ಓಡುವ ಬದಲು ಜಾಗಿಂಗ್; ಮೊದಲ ಎಸೆತದಲ್ಲೇ ರನೌಟ್ ಆದ 150 ಕೆಜಿ ತೂಕದ ಬ್ಯಾಟರ್! ವಿಡಿಯೋ ನೋಡಿ
Rahkeem Cornwall: ವಾಸ್ತವವಾಗಿ ವಿಶ್ವದ ಅತ್ಯಂತ ದೈತ್ಯ ದೇಹದ ಕ್ರಿಕೆಟಿಗರಲ್ಲಿ ಒಬ್ಬರಾಗಿರುವ ರಹಕೀಮ್ ಕಾರ್ನ್‌ವಾಲ್ ಸ್ಫೋಟಕ ಬ್ಯಾಟಿಂಗ್ಗೆ ಹೆಸರುವಾಸಿಯಾಗಿದ್ದಾರೆ. ಈ ಆಟಗಾರ ಸಿಂಗಲ್ ಹಾಗೂ ಡಬಲ್ಗಳಿಗಿಂತ ಬೌಂಡರಿ, ಸಿಕ್ಸರ್ಗಳಿಂದಲೇ ಸಾಕಷ್ಟು ರನ್ ಕಲೆಹಾಕುತ್ತಾರೆ. ಇದಕ್ಕೆ ಕಾರಣವೂ ಇದ್ದು, ಬರೋಬ್ಬರಿ 150 ಕೆಜಿ ತೂಗುವ ಕಾರ್ನ್ವಾಲ್ಗೆ ಓಡುವುದೆಂದರೆ ತ್ರಾಸದಾಯಕ ಕೆಲಸ.
ಕ್ರಿಕೆಟ್ನಲ್ಲಿ (Cricket) ಫಿಟ್ನೇಸ್ಗೆ ಸಾಕಷ್ಟು ಮಹತ್ವ ನೀಡಲಾಗುತ್ತದೆ. ಏಕೆಂದರೆ ಈ ಆಟದಲ್ಲಿ ರನ್ನಿಂಗ್ ಪ್ರಮುಖ ಪಾತ್ರವಹಿಸುತ್ತದೆ. ಬೌಲರೇ ಆಗಿರಲಿ, ಫೀಲ್ಡರ್ರೆ ಅಗಿರಲಿ ಅಥವಾ ಬ್ಯಾಟ್ಸ್‌ಮನ್ ಆಗಿರಲಿ ಈ ಆಟದಲ್ಲಿ ನೆಲೆ ಕಂಡುಕೊಂಡಕೊಳ್ಳಬೇಕಾದರೆ ಮುಖ್ಯವಾಗಿ ವೇಗವಾಗಿ ಓಡುವುದನ್ನು ಕರಗತ ಮಾಡಿಕೊಂಡಿರಲೇಬೇಕು. ಅದರಲ್ಲೂ ಬ್ಯಾಟ್ಸ್ಮನ್ಗಳಿಗೆ ಈ ಕಲೆ ಗೊತ್ತಿದ್ದರೆ, ಸುಲಭವಾಗಿ ರನ್ ಕದಿಯಬಹುದು. ಅಥವಾ ರನೌಟ್ನಿಂದ (Run Out) ಬಚ್ಚಾವ್ ಆಗಬಹುದು. ಹಾಗಾಗಿ ವಿಶ್ವ ಕ್ರಿಕೆಟ್ನ ಭಾಗಶಃ ಕ್ರಿಕೆಟಿಗರು ತಮ್ಮನ್ನು ತಾವು ಫಿಟ್ ಆಗಿ ಇರಿಸಿಕೊಳ್ಳಲು ವ್ಯಾಯಾಮ, ಜಿಮ್ಗಳ ಮೊರ ಹೋಗುತ್ತಾರೆ. ಆದರೆ ದೈತ್ಯ ದೇಹದ ಹೊರತಾಗಿಯೂ ತನ್ನ ಆಟದ ಮೂಲಕ ಗಮನ ಸೆಳೆದು ವಿಂಡೀಸ್ ತಂಡದಲ್ಲಿ ಸ್ಥಾನ ಪಡೆದಿರುವ ರಹಕೀಮ್ ಕಾರ್ನ್‌ವಾಲ್ (Rahkeem Cornwall) ಮಾತ್ರ ಕ್ರೀಸ್ನಲ್ಲಿ ರನ್ಗಾಗಿ ಓಡುವುದಕ್ಕೆ ಇನ್ನಿಲ್ಲದ ಹರಸಾಹಸ ಪಡುತ್ತಾರೆ. ಇದಕ್ಕೆ ಕಾರಣ ಅವರ ದೈತ್ಯ ದೇಹ.
150 ಕೆಜಿ ತೂಗುವ ಕಾರ್ನ್‌ವಾಲ್
ವಾಸ್ತವವಾಗಿ ವಿಶ್ವದ ಅತ್ಯಂತ ದೈತ್ಯ ದೇಹದ ಕ್ರಿಕೆಟಿಗರಲ್ಲಿ ಒಬ್ಬರಾಗಿರುವ ರಹಕೀಮ್ ಕಾರ್ನ್‌ವಾಲ್ ಸ್ಫೋಟಕ ಬ್ಯಾಟಿಂಗ್ಗೆ ಹೆಸರುವಾಸಿಯಾಗಿದ್ದಾರೆ. ಈ ಆಟಗಾರ ಸಿಂಗಲ್ ಹಾಗೂ ಡಬಲ್ಗಳಿಗಿಂತ ಬೌಂಡರಿ, ಸಿಕ್ಸರ್ಗಳಿಂದಲೇ ಸಾಕಷ್ಟು ರನ್ ಕಲೆಹಾಕುತ್ತಾರೆ. ಇದಕ್ಕೆ ಕಾರಣವೂ ಇದ್ದು, ಬರೋಬ್ಬರಿ 150 ಕೆಜಿ ತೂಗುವ ಕಾರ್ನ್ವಾಲ್ಗೆ ಓಡುವುದೆಂದರೆ ತ್ರಾಸದಾಯಕ ಕೆಲಸ. ಹೀಗೆ ಸಿಂಗಲ್ ರನ್ಗಾಗಿ ಓಡುವ ಯತ್ನದಲ್ಲಿ ಕಾರ್ನ್‌ವಾಲ್ ಸಾಕಷ್ಟು ಬಾರಿ ರನ್ ಔಟ್ ಆಗಿದ್ದಾರೆ. ಇದೀಗ ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲೂ ಕಾರ್ನ್‌ವಾಲ್ ರನೌಟ್ಗೆ ಬಲಿಯಾಗಿದ್ದು, ಆ ರನೌಟ್ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
A Rahkeem Cornwall Run Out In CPL.pic.twitter.com/36ASQ2tBkF
— Aadarsh (@AadarshParab) August 18, 2023
ವಾಸ್ತವವಾಗಿ ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ ಸೇಂಟ್ ಲೂಸಿಯಾ ತಂಡದ ವಿರುದ್ಧ ಬಾರ್ಬಡೋಸ್ ರಾಯಲ್ಸ್ ತಂಡದ ಪರ ಕಣಕ್ಕಿಳಿದಿದ್ದ ಕಾರ್ನ್‌ವಾಲ್ ತಾವು ಎದುರಿಸಿದ ಮೊದಲ ಎಸೆತದಲ್ಲೇ ರನ್ ಕದಿಯುವ ಯತ್ನದಲ್ಲಿ ರನೌಟ್ ಆಗಿದ್ದಾರೆ. ಅದು ಕ್ರೀಸ್ನಲ್ಲಿ ರನ್ಗಾಗಿ ಓಡುವ ಬದಲು ಕಾರ್ನ್‌ವಾಲ್ ಜಾಗಿಂಗ್ ಮಾಡಿದ್ದು, ಈ ರನೌಟ್ ವೈರಲ್ ಆಗಲು ಪ್ರಮುಖ ಕಾರಣವಾಗಿದೆ.
201 ರನ್ ಟಾರ್ಗೆಟ್
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸೇಂಟ್ ಲೂಸಿಯಾ ತಂಡ 6 ವಿಕೆಟ್ ಕಳೆದುಕೊಂಡು 201 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಬಾರ್ಬಡೋಸ್ ತಂಡಕ್ಕೆ ಮೊದಲ ಎಸೆತದಲ್ಲಿ ದೊಡ್ಡ ಹೊಡೆತ ಬಿದ್ದಿತು. ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ಕಾರ್ನ್‌ವಾಲ್, ಮೊದಲ ಎಸೆತವನ್ನು ಶಾರ್ಟ್ ಫೈನ್ ಲೆಗ್ ಕಡೆಗೆ ಆಡಿದರು. ಆದರೆ ಅಲ್ಲಿ ನಿಂತಿದ್ದ ಕ್ರಿಸ್ ಸೋಲ್ ಚೆಂಡನ್ನು ಹಿಡಿದು ನಾನ್-ಸ್ಟ್ರೈಕ್ ತುದಿಗೆ ಎಸೆದರು. ಆ ಸಮಯದಲ್ಲಿ, ವೇಗವಾಗಿ ಓಡುವ ಬದಲು ಕಾರ್ನ್‌ವಾಲ್ ಕ್ರೀಸ್ನಲ್ಲಿ ಜಾಗಿಂಗ್ ಪ್ರದರ್ಶನ ಮಾಡಿದರು. ಹೀಗಾಗಿ ಕಾರ್ನ್‌ವಾಲ್ ಕ್ರೀಸ್ ತಲುಪುವ ಮೊದಲು ಚೆಂಡು ಬೇಲ್‌ಗಳನ್ನು ಹಾರಿಸಿತು.
ಟ್ರೋಲಿಗರಿಗೆ ತುತ್ತಾದ ಕಾರ್ನ್‌ವಾಲ್
ಕಾರ್ನ್‌ವಾಲ್ ಈ ರೀತಿಯಾಗಿ ರನೌಟ್ ಆಗಿದ್ದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಟ್ರೋಲಿಗರ ಬಾಯಿಗೆ ಕಾರ್ನ್‌ವಾಲ್ ಆಹಾರವಾಗುತ್ತಿದ್ದಾರೆ. ಕಾರ್ನ್‌ವಾಲ್ ಬೇಗನೇ ಔಟಾದ ಕಾರಣ ಬಾರ್ಬಡೋಸ್ ಉತ್ತಮ ಆರಂಭವನ್ನು ಪಡೆಯಲು ಸಾಧ್ಯವಾಗಲಿಲ್ಲ. ತಂಡದ ಪರ ಯಂಗ್ ಹೊರತುಪಡಿಸಿ ಉಳಿದ ಬ್ಯಾಟ್ಸ್‌ಮನ್‌ಗಳು ಯಾರೂ ರನ್ ಗಳಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಬಾರ್ಬಡೋಸ್ 20 ಓವರ್‌ಗಳಲ್ಲಿ 147 ರನ್‌ಗಳಿಗೆ ಆಲೌಟ್ ಆಯಿತು. ಇದರೊಂದಿಗೆ ಸೇಂಟ್ ಲೂಸಿಯಾ ತಂಡ 54 ರನ್‌ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:06 pm, Fri, 18 August 23