AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಡುಪಿ: ಬೃಹತ್ ಗಾತ್ರದ ಹೆಬ್ಬಾವು ಹಿಡಿದ 12ರ ಪೋರ, ಮೈನವಿರೇಳಿಸುವ ದೃಶ್ಯ ವೈರಲ್

ಉಡುಪಿ ಜಿಲ್ಲೆಯ ಸಾಲಿಗ್ರಾಮದ 12 ವರ್ಷದ ಬಾಲಕ ಧೀರಜ್ ತನ್ನ ತಂದೆಗೆ ಸಹಾಯ ಮಾಡಬೇಕೆಂದು ಬೃಹತ್ ಹೆಬ್ಬಾವನ್ನು ತನ್ನ ಬರಿ ಕೈಗಳಿಂದ ಹಿಡಿದಿದ್ದಾನೆ. ಬಾಲಕನ ಧೈರ್ಯ ಕಂಡು ಅಲ್ಲಿ ನೆರೆದಿದ್ದ ಜನರೆಲ್ಲ ಶಾಕ್ ಆಗಿದ್ದಾರೆ. ಹೆಬ್ಬಾವು ಹಿಡಿಯುವ ಬಾಲಕನ ವಿಡಿಯೋ ವೈರಲ್ ಆಗುತ್ತಿದ್ದು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಉಡುಪಿ: ಬೃಹತ್ ಗಾತ್ರದ ಹೆಬ್ಬಾವು ಹಿಡಿದ 12ರ ಪೋರ, ಮೈನವಿರೇಳಿಸುವ ದೃಶ್ಯ ವೈರಲ್
ಹೆಬ್ಬಾವು
ಆಯೇಷಾ ಬಾನು
|

Updated on: Nov 24, 2023 | 7:47 AM

Share

ಉಡುಪಿ,ನ.24: ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಎಲ್ಲರಿಗೂ ಹಾವು ಕಂಡ್ರೆ ಭಯ ಇದ್ದೇ ಇರುತ್ತೆ. ಆದರೆ ಇಲ್ಲೊಬ್ಬ ಬಾಲಕ ಕೊಂಚವೂ ಭಯಪಡದೆ ಬೃಹತ್ ಹೆಬ್ಬಾವುವನ್ನು (Python) ಬರಿ ಕೈಯಲ್ಲಿ ಹಿಡಿದಿದ್ದಾನೆ. ಬಾಲಕ (Boy) ಹಾವನ್ನು ಹಿಡಿಯುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ (Video Viral). ಉಡುಪಿ ಜಿಲ್ಲೆಯ ಸಾಲಿಗ್ರಾಮದ 12 ವರ್ಷದ ಬಾಲಕ ಧೀರಜ್ ಇತ್ತೀಚೆಗೆ ಬೃಹತ್ ಹೆಬ್ಬಾವನ್ನು ತನ್ನ ಬರಿ ಕೈಗಳಿಂದ ಹಿಡಿದಿದ್ದಾನೆ. ಬಾಲಕನ ಧೈರ್ಯ ಕಂಡು ಅಲ್ಲಿ ನೆರೆದಿದ್ದ ಜನರೆಲ್ಲ ಶಾಕ್ ಆಗಿದ್ದಾರೆ.

ಉರಗ ತಜ್ಞರಾಗಿರುವ ಸುಧೀಂದ್ರ ಐತಾಳ್ ಎಂಬುವವರು ಹೆಬ್ಬಾವನ್ನು ಹಿಡಿಯಲು ತಮ್ಮ ಮಗ ಧೀರಜ್​ನನ್ನೂ ಸಹ ಕರೆದುಕೊಂಡು ಬಂದಿದ್ದರು. ಈ ವೇಳೆ ಬೃಹತ್ ಗಾತ್ರದ ಹೆಬ್ಬಾವು ಪತ್ತೆಯಾಗಿದ್ದು ಹೆಬ್ಬಾವಿನ ಬಾಲದ ತುದಿ ಹಿಡಿದು ಸುಧೀಂದ್ರ ಹಾವು ಹಿಡಿಯಲು ಮುಂದಾಗಿದ್ದರು. ಬಾಲ ಹಿಡಿದು ಎಷ್ಟೇ ಎಳೆದರು ಹಾವು ಸರಿಯುತ್ತಿರಲಿಲ್ಲ. ಈ ವೇಳೆ ಅಪ್ಪನ ಸಹಾಯಕ್ಕೆ ಮುಂದಾದ 12 ವರ್ಷದ ಬಾಲಕ ಧೀರಜ್ ಯಾವುದೇ ಮುನ್ನೆಚ್ಚರಿಕಾ ಕ್ರಮಗಳಿಲ್ಲದಿದ್ದರೂ ಕೊಂಚವೂ ಅಂಜದೆ ಹೆಬ್ಬಾವಿನ ತಲೆಗೆ ಕೈ ಹಾಕಿದ್ದಾನೆ.

ಹೆಬ್ಬಾವು ತಪ್ಪಿಸಿಕೊಳ್ಳಬಾರದೆಂಬ ಉದ್ದೇಶದಿಂದ ಬಾಲಕ ಧೀರಜ್ ಹಾವುನ ಹೆಡೆ ಹಿಡಿಯಲು ಮುಂದಾಗಿದ್ದ. ಮೊದಲ ಬಾರಿ ಹಾವು ಬಾಲಕನ ಕೈಗೆ ಸಿಗದೆ ತಪ್ಪಿಸಿಕೊಂಡಿತು. ಬಳಿಕ ಮತ್ತೆ ಪ್ರಯತ್ನಿಸಿದ ಬಾಲಕ ಹೆಬ್ಬಾವಿನ ಹೆಡೆಯನ್ನು ಹಿಡಿಯುವಲ್ಲಿ ಯಶಸ್ವಿಯಾಗುತ್ತಾನೆ. ಈ ವೇಳೆ ಹೆಬ್ಬಾವು ಬಾಲಕನ ಕೈ ಸುತ್ತಿಕೊಳ್ಳುತ್ತೆ. ನಂತರ ಹೆಬ್ಬಾವನ್ನು ಚೀಲದೊಳಗೆ ಹಾಕಲಾಗುತ್ತೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಇನ್ನು ಬಾಲಕನ ತಂದೆ ಸುಧೀಂದ್ರ ಅವರು ಈ ಹಿಂದೆಯೂ ನೂರಾರು ಹಾವು ಹಾಗೂ ಇತರೆ ಪ್ರಾಣಿ ಪಕ್ಷಿಗಳನ್ನು ರಕ್ಷಿಸಿದ್ದಾರೆ. ಹಾವುಗಳು ಮತ್ತು ಇತರ ಪ್ರಾಣಿಗಳನ್ನು ವಸತಿ ಪ್ರದೇಶಗಳಿಂದ ಸೆರೆಹಿಡಿದ ನಂತರ ಅವುಗಳನ್ನು ಕಾಡಿಗೆ ಅಥವಾ ಸುರಕ್ಷಿತ ಸ್ಥಳಗಳಲ್ಲಿ ಬಿಡಲಾಗುತ್ತೆ. ಗಾಯಗೊಂಡ ಪ್ರಾಣಿಗಳನ್ನು ಇವರು ತನ್ನ ಬಲಿಯೇ ಇಟ್ಟುಕೊಂಡು ಚಿಕಿತ್ಸೆ ನೀಡುತ್ತಾನೆ. ಈ ಹಿಂದೆ ಅರಣ್ಯ ಇಲಾಖೆ ಇವರ ವಿರುದ್ಧ ಪ್ರಾಣಿಗಳನ್ನು ಸೆರೆ ಹಿಡಿದಿದ್ದಕ್ಕಾಗಿ ಪ್ರಕರಣ ದಾಖಲಿಸಿತ್ತು.

ಇದನ್ನೂ ಓದಿ: ಅಬ್ಬಬ್ಬಾ! 140 ಕೆಜಿ ತೂಕದ ಹೆಬ್ಬಾವು ಮೇಕೆ ಕೊಟ್ಟಿಗೆಯಲ್ಲಿ ಪತ್ತೆಯಾಯಿತು, ಆದರೆ ಅದರ ಹೊಟ್ಟೆಯಲ್ಲಿ ಏನಿತ್ತು ಗೊತ್ತಾ!?

ಮಗ ಧೀರಜ್‌ಗೆ ಸುಧೀಂದ್ರ ಹಾವುಗಳನ್ನು ರಕ್ಷಿಸು ತರಬೇತಿ ನೀಡಿದ್ದಾರೆ. ಹೆಬ್ಬಾವು ರಕ್ಷಣಾ ಕಾರ್ಯಾಚರಣೆ ಇತ್ತೀಚೆಗೆ ನಡೆದಿದ್ದು, ಗುರುವಾರ ವಿಡಿಯೋ ವೈರಲ್ ಆಗಿದೆ. ಸ್ಥಳೀಯರು ಹೆಬ್ಬಾವನ್ನು ಗಮನಿಸಿ ಸುಧೀಂದ್ರ ಅವರಿಗೆ ಮಾಹಿತಿ ನೀಡಿದ್ದರು ಎಂದು ಮೂಲಗಳು ತಿಳಿಸಿವೆ. ಹೆಬ್ಬಾವು ಬೃಹತ್ ಗಾತ್ರದ್ದಾಗಿದ್ದರಿಂದ ಸುಧೀಂದ್ರ ಹೆಬ್ಬಾವನ್ನು ತನ್ನಿಂದ ತಾನೇ ಎಳೆಯಲು ಸಾಧ್ಯವಾಗಲಿಲ್ಲ. ಆಗ ಅವರ ಮಗ ಧೀರಜ್ ಯಾವುದೇ ಸಮಯವನ್ನು ವ್ಯರ್ಥ ಮಾಡದೆ ಬರಿ ಕೈಯಲ್ಲೇ ಹಾವು ಹಿಡಿದು ತಂದೆಗೆ ಸಹಾಯ ಮಾಡಿದ್ದಾನೆ.

ತಂದೆಯಿಂದ ಹಾವು ಹಿಡಿಯುವ ತರಬೇತಿ ಪಡೆದಿದ್ದರಿಂದ ನನಗೆ ಯಾವ ಭಯವೂ ಆಗಲಿಲ್ಲ ಎಂದು ಧೀರಜ್ ಖಾಸಗಿ ಸುದ್ದಿ ಪತ್ರಿಕೆಯೆ ಘಟನೆ ಸಂಬಂಧ ಅನುಭವ ಹಂಚಿಕೊಂಡಿದ್ದಾನೆ. ಇನ್ನು ತಂದೆ-ಮಗ ರಕ್ಷಿಸಿದ ಹೆಬ್ಬಾವನ್ನು ಅದರ ನೈಸರ್ಗಿಕ ಆವಾಸಸ್ಥಾನಕ್ಕೆ ಬಿಡುಗಡೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಧೀರಜ್ ಇಲ್ಲಿನ ಚಿತ್ರಾಪುರ ಗ್ರಾಮದಲ್ಲಿ 7ನೇ ತರಗತಿಯಲ್ಲಿ ಓದುತ್ತಿದ್ದು, ಈತನ ಕಾರ್ಯಕ್ಕೆ ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

VIDEO: ಮಿಂಚಿನ ದಾಳಿ ಸಂಘಟಿಸಿದ ಬುಮ್ರಾಗೆ ಸಿಕ್ಕ ಸ್ವಾಗತ ಹೇಗಿತ್ತು ನೋಡಿ
VIDEO: ಮಿಂಚಿನ ದಾಳಿ ಸಂಘಟಿಸಿದ ಬುಮ್ರಾಗೆ ಸಿಕ್ಕ ಸ್ವಾಗತ ಹೇಗಿತ್ತು ನೋಡಿ
ಬಲಾಬಲ ಪ್ರದರ್ಶಿಸುವ ಅವಶ್ಯಕತೆ ಡಿಕೆ ಶಿವಕುಮಾರ್ ಅವರಿಗಿಲ್ಲ: ಡಿಕೆ ಸುರೇಶ್
ಬಲಾಬಲ ಪ್ರದರ್ಶಿಸುವ ಅವಶ್ಯಕತೆ ಡಿಕೆ ಶಿವಕುಮಾರ್ ಅವರಿಗಿಲ್ಲ: ಡಿಕೆ ಸುರೇಶ್
ಪೊಲಾರ್ಡ್, ಪೂರನ್ ಸಿಡಿಲಬ್ಬರ: ಫೈನಲ್​ಗೆ MI ಪಡೆ
ಪೊಲಾರ್ಡ್, ಪೂರನ್ ಸಿಡಿಲಬ್ಬರ: ಫೈನಲ್​ಗೆ MI ಪಡೆ
ಶಿವಣ್ಣನಿಗೆ ವಿಶ್ ಮಾಡಲು ಚಿಕ್ಕಮಗಳೂರಿನಿಂದ ಬಂದ ಕಾಫಿ ನಾಡು ಚಂದು
ಶಿವಣ್ಣನಿಗೆ ವಿಶ್ ಮಾಡಲು ಚಿಕ್ಕಮಗಳೂರಿನಿಂದ ಬಂದ ಕಾಫಿ ನಾಡು ಚಂದು
ಆರೋಗ್ಯವಂತ ಬಾಣಂತಿಯರ ಹಾಲನ್ನು ಮಾತ್ರ ಸಂಗ್ರಹಿಸಲಾಗುತ್ತದೆ: ವೈದ್ಯಾಧಿಕಾರಿ
ಆರೋಗ್ಯವಂತ ಬಾಣಂತಿಯರ ಹಾಲನ್ನು ಮಾತ್ರ ಸಂಗ್ರಹಿಸಲಾಗುತ್ತದೆ: ವೈದ್ಯಾಧಿಕಾರಿ
Wimbledon 2025: ನೊವಾಕ್ ನಾಗಾಲೋಟಕ್ಕೆ ಸಿನ್ನರ್ ಬ್ರೇಕ್
Wimbledon 2025: ನೊವಾಕ್ ನಾಗಾಲೋಟಕ್ಕೆ ಸಿನ್ನರ್ ಬ್ರೇಕ್
ಕೇಂದ್ರ ನೀಡುವ 5 ಕೇಜಿ ಅಕ್ಕಿ ಹಂಚುವ ಯೋಗ್ಯತೆ ರಾಜ್ಯ ಸರ್ಕಾರಕ್ಕಿಲ್ಲ: ಜೋಶಿ
ಕೇಂದ್ರ ನೀಡುವ 5 ಕೇಜಿ ಅಕ್ಕಿ ಹಂಚುವ ಯೋಗ್ಯತೆ ರಾಜ್ಯ ಸರ್ಕಾರಕ್ಕಿಲ್ಲ: ಜೋಶಿ
ಪತಿಯನ್ನು ನದಿಗೆ ತಳ್ಳಿದ ಪತ್ನಿ, ಆಮೇಲೆ ನಡೆಯಿತು ಯಾರೂ ಊಹಿಸದ ಘಟನೆ!
ಪತಿಯನ್ನು ನದಿಗೆ ತಳ್ಳಿದ ಪತ್ನಿ, ಆಮೇಲೆ ನಡೆಯಿತು ಯಾರೂ ಊಹಿಸದ ಘಟನೆ!
ಶಿವರಾಜ್​ಕುಮಾರ್ ಜನ್ಮದಿನ; ಮಧ್ಯರಾತ್ರಿ ಅಭಿಮಾನಿಗಳ ಜೊತೆ ಕೇಕ್ ಕಟ್
ಶಿವರಾಜ್​ಕುಮಾರ್ ಜನ್ಮದಿನ; ಮಧ್ಯರಾತ್ರಿ ಅಭಿಮಾನಿಗಳ ಜೊತೆ ಕೇಕ್ ಕಟ್
ವಕ್ರ ಶನಿಯ ಪ್ರಭಾವ ಯಾವ ರಾಶಿಗಳ ಮೇಲೆ ಆಗಲಿದೆ? ಇಲ್ಲಿದೆ ಜ್ಯೋತಿಷ್ಯ ವಿವರಣೆ
ವಕ್ರ ಶನಿಯ ಪ್ರಭಾವ ಯಾವ ರಾಶಿಗಳ ಮೇಲೆ ಆಗಲಿದೆ? ಇಲ್ಲಿದೆ ಜ್ಯೋತಿಷ್ಯ ವಿವರಣೆ