Viral: ಶುಲ್ಕ ಪಾವತಿಸಲು ಓದುವ ವಯಸ್ಸಿನಲ್ಲೇ ಸ್ಟಾರ್ಟ್ ಅಪ್ ಕಟ್ಟಿದೆ; ಯಶಸ್ಸಿನ ಹಾದಿ ಬಿಚ್ಚಿಟ್ಟ ಕಾಲೇಜು ವಿದ್ಯಾರ್ಥಿ
ಬದುಕು ಹೊಡೆತಗಳ ಮೇಲೆ ಹೊಡೆತಗಳನ್ನು ತಂದೊಡ್ಡುತ್ತದೆ. ಕೆಲವರಿಗೆ ಸಣ್ಣ ವಯಸ್ಸಿನಲ್ಲಿಯೇ ಜವಾಬ್ದಾರಿಗಳು ಹೆಗಲೇರುತ್ತದೆ. ಇದೀಗ ಬೆಂಗಳೂರಿನ ಕಾಲೇಜು ವಿದ್ಯಾರ್ಥಿನಿಯೊಬ್ಬ ಕಷ್ಟಗಳನ್ನು ಎದುರಿಸಿ, ಪರಿಶ್ರಮದ ಮೂಲಕ ಬದುಕು ಕಟ್ಟಿಕೊಂಡಿದ್ದಾನೆ. ತನ್ನ ಜೀವನದ ಯಶಸ್ಸಿನ ಕಥೆಯನ್ನು ಬಿಚ್ಚಿಟ್ಟಿದ್ದು, ಜೀವನದಲ್ಲಿ ಮುಂದೆ ಬರಲು ಏನು ಮುಖ್ಯ ಎಂದು ವಿವರಿಸಿದ್ದಾನೆ. ಕುರಿತಾದ ಸ್ಟೋರಿ ಇಲ್ಲಿದೆ.

ಬೆಂಗಳೂರು, ನವೆಂಬರ್ 13: ಬದುಕೇ ಹಾಗೆ, ಕಷ್ಟಗಳು ಒಂದರ ಹಿಂದೆ ಒಂದರಂತೆ ಬರುತ್ತದೆ. ಹೀಗಾದಾಗ ಮುಂದೇನು ಎನ್ನುವುದು ತಿಳಿಯದಂತಾಗುತ್ತದೆ. ಆದರೆ ಎಲ್ಲವನ್ನು ಮೆಚ್ಚಿನಿಂತು ಬದುಕು ಕಟ್ಟಿಕೊಳ್ಳುವುದು ಧೈರ್ಯ ಎಲ್ಲರೂ ಮಾಡುವುದು ಕಡಿಮಮೆಯೇ. ಬೆಂಗಳೂರಿನ (Bengaluru) ಕಾಲೇಜು ವಿದ್ಯಾರ್ಥಿನಿಯೊಬ್ಬ ಹದಿನೇಳನೇ ವಯಸ್ಸಿಗೆ ತಂದೆಯನ್ನು ಕಳೆದುಕೊಂಡಿದ್ದಾನೆ. ಕಾಲೇಜು ಶುಲ್ಕ ಪಾವತಿಸಲು ಸ್ಟಾರ್ಟ್ ಅಪ್ (Startup) ಆರಂಭಿಸಿ ಯಶಸ್ಸನ್ನು ಕಂಡಿದ್ದಾನೆ. ಈ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದು, ಪ್ರಾರಂಭದ ದಿನಗಳು ಹೇಗಿದ್ದವು ಎನ್ನುವುದನ್ನು ವಿವರಿಸಿದ್ದಾನೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಬಳಕೆದಾರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
@Sidhanth_here ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿ ಕೊಳ್ಳಲಾದ ಪೋಸ್ಟ್ ಬೆಂಗಳೂರಿನ ಕಾಲೇಜು ವಿದ್ಯಾರ್ಥಿ ಹೀಗೆ ಬರೆದುಕೊಂಡಿದ್ದಾನೆ. ನನ್ನ ತಂದೆಯನ್ನು 17 ನೇ ವಯಸ್ಸಿನಲ್ಲಿ ಕಳೆದುಕೊಂಡೆ. ಕುಟುಂಬದ ಆದಾಯ ತಿಂಗಳಿಗೆ 30 ಸಾವಿರ ರೂ.ಗಳಿಗೆ ಇಳಿದಿದೆ. ಬೆಂಗಳೂರನಂತಹ ನಗರದಲ್ಲಿ ಮೂರು ಜನರಿಗೆ ಈ ಆದಾಯವು ಸಾಕಾಗುವುದೇ ಇಲ್ಲ. ಕಾಲೇಜಿನಲ್ಲಿ ಓದುತ್ತಿರುವಾಗಲೇ ಕುಟುಂಬದ ಆರ್ಥಿಕ ಜವಾಬ್ದಾರಿಯನ್ನು ವಹಿಸಿಕೊಂಡೆ. ಕಷ್ಟಪಟ್ಟು ಅಧ್ಯಯನ ಮಾಡಿ ಐಐಟಿಗೆ ಸೇರಿದೆ. ಭಾವನಾತ್ಮಕ ಹಾಗೂ ಆರ್ಥಿಕ ಸಮಸ್ಯೆಗಳು ನನ್ನ ವೈಫಲ್ಯಕ್ಕೆ ಕಾರಣವಾಗಲು ಬಿಡಲಿಲ್ಲ. ಕಾಲೇಜಿನಲ್ಲಿದ್ದಾಗ ಶೈಕ್ಷಣಿಕ ಕ್ಷೇತ್ರದಲ್ಲಿ ಮಾತ್ರ ಗಮನ ಕೊಡದೇ ಮೊದಲ ಸ್ಟಾರ್ಟ್‌ಅಪ್ ಅನ್ನು ಸಹ ಪ್ರಾರಂಭಿಸಿದೆ. ಇದು ಅಲ್ಪಕಾಲಿಕವಾಗಿದ್ದರೂ, 250+ ಗೇಮರ್‌ಗಳು ಈ ಪ್ಲಾಟ್ ಫಾರ್ಮ್ ಬಳಸಿದರು, ಆ ಬಳಿಕ ಖಾಸಗಿ ಷೇರುಗಳತ್ತ ಗಮನ ಹರಿಸಿದೆ. ಕ್ರಿಪ್ಟೋ ಮತ್ತು ಡಿಫೈ ಬಗ್ಗೆ ಕಲಿತೆ. ಕ್ರಿಪ್ಟೋ ಜಾಗದಲ್ಲಿ ಬಹು ಸ್ಟಾರ್ಟ್‌ಅಪ್‌ಗಳೊಂದಿಗೆ ಕೆಲಸ ಮಾಡಿದೆ. ಮಾರ್ಕೆಟಿಂಗ್ ಏಜೆನ್ಸಿಯನ್ನು ಪ್ರಯತ್ನಿಸಿದೆ. ಇದರಿಂದ ತಿಂಗಳಿಗೆ 5 ಲಕ್ಷ ರೂ ಆದಾಯಕ್ಕೆ ಗಳಿಸುವಂತಾಯಿತು ಎಂದಿದ್ದಾನೆ.
ವೈರಲ್ ಪೋಸ್ಟ್ ಇಲ್ಲಿದೆ ನೋಡಿ
Be Me>
> Lost my dad at 17 > Family Income dropped to ₹30k per month; in a city like blr for 3 people > Took over family’s finance while preparing for college > Studied hard and got into IIT, didn’t let emotional and financial problems be a reason for my failure > Started… pic.twitter.com/HpuzoH3Wvd
— WhySid (@Sidhanth_here) November 12, 2025
ಒಂದು ವರ್ಷದಲ್ಲಿ 4 ದೇಶಗಳಿಗೆ ಪ್ರಯಾಣಿಸಿದೆ. ಕಾಲೇಜು ಮುಗಿಸುವ ಮೊದಲು ವ್ಯಾಪಾರದಿಂದ ನನ್ನ ಕಾಲೇಜು ಶುಲ್ಕವನ್ನು ಪಾವತಿಸಿದೆ. ಆದರೆ ಈಗ ಬಂಡವಾಳಶಾಹಿ, ಮುಕ್ತ ಮಾರುಕಟ್ಟೆಗಳು, ಸಮುದಾಯ ಮತ್ತು ಸಮಾಜದ ಬಗ್ಗೆ ನನ್ನ ಕಲ್ಪನೆಗಳನ್ನು ನೈಜ ಜಗತ್ತಿನಲ್ಲಿ ಮುದ್ರಿಸಲು ಮತ್ತು ಹೆಚ್ಚಿನ ಜೀವನದ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಿದ್ದೇನೆ. ನಾನು ಈಗ ಕೆಲಸ ಮಾಡುತ್ತಿರುವ ಎಲ್ಲವೂ ನನ್ನ ವಿಶ್ವ ದೃಷ್ಟಿಕೋನಕ್ಕೆ ಹೊಂದಿಕೆಯಾಗುತ್ತದೆ. ಆದರೆ ನಾನು ಇನ್ನೂ ಕಾಲೇಜಿನಲ್ಲಿದ್ದೇನೆ. ಮೇ 2026 ರಲ್ಲಿ ಪಾಸ್ ಆಗುತ್ತೇನೆ; ಎಲ್ಲಾ ಸಾಧ್ಯತೆಗಳು ನಿಮಗೆ ವಿರುದ್ಧವಾಗಿದ್ದರೂ ನೀವು ಪ್ರತಿದಿನ ಎಚ್ಚರಗೊಂಡು ಪ್ರಗತಿ ಸಾಧಿಸಲು ಆರಿಸಿಕೊಂಡರೆ ಜೀವನವು ಬದಲಾಗುತ್ತದೆ ಎಂದು ಬರೆದುಕೊಂಡಿದ್ದಾನೆ.
ಇದನ್ನೂ ಓದಿ:ಕಾರ್ಪೋರೇಟ್ ಕೆಲಸ ತೊರೆದು ಹೋಮ್ ಸ್ಟೇ ಪ್ರಾರಂಭಿಸಿ ಯಶಸ್ಸು ಕಂಡ ಯುವಕ
ನವೆಂಬರ್ 12 ರಂದು ಹಂಚಿಕೊಂಡ ಈ ಪೋಸ್ಟ್ ಇದುವರೆಗೆ ಮೂರೂವರೆ ಲಕ್ಷಕ್ಕೂ ಅಧಿಕ ವೀಕ್ಷಣೆ ಗಳನ್ನು ಪಡೆದು ಕೊಂಡಿವೆ. ಒಬ್ಬ ಬಳಕೆದಾರ, ನೀವು ಯಾವ ಮಾರ್ಕೆಟಿಂಗ್ ಕ್ಷೇತ್ರಕ್ಕೆ ಪ್ರವೇಶಿಸಿದ್ದೀರಿ ಎನ್ನುವ ಕುತೂಹಲವಿದೆ ಎಂದು ಕೇಳಿದ್ದಾರೆ. ಇನ್ನೊಬ್ಬರು, ನೀವು ವ್ಯಾಪಾರದಿಂದ 15-20 ಲಕ್ಷಗಳಿಗಿಂತ ಹೆಚ್ಚು ಗಳಿಸಿದ್ದೀರಾ? ಎಂದು ಪ್ರಶ್ನೆ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರ, ಅದ್ಭುತ ಕೆಲಸ. ಇದು ಆರಂಭವಷ್ಟೇ. ಈ ಉತ್ಸಾಹ ಮತ್ತು ಉತ್ಸಾಹವನ್ನು ಕಡಿಮೆ ಮಾಡಬೇಡಿ. ಅತೃಪ್ತರಾಗಬೇಡಿ. ಹೆಚ್ಚು ಶ್ರಮವಹಿಸಿ ಕೆಲಸ ಮಾಡಿ. ಯಶಸ್ಸು ಖಂಡಿತ ಬರುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:24 pm, Thu, 13 November 25




