Viral: ಹೃದಯ ಶ್ರೀಮಂತ, ಬೆಂಗಳೂರಿನ ಬೀದಿ ಬದಿ ಪ್ರಾಣಿಗಳಿಗೆ ಹೊಸ ಬದುಕು ಕಟ್ಟಿ ಕೊಟ್ಟ ಚಮ್ಮಾರ
ಬೀದಿ ಬದಿಯ ಪ್ರಾಣಿಗಳು ಆಹಾರವನ್ನರಸುತ್ತಾ ಮನೆಯ ಮುಂದೆ ಬಂದ್ರೆ ಕಲ್ಲು ಹೊಡೆದು ಓಡಿಸುವವರೆ ಹೆಚ್ಚು. ಇಂತಹ ಕಟುಕರ ಮಧ್ಯೆ ಇಲ್ಲೊಬ್ರು ಚಮ್ಮಾರ ತಾನು ದುಡಿವ ಅಲ್ಪ ಸ್ವಲ್ಪ ಹಣದಲ್ಲಿ ತನ್ನ ಬಳಿ ಬರುವ ಬೀಡಾಡಿ ಪ್ರಾಣಿಗಳಿಗೆ ಆಹಾರವನ್ನು ಕೊಟ್ಟು, ಅವುಗಳಿಗೊಂದು ಹೊಸ ಬದುಕನ್ನು ಕಟ್ಟಿ ಕೊಟ್ಟಿದ್ದಾರೆ. ಇವರ ಹೃದಯ ಶ್ರೀಮಂತಿಕೆಗೆ ಸಂಬಂಧಿಸಿದ ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಬರೀ ಸ್ವಾರ್ಥಿಗಳೇ ತುಂಬಿರುವ ಜಗತ್ತಿನಲ್ಲಿ ನಾನು, ಎಲ್ಲವೂ ನನಗೆಯೇ ಬೇಕು ಎನ್ನುವವರು ಹೆಚ್ಚು. ಅದೆಷ್ಟೋ ಜನರು ಎಷ್ಟೇ ಆಸ್ತಿ ಅಂತಸ್ತು ಇದ್ದರೂ ಇತತರಿಗೆ ಬಿಡಿ ತಮ್ಮವರಿಗೂ ಸಹಾಯ ಮಾಡಲು ಹಿಂದೆ ಮುಂದೆ ನೋಡುತ್ತಾರೆ. ಇಂತಹ ಸ್ವಾರ್ಥಿಗಳೇ ತುಂಬಿದ ಜನಗಳ ಮಧ್ಯೆ ಇಲ್ಲೊಬ್ರು ಹೃದಯ ಶ್ರೀಮಂತಿಕೆಯ ವ್ಯಕ್ತಿ ಹಣದಲ್ಲಿ ಬಡವನಾದರೇನಂತೆ, ಗುಣದಲ್ಲಿ ಶ್ರೀಮಂತ ನಾನು ಎನ್ನುತ್ತಾ ತಾನು ದುಡಿವ ಅಲ್ಪ ಸ್ವಲ್ಪ ಹಣದಲ್ಲಿ ತನ್ನ ಬಳಿ ಬರುವ ಬೀಡಾಡಿ ಪ್ರಾಣಿಗಳಿಗೆ ಆಹಾರವನ್ನು ಕೊಟ್ಟು, ಅವುಗಳಿಗೊಂದು ಹೊಸ ಬದುಕನ್ನು ಕಟ್ಟಿ ಕೊಟ್ಟಿದ್ದಾರೆ. ಇವರ ಹೃದಯ ಶ್ರೀಮಂತಿಕೆಗೆ ಸಂಬಂಧಿಸಿದ ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಬೀದಿ ಬದಿಯ ಪ್ರಾಣಿಗಳಿಗೆ ಊಟ ತಿಂಡಿ ನೀಡಿ ಅವುಗಳನ್ನು ಸಾಕಿ ಸಲಹುವ ಹಲವು ಹೃದಯ ಶ್ರೀಮಂತರಿದ್ದಾರೆ. ಅವರುಗಳಲ್ಲಿ ನಮ್ಮ ಬೆಂಗಳೂರಿನ ವೈಟ್ ಫೀಲ್ಡ್‌ನಲ್ಲಿ ಚಮ್ಮಾರನಾಗಿ ಕೆಲಸ ಮಾಡುವ ರಾಮಯ್ಯ ಕೂಡಾ ಒಬ್ರು. ಬೀದಿ ಬದಿಯಲ್ಲಿ ಒಂದು ಸಣ್ಣ ಅಂಗಡಿಯಲ್ಲಿ ಶೂ, ಚಪ್ಪಲಿ ಹೊಲಿಯುವ ಕೆಲಸ ಮಾಡುತ್ತಿರುವ ರಾಮಯ್ಯ ಅವರು ಬೀದಿ ಬದಿಯ ಪ್ರಾಣಿಗಳ ಆಶ್ರಯದಾತರಾಗಿದ್ದಾರೆ. ಹೌದು ತಾನು ದುಡಿವ ಅಲ್ಪ ಸ್ವಲ್ಪ ಹಣದಲ್ಲಿ ತನ್ನ ಬಳಿ ಬರುವ ಬೀಡಾಡಿ ಪ್ರಾಣಿಗಳಿಗೆ ಆಹಾರವನ್ನು ಕೊಟ್ಟು, ಅವುಗಳಿಗೊಂದು ಹೊಸ ಬದುಕನ್ನು ಕಟ್ಟಿ ಕೊಟ್ಟಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
View this post on Instagram
ಈಗ ಇವರ ಬಳಿ 3 ಬೀದಿ ನಾಯಿಗಳು ಹಾಗೂ 3 ಬೀದಿ ಬೆಕ್ಕುಗಳಿವೆ. ಇವುಗಳನ್ನು ಮಕ್ಕಳಂತೆ ಸಾಕುವ ಇವರು ಇವುಗಳಿಗೆ ಮೂರು ಹೊತ್ತು ಉತ್ತಮ ಊಟ ಕೊಡುತ್ತಿದ್ದಾರೆ. ಅಲ್ಲದೆ ಇವುಗಳಿಗೆ ಏನಾದ್ರೂ ಹುಷಾರು ತಪ್ಪಿದ್ರೆ ಅಥವಾ ಗಾಯಗಳಾದ್ರೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಯನ್ನು ಕೂಡಾ ಕೊಡಿಸುತ್ತಾರೆ. ಇವರ ಈ ದಯೆ ಹಾಗೂ ಸ್ಫೂರ್ತಿಯ ಕಥೆಯ ಬಗ್ಗೆ ಡಿಸೆಂಬರ್ 2023 ರಲ್ಲಿ ಯುವತಿಯೊಬ್ಬಳು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಳು. ಆ ಸಂದರ್ಭದಲ್ಲಿ ರಾಮಯ್ಯ ಅವರಿಗೆ ಹಣದ ಸಹಾಯ ಮಾಡಲು ಅನೇಕ ಜನ ಮುಂದಾದರು. ಇದೀಗ ಯುವತಿ ಸಂಗ್ರಹಿಸಿದ ಹಣವನ್ನೆಲ್ಲಾ ರಾಮಯ್ಯ ಅವರಿಗೆ ಹಸ್ತಾಂತರಿಸಿದ್ದು, ಈ ಕುರಿತ ಹೃದಯಸ್ಪರ್ಶಿ ವಿಡಿಯೋವೊಂದು ಇದೀಗ ವೈರಲ್ ಆಗುತ್ತಿದೆ.
ಈ ಕುರಿತ ವಿಡಿಯೋವನ್ನು leia_ the_golden_idie ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್ ವಿಡಿಯೋದಲ್ಲಿ ಯುವತಿ ತಾನು ಸಂಗ್ರಹಿಸಿದ ಹಣವನ್ನು ಹಾಗೂ ದೇಣಿಗೆ ಕೊಟ್ಟವರ ಹೆಸರನ್ನು ಪ್ರಿಂಟ್ ಮಾಡಿಸಿ ಅದನ್ನು ರಾಮಯ್ಯ ಅವರಿಗೆ ಕೊಡುವ ದೃಶ್ಯವನ್ನು ಕಾಣಬಹುದು. ಜನಗಳ ಈ ಪ್ರೀತಿಯನ್ನು ಕಂಡು ಅವರು ಭಾವುಕರಾಗಿದ್ದಾರೆ.
ಇದನ್ನೂ ಓದಿ: ‘ಸಂಜೆ 250 ಕೊಡು, ಇಲ್ಲಾಂದ್ರೆ ಶೆಡ್ಡಿಗ್ ಬಾ’, ಆಟೋ ಚಾಲಕರ ಸಮಸ್ಯೆಯನ್ನು ಎಳೆಎಳೆಯಾಗಿ ವಿವರಿಸಿದ ಕರ್ನಾಟಕ ಹೈಕೋರ್ಟ್
ಸೆಪ್ಟೆಂಬರ್ 12 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1.4 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಈ ದೃಶ್ಯ ನೋಡಿ ನನಗೆ ಅಳು ಬಂತುʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಅವರಿಗೆ ದೇಣಿಗೆಯನ್ನು ನೀಡಿದ ಪ್ರತಿಯೊಬ್ಬರಿಗೂ ಧನ್ಯವಾದಗಳುʼ ಎಂದು ಹೇಳಿದ್ದಾರೆ.
ವೈರಲ್ ಸ್ಟೋರಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ