AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

70 ಎಕರೆ ಹೊಲ‌, ಟ್ರ್ಯಾಕ್ಟ್ರು, ಕಾರು ಇಷ್ಟೆಲ್ಲಾ ಇದ್ರೂ, ಬಾಳೆಹಣ್ಣು ಮಾರಿ ತುತ್ತು ಅನ್ನ ತಿನ್ನುತ್ತಾರಂತೆ ಈ ಸ್ವಾಭಿಮಾನಿ ತಾತ

ಕೈ ಕಾಲು ಗಟ್ಟಿ ಇದ್ರೂ ದುಡಿದು ತಿನ್ನಲು ಸೋಮಾರಿತನವನ್ನು ತೋರಿಸುವವರ ಮಧ್ಯೆ ಇಲ್ಲೊಬ್ರು ತಾತ ತನ್ನ ಬಳಿ 60 ರಿಂದ 70 ಎಕರೆ ಹೊಲ, ಟ್ರ್ಯಾಕ್ಟ್ರು-ಕಾರು ಇಷ್ಟೆಲ್ಲಾ ಶ್ರೀಮಂತಿಕೆ ಇದ್ರೂ ಕೂಡಾ ಸುಮ್ಮನೆ ಕೈ ಕಟ್ಟಿ ಮನೆಯಲ್ಲಿ ಕೂರದೆ, ದುಡಿದು ತಿನ್ನುವೆ ಹೊರತು ಕೂತು ತಿನ್ನಲಾರೆ ಎನ್ನುತ್ತಾ ಇಳಿ ವಯಸ್ಸಿನಲ್ಲೂ ಪ್ರತಿನಿತ್ಯ ಬಾಳೆ ಹಣ್ಣು ಮಾರಿಯೇ ತುತ್ತು ಅನ್ನ ತಿನ್ನುತ್ತಿದ್ದಾರೆ. ಇವರ ಈ ಸ್ವಾಭಿಮಾನದ ಬದುಕಿನ ಕಥೆಯ ವಿಡಿಯೋ ಇದೀಗ ಭಾರೀ ವೈರಲ್‌ ಆಗುತ್ತಿದೆ.

70 ಎಕರೆ ಹೊಲ‌, ಟ್ರ್ಯಾಕ್ಟ್ರು, ಕಾರು ಇಷ್ಟೆಲ್ಲಾ ಇದ್ರೂ, ಬಾಳೆಹಣ್ಣು ಮಾರಿ ತುತ್ತು ಅನ್ನ ತಿನ್ನುತ್ತಾರಂತೆ ಈ ಸ್ವಾಭಿಮಾನಿ ತಾತ
ವೈರಲ್​​ ವಿಡಿಯೋ
ಮಾಲಾಶ್ರೀ ಅಂಚನ್​
| Edited By: |

Updated on: Sep 20, 2024 | 3:31 PM

Share

ಒಂದಿಷ್ಟು ಆಸ್ತಿ ಪಾಸ್ತಿ ಇದ್ರೂ, ಆ ದುಡ್ಡನ್ನೆಲ್ಲಾ ಬೇಕಾಬಿಟ್ಟಿ ಖರ್ಚು ಮಾಡುತ್ತಾ ಶೋಕಿ ಜೀವನ ನಡೆಸುವವರ ಮಧ್ಯೆ ಇಲ್ಲೊಬ್ರು ತಾತ ತನ್ನ ಬಳಿ 60 ರಿಂದ 70 ಎಕರೆ ಹೊಲ, ಟ್ರ್ಯಾಕ್ಟ್ರು-ಕಾರು ಇದ್ರೂ ಕೂಡಾ ಇವೆಲ್ಲದರ ಜವಬ್ದಾರಿಗಳನ್ನು ಮಕ್ಕಳಿಗೆ ವಹಿಸಿ, ಸುಮ್ಮನೆ ಕೈ ಕಟ್ಟಿ ಮನೆಯಲ್ಲಿ ಕೂರದೆ ದುಡಿದು ತಿನ್ನುವೆ ಹೊರತು ಕೂತು ತಿನ್ನಲಾರೆ ಎನ್ನುತ್ತಾ ಇಳಿ ವಯಸ್ಸಿನಲ್ಲೂ ಪ್ರತಿನಿತ್ಯ ಬಾಳೆ ಹಣ್ಣು ಮಾರಿಯೇ ತುತ್ತು ಅನ್ನ ತಿನ್ನುತ್ತಾ ಸ್ವಾಭಿಮಾನದ ಜೀವನ ನಡೆಸುತ್ತಿದ್ದಾರೆ. ಇವರ ಈ ಸ್ವಾಭಿಮಾನದ ಬದುಕಿನ ಕಥೆಯ ವಿಡಿಯೋ ಇದೀಗ ಭಾರೀ ವೈರಲ್‌ ಆಗುತ್ತಿದೆ.

ಬಾಳೆ ಹಣ್ಣು ಕೊಳ್ಳಲು ಬಂದ ಯುವಕನ ಜೊತೆ ಬಾಳೆ ಹಣ್ಣು ಮಾರಾಟ ಮಾಡುವ ತಾತ ನನಗೆ ಇವಾಗ 60 ವರ್ಷ, ಹೊಲ ತೋಟ ಎಲ್ಲಾ ಇದೆ. ಹೀಗಿದ್ರೂ ದುಡಿದೇ ತಿನ್ನುತ್ತೇನೆ, ಕೂತು ತಿನ್ನಲ್ಲ ಎಂದು ತನ್ನ ಸ್ವಾಭಿಮಾನದ ಬದುಕಿನ ಕಥೆಯನ್ನು ಹೇಳಿಕೊಂಡಿದ್ದಾರೆ. ಈ ಕುರಿತ ವಿಡಿಯೋವನ್ನು ಶ್ರೀಕಾಂತ್‌ ಕಿಚ್ಚ (shrikantkiccha_vlogs_cdn) ಎಂಬವರು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದು, “ಇವರನ್ನು ನೋಡಿ ನಮ್ಮ ಯುವಕರು ಕಲಿಯಬೇಕಿದೆ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.

ವೈರಲ್​​​ ವಿಡಿಯೋ ಇಲ್ಲಿದೆ ನೋಡಿ:

ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ತಾತಪ್ಪನ ಬಳಿ ಬಾಳೆ ಹಣ್ಣು ಕೊಳ್ಳಲು ಹೋದ ಹೋದ ಯುವಕ ಅವರೊಂದಿಗೆ ಸ್ವಲ್ಪ ಕಷ್ಟ ಸುಖ ಮಾತನಾಡುವ ದೃಶ್ಯವನ್ನು ಕಾಣಬಹುದು. ಆಸ್ತಿ ಅಂತಸ್ತು ಎಲ್ಲಾ ಇದ್ರೂ ದುಡಿದು ತಿನ್ನಬೇಕು ಎಂಬ ಉದ್ದೇಶದಿಂದ ಇಳಿ ವಯಸ್ಸಿನಲ್ಲೂ ಬಾಳೆ ಹಣ್ಣು ಮಾರಿ ಬದುಕು ಸಾಗಿಸುತ್ತಿರುವ ಈ ತಾತಪ್ಪನ ಕಥೆ ಕೇಳಿ ಯುವಕ ಫುಲ್‌ ಶಾಕ್‌ ಆಗಿದ್ದಾನೆ.

ಇದನ್ನೂ ಓದಿ: ಹೃದಯ ಶ್ರೀಮಂತ, ಬೆಂಗಳೂರಿನ ಬೀದಿ ಬದಿ ಪ್ರಾಣಿಗಳಿಗೆ ಹೊಸ ಬದುಕು ಕಟ್ಟಿ ಕೊಟ್ಟ ಚಮ್ಮಾರ

ಆಗಸ್ಟ್‌ 23 ರಂದು ಹಂಚಿಕೊಳ್ಳಲಾದ ಈ ವಿಡಿಯೋ 4.5 ಮಿಲಿಯನ್‌ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇದಪ್ಪಾ ಸ್ವಾಭಿಮಾನ ಅಂದ್ರೆʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಇದಕ್ಕೆ ಹೇಳೋದು ರೈತರ ಗತ್ತು ದೇಶಕ್ಕೆ ಗೊತ್ತು ಅಂತʼ ಎಂದು ಕಾಮೆಂಟ್‌ ಮಾಡಿದ್ದಾರೆ.

ವೈರಲ್​​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ