AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಿಂಗಳಿಗೆ 7 ಲಕ್ಷ ರೂ. ಸಂಬಳದ ಕೆಲಸ ಬಿಟ್ಟ ಬೆಂಗಳೂರಿನ ಗೂಗಲ್ ಉದ್ಯೋಗಿ, ಇಲ್ಲಿದೆ ಕಾರಣ

ಯುಎಇ ಕಂಪನಿಯಲ್ಲಿ ತಿಂಗಳಿಗೆ ಏಳು ಲಕ್ಷಕ್ಕೂ ಹೆಚ್ಚು ಸಂಬಳ ಪಡೆಯುತ್ತಿದ್ದ ವ್ಯಕ್ತಿ, ಆ ಕೆಲಸವನ್ನು ಬಿಟ್ಟು ಭಾರತಕ್ಕೆ ಬರಲು ಕಾರಣವೇನು ಎಂಬ ಬಗ್ಗೆ ಸೋಶಿಯಲ್​​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕೆಲಸದ ಒತ್ತಡ, ಕಳಪೆ ಕೆಲಸದ ವಾತಾವರಣ ಮತ್ತು ವ್ಯವಸ್ಥಾಪಕರ ವರ್ತನೆಯಿಂದ ಬೇಸತ್ತು, ತಮ್ಮ ಕನಸಿನ ಉದ್ಯೋಗವನ್ನು ಬಿಟ್ಟು ಬಂದಿದ್ದಾರೆ. ಈ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ನೆಟ್ಟಿಗರು ಅವರ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೀಗ ಬೆಂಗಳೂರಿನಲ್ಲಿ ಗೂಗಲ್‌ನಲ್ಲಿ ಯುಎಕ್ಸ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದಾರೆ.

ತಿಂಗಳಿಗೆ  7 ಲಕ್ಷ ರೂ. ಸಂಬಳದ ಕೆಲಸ ಬಿಟ್ಟ ಬೆಂಗಳೂರಿನ ಗೂಗಲ್ ಉದ್ಯೋಗಿ, ಇಲ್ಲಿದೆ ಕಾರಣ
ವೈರಲ್​​ ಪೋಸ್ಟ್​
ಅಕ್ಷಯ್​ ಪಲ್ಲಮಜಲು​​
|

Updated on: Nov 13, 2025 | 1:55 PM

Share

ಯುಎಇಯಲ್ಲಿ ತಿಂಗಳಿಗೆ ಏಳು ಲಕ್ಷಕ್ಕೂ ಹೆಚ್ಚು ಸಂಬಳ ಪಡೆಯುತ್ತಿದ್ದ ಬೆಂಗಳೂರಿನ ಗೂಗಲ್ (Google employee) ಉದ್ಯೋಗಿಯೊಬ್ಬರು  ಅಲ್ಲಿ ಕೆಲಸ ತ್ಯಜಿಸಿ ಬಂದಿರುವ ಬಗ್ಗೆ ಸೋಶಿಯಲ್​​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಭಾರೀ ಚರ್ಚೆಗಳು ಕೂಡ ನಡೆದಿದೆ. ಅಷ್ಟಕ್ಕೂ ಈ ವ್ಯಕ್ತಿ ದೊಡ್ಡ ಸಂಬಳದ ಕೆಲಸ ಬಿಟ್ಟು ಬರಲು ಏನು ಕಾರಣವಿರಬಹುದು? ಇದಕ್ಕೆ ಅವರೇ ಉತ್ತರ ನೀಡಿದ್ದಾರೆ. ಇನ್ಸ್ಟಾಗ್ರಾಮ್​​ ಪೋಸ್ಟ್​​​ನಲ್ಲಿ ಈ ಬಗ್ಗೆ ಹಂಚಿಕೊಂಡಿದ್ದಾರೆ. ಕೆಲಸ ಸ್ಥಳದಲ್ಲಾದ ಘಟನೆಗಳನ್ನು ಅಡ್ವಿನ್ ನೆಟ್ಟೊ ತಮ್ಮ ಇನ್ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ನಟ್ಟಿಗರು ಕೂಡ ಅವರ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅಡ್ವಿನ್ ನೆಟ್ಟೊ ಇನ್ಸ್ಟಾಗ್ರಾಮ್​​ ಖಾತೆಯಲ್ಲಿ ಹೀಗೆ ಬರೆದುಕೊಂಡಿದ್ದಾರೆ. “ಯುಎಇಗೆ ಹೋಗುವುದು ನನ್ನ ಕನಸಾಗಿತ್ತು. ಕೊನೆಗೂ ನನ್ನ ಕನಸು ನನಸಾಯಿತು. ಯುಎಐಗೆ ಬಂದ್ಮೇಲೆ ಗೊತ್ತಾಯಿತು, ಈ ದೇಶದಲ್ಲಿ ಹೊಂದಿಕೊಳ್ಳಲು ಸಾಧ್ಯವಿಲ್ಲ ಎಂದು. ಮೂರು ತಿಂಗಳಿನಲ್ಲಿ ಎಲ್ಲವೂ ತಿಳಿಯಿತು. ಇಲ್ಲಿನ ಕೆಲಸದ ಒತ್ತಡ, ತಂತ್ರಜ್ಞಾನ ಇಲ್ಲದೆ ಇಲ್ಲಿ ಯಾವುದೂ ನಡೆಯುವುದಿಲ್ಲ. ಇಲ್ಲಿ ಮ್ಯಾನೇಜರ್​​​ ನಮ್ಮನ್ನು ನಡೆಸಿಕೊಳ್ಳುವ ರೀತಿ, ಎಲ್ಲವೂ ಹಿಂಸೆಯಾಗಿತ್ತು. ಕೊನೆಗೆ ಎಲ್ಲವನ್ನು ಕೂತು ಯೋಚನೆ ಮಾಡಿ, ಅರಿತುಕೊಂಡು ಅಲ್ಲಿಂದ ಹೊರಟೆ, ಆದರೆ ಒಂದು ಮಾತ್ರ ಯುಎಇ ಬಗ್ಗೆ ಹೇಳಲೇಬೇಕು. ಇದೊಂದು ಅದ್ಭುತ ಸ್ಥಳ, ಹೆಚ್ಚು ಮಹತ್ವಾಕಾಂಕ್ಷೆ, ಸುರಕ್ಷತೆ ಮತ್ತು ಅವಕಾಶಗಳಿಂದ ತುಂಬಿರುವ ದೇಶ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಾನು ಅಲ್ಲಿ ಅತ್ಯುತ್ತಮ ಆಹಾರಗಳ ಸೇವನೆ ಮಾಡಿದ್ದೇನೆ” ಎಂದು ಹೇಳಿದ್ದಾರೆ.

ವೈರಲ್​ ಪೋಸ್ಟ್​​ ಇಲ್ಲಿದೆ ನೋಡಿ:

ನೆಟ್ಟಿಗರು ಪ್ರತಿಕ್ರಿಯೆ ಏನಿತು ?

ಒಬ್ಬ ನೆಟ್ಟಿಗ, ನಾನು ಇದನ್ನು ಒಪ್ಪುತ್ತೇನೆ. ಯಾಕೆಂದರೆ ಅಬುಧಾಬಿಯಲ್ಲಿ ನಾನು ಕೂಡ ಕೆಲಸ ಮಾಡಿದ್ದೇನೆ. 7 ರಿಂದ ರಾತ್ರಿ 8 ರವರೆಗೆ ಕೆಲಸ, 3 ಗಂಟೆಗಳ ಊಟದ ವಿರಾಮ, ವಾರಕ್ಕೆ 6 ದಿನ ಕೆಲಸ, ಆದರೆ ಅಲ್ಲಿರುವ ಕೆಲಸದ ವ್ಯವಸ್ಥೆಗಳು ತುಂಬಾ ಹಿಂಸೆಯಾಗಿರುತ್ತದೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ಅಲ್ಲಿನ ಕೆಲಸದ ಸಂಸ್ಕೃತಿ ವಿಭಿನ್ನವಾಗಿರುತ್ತದೆ ಎಂದು ಹೇಳಿದ್ದಾರೆ, ಮತ್ತೊಬ್ಬ ನೆಟ್ಟಿಗ ಹಣ ಅವಶ್ಯಕತೆಗಾಗಿ ವಿದೇಶಕ್ಕೆ ಹೋಗುತ್ತೇವೆ. ಆದರೆ ಅಲ್ಲಿ ಪಡುವ ಕಷ್ಟ ಯಾರಿಗೂ ಬೇಡ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಈ ರೈತ 62 ವರ್ಷದಲ್ಲಿ ಒಮ್ಮೆಯೂ ನಿದ್ದೆ ಮಾಡಿಲ್ಲ, ಇದು ವಿಜ್ಞಾನ ಲೋಕಕ್ಕೆ ಅಚ್ಚರಿ

ಅಡ್ವಿನ್ ನೆಟ್ಟೊ ಯಾರು?

ಅಡ್ವಿನ್ ನೆಟ್ಟೊ 2007ರಲ್ಲಿ ಮಹಾತ್ಮ ಗಾಂಧಿ ವಿಶ್ವವಿದ್ಯಾಲಯದಿಂದ ಅನಿಮೇಷನ್ ಮತ್ತು ಗ್ರಾಫಿಕ್ ವಿಭಾಗ ಪದವಿಯನ್ನು ಪಡೆದು, 2008ರಲ್ಲಿ ವೆಬ್ ಡಿಸೈನರ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. 2019ರಲ್ಲಿ ಅಬುಧಾಬಿ ಮೂಲದ ಕಂಪನಿಗೆ ಸೇರುವ ಮೊದಲು ವಿವಿಧ ಕಂಪನಿಗಳಲ್ಲಿ ಕೆಲಸ ಮಾಡಿದ್ದಾರೆ. ಮುಂಬೈ ಮೂಲದ ಕಂಪನಿಯೊಂದರಲ್ಲಿ ಕೆಲಸ ಮಾಡಿದ ನಂತರ ಅವರಿಗೆ ಜರ್ಮನ್​​​​ನಲ್ಲಿ ಒಳ್ಳೆಯ ಕೆಲಸದ ಆಫರ್​​​​ ಬಂತು. ಸ್ವಲ್ಪ ಸಮಯ ಅಲ್ಲಿ ಕೆಲಸ ಮಾಡಿದ್ರು, ಇದೀಗ ಗೂಗಲ್‌ನ ಬೆಂಗಳೂರು ಕ್ಯಾಂಪಸ್‌ನಲ್ಲಿ ಯುಎಕ್ಸ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ