಿ ನೀಡಿದ ಮನೆಯವರು

ನೊಣ ಕರುಳನ್ನು ಹೇಗೆ ಪ್ರವೇಶಿಸಿತು?

ಅಮೇರಿಕನ್ ಜರ್ನಲ್ ಆಫ್ ಗ್ಯಾಸ್ಟ್ರೋಎಂಟರಾಲಜಿ ಪ್ರಕಾರ, ಜೀರ್ಣಾಂಗ ವ್ಯವಸ್ಥೆಯ ಕೊನೆಯ ಭಾಗವಾದ ಕೊಲೊನ್ ಅನ್ನು ಜೀವಂತ ನೊಣ ಹೇಗೆ ತಲುಪಿತು ಎಂಬುದು ನಿಗೂಢವಾಗಿದೆ. ಕೆಲವು ಅಪರೂಪದ ಸಂದರ್ಭಗಳಲ್ಲಿ ಹಣ್ಣು, ತರಕಾರಿಗಳನ್ನು ಸೇವಿಸುವಾಗ ತಮಗೆ ಗೊತ್ತಿಲ್ಲದೇ ನೊಣಗಳ ಮೊಟ್ಟೆ ಅಥವಾ ಲಾರ್ವಾಗಳನ್ನು ತಿನ್ನುತ್ತಾರೆ. ಈ ಕೀಟಗಳು ಹೇಗಾದರೂ ಹೊಟ್ಟೆಯ ಆಮ್ಲದಿಂದ ತಪ್ಪಿಸಿಕೊಂಡು ಕರುಳಿನಲ್ಲಿ ಬೆಳೆಯಲು ಪ್ರಾರಂಭಿಸುತ್ತವೆ . ಇದನ್ನು ಕರುಳಿನ ಮೈಯಾಸಿಸ್ ಎಂದು ಕರೆಯಲಾಗುತ್ತದೆ. ಈ ಕಾರಣದಿಂದ ಕರುಳಿನೊಳಗೆ ಜೀವಂತ ನೋಣಗಳು ಪತ್ತೆಯಾಗಬಹುದು ಎಂದು ತಿಳಿದುಬಂದಿದೆ.

ಹಣ್ಣು ತರಕಾರಿಗಳನ್ನು ಚೆನ್ನಾಗಿ ತೊಳೆದು ತಿನ್ನಿ:

ಮಿಸೌರಿ ವಿಶ್ವವಿದ್ಯಾನಿಲಯದ ಗ್ಯಾಸ್ಟ್ರೋಎಂಟರಾಲಜಿ ಮುಖ್ಯಸ್ಥ ಮ್ಯಾಥ್ಯೂ ಬೆಚ್ಟೋಲ್ಡ್ ಅವರು ಹೇಳುವಂತೆ ನೊಣವು ಅವನ ಬಾಯಿ ಅಥವಾ ಹಿಂಭಾಗದ ಮೂಲಕ ಮನುಷ್ಯನ ದೇಹವನ್ನು ಪ್ರವೇಶಿಸಿರಬಹುದು. ಜೀರ್ಣಕಾರಿ ಕಿಣ್ವಗಳು ಮತ್ತು ಹೊಟ್ಟೆಯ ಆಮ್ಲವು ನೊಣವನ್ನು ನುಂಗಿದ್ದರೆ ನೊಣ ಜೀವಂತವಾಗಿ ಇರುತ್ತಿರಲ್ಲಿಲ್ಲ.ಆದರೂ ಕೂಡ ನೊಣ ಕರುಳಿನೊಳಗೆ ಜೀವಂತ ನೊಣ ಹೇಗೆ ಪತ್ತೆಯಾಯಿತು ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ. ಆದ್ದರಿಂದ ಹಣ್ಣು, ತರಕಾರಿಗಳನ್ನು ತಿನ್ನುವ ಮೊದಲು ಚೆನ್ನಾಗಿ ತೊಳೆಯಬೇಕು ಮತ್ತು ನೊಣಗಳನ್ನು ದೂರವಿಡುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡುತ್ತಾರೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Follow Us
ಅಕ್ಷತಾ ವರ್ಕಾಡಿ
ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್