WHO Report: ಈ ರಾಜ್ಯದಲ್ಲಿ ಅತೀ ಹೆಚ್ಚು ಕಾಂಡೋಮ್ ಬಳಸುತ್ತಾರಂತೆ, ಕರ್ನಾಟಕಕ್ಕೆ ಎಷ್ಟನೇ ಸ್ಥಾನ?
ವಿಶ್ವ ಆರೋಗ್ಯ ಸಂಸ್ಥೆ ಇತ್ತೀಚೆಗೆ ಕಾಂಡೋಮ್ ಬಳಕೆಯ ವರದಿಯನ್ನು ಬಹಿರಂಗಪಡಿಸಿದ್ದು, ಇದರಲ್ಲಿ ಭಾರತದ ಯಾವ ರಾಜ್ಯಗಳಲ್ಲಿ ಕಾಂಡೋಮ್‌ಗಳನ್ನು ಹೆಚ್ಚು ಬಳಸಲಾಗುತ್ತದೆ ಎಂಬುದನ್ನು ಬಹಿರಂಗಪಡಿಸಿದೆ. ಈ ಪಟ್ಟಿಯಲ್ಲಿ ಕರ್ನಾಟಕ ಎಷ್ಟನೇ ಸ್ಥಾನದಲ್ಲಿದೆ ಗೊತ್ತಾ?
ವಿಶ್ವ ಆರೋಗ್ಯ ಸಂಸ್ಥೆ (WHO) ಇತ್ತೀಚಿಗಷ್ಟೇ ವರದಿಯೊಂದನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಕಾಂಡೋಮ್ ಇಲ್ಲದೆ ಲೈಂಗಿಕತೆಯನ್ನು ಹೊಂದುವ ಪ್ರವೃತ್ತಿಯು ಭಾರತದಲ್ಲಿ ಹೆಚ್ಚಾಗಿದೆ ಎಂದು ಬಹಿರಂಗಪಡಿಸಿದೆ. ಇದಲ್ಲದೇ ಯಾವ ರಾಜ್ಯಗಳಲ್ಲಿ ಕಾಂಡೋಮ್‌ಗಳನ್ನು ಹೆಚ್ಚು ಬಳಸುತ್ತಾರೆ ಎಂಬುದನ್ನು ಸಹ ಉಲ್ಲೇಖಿಸಲಾಗಿದೆ . ಹಿಂದಿನದಕ್ಕೆ ಹೋಲಿಸಿದರೆ ಈಗ ಲೈಂಗಿಕ ಸಂಭೋಗದ ಸಮಯದಲ್ಲಿ ಕಾಂಡೋಮ್‌ಗಳ ಬಳಕೆ ಕಡಿಮೆಯಾಗುತ್ತಿದೆ ಎಂದು ವರದಿಯಲ್ಲಿ ಹೇಳಲಾಗಿದೆ . ಆರೋಗ್ಯ ಇಲಾಖೆ ಜನರಿಗೆ ಕಾಂಡೋಮ್ ಬಳಕೆ ಬಗ್ಗೆ ನಿರಂತರವಾಗಿ ಅರಿವು ಮೂಡಿಸುತ್ತಿದ್ದರೂ ಅದರ ಬಳಕೆ ಕಡಿಮೆಯಾಗುತ್ತಿದೆ ಎಂದು ತಿಳಿದುಬಂದಿದೆ.
ಯಾವ ರಾಜ್ಯಗಳಲ್ಲಿ ಕಾಂಡೋಮ್‌ಗಳನ್ನು ಹೆಚ್ಚು ಬಳಸಲಾಗುತ್ತದೆ ?
ರಾಷ್ಟ್ರೀಯ ಕುಟುಂಬ ಆರೋಗ್ಯ ಇಲಾಖೆ (2021-22) ನಡೆಸಿದ ಸಮೀಕ್ಷೆಯ ಪ್ರಕಾರ ದಾದ್ರಾ ನಗರ ಹವೇಲಿಯು ಭಾರತದಲ್ಲಿ ಅತೀ ಹೆಚ್ಚು ಕಾಂಡೋಮ್ ಬಳಸುವ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಇದರ ನಂತರ ಆಂಧ್ರಪ್ರದೇಶ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಈ ಪೈಕಿ ಕರ್ನಾಟಕ 15ನೇ ಸ್ಥಾನದಲ್ಲಿದೆ . ಈ ರಾಜ್ಯದಲ್ಲಿ, 10 ಸಾವಿರ ದಂಪತಿಗಳಲ್ಲಿ 307 ದಂಪತಿಗಳು ಮಾತ್ರ ಕಾಂಡೋಮ್ಗಳನ್ನು ಬಳಸುತ್ತಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಹೃದಯ ಶ್ರೀಮಂತ, ಬೆಂಗಳೂರಿನ ಬೀದಿ ಬದಿ ಪ್ರಾಣಿಗಳಿಗೆ ಹೊಸ ಬದುಕು ಕಟ್ಟಿ ಕೊಟ್ಟ ಚಮ್ಮಾರ
ಕಾಂಡೋಮ್ ಬಳಕೆ:
ದರ್ದಾ ನಗರ ಹವೇಲಿಯಲ್ಲಿ 10 ಸಾವಿರ ಜೋಡಿಗಳಲ್ಲಿ 993 ಜೋಡಿಗಳು ಲೈಂಗಿಕ ಕ್ರಿಯೆಯಲ್ಲಿ ಕಾಂಡೋಮ್ ಬಳಸುತ್ತಾರೆ ಎಂದು ಅಂದಾಜಿಸಲಾಗಿದೆ . ಇದರ ನಂತರ, ಇತರ ರಾಜ್ಯಗಳ ಸಮೀಕ್ಷೆಯನ್ನು ಸಹ ನಡೆಸಲಾಯಿತು , ಇದರಲ್ಲಿ ಪ್ರತಿ ರಾಜ್ಯದಿಂದ ವಿವಿಧ ವಯೋಮಾನದ 10 ಸಾವಿರ ದಂಪತಿಗಳನ್ನು ಮಾತುಕತೆ ನಡೆಸಿ ಮಾಹಿತಿ ಸಂಗ್ರಹಿಸಲಾಗಿದೆ. ಆಂಧ್ರಪ್ರದೇಶದಲ್ಲಿ 10 ಸಾವಿರ ದಂಪತಿಗಳಲ್ಲಿ 978 ಮಂದಿ ಕಾಂಡೋಮ್ ಬಳಸುತ್ತಾರೆ ಎಂದು ತಿಳಿದುಬಂದಿದೆ.
ಮತ್ತಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:09 pm, Fri, 20 September 24