Pini Village: ಈ ಗ್ರಾಮದಲ್ಲಿ ಮದುವೆಯಾದ ಒಂದು ವಾರದವರೆಗೆ ವಧುವಿಗೆ ಬಟ್ಟೆ ಧರಿಸಲು ಅವಕಾಶವಿಲ್ಲ!

ವಧುವಿನ ಜೊತೆಗೆ ವರನೂ ಕೂಡ ಕೆಲವು ನಿಯಮಗಳನ್ನು ಪಾಲಿಸಬೇಕು. ಮಹಿಳೆಯರು ಮದುವೆಯಾದ 5 ದಿನಗಳವರೆಗೆ ಯಾವುದೇ ಬಟ್ಟೆಯನ್ನು ಧರಿಸದೇ ಇರುವುದು ಒಂದೆಡೆಯಾದರೆ ಈ ಅವಧಿಯಲ್ಲಿ ಪುರುಷರು ಮದ್ಯಪಾನ ಮಾಡುವಂತಿಲ್ಲ. ಈ ಗ್ರಾಮ ಎಲ್ಲಿದೆ ಗೊತ್ತಾ? ಇಲ್ಲಿದೆ ವಿವರ

Pini Village: ಈ ಗ್ರಾಮದಲ್ಲಿ ಮದುವೆಯಾದ ಒಂದು ವಾರದವರೆಗೆ ವಧುವಿಗೆ ಬಟ್ಟೆ ಧರಿಸಲು ಅವಕಾಶವಿಲ್ಲ!

Updated on: Sep 20, 2024 | 5:13 PM

ಮದುವೆಗೆ ಸಂಬಂಧಿಸಿದ ಸಂಪ್ರದಾಯಗಳು ಭಾರತದ ಎಲ್ಲಾ ರಾಜ್ಯಗಳಲ್ಲಿ ಸಂಪೂರ್ಣವಾಗಿ ವಿಭಿನ್ನವಾಗಿವೆ. ಕೆಲವೆಡೆ ಮದುವೆಯ ನಂತರ ಬಟ್ಟೆ ಹರಿದು ಹಾಕುವ ಪದ್ಧತಿ ಇದ್ದರೆ, ಇನ್ನು ಕೆಲವೆಡೆ ವಧುವರರನ್ನು ಕೋಣೆಯಲ್ಲಿ ಕೂಡಿ ಹಾಕುವ ಪದ್ಧತಿ ಇದೆ. ಆದರೆ ಇಂದು ನಾವು ನಿಮಗೆ ಸಂಪೂರ್ಣವಾಗಿ ವಿಭಿನ್ನವಾದ ಸಂಪ್ರದಾಯದ ಬಗ್ಗೆ ಹೇಳಲಿದ್ದೇವೆ.

ಹಿಮಾಚಲ ಪ್ರದೇಶದ ಮಣಿಕರ್ಣ ಕಣಿವೆಯ ಪಿನಿ ಗ್ರಾಮದ ಜನರು ಮದುವೆಗೆ ಸಂಬಂಧಿಸಿದ ವಿಶ್ಟಿಷ್ಟ ಸಂಪ್ರದಾಯವನ್ನು ಅನುಸರಿಸುತ್ತಾರೆ. ಇಲ್ಲಿ ನವ ವಧು ಮದುವೆಯಾದ ಮೊದಲ ವಾರದಲ್ಲಿ ಯಾವುದೇ ಬಟ್ಟೆಯನ್ನು ಧರಿಸುವಂತಿಲ್ಲ. ವಧು ಈ ಅವಧಿಯಲ್ಲಿ ಉಣ್ಣೆಯಿಂದ ಮಾಡಿದ ಬೆಲ್ಟ್ಗಳನ್ನು ಮಾತ್ರ ಧರಿಸಬಹುದು.

ಇದನ್ನೂ ಓದಿ: WHO Report: ಈ ರಾಜ್ಯದಲ್ಲಿ ಅತೀ ಹೆಚ್ಚು ಕಾಂಡೋಮ್ ಬಳಸುತ್ತಾರಂತೆ, ಕರ್ನಾಟಕಕ್ಕೆ ಎಷ್ಟನೇ ಸ್ಥಾನ?

ಇದಲ್ಲದೇ ವರ ಕೂಡ ಕೆಲವು ನಿಯಮಗಳನ್ನು ಪಾಲಿಸಬೇಕು. ಮಹಿಳೆಯರು 5 ದಿನಗಳವರೆಗೆ ಯಾವುದೇ ಬಟ್ಟೆಯನ್ನು ಧರಿಸದೇ ಇರುವುದು ಒಂದೆಡೆಯಾದರೆ ಈ ಅವಧಿಯಲ್ಲಿ ಪುರುಷರು ಮದ್ಯಪಾನ ಮಾಡುವಂತಿಲ್ಲ. ವಧು-ವರರು ಈ ವಿಧಿಗಳನ್ನು ಅನುಸರಿಸಿದರೆ ಅವರಿಗೆ ದಾಂಪತ್ಯದಲ್ಲಿ ಅದೃಷ್ಟ ಬರುತ್ತದೆ ಎಂದು ನಂಬಲಾಗಿದೆ.

ಮತ್ತಷ್ಟು ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us