Viral Video : ರುಚಿರುಚಿಯಾದುದನ್ನು ಮಾತ್ರ ತಿನ್ನುವುದನ್ನು ರೂಢಿಸಿಕೊಂಡವರಿಗೆ ಆರೋಗ್ಯಕ್ಕೆ ಉಪಯಯಕ್ತವಾದುದನ್ನು ತಿನ್ನಲು ಕೊಟ್ಟು ನೋಡಿ. ದೊಡ್ಡ ಅಗ್ನಿಪರೀಕ್ಷೆ ಎಂಬಂತೆ ಅವರು ವರ್ತಿಸುತ್ತಾರೆ. ಇದು ಮನುಷ್ಯರಿಗಷ್ಟೇ ಅಲ್ಲ ಪ್ರಾಣಿಗಳಿಗೂ ಅನ್ವಯಿಸುತ್ತದೆ. ಇನ್ಸ್ಟಾಗ್ರಾಂನಲ್ಲಿ ಇತ್ತೀಚೆಗೆ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಅಗ್ನಿಪರೀಕ್ಷೆಗೆ ಒಳಗಾದವರ ಮುಖ ಹೇಗಿರುತ್ತದೆ ಎಂದು ನೋಡಬಹುದು! ಇಲ್ಲಿ ಎರಡು ಗೋಲ್ಡನ್ ರಿಟ್ರೈವರ್ ನಾಯಿಗಳಿವೆ. ಇವುಗಳಿಗೆ ಕೆಲ ತರಕಾರಿಗಳು, ಹಣ್ಣುಗಳನ್ನು ತಿನ್ನಲು ಕೊಡಲಾಗಿದೆ. ಒಂದು ನಾಯಿ ಎಷ್ಟು ಖುಷಿಯಿಂದ ತಿನ್ನುತ್ತದೆ ಇನ್ನೊಂದು ಏನೆಲ್ಲ ಎಕ್ಸ್ಪ್ರೆಷನ್ ಕೊಡುತ್ತದೆ ನೋಡಿ.
ಈ ವಿಡಿಯೋದಲ್ಲಿ ಏನು ನಡೆಯುತ್ತಿದೆ ಎಂದು ಸುಲಭವಾಗಿ ಅರ್ಥ ಮಾಡಿಕೊಳ್ಳಲು ಟೆಕ್ಸ್ಟ್ ಕೊಡಲಾಗಿದೆ. ಬಹುಶಃ ಅದನ್ನು ಓದಬೇಕಂತೇನಿಲ್ಲ, ನಾಯಿಗಳ ಮುಖ ನೋಡಿದರೆ ಸಾಕು ಎಲ್ಲವೂ ಅರ್ಥವಾಗಿಬಿಡುತ್ತದೆ. ಬಹಳ ಮುದ್ದನ್ನು ಬಯಸುವ ಈ ಗೋಲ್ಡನ್ ರಿಟ್ರೈವರ್ ನಾಯಿಗಳದ್ದು ತಮಗೆ ಬೇಕಿರುವುದನ್ನು ಬೇಡವಾಗಿರುವುದನ್ನು ಸ್ಪಷ್ಟವಾಗಿ ವ್ಯಕ್ತಪಡಿಸುವ ಚುರುಕು ಬುದ್ಧಿಮತ್ತೆ.
ಸಾಮಾನ್ಯವಾಗಿ ಮಾಂಸಾಹಾರಿಗಳಾದ ನಾಯಿಗಳು ಹೇಗೆ ತಿಂದಾವು ಬ್ರೊಕೋಲಿ, ಕುಂಬಳಕಾಯಿ, ಕ್ಯಾರೆಟ್, ಬಾಳೆಹಣ್ಣು ಮುಂತಾದವನ್ನು? ಆದರೂ ಕೆಲ ಸಾಕುಪ್ರಾಣಿಗಳಿಗೆ ಏನು ಅಭ್ಯಾಸ ಮಾಡಿಸುತ್ತೇವೋ ಅದನ್ನೇ ತಿನ್ನುತ್ತವೆ. ಇನ್ನೂ ಕೆಲವು ಹೀಗೆ ಮುದ್ದು ಬರುವ ಹಾಗೆ ಮುಖ ಮಾಡಿಕೊಂಡು ಕುಳಿತುಕೊಳ್ಳುತ್ತವೆ. ಕೊನೆಗೆ ಅವುಗಳಿಗೆ ಏನಿಷ್ಟವೋ ಅದನ್ನೇ ಕೊಟ್ಟು ಶರಣಾಗಬೇಕಾಗುತ್ತದೆ ಅವುಗಳ ಪೋಷಕರು. ಎಷ್ಟೇ ಆದರೂ ಇವೂ ಮಕ್ಕಳೇ ತಾನೆ ಸಾಕಿದವರಿಗೆ, ಮನನೋಯಿಸಲಾದೀತೆ?
ವಿವಿಧ ರೀತಿಯಲ್ಲಿ ಈ ಮುದ್ದು ದೃಶ್ಯವನ್ನು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 2:54 pm, Mon, 5 September 22