
ಯುಎಇಯಲ್ಲಿ ತಿಂಗಳಿಗೆ ಏಳು ಲಕ್ಷಕ್ಕೂ ಹೆಚ್ಚು ಸಂಬಳ ಪಡೆಯುತ್ತಿದ್ದ ಬೆಂಗಳೂರಿನ ಗೂಗಲ್ (Google employee) ಉದ್ಯೋಗಿಯೊಬ್ಬರು ಅಲ್ಲಿ ಕೆಲಸ ತ್ಯಜಿಸಿ ಬಂದಿರುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಭಾರೀ ಚರ್ಚೆಗಳು ಕೂಡ ನಡೆದಿದೆ. ಅಷ್ಟಕ್ಕೂ ಈ ವ್ಯಕ್ತಿ ದೊಡ್ಡ ಸಂಬಳದ ಕೆಲಸ ಬಿಟ್ಟು ಬರಲು ಏನು ಕಾರಣವಿರಬಹುದು? ಇದಕ್ಕೆ ಅವರೇ ಉತ್ತರ ನೀಡಿದ್ದಾರೆ. ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಈ ಬಗ್ಗೆ ಹಂಚಿಕೊಂಡಿದ್ದಾರೆ. ಕೆಲಸ ಸ್ಥಳದಲ್ಲಾದ ಘಟನೆಗಳನ್ನು ಅಡ್ವಿನ್ ನೆಟ್ಟೊ ತಮ್ಮ ಇನ್ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ನಟ್ಟಿಗರು ಕೂಡ ಅವರ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅಡ್ವಿನ್ ನೆಟ್ಟೊ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹೀಗೆ ಬರೆದುಕೊಂಡಿದ್ದಾರೆ. “ಯುಎಇಗೆ ಹೋಗುವುದು ನನ್ನ ಕನಸಾಗಿತ್ತು. ಕೊನೆಗೂ ನನ್ನ ಕನಸು ನನಸಾಯಿತು. ಯುಎಐಗೆ ಬಂದ್ಮೇಲೆ ಗೊತ್ತಾಯಿತು, ಈ ದೇಶದಲ್ಲಿ ಹೊಂದಿಕೊಳ್ಳಲು ಸಾಧ್ಯವಿಲ್ಲ ಎಂದು. ಮೂರು ತಿಂಗಳಿನಲ್ಲಿ ಎಲ್ಲವೂ ತಿಳಿಯಿತು. ಇಲ್ಲಿನ ಕೆಲಸದ ಒತ್ತಡ, ತಂತ್ರಜ್ಞಾನ ಇಲ್ಲದೆ ಇಲ್ಲಿ ಯಾವುದೂ ನಡೆಯುವುದಿಲ್ಲ. ಇಲ್ಲಿ ಮ್ಯಾನೇಜರ್ ನಮ್ಮನ್ನು ನಡೆಸಿಕೊಳ್ಳುವ ರೀತಿ, ಎಲ್ಲವೂ ಹಿಂಸೆಯಾಗಿತ್ತು. ಕೊನೆಗೆ ಎಲ್ಲವನ್ನು ಕೂತು ಯೋಚನೆ ಮಾಡಿ, ಅರಿತುಕೊಂಡು ಅಲ್ಲಿಂದ ಹೊರಟೆ, ಆದರೆ ಒಂದು ಮಾತ್ರ ಯುಎಇ ಬಗ್ಗೆ ಹೇಳಲೇಬೇಕು. ಇದೊಂದು ಅದ್ಭುತ ಸ್ಥಳ, ಹೆಚ್ಚು ಮಹತ್ವಾಕಾಂಕ್ಷೆ, ಸುರಕ್ಷತೆ ಮತ್ತು ಅವಕಾಶಗಳಿಂದ ತುಂಬಿರುವ ದೇಶ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಾನು ಅಲ್ಲಿ ಅತ್ಯುತ್ತಮ ಆಹಾರಗಳ ಸೇವನೆ ಮಾಡಿದ್ದೇನೆ” ಎಂದು ಹೇಳಿದ್ದಾರೆ.
ಒಬ್ಬ ನೆಟ್ಟಿಗ, ನಾನು ಇದನ್ನು ಒಪ್ಪುತ್ತೇನೆ. ಯಾಕೆಂದರೆ ಅಬುಧಾಬಿಯಲ್ಲಿ ನಾನು ಕೂಡ ಕೆಲಸ ಮಾಡಿದ್ದೇನೆ. 7 ರಿಂದ ರಾತ್ರಿ 8 ರವರೆಗೆ ಕೆಲಸ, 3 ಗಂಟೆಗಳ ಊಟದ ವಿರಾಮ, ವಾರಕ್ಕೆ 6 ದಿನ ಕೆಲಸ, ಆದರೆ ಅಲ್ಲಿರುವ ಕೆಲಸದ ವ್ಯವಸ್ಥೆಗಳು ತುಂಬಾ ಹಿಂಸೆಯಾಗಿರುತ್ತದೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ಅಲ್ಲಿನ ಕೆಲಸದ ಸಂಸ್ಕೃತಿ ವಿಭಿನ್ನವಾಗಿರುತ್ತದೆ ಎಂದು ಹೇಳಿದ್ದಾರೆ, ಮತ್ತೊಬ್ಬ ನೆಟ್ಟಿಗ ಹಣ ಅವಶ್ಯಕತೆಗಾಗಿ ವಿದೇಶಕ್ಕೆ ಹೋಗುತ್ತೇವೆ. ಆದರೆ ಅಲ್ಲಿ ಪಡುವ ಕಷ್ಟ ಯಾರಿಗೂ ಬೇಡ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಈ ರೈತ 62 ವರ್ಷದಲ್ಲಿ ಒಮ್ಮೆಯೂ ನಿದ್ದೆ ಮಾಡಿಲ್ಲ, ಇದು ವಿಜ್ಞಾನ ಲೋಕಕ್ಕೆ ಅಚ್ಚರಿ
ಅಡ್ವಿನ್ ನೆಟ್ಟೊ 2007ರಲ್ಲಿ ಮಹಾತ್ಮ ಗಾಂಧಿ ವಿಶ್ವವಿದ್ಯಾಲಯದಿಂದ ಅನಿಮೇಷನ್ ಮತ್ತು ಗ್ರಾಫಿಕ್ ವಿಭಾಗ ಪದವಿಯನ್ನು ಪಡೆದು, 2008ರಲ್ಲಿ ವೆಬ್ ಡಿಸೈನರ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. 2019ರಲ್ಲಿ ಅಬುಧಾಬಿ ಮೂಲದ ಕಂಪನಿಗೆ ಸೇರುವ ಮೊದಲು ವಿವಿಧ ಕಂಪನಿಗಳಲ್ಲಿ ಕೆಲಸ ಮಾಡಿದ್ದಾರೆ. ಮುಂಬೈ ಮೂಲದ ಕಂಪನಿಯೊಂದರಲ್ಲಿ ಕೆಲಸ ಮಾಡಿದ ನಂತರ ಅವರಿಗೆ ಜರ್ಮನ್ನಲ್ಲಿ ಒಳ್ಳೆಯ ಕೆಲಸದ ಆಫರ್ ಬಂತು. ಸ್ವಲ್ಪ ಸಮಯ ಅಲ್ಲಿ ಕೆಲಸ ಮಾಡಿದ್ರು, ಇದೀಗ ಗೂಗಲ್‌ನ ಬೆಂಗಳೂರು ಕ್ಯಾಂಪಸ್‌ನಲ್ಲಿ ಯುಎಕ್ಸ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ