Devdutt Padikkal: ಶಸ್ತ್ರಚಿಕಿತ್ಸೆಗೆ ಒಳಗಾದ ಕನ್ನಡಿಗ ದೇವದತ್ ಪಡಿಕ್ಕಲ್! ಕ್ರಿಕೆಟ್ಗೆ ಕಂಬ್ಯಾಕ್ ಯಾವಾಗ?
Devdutt Padikkal: ಆಗಸ್ಟ್‌ನಲ್ಲಿ ನಡೆದ ದೇವಧರ್ ಟ್ರೋಫಿಯಲ್ಲಿ ಬೆರಳಿನ ಗಾಯಕ್ಕೆ ತುತ್ತಾಗಿದ್ದ ಕನ್ನಡಿಗ ಹಾಗೂ ಭಾರತದ ಯುವ ಕ್ರಿಕೆಟಿಗ ದೇವದತ್ ಪಡಿಕ್ಕಲ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಈ ಬಗ್ಗೆ ಸ್ವತಃ ಪಡಿಕಲ್ ಅವರೇ ತಮ್ಮ ಸೋಶಿಯಲ್ ಮೀಡಯಾ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಇಂಜುರಿಯಿಂದಾಗಿ ಪಡಿಕ್ಕಲ್, ಪ್ರಸಕ್ತ ರಾಜ್ಯದಲ್ಲಿ ನಡೆಯುತ್ತಿರುವ ಮಹಾರಾಜ ಟಿ20 ಲೀಗ್‌ನಲ್ಲೂ ಆಡುತ್ತಿಲ್ಲ.
ಆಗಸ್ಟ್‌ನಲ್ಲಿ ನಡೆದ ದೇವಧರ್ ಟ್ರೋಫಿಯಲ್ಲಿ (Deodhar Trophy) ಬೆರಳಿನ ಗಾಯಕ್ಕೆ ತುತ್ತಾಗಿದ್ದ ಕನ್ನಡಿಗ ಹಾಗೂ ಭಾರತದ ಯುವ ಕ್ರಿಕೆಟಿಗ ದೇವದತ್ ಪಡಿಕ್ಕಲ್ (Devdutt Padikkal) ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಈ ಬಗ್ಗೆ ಸ್ವತಃ ಪಡಿಕಲ್ ಅವರೇ ತಮ್ಮ ಸೋಶಿಯಲ್ ಮೀಡಯಾ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಇಂಜುರಿಯಿಂದಾಗಿ ಪಡಿಕ್ಕಲ್, ಪ್ರಸಕ್ತ ರಾಜ್ಯದಲ್ಲಿ ನಡೆಯುತ್ತಿರುವ ಮಹಾರಾಜ ಟಿ20 ಲೀಗ್‌ನಲ್ಲೂ ಆಡುತ್ತಿಲ್ಲ. ಇದೀಗ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿರುವ ಈ ಎಡಗೈ ಬ್ಯಾಟರ್ ಈ ಇಂಜುರಿಯಿಂದ ಚೇತರಿಸಿಕೊಳ್ಳಲು ಸುಮಾರು ಒಂದು ತಿಂಗಳು ಸಮಯ ಬೇಕಾಗಿದ್ದು, ಅಲ್ಲಿಯವರೆಗೆ ಪಡಿಕ್ಕಲ್ ಮೈದಾನದಿಂದ ದೂರ ಉಳಿಯಲ್ಲಿದ್ದಾರೆ.
2021 ರಲ್ಲಿ ಭಾರತ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ ದೇವದತ್ತ್, ಇದುವರೆಗೆ ಟೀಂ ಇಂಡಿಯಾ ಪರ 2 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿದ್ದಾರೆ. ಆದರೆ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಪಡಿಕ್ಕಲ್ಗೆ ಸಾಧ್ಯವಾಗಲಿಲ್ಲ. ಹೀಗಾಗಿ ಅಂದಿನಿಂದ ಪಡಿಕ್ಕಲ್ಗೆ ಭಾರತ ತಂಡದಲ್ಲಿ ಅವಕಾಶ ಸಿಕ್ಕಿಲ್ಲ. ಇನ್ನು ಐಪಿಎಲ್ನಲ್ಲಿ ಆರ್ಸಿಬಿ ಪರ ಮೊದಲ ಬಾರಿಗೆ ಕಣಕ್ಕಿಳಿದಿದ್ದ ಪಡಿಕ್ಕಲ್ ಮೊದಲ ಆವೃತ್ತಿಯಲ್ಲೇ ಅದ್ಭುತ ಪ್ರದರ್ಶನ ನೀಡಿದ್ದರು. ಹೀಗಾಗಿ ಅವರಿಗೆ ಟೀಂ ಇಂಡಿಯಾದ ಕದ ಕೂಡ ತೆರೆದಿತ್ತು.
Just a quick update. Sustained a fracture on my left thumb and had to undergo a surgery. The road to recovery begins now and I can’t wait to get back out on the field soon👊🏻😤 pic.twitter.com/HXdolH4MmD
— Devdutt Padikkal (@devdpd07) August 2, 2023
Ranji Trophy 2022: ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಚೊಚ್ಚಲ ಶತಕ ಸಿಡಿಸಿ ಮಿಂಚಿದ ಕನ್ನಡಿಗ ದೇವದತ್ ಪಡಿಕ್ಕಲ್..!
ರಾಜಸ್ಥಾನ್ ಸೇರಿದ ಮೇಲೆ ಮಂಕಾದ ಪಡಿಕ್ಕಲ್
ಆದರೆ ಆರ್ಸಿಬಿ ತೊರೆದು, ರಾಜಸ್ಥಾನ್ ರಾಯಲ್ಸ್ ತಂಡ ಸೇರಿದ ಪಡಿಕ್ಕಲ್ಗೆ ಅಂದಿನಿಂದ ಅದೃಷ್ಟ ಸರಿಯಾಗಿ ಕೈಕೊಟ್ಟಿದೆ. ತಂಡವನ್ನು ಬದಲಿಸಿದ ಬಳಿಕ ಪಡಿಕ್ಕಲ್ ತಮ್ಮ ಲಯ ಕಳೆದುಕೊಂಡಿದ್ದಾರೆ. ಆರಂಭದಲ್ಲಿ ಆರ್ಸಿಬಿ ಪರ ಆರಂಭಿಕರಾಗಿ ಕಣಕ್ಕಿಳಿಯುತ್ತಿದ್ದ ಅವರು, ಅದ್ಭುತ ಪ್ರದರ್ಶನ ನೀಡುತ್ತಿದ್ದರು. ಆದರೆ ರಾಜಸ್ಥಾನ್ ತಂಡದಲ್ಲಿ ಪಡಿಕ್ಕಲ್ ಕ್ರಮಾಂಕ ಬದಲಾದ ಬಳಿಕ ಅವರ ಆಟವೂ ಬದಲಾಗಿದೆ. ಹೀಗಾಗಿ ಅದ್ಭುತ ಪ್ರತಿಭೆಯುಳ್ಳ ಆಟಗಾರನ ಕ್ರಿಕೆಟ್ ಬದುಕು ಸಧ್ಯಕ್ಕೆ ಲಯ ತಪ್ಪಿರುವುದಂತ್ತೂ ಖಚಿತ.
ಹೀಗಾಗಿ ದೇಶಿ ಕ್ರಿಕೆಟ್ನಲ್ಲಿ ಮತ್ತೆ ತಮ್ಮ ಹಳೆಯ ಲಯಕ್ಕೆ ಮರಳಲು ಯತ್ನಿಸುತ್ತಿರುವ ಪಡಿಕ್ಕಲ್ಗೆ ಇದೀಗ ಇಂಜುರಿ ಸಮಸ್ಯೆ ಇನ್ನಷ್ಟು ಹಿನ್ನಡೆಯನ್ನುಂಟು ಮಾಡಿದೆ. ದೇವದತ್ತ್ ಇತ್ತೀಚೆಗೆ ದೇವಧರ್ ಟ್ರೋಫಿಯ ವೇಳೆ ಎಡಗೈ ಹೆಬ್ಬೆರಳು ಮುರಿತಕ್ಕೊಳಗಾಗಿದ್ದರು. ಹೀಗಾಗಿ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಈ ಇಂಜುರಿಯಿಂದ ಚೇತರಿಸಿಕೊಳ್ಳಲು 3 ರಿಂದ 4 ವಾರ ಬೇಕಾಗಿದೆ ಎಂದು ವರದಿಯಾಗಿದೆ.
2 ಟಿ20 ಪಂದ್ಯಗಳಲ್ಲಿ ಅವಕಾಶ
ಟೀಂ ಇಂಡಿಯಾ ಪರ 2 ಟಿ20 ಪಂದ್ಯಗಳನ್ನಾಡಿರುವ ದೇವದತ್ತ ಪಡಿಕ್ಕಲ್ ಇದರಲ್ಲಿ 38 ರನ್ ಕಲೆಹಾಕಿದ್ದಾರೆ. ಇದಲ್ಲದೆ, ಅವರು ಕರ್ನಾಟಕ ಪರ 24 ಪ್ರಥಮ ದರ್ಜೆ ಪಂದ್ಯಗಳನ್ನು ಮತ್ತು 25 ಲಿಸ್ಟ್-ಎ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಪಡಿಕ್ಕಲ್, ಪ್ರಥಮ ದರ್ಜೆ ಪಂದ್ಯಗಳಲ್ಲಿ ಕರ್ನಾಟಕದ ಪರ 1450 ರನ್ ಗಳಿಸಿದ್ದರೆ, ಲಿಸ್ಟ್ ಎ ಲಿಸ್ಟ್ ಕ್ರಿಕೆಟ್ನಲ್ಲಿ 1410 ರನ್ ಬಾರಿಸಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:30 pm, Fri, 18 August 23