AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಎಂಥಾ ಕಾಲ ಬಂತು ಗುರು ಫೋನ್ ಕಾಲಿಂಗ್ ಮೂಲಕ ದೇವರಿಗೆ ಪ್ರಾರ್ಥನೆ

ಸ್ಮಾರ್ಟ್ ಫೋನ್ ಒಂದಿದ್ದರೆ ಜಗತ್ತಿನ ಎಲ್ಲೋ ಒಂದು ಮೂಲೆಯಲ್ಲಿ ಯಾವುದಾದರೂ ಘಟನೆ ನಡೆದರೆ ಕ್ಷಣಾರ್ಧದಲ್ಲಿ ಅದನ್ನು ನಾವು ವಿಡಿಯೋ ಸಮೇತ ನೋಡಬಹುದು. ಅಷ್ಟೇ ಯಾಕೆ ಮೊಬೈಲ್ ಒಂದಿದ್ದರೆ ನೀವು ಜಗತ್ತಿನ ಯಾವ ಮೂಲೆಯಿಂದ ಬೇಕಾದರೂ ಫೋನ್ ಕಾಲ್ ಮುಖಾಂತರ  ದೇವರಿಗೆ ಪ್ರಾರ್ಥನೆಯನ್ನೂ ಕೂಡಾ ಸಲ್ಲಿಸಬಹುದು ಎಂಬುದನ್ನು ಇಲ್ಲೊಬ್ಬರು ಮಹಿಳೆ ತೋರಿಸಿಕೊಟ್ಟಿದ್ದಾರೆ.  ಈ ಕುರಿತ ವಿಡಿಯೋವೊಂದು ಇದೀಗ ವೈರಲ್ ಆಗಿದ್ದು, ದೇವ್ರೇ ಎಂಥಾ ಕಾಲ ಬಂತಪ್ಪಾ ಎಂದು ನೆಟ್ಟಿಗರು ಶಾಕ್ ಆಗಿದ್ದಾರೆ.

Viral Video: ಎಂಥಾ ಕಾಲ ಬಂತು ಗುರು ಫೋನ್ ಕಾಲಿಂಗ್ ಮೂಲಕ ದೇವರಿಗೆ ಪ್ರಾರ್ಥನೆ
ವೈರಲ್​​ ವಿಡಿಯೋ
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​|

Updated on:Apr 23, 2024 | 12:56 PM

Share

ಆಧುನಿಕ ತಂತ್ರಜ್ಞಾನದ ಈ ಯುಗದಲ್ಲಿ  ವ್ಯಾಪಾರ, ವ್ಯವಹಾರದಿಂದ ಹಿಡಿದು ಎಲ್ಲವೂ ಆನ್ ಲೈನ್ ಆಗುತ್ತಿದೆ. ಇಂಟರ್ ನೆಟ್ ಒಂದಿದ್ದರೆ ಸಾಕು ಮದುವೆಯೂ ಆನ್ಲೈನ್ ಅಲ್ಲಿಯೇ ನಡೆದು ಹೋಗುತ್ತದೆ. ಇದಕ್ಕೆ ಸಾಕ್ಷಿಯೆಂಬಂತೆ ವಿಡಿಯೋ ಕಾಲ್ ಮೂಲಕ ನೆರವೇರಿದ ಮದುವೆ, ನಿಶ್ಚಿತಾರ್ಥ ಸುದ್ದಿಗಳ ಬಗ್ಗೆ ನೀವು ಕೇಳಿರುತ್ತೀರಿ ಅಲ್ವಾ. ಇದೀಗ ಇಲ್ಲೊಬ್ಬರು ಮಹಿಳೆ ಮೊಬೈಲ್ ಒಂದಿದ್ದರೆ ಸಾಕು ನೀವು ಜಗತ್ತಿನ ಯಾವ ಮೂಲೆಯಲ್ಲಿದ್ದರೂ ದೇವರಿಗೆ ಫೋನ್ ಕಾಲ್ ಮೂಲಕ ಪ್ರಾರ್ಥನೆಯನ್ನು ಸಲ್ಲಿಸಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಈ ಕುರಿತ ಫನ್ನಿ ವಿಡಿಯೋವೊಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್  ಆಗುತ್ತಿದೆ.

ಈ ವೈರಲ್ ವಿಡಿಯೋವನ್ನು ನಮ್ಮ ಕಲಬುರ್ಗಿ ಟ್ರೋಲ್ಸ್ (@namma_kalaburgi_trolls) ಎಂಬ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಎಂಥಾ ಕಾಲ ಬಂತು ಗುರು” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ವೈರಲ್ ವಿಡಿಯೋದಲ್ಲಿ ಸಾಯಿಬಾಬಾ ದೇವಾಲಯಕ್ಕೆ ಬಂದಂತಹ ಮಹಿಳೆಯೊಬ್ಬರು, ವಿದೇಶದಲ್ಲಿರುವ ತಮ್ಮ ಸಂಬಂಧಿಕರಿಗೊಬ್ಬರಿಗೆ ಫೋನ್ ಮಾಡಿ ಬಳಿಕ ಆ ಮೊಬೈಲ್ ಅನ್ನು ದೇವರ ಮೂರ್ತಿಯ ಬಳಿ ಇಟ್ಟು ಪ್ರಾರ್ಥನೆ ಸಲ್ಲಿಸು ಎಂದು ಹೇಳುವ ದೃಶ್ಯವನ್ನು ಕಾಣಬಹುದು. ಮತ್ತು ಫೋನ್ ಕಾಲ್ ಅಲ್ಲಿ ಇರುವ ವ್ಯಕ್ತಿ ಕಾಲ್ ಮುಖಾಂತರವೇ ದೇವರಿಗೆ ಪ್ರಾರ್ಥನೆಯನ್ನು ಸಲ್ಲಿಸಿ, ತಮ್ಮ ಇಷ್ಟಾರ್ಥಗಳನ್ನು ಬೇಡಿಕೊಂಡಿದ್ದಾರೆ.

ಇದನ್ನೂ ಓದಿ:  ಫ್ರೀ ಟಿಕೆಟ್​​ ಹಾರ ಹಾಕಿ ಸಿಎಂ ಸಿದ್ದರಾಮಯ್ಯಗೆ ಧನ್ಯವಾದ ತಿಳಿಸಿದ ವಿದ್ಯಾರ್ಥಿನಿ

ವೈರಲ್​​​ ವಿಡಿಯೋ ಇಲ್ಲಿದೆ ನೋಡಿ: ಎರಡು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 2 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಜೊತೆಗೆ ಜೀಸಸ್ ಮತ್ತು ಅಲ್ಲಾಹನಿಗೂ ಕಾನ್ಫರೆನ್ಸ್ ಕಾಲ್ ಹಾಕಿ ಮೇಡಂʼ ಎಂದು ತಮಾಷೆ ಮಾಡಿದ್ದಾರೆ. ಇನ್ನೂ ಅನೇಕರು ಈ ದೃಶ್ಯವನ್ನು ಕಂಡು ಅಯ್ಯೋ ದೇವ್ರೆ ಎಂಥಾ ಕಾಲ ಬಂತಪ್ಪʼ ಎಂದು ಆಶ್ಚರ್ಯಪಟ್ಟಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:41 pm, Tue, 23 April 24