AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

100 ವರ್ಷಗಳ ಇತಿಹಾಸದಲ್ಲಿ ಮೊದಲ ಮಹಿಳಾ ಕುಲಪತಿ ಪಡೆದ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯ

Naima Khatoon: ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯ ಐತಿಹಾಸಿಕ ಹೆಜ್ಜೆ ಇಟ್ಟಿದೆ. ಪ್ರೊ.ನಯಿಮಾ ಖಾತೂನ್ ಅವರು ಮೊದಲ ಮಹಿಳಾ ಕುಲಪತಿಯಾಗಿ ನೇಮಕಗೊಂಡಿದ್ದಾರೆ. ನಯಿಮಾ ಖಾತೂನ್ ಅವರು AMU ಮಹಿಳಾ ಕಾಲೇಜಿನ ಪ್ರಸ್ತುತ ಪ್ರಾಂಶುಪಾಲರಾಗಿದ್ದಾರೆ ಮತ್ತು ಹಾಲಿ ಕುಲಪತಿ ಮೊಹಮ್ಮದ್ ಗುಲ್ರೆಜ್ ಅವರ ಪತ್ನಿಯಾಗಿದ್ದಾರೆ.

100 ವರ್ಷಗಳ ಇತಿಹಾಸದಲ್ಲಿ ಮೊದಲ ಮಹಿಳಾ ಕುಲಪತಿ ಪಡೆದ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯ
ನೈಮಾ ಖಾತೂನ್
ನಯನಾ ರಾಜೀವ್
|

Updated on:Apr 23, 2024 | 8:33 AM

Share

ನೂರು ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯ(Aligarh Muslim University )ಮಹಿಳಾ ಕುಲಪತಿಯನ್ನು ಪಡೆದಿದೆ. 100 ವರ್ಷಗಳಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸಿದ ಮೊದಲ ಮಹಿಳೆಯಾಗಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಅನುಮೋದನೆ ಪಡೆದ ನಂತರ ಶಿಕ್ಷಣ ಸಚಿವಾಲಯ ನೈಮಾ ಖಾತೂನ್(Naima Khatoon) ಅವರನ್ನು ನೇಮಕ ಮಾಡಿದೆ.

ಮಾದರಿ ನೀತಿ ಸಂಹಿತೆ (ಎಂಸಿಸಿ) ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಭಾರತೀಯ ಚುನಾವಣಾ ಆಯೋಗದಿಂದ (ಇಸಿಐ) ಅನುಮತಿಯನ್ನೂ ಕೋರಲಾಗಿದೆ ಎಂದು ಅವರು ಹೇಳಿದರು. ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ನೈಮಾ ಖಾತೂನ್ ಅವರನ್ನು ಐದು ವರ್ಷಗಳ ಅವಧಿಗೆ ಎಎಂಯು ಕುಲಪತಿಯಾಗಿ ನೇಮಿಸಲಾಗಿದೆ. ಎಎಂಯು ವಿಸಿ ನೇಮಕಕ್ಕೆ ಸಂಬಂಧಿಸಿದ ಪ್ರಸ್ತಾವನೆಗೆ ಎಂಸಿಸಿ ಕೋನದಿಂದ ಆಯೋಗಕ್ಕೆ ಯಾವುದೇ ಆಕ್ಷೇಪವಿಲ್ಲ ಎಂದು ಇಸಿಐ ಹೇಳಿದೆ.

AMU ನಿಂದ ಮನೋವಿಜ್ಞಾನದಲ್ಲಿ ಪಿಎಚ್‌ಡಿ ಪಡೆದ ನೈಮಾ ಖಾತೂನ್, 1988 ರಲ್ಲಿ ಅದೇ ವಿಭಾಗದಲ್ಲಿ ಉಪನ್ಯಾಸಕರಾಗಿ ನೇಮಕಗೊಂಡರು. 2006 ರಲ್ಲಿ ಅವರು ಪ್ರಾಧ್ಯಾಪಕರಾಗಿ ಬಡ್ತಿ ಪಡೆದರು. ಇದಾದ ಬಳಿಕ 2014ರಲ್ಲಿ ಮಹಿಳಾ ಕಾಲೇಜಿನ ಪ್ರಾಂಶುಪಾಲರಾಗಿ ನೇಮಕಗೊಂಡರು.

1875 ರಲ್ಲಿ ಸ್ಥಾಪಿಸಲಾದ ಮುಹಮ್ಮದನ್ ಆಂಗ್ಲೋ-ಓರಿಯಂಟಲ್ ಕಾಲೇಜ್ ಅನ್ನು 1920 ರಲ್ಲಿ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯ ಎಂದು ಮರುನಾಮಕರಣ ಮಾಡಲಾಯಿತು. 1920 ರಲ್ಲಿ, ಬೇಗಂ ಸುಲ್ತಾನ್ ಜಹಾನ್ ಅವರನ್ನು AMU ನ ಕುಲಪತಿಯಾಗಿ ನೇಮಿಸಲಾಯಿತು. ಬೇಗಂ ಸುಲ್ತಾನ್ ಜಹಾನ್ ಭೋಪಾಲ್ ರಾಜಮನೆತನಕ್ಕೆ ಸೇರಿದವರು.

ಇದರ ನಂತರ, ನೈಮಾಖಾತೂನ್ 100 ವರ್ಷಗಳ ಅವಧಿಯಲ್ಲಿ ಕುಲಪತಿಯಾಗಿ ನೇಮಕಗೊಂಡ ಮೊದಲ ಮಹಿಳೆಯಾಗಿದ್ದಾರೆ.

ಅಲಿಘಢ ಮುಸ್ಲಿಂ ವಿಶ್ವವಿದ್ಯಾಲಯವು ಭಾರತದ ಶಿಕ್ಷಣ ಜಗತ್ತಿನಲ್ಲಿ ತನ್ನದೇ ಆದ ಗುರುತನ್ನು ಹೊಂದಿದೆ. ಇದನ್ನು 24 ಮೇ 1857 ರಂದು ಸ್ಥಾಪಿಸಲಾಯಿತು. ಸ್ಥಾಪನೆಯ ಸಮಯದಲ್ಲಿ ಇದನ್ನು ಮುಸ್ಲಿಂ ಆಂಗ್ಲೋ ಓರಿಯಂಟಲ್ ಶಾಲೆ ಎಂದು ಕರೆಯಲಾಗುತ್ತಿತ್ತು. 1920 ರಲ್ಲಿ ಇದನ್ನು ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯವನ್ನಾಗಿ ಮಾಡಲಾಯಿತು. ಇದನ್ನು ಬ್ರಿಟಿಷರ ಆಳ್ವಿಕೆಯಲ್ಲಿ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಮಾದರಿಯಲ್ಲಿ ಸ್ಥಾಪಿಸಲಾಯಿತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 8:31 am, Tue, 23 April 24