IND vs IRE: ಟಾಸ್ ಗೆದ್ದ ಭಾರತ, ಇಬ್ಬರ ಪದಾರ್ಪಣೆ; ಹೀಗಿವೆ ಉಭಯ ತಂಡಗಳು

IND vs IRE: ಡಬ್ಲಿನ್​ನಲ್ಲಿ ನಡೆಯುತ್ತಿರುವ ಐರ್ಲೆಂಡ್ ಹಾಗೂ ಭಾರತ ನಡುವಿನ ಮೊದಲ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ಜಸ್ಪ್ರೀತ್ ಬುಮ್ರಾ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. ಪಂದ್ಯಕ್ಕೆ ಮಳೆ ಭೀತಿ ಇರುವ ಕಾರಣದಿಂದಾಗಿ ಬುಮ್ರಾ ಆಯ್ಕೆ ಟೀಂ ಇಂಡಿಯಾಕ್ಕೆ ಲಾಭ ತಂದುಕೊಡಲಿದೆ.

IND vs IRE: ಟಾಸ್ ಗೆದ್ದ ಭಾರತ, ಇಬ್ಬರ ಪದಾರ್ಪಣೆ; ಹೀಗಿವೆ ಉಭಯ ತಂಡಗಳು
ಭಾರತ- ಐರ್ಲೆಂಡ್
Follow us
ಪೃಥ್ವಿಶಂಕರ
|

Updated on:Aug 18, 2023 | 7:32 PM

ಡಬ್ಲಿನ್​ನಲ್ಲಿ ನಡೆಯುತ್ತಿರುವ ಐರ್ಲೆಂಡ್ ಹಾಗೂ ಭಾರತ (India vs Ireland) ನಡುವಿನ ಮೊದಲ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ಜಸ್ಪ್ರೀತ್ ಬುಮ್ರಾ (Jasprit Bumrah) ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. ಪಂದ್ಯಕ್ಕೆ ಮಳೆ ಭೀತಿ ಇರುವ ಕಾರಣದಿಂದಾಗಿ ಬುಮ್ರಾ ಆಯ್ಕೆ ಟೀಂ ಇಂಡಿಯಾಕ್ಕೆ (Team India) ಲಾಭ ತಂದುಕೊಡಲಿದೆ. ಇನ್ನು ಹಿರಿಯರ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾ ಐರ್ಲೆಂಡ್ ಪ್ರವಾಸ ಮಾಡಿದೆ. ಹೀಗಾಗಿ ಹಲವು ಯುವ ಆಟಗಾರರಿಗೆ ಈ ಸರಣಿಯಲ್ಲಿ ಪದಾರ್ಪಣೆ ಅವಕಾಶ ಸಿಗಲಿದೆ ಎಂದು ಈ ಹಿಂದೆಯೇ ಹೇಳಲಾಗಿತ್ತು. ಅದರ ಪ್ರಕಾರ ಇದೀಗ ಟೀಂ ಇಂಡಿಯಾ ಪರ ಇಬ್ಬರು ಆಟಗಾರರು ತಮ್ಮ ಚೊಚ್ಚಲ ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನು ಆಡಲಿದ್ದಾರೆ. ಅವರಲ್ಲಿ ಒಬ್ಬರು ಗೇಮ್ ಫಿನಿಶರ್ ಎನಿಸಿಕೊಂಡಿರುವ ರಿಂಕು ಸಿಂಗ್ (Rinku Singh) ಆಗಿದ್ದರೆ, ಇನ್ನೊಬ್ಬರಾಗಿ ಕನ್ನಡಿಗ ಪ್ರಸಿದ್ಧ್ ಕೃಷ್ಣ (Prasidh Krishna) ಕೂಡ ಚೊಚ್ಚಲ ಟಿ20 ಪಂದ್ಯವನ್ನಾಡಲು ಸಜ್ಜಾಗಿದ್ದಾರೆ.

ಒಂದು ವರ್ಷದ ನಂತರ ತಂಡಕ್ಕೆ

ಐರ್ಲೆಂಡ್‌ನ ಮಲೆಹೈಡ್‌ನಲ್ಲಿ ನಡೆಯುತ್ತಿರುವ ಈ ಸರಣಿಯ ಮೂಲಕ ಜಸ್ಪ್ರೀತ್ ಬುಮ್ರಾ ಮತ್ತು ಪ್ರಸಿದ್ಧ್ ಕೃಷ್ಣ ಟೀಮ್ ಇಂಡಿಯಾಕ್ಕೆ ಮರಳುತ್ತಿದ್ದಾರೆ. ಈ ಇಬ್ಬರೂ ವೇಗದ ಬೌಲರ್‌ಗಳು ಸುಮಾರು ಒಂದು ವರ್ಷದ ನಂತರ ಟೀಂ ಇಂಡಿಯಾಕ್ಕೆ ಮರಳಿದ್ದಾರೆ.  ಅಲ್ಲದೆ ಇದೇ ಪಂದ್ಯದ ಮೂಲಕ ಪ್ರಸಿದ್ಧ್ ಕೃಷ್ಣ ಟಿ20 ತಂಡಕ್ಕೆ ಚೊಚ್ಚಲ ಅವಕಾಶ ಪಡೆದಿದ್ದರೆ, ರಿಂಕು ಸಿಂಗ್ ಕೂಡ ಪದಾರ್ಪಣೆ ಮಾಡುತ್ತಿದ್ದಾರೆ.

ಉಭಯ ತಂಡಗಳು ಹೀಗಿವೆ

ಭಾರತ ತಂಡ: ರುತುರಾಜ್ ಗಾಯಕ್ವಾಡ್ (ಉಪನಾಯಕ), ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ತಿಲಕ್ ವರ್ಮಾ, ರಿಂಕು ಸಿಂಗ್, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ, ಜಸ್ಪ್ರೀತ್ ಬುಮ್ರಾ (ನಾಯಕ), ರವಿ ಬಿಷ್ಣೋಯ್.

ಐರ್ಲೆಂಡ್ ತಂಡ: ಪಾಲ್ ಸ್ಟಿರ್ಲಿಂಗ್ (ನಾಯಕ), ಆಂಡ್ರ್ಯೂ ಬಾಲ್ಬಿರ್ನಿ, ಹ್ಯಾರಿ ಟೆಕ್ಟರ್, ಕರ್ಟಿಸ್ ಕ್ಯಾಂಫರ್, ಜಾರ್ಜ್ ಡಾಕ್ರೆಲ್, ಲೋರ್ಕನ್ ಟಕರ್ (ವಿಕೆಟ್ ಕೀಪರ್), ಮಾರ್ಕ್ ಅಡೇರ್, ಬೆನ್ ವೈಟ್, ಬ್ಯಾರಿ ಮೆಕಾರ್ಥಿ, ಜೋಶುವಾ ಲಿಟಲ್, ಕ್ರೇಗ್ ಯಂಗ್.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:14 pm, Fri, 18 August 23

ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ