AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾದಿನಿ ಮದುವೆಗೆ ಕರೆಯಲಿಲ್ಲ ಎಂದು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ನಿವೃತ್ತ ಯೋಧ

ಮದುವೆ ಎಂದ ಮೇಲೆ ಕುಟುಂಬದವರೆಲ್ಲರೂ ಜತೆಗಿರುತ್ತಾರೆ, ಹಾಸ್ಯ, ನಗು, ಹಾಡು ಇವೆಲ್ಲವೂ ಸಾಮಾನ್ಯ. ಮದುವೆ ಎಂದ ಮೇಲೆ ಕೆಲವರನ್ನು ಕರೆಯುವುದು, ಕೆಲವರನ್ನು ಕರೆಯದೇ ಇರುವುದು ಸಾಮಾನ್ಯ ಆದರೆ. ಮದುವೆಗೆ ಕರೆದಿಲ್ಲ ಎಂದು ಯಾರಾದ್ರೂ ನೇಣುಹಾಕಿಕೊಳ್ತಾರಾ? ಆದರೆ ಅಂಥದಲ್ಲೇ ಘಟನೆಯೊಂದು ಉತ್ತರ ಪ್ರದೇಶದಲ್ಲಿ ನಡೆದಿದೆ.

ನಾದಿನಿ ಮದುವೆಗೆ ಕರೆಯಲಿಲ್ಲ ಎಂದು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ನಿವೃತ್ತ ಯೋಧ
ಮದುವೆ
ನಯನಾ ರಾಜೀವ್
|

Updated on: Apr 23, 2024 | 11:11 AM

Share

ಮದುವೆ(Marriage) ಎಂದ ಮೇಲೆ ಕುಟುಂಬದ ಎಲ್ಲರಲ್ಲೂ ಹರ್ಷ, ಉತ್ಸಾಹ ಜತೆಗೆ ಸುಸೂತ್ರವಾಗಿ ನಡೆಯಬೇಕೆಂದು ದೇವರಲ್ಲಿ ಬೇಡಿಕೊಳ್ಳುತ್ತಾ ಎಂಥಾ ರಿಸ್ಕ್​ ಆದರೂ ತೆಗೆದುಕೊಳ್ಳಲು ತಯಾರಿರುತ್ತಾರೆ. ಮದುವೆಯಲ್ಲಿ ಸಾಮಾನ್ಯವಾಗಿ ಎಲ್ಲರನ್ನೂ ಆಹ್ವಾನಿಸಲು ಸಾಧ್ಯವಿಲ್ಲ, ತುಂಬಾ ಹತ್ತಿರದವರನ್ನು ಕರೆದು ಕೆಲವರನ್ನು ಕರೆಯದೇ ಬಿಡಬಹುದು. ಆದರೆ ಮದುವೆಗೆ ಕರೆದಿಲ್ಲ ಎಂದು ಯಾರಾದ್ರೂ ಸಾಯ್ತಾರಾ? ಆದರೆ ಉತ್ತರ ಪ್ರದೇಶದ ಲಕ್ನೋನಲ್ಲಿ ನಡೆದ ಘಟನೆ ಅಚ್ಚರಿ ಮೂಡಿಸಿದೆ.

ವ್ಯಕ್ತಿಯೊಬ್ಬ ತನ್ನ ನಾದಿನಿಯ ಮದುವೆಗೆ ತನ್ನನ್ನು ಆಹ್ವಾನಿಸಿಲ್ಲ ಎನ್ನುವ ಕಾರಣಕ್ಕೆ ನೇಣುಬಿಗಿಸುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಿವೃತ್ತ ಯೋಧರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತನ ಪತ್ನಿ ತನ್ನ ಸಹೋದರಿಯ ಮದುವೆಯಲ್ಲಿ ಪಾಲ್ಗೊಳ್ಳಲು ಹೋಗಿದ್ದರು, ಆದರೆ ಅವರು ತನ್ನನ್ನು ಆಹ್ವಾನಿಸಿಲ್ಲ ಎನ್ನುವ ಕಾರಣಕ್ಕೆ ಪ್ರಾಣ ಕಳೆದುಕೊಂಡಿದ್ದಾರೆ.

47 ವರ್ಷದ ಅನಿಲ್ ವರ್ಮಾ, ಹರ್ದೋಯ್ ಕಾಸಿಂಪುರ ನಿವಾಸಿಯಾಗಿದ್ದು, ಸೇನೆಯಿಂದ ನಿವೃತ್ತರಾಗಿದ್ದರು. ಅವರು ಪತ್ನಿ ವಿನೀತಾ, ಪುತ್ರರಾದ ಅನಿಕೇಶ್ ಮತ್ತು ಆರ್ಯನ್ ಅವರನ್ನು ಅಗಲಿದ್ದಾರೆ. ಎರಡು ದಿನಗಳ ಹಿಂದೆ ವಿನೀತಾ ತನ್ನ ಅಕ್ಕನ ಮದುವೆಗೆ ಮಕ್ಕಳೊಂದಿಗೆ ಪೋಷಕರ ಮನೆಗೆ ಹೋಗಿದ್ದಳು. ಮನೆಯಲ್ಲಿ ಅನಿಲ್ ಒಬ್ಬನೇ ಇದ್ದ.

ಮತ್ತಷ್ಟು ಓದಿ:  Telangana: ಮದುವೆ ಸಮಾರಂಭದಲ್ಲಿ ಡ್ಯಾನ್ಸ್​ ಮಾಡುತ್ತಿರುವಾಗ ಕುಸಿದು ಬಿದ್ದು ಯುವಕ ಸಾವು

ಶನಿವಾರ ರಾತ್ರಿ ವಿನೀತಾ ತನ್ನ ಪತಿಗೆ ಕರೆ ಮಾಡಿದ್ದಳು. ಫೋನ್ ರಿಸೀವ್ ಮಾಡದಿದ್ದಾಗ ವಿನೀತಾ ತನ್ನ ಗಂಡನ ಯೋಗಕ್ಷೇಮ ವಿಚಾರಿಸುವಂತೆ ಮನೆಯ ಮಾಲೀಕರನ್ನು ಕೇಳಿದ್ದಳು. ಇನ್ಸ್ ಪೆಕ್ಟರ್ ಪ್ರಕಾರ ಅನಿಲ್ ಶವವನ್ನು ಅವರೇ ಮೊದಲ ಬಾರಿಗೆ ಕಂಡಿದ್ದಾರೆ.

ಈ ಭಯಾನಕ ದೃಶ್ಯವನ್ನು ನೋಡಿದ ನಂತರ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಬಾಗಿಲು ಒಡೆದು ಶವವನ್ನು ಕುಣಿಕೆಯಿಂದ ಹೊರತೆಗೆದು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ಮೃತಪಟ್ಟಿದ್ದರು. ಸದ್ಯ ಪತ್ನಿ ಹಾಗೂ ಆಕೆಯ ಇಡೀ ಕುಟುಂಬ ಆಘಾತಕ್ಕೊಳಗಾಗಿದೆ. ಅತ್ತಿಗೆಯ ಮದುವೆಗೆ ಆಹ್ವಾನ ಬಂದಿಲ್ಲ ಎಂಬ ಕಾರಣಕ್ಕೆ ಮೃತರು ಮನನೊಂದಿದ್ದರು ಎಂದು ಹೇಳಲಾಗುತ್ತಿದೆ. ಸದ್ಯ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ