Video: ಭಾರತೀಯರ ಆತ್ಮೀಯ ಆತಿಥ್ಯಕ್ಕೆ ಮನಸೋತ ವಿದೇಶಿ ಮಹಿಳೆ

ಹಳ್ಳಿ ಜನ್ರ ಮನಸ್ಸು ಪರಿಶುದ್ಧವಾದದ್ದು. ಅಪರಿಚಿತ ವ್ಯಕ್ತಿಗಳು ಯಾರೇ ಮನೆ ಬಾಗಿಲಿಗೆ ಬಂದ್ರು ಕರೆದು ಊಟ ಹಾಕ್ತಾರೆ. ಇದೀಗ ವಿದೇಶಿ ಮಹಿಳೆಯೊಬ್ಬರು ಭಾರತೀಯರ ಆತಿಥ್ಯಕ್ಕೆ ಫುಲ್ ಫಿದಾ ಆಗಿದ್ದಾರೆ. ಅಸ್ಸಾಂನ ಹಳ್ಳಿಗೆ ಭೇಟಿ ನೀಡಿದ್ದು, ಅಲ್ಲಿನ ಜನರ ಜತೆಗೆ ಸೇರಿ ಊಟ ಸವಿದು ತಮಗಾದ ಖುಷಿಯನ್ನು ಹಂಚಿಕೊಂಡಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಭಾರತೀಯರ ಆತ್ಮೀಯ ಆತಿಥ್ಯಕ್ಕೆ ಮನಸೋತ ವಿದೇಶಿ ಮಹಿಳೆ
ವೈರಲ್‌ ವಿಡಿಯೋ
Image Credit source: Instagram

Updated on: Jul 28, 2026 | 10:58 AM

ಅತಿಥಿ ದೇವೋಭವ ಎನ್ನುವುದು ನಮ್ಮ ದೇಶದ ಸಂಸ್ಕೃತಿ. ಅಪರಿಚಿತರನ್ನು ಇಲ್ಲಿ ನಾವು ಅತಿಥಿಗಳನ್ನು ನಗುಮೊಗದಿಂದ ಸ್ವಾಗತಿಸಿ ಸತ್ಕರಿಸುತ್ತೇವೆ. ಇಲ್ಲೊಬ್ರು ವಿದೇಶಿ ಮಹಿಳೆ (foreign woman) ಭಾರತೀಯರ ಈ ಪ್ರೀತಿ ತುಂಬಿದ ಆತಿಥ್ಯಕ್ಕೆ ಮನಸೋತಿದ್ದಾರೆ. ಭಾರತಕ್ಕೆ ಬಂದ ವಿದೇಶಿ ಮಹಿಳೆಯೊಬ್ಬರು ಅಸ್ಸಾಂನ (Assam) ಹಳ್ಳಿಯ ಜನರ ಒಳ್ಳೆಯ ಮನಸ್ಸಿಗೆ ಫುಲ್ ಫಿದಾ ಆಗಿದ್ದಾರೆ. ಈ ವಿಡಿಯೋ ಹಂಚಿಕೊಳ್ಳುತ್ತಿದ್ದಂತೆ  ಇಲ್ಲಿ ಅಪರಿಚಿತರಿಗೂ ಶುದ್ಧ ಪ್ರೀತಿ ಸಿಗುತ್ತದೆ ಎಂದು ನೆಟ್ಟಿಗರು ಹೇಳಿದ್ದಾರೆ.

ನೆದರ್‌ಲ್ಯಾಂಡ್‌ನ ಮೈಕೆ (Meike) ಎಂಬ ಮಹಿಳೆ ತಮ್ಮ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಭಾರತಕ್ಕೆ ಭೇಟಿ ನೀಡಿದ ಸುಂದರ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ಸೌಂದರ್ಯ ಸವಿಯಲು ಅಸ್ಸಾಂನ ಹಳ್ಳಿಯ ಭೇಟಿ ನೀಡಿದ್ದಾರೆ. ಇದೇ ವೇಳೆ ಈ ಹಳ್ಳಿಯ ಜನರು ತಮ್ಮನ್ನು ನಡೆಸಿಕೊಂಡ ರೀತಿಗೆ ಮನಸೋತಿದ್ದು ವಿಡಿಯೋ ಮಾಡಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ

ಈ ಕ್ಲಿಪಿಂಗ್ ನಲ್ಲಿ ವಿದೇಶಿ ಮಹಿಳೆ ಅಸ್ಸಾಂನ ಹಳ್ಳಿಯ ಜನರೊಂದಿಗೆ ಬೆರೆತು ಊಟ ಮಾಡುತ್ತಿರುವುದನ್ನು ಕಾಣಬಹುದು. ಈ ವಿಡಿಯೋದಲ್ಲಿ ಮೊದಲು ನನಗೆ ಬಿಸಿಬಿಸಿ ಅನ್ನ ಹಾಗೂ ಮೊಟ್ಟೆಯ ಸಾರನ್ನು ಸವಿಯುವ ಅವಕಾಶ ಸಿಕ್ಕಿತ್ತು. ಇದು ಮೊದಲ ಊಟ, ಇಲ್ಲಿಂದ ನಾನು ಮತ್ತೊಂದು ಮನೆಯ ಊಟಕ್ಕೆ ಹೋಗಬೇಕು‌. ಭಾರತೀಯ ಜನರು ನನಗೆ ಹೊಟ್ಟೆ ತುಂಬಾ ಉಣ ಬಡಿಸುತ್ತಾರೆ. ತುಂಬಾ ರುಚಿಕರ ಆಹಾರ ಎಂದಿದ್ದಾರೆ. ಅಲ್ಲೇ ಪಕ್ಕದಲ್ಲಿ ಯುವಕ ಬಳಿ ನಿಮ್ಮ ತಾಯಿ ತುಂಬಾ ಅದ್ಭುತವಾಗಿ ಅಡುಗೆ ಮಾಡುತ್ತಾರೆ ಎಂದು ಇಲ್ಲಿನ ಆಹಾರವನ್ನು ಮೆಚ್ಚಿಕೊಂಡಿದ್ದಾರೆ.

ಸಂಜೆಯ ವೇಳೆ ಎರಡೆರಡು ಸಲ ಊಟ ಮಾಡುತ್ತಿದ್ದೇನೆ. ಇಲ್ಲಿನ ಜನ್ರು ನಾನು ಅವರ ಮನೆಯಲ್ಲಿ ಊಟ ಮಾಡಬೇಕು ಎಂದು ಆಸೆ ಪಟ್ಟಿದ್ದಾರೆ. ಹೀಗಾಗಿ ನಾನು ಎರಡು ಬಾರಿ ಊಟ ಮಾಡುತ್ತೇನೆ. ಇಲ್ಲಿನ ಜನರು ತುಂಬಾ ಒಳ್ಳೆಯವರು ಎಂದು ಅತಿಥಿ ಸತ್ಕಾರದೊಂದಿಗೆ ಇಲ್ಲಿನ ಜನರ ಒಳ್ಳೆಯ ಮನಸ್ಸನ್ನು ಮೆಚ್ಚಿಕೊಂಡಿದ್ದಾರೆ.

ಇದನ್ನೂ ಓದಿ: ಮನೆಯಲ್ಲೇ ರಕ್ತ ಪರೀಕ್ಷೆ ಮಾಡುವ ಸೇವೆ ಕಂಡು ಅಚ್ಚರಿ ವ್ಯಕ್ತಪಡಿಸಿದ ವಿದೇಶಿ ಮಹಿಳೆ

ಈ ವಿಡಿಯೋ 23 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಶುದ್ಧ ಪ್ರೀತಿ ಹಾಗೂ ಸತ್ಕಾರ ಭಾರತದಲ್ಲಿ ಮಾತ್ರ ಕಾಣಲು ಸಾಧ್ಯ ಎಂದಿದ್ದಾರೆ. ಇನ್ನೊಬ್ಬರು, ನಮ್ಮ ಮನೆಗೂ ನೀವು ಬರುವಿರಾ ಎಂದು ಕೇಳಿದ್ದಾರೆ. ಮತ್ತೊಬ್ಬರು, ನಿಮ್ಮ ಈ ಪೋಸ್ಟ್ ನನ್ನ ಮೊಗದಲ್ಲಿ ನಗು ತರಿಸಿತು ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Follow Us