ಪಾರ್ಕ್ನಲ್ಲಿ ಲವರ್ಸ್ ಏಕಾಂತದಲ್ಲಿರಬೇಕಾದರೆ ಶಾಸಕರೊಬ್ಬರು ಈ ಪಾರ್ಕ್ಗೆ ದಾಳಿ ಮಾಡಿದ್ದಾರೆ, ಅಲ್ಲಿದ್ದ ಜೋಡಿಗಳನ್ನು ಪಾರ್ಕ್ನಿಂದ ಹೊರಗೆ ಹೋಗುವಂತೆ ಹೇಳಿದ್ದಾರೆ. ಇವರ ಈ ಕ್ರಮಕ್ಕೆ ರೋಚಿಗೆದ್ದು ಪ್ರೇಮಿಯೊಬ್ಬ OYO ರೂಮ್ಗಳನ್ನು ಮುಚ್ಚಿದೆ. ನೀವೇ ನಮಗೆ OYO ರೂಮ್ ವ್ವವಸ್ಥೆ ಮಾಡಿ ಎಂದು ಹೇಳಿದ್ದಾರೆ, ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಛತ್ತೀಸ್ಗಢದ ಶಾಸಕ ರಿಕೇಶ್ ಸೇನ್ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಈ ವಿಡಿಯೋದಲ್ಲಿ ಶಾಸಕರು ಕಾರಿನಲ್ಲಿ ಬಂದು ಪಾರ್ಕ್ ಬಳಿ ಇಳಿಯುತ್ತಾರೆ. ತಮ್ಮ ಸಹಾಯಕರಲ್ಲಿ ಎಲ್ಲವನ್ನು ವಿಡಿಯೋ ಮಾಡಿಕೊಳ್ಳುವಂತೆ ಹೇಳುತ್ತಾರೆ. ಶಾಸಕರು ಪ್ರೇಮಿಗಳ ಬಳಿ ಹೋಗಿ, ಪಾರ್ಕ್ನಿಂದ ಹೊರಗೆ ಹೋಗುವಂತೆ ಹೇಳುತ್ತಾರೆ. ಆದರೆ ಇವರ ಈ ಕ್ರಮವನ್ನು ಯುವಕನೊಬ್ಬ ಪ್ರಶ್ನೆ ಮಾಡುತ್ತಾರೆ. ನಾವು ಏಲ್ಲಿಗೆ ? ಹೋಗಬೇಕು. ಈಗಾಗಲೇ ನೀವು OYO ಮುಚ್ಚಿಸಿದ್ದೀರಾ? ನಮಗೆ OYO ವ್ಯವಸ್ಥೆ ಮಾಡಿ ಎಂದು ಕೇಳಿದ್ದಾರೆ. ಇದಕ್ಕೆ ಕೋಪಗೊಂಡ ಶಾಸಕರು, OYO ಬದಲು ನಿಮ್ಮ ಮನೆಯಲ್ಲೇ ಟೈಮ್ ಪಾಸ್ ಮಾಡಿ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಎಂಥಾ ಕಾಲ ಬಂತು ಗುರು ಫೋನ್ ಕಾಲಿಂಗ್ ಮೂಲಕ ದೇವರಿಗೆ ಪ್ರಾರ್ಥನೆ
ಶಾಸಕರು ಭಿಲಾಯಿ ನಗರದಲ್ಲಿರುವ ಈ ಪಾರ್ಕ್ನ ಅಕ್ಕಪಕ್ಕದ ಜನರು ಲವರ್ಸ್ಗಳು ಈ ಪಾರ್ಕ್ಗೆ ಭೇಟಿ ನೀಡುವ ಕಾರಣ ನಮಗೆ ತೊಂದರೆ ಆಗುತ್ತಿದೆ ಎಂದು ಶಾಸಕರಿಗೆ ದೂರು ನೀಡಿದ್ದಾರೆ. ಹಾಗಾಗಿ ಶಾಸಕರು ಈ ಪಾರ್ಕ್ಗೆ ಭೇಟಿ ನೀಡಿದ್ದಾರೆ. ಈ ಹಿಂದೆ ಇದೆ ಶಾಸಕರು OYO ಹೋಟೆಲ್ ಮೇಲೆ ದಾಳಿ ಮಾಡಿದ್ದರು. ನಂತರ ಎರಡು ಹೋಟೆಲ್ಗಳನ್ನು ಮುಚ್ಚಲಾಗಿತ್ತು.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ