Viral News: ಪ್ರೇಮಿಯನ್ನು ಮೆಚ್ಚಿಸಲು, 4 ವರ್ಷಗಳ ಕಾಲ ಕಣ್ಣು ಮುಚ್ಚಲು ಸಾಧ್ಯವಾಗದಂತಹ ಭಯಾನಕ ಶಸ್ತ್ರಚಿಕಿತ್ಸೆಗೆ ಒಳಗಾದ ವ್ಯಕ್ತಿ

ಊದಿಕೊಂಡಿರುವ ಕೆನ್ನೆಯಿಂದಾಗಿ ತನ್ನ ಪ್ರೇಮಿಯೇ ತನ್ನನ್ನು ತೊರೆದು ಹೋದಳು ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬ ಮುಖದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ. ಆದರೆ ಈ ಭಯಾನಕ ಶಸ್ತ್ರಚಿಕಿತ್ಸೆಗೆಯ ಪರಿಣಾಮ ಆತ 4 ವರ್ಷಗಳ ಕಾಲ ಕಣ್ಣು ಮುಚ್ಚಲು ಸಾಧ್ಯವಾಗದಂತಹ ಪರಿಸ್ಥಿತಿಗೆ ತಂದೊಡ್ಡಿತ್ತು. ಇನ್ನಷ್ಟು ವಿವರ ಇಲ್ಲಿದೆ.

Viral News: ಪ್ರೇಮಿಯನ್ನು ಮೆಚ್ಚಿಸಲು, 4 ವರ್ಷಗಳ ಕಾಲ ಕಣ್ಣು ಮುಚ್ಚಲು ಸಾಧ್ಯವಾಗದಂತಹ ಭಯಾನಕ ಶಸ್ತ್ರಚಿಕಿತ್ಸೆಗೆ ಒಳಗಾದ ವ್ಯಕ್ತಿ
Pete Broadhurst
Follow us
ಅಕ್ಷತಾ ವರ್ಕಾಡಿ
|

Updated on:Nov 24, 2023 | 2:20 PM

ತಮ್ಮ ಮುಖ ಹಾಗೂ ಇಡೀ ದೇಹವನ್ನು ಆಕರ್ಷಣೀಯವಾಗಿಸಲು ಪ್ಲಾಸ್ಟಿಕ್ ಸರ್ಜರಿಯ ಮೊರೆ ಹೋಗುವವರು ಜಗತ್ತಿನಲ್ಲಿ ಅನೇಕರಿದ್ದಾರೆ. ಇದಕ್ಕಾಗಿ ಲಕ್ಷಾಂತರ ದುಡ್ಡು ಸುರಿದು ತಮಗೆ ಬೇಕಾದ ರೀತಿಯಲ್ಲಿ ದೇಹವನ್ನು ಬದಲಾಯಿಸಿಕೊಳ್ಳುತ್ತಾರೆ. ಆದರೆ ಕೆಲವೊಮ್ಮೆ ಪ್ಲಾಸ್ಟಿಕ್ ಸರ್ಜರಿ ನಿಮ್ಮ ನಿರೀಕ್ಷೆಯನ್ನು ಹುಸಿಗೊಳಿಸಬಹುದು. ಇದಲ್ಲದೇ ಪ್ರಾಣಕ್ಕೂ ಕಂಟಕವಾಗುವ ಸಾಧ್ಯತೆ ಹೆಚ್ಚಿದೆ. ಇಂತದ್ದೇ ಘಟನೆ ಇಂಗ್ಲೆಂಡಿನ ಬರ್ಮಿಂಗ್ಹ್ಯಾಮ್ ನಗರದಲ್ಲಿ ನಡೆದಿದೆ. ತನ್ನ ಊದಿಕೊಂಡ ಕೆನ್ನೆಗಳನ್ನು ಸರಿಪಡಿಸಲು, ಆತ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಪರಿಣಾಮ ಸುಮಾರು ನಾಲ್ಕು ವರ್ಷಗಳ ಕಾಲ ಕಣ್ಣು ಮುಚ್ಚಲು ಸಾಧ್ಯವಾಗದೆ ಸಂಕಷ್ಟವನ್ನು ಅನುಭವಿಸಿದ್ದಾರೆ.

ಬರ್ಮಿಂಗ್ಹ್ಯಾಮ್ ನಗರದಲ್ಲಿ ವಾಸಿಸುವ ಈ ವ್ಯಕ್ತಿಯ ಹೆಸರು ಪೀಟ್ ಬ್ರಾಡ್‌ಹರ್ಸ್ಟ್(81). ಮಿರರ್ ವರದಿಯ ಪ್ರಕಾರ, ಪೀಟ್ ಅವರಿಗೆ ಹಲ್ಲಿನ ಸಮಸ್ಯೆಗಳಿಂದಾಗಿ ಅವರ ಕೆನ್ನೆಗಳು ಊದಿಕೊಳ್ಳಲು ಪ್ರಾರಂಭವಾಗಿದ್ದವು. ಇದಲ್ಲದೇ ಹಲವು ವರ್ಷಗಳ ಹಿಂದೆ ನಾನು ಒಬ್ಬ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದ ಪೀಟ್ ಆಕೆಯನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ. ಆದರೆ ಈತನ ಊದಿಕೊಂಡಿರುವ  ಕೆನ್ನೆಯಿಂದಾಗಿ ಆಕೆ ಆತನನ್ನು ತೊರೆದು ಹೋಗಿದ್ದಳು. ಆದ್ದರಿಂದ ಕೆನ್ನೆ ಸರಿಪಡಿಸಲು 2019ರ ಜನವರಿ 24ರಂದು ಸುಮಾರು 11 ಲಕ್ಷ ರೂಪಾಯಿ ಖರ್ಚುಉ ಮಾಡಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ. ಸುಮಾರು 9 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ, ಮರುದಿನ ಮನೆಗೆ ಬಂದ ಪೀಟ್​​ಗೆ ಕಣ್ಣಿನ ಸಮಸ್ಯೆ ಪ್ರಾರಂಭವಾಯಿತು. ಕಣ್ಣುಗಳು ತುಂಬಾ ಉರಿಯುತ್ತಿದ್ದವು ಮತ್ತು ನೀರು ಕೂಡ ಬರುತ್ತಿತ್ತು. ಕಾಲಕ್ರಮೇಣ ಸುಮಾರು 4 ವರ್ಷಗಳ ಕಾಲ ಕಣ್ಣು ಮುಚ್ಚಲು ಸಾಧ್ಯವಾಗದಂತಹ ಪರಿಸ್ಥಿತಿಗೆ ತಂದೊಡ್ಡಿತ್ತು.

ಇದನ್ನೂ ಓದಿ: ವ್ಯಕ್ತಿಯೊಬ್ಬನ ಕರುಳಿನಲ್ಲಿ ಜೀವಂತ ನೊಣ ಪತ್ತೆ

ಅಂತಿಮವಾಗಿ 2023 ರ ಜುಲೈನಲ್ಲಿ, ಪೀಟ್ ತನ್ನ ಕಣ್ಣುಗಳನ್ನು ಸರಿಪಡಿಸಲು ಥೈಲ್ಯಾಂಡ್‌ನ ಒರಿಜಿನ್ ಕ್ಲಿನಿಕ್‌ನ ವೈದ್ಯರನ್ನು ಭೇಟಿಯಾಗಿ ತನ್ನ ನೋವನ್ನು ಹೇಳಿಕೊಂಡಿದ್ದ. ಅಲ್ಲಿನ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿದ್ದು,ಈಗ ಪೀಟ್ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ ಮತ್ತು ಆರಾಮವಾಗಿ ಕಣ್ಣು ಮುಚ್ಚಲು ಸಾಧ್ಯವಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 1:11 pm, Fri, 24 November 23

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್