AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಪ್ಪ ಇಷ್ಟು ಶ್ರೀಮಂತ ಅಂತ ದೊಡ್ಡವಳಾಗೋವರೆಗೂ ಗೊತ್ತೇ ಇರ್ಲಿಲ್ಲ: ಅಚ್ಚರಿ ಹುಟ್ಟಿಸುತ್ತವೆ ವಾರನ್ ಬಫೆಟ್ ಮಗಳ ಮಾತುಗಳು

Warren Buffett's daughter Susan speaks: ವಾರನ್ ಬಫೆಟ್ ವಿಶ್ವದ ಅತೀ ಶ್ರೀಮಂತರಲ್ಲಿ ಒಬ್ಬರಾದರೂ ಬಹಳ ಐಷಾರಾಮಿ ಜೀವನ ನಡೆಸಿದವರಲ್ಲ. ಮೇಲ್ಮಧ್ಯಮ ವರ್ಗದ ಜನರ ರೀತಿಯ ಲೈಫ್ ಅನ್ನು ಅವರು ಬದುಕಿದವರು. ಕುಟುಂಬ ಸದಸ್ಯರೂ ಕೂಡ ಅದೇ ಜೀವನ ನಡೆಸಿದವರು. ವಾರನ್ ಬಫೆಟ್ ಮಗಳು ಸೂಸಾನ್ ತನ್ನ ಅಪ್ಪನ ಕೆಲ ಧೋರಣೆಗಳ ಬಗ್ಗೆ ವಿವಿಧ ಸಂದರ್ಶನಗಳಲ್ಲಿ ಹೇಳಿಕೊಂಡಿರುವುದುಂಟು. ಒಂದೆರಡು ಘಟನೆಯ ವಿವರ ಇಲ್ಲಿದೆ.

ಅಪ್ಪ ಇಷ್ಟು ಶ್ರೀಮಂತ ಅಂತ ದೊಡ್ಡವಳಾಗೋವರೆಗೂ ಗೊತ್ತೇ ಇರ್ಲಿಲ್ಲ: ಅಚ್ಚರಿ ಹುಟ್ಟಿಸುತ್ತವೆ ವಾರನ್ ಬಫೆಟ್ ಮಗಳ ಮಾತುಗಳು
ವಾರನ್ ಬಫೆಟ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 20, 2024 | 12:53 PM

Share

ದೊಡ್ಡವರ ಮಕ್ಕಳು ಸಿಲ್ವರ್ ಸ್ಪೂನ್ ಬಾಯಲ್ಲಿಟ್ಟುಕೊಂಡು ಬೆಳೆಯುತ್ತಾರೆ, ಬಹಳ ಐಷಾರಾಮಿ ಜೀವನ ನಡೆಸುತ್ತಾರೆ ಎಂಬುದು ಜನಸಾಮಾನ್ಯರಲ್ಲಿ ಇರುವ ಒಟ್ಟಾರೆ ಅನಿಸಿಕೆ. ಆದರೆ ಬಹಳಷ್ಟು ಶ್ರೀಮಂತರು, ಅದರಲ್ಲೂ ಉದ್ಯಮಿಗಳು ಹಣದ ವಿಚಾರದಲ್ಲಿ ಬಹಳ ಕಟ್ಟುನಿಟ್ಟಾಗಿರುತ್ತಾರೆ. ಹಣದ ಮಹತ್ವ ತಿಳಿದವರಾಗಿರುತ್ತಾರೆ. ಮುಕೇಶ್ ಅಂಬಾನಿ ತಮ್ಮ ಮಕ್ಕಳನ್ನು ರಾಯಲ್ ಆಗಿ ಬೆಳೆಸಲಿಲ್ಲ. ಸಾಧಾರಣ ರೀತಿಯಲ್ಲೇ ಮಕ್ಕಳನ್ನು ಬೆಳೆಸಿದರು. ವಿಶ್ವದ ಅತಿದೊಡ್ಡ ಹೂಡಿಕೆದಾರರಲ್ಲಿ ಒಬ್ಬರಾದ ಮತ್ತು ಶ್ರೀಮಂತರಲ್ಲಿ ಶ್ರೀಮಂತ ಎನಿಸಿದ ವಾರನ್ ಬಫೆಟ್ ಕೂಡ ಇಂಥದ್ದೇ ಪ್ರವೃತ್ತಿಯವರು. ಅವರ ಮಗಳೊಬ್ಬಳು ವಾರನ್ ಬಫೆಟ್ ಬಗ್ಗೆ ಆಡುವ ಮಾತುಗಳು ಇದಕ್ಕೆ ಸಾಕ್ಷಿ.

ಅಪ್ಪ ಇಷ್ಟು ದೊಡ್ಡ ಸಾಹುಕಾರ ಅಂತ ಗೊತ್ತೇ ಇರಲಿಲ್ಲ…

ಅಮೆರಿಕದ ವಾರನ್ ಬಫೆಟ್​ನ ಮಗಳು ಸೂಸನ್ ಬಫೆಟ್ ತನ್ನ ಅಪ್ಪನ ಬಗ್ಗೆ ಕುತೂಹಲ ಎನಿಸುವ ಹಲವು ವಿಚಾರಗಳನ್ನು ಸಂದರ್ಶನಗಳಲ್ಲಿ ಹಂಚಿಕೊಂಡಿದ್ದಾರೆ. ಭಾರತದ ಜಿಡಿಪಿಗಿಂತ ಹೆಚ್ಚು ಹಣ ಹೊಂದಿರುವ ವಾರನ್ ಬಫೆಟ್ ಈಗಲೂ ಕೂಡ ಸಾಮಾನ್ಯರಂತೆಯೇ ಬದುಕುತ್ತಿದ್ದಾರೆ.

ತಮ್ಮ ತಂದೆ ಇಷ್ಟು ದೊಡ್ಡ ಶ್ರೀಮಂತಿಗೆ ಹೊಂದಿದ್ದಾರೆ ಎಂಬುದು ತನಗೆ 20 ವರ್ಷ ವಯಸ್ಸು ದಾಟುವವರೆಗೂ ಗೊತ್ತೇ ಇರಲಿಲ್ಲ. ಕುಟುಂಬದಲ್ಲಿ ಯಾರೂ ಕೂಡ ಈ ಬಗ್ಗೆ ಹೇಳಿಕೊಳ್ಳುತ್ತಿರಲಿಲ್ಲ. ತನಗೆ ವಾಲ್ ಸ್ಟ್ರೀಟ್ ಜರ್ನಲ್​ನಲ್ಲಿ ಬಂದ ಲೇಖನವೊಂದರ ಮೂಲಕ ಅಪ್ಪ ಎಷ್ಟು ಶ್ರೀಮಂತ ಎನ್ನುವುದು ಗೊತ್ತಾಯಿತು ಎನ್ನುತ್ತಾರೆ ಸುಸಾನ್ ಬಫೆಟ್.

ಇದನ್ನೂ ಓದಿ: ಬೆಂಗಳೂರು, ರಿಯಾಧ್ ನಗರಗಳಲ್ಲಿ ಹೆಚ್ಚಾಗಲಿದ್ದಾರೆ ಶತ ಮಿಲಿಯನೇರ್​ಗಳು; ಟಾಪ್-50 ಪಟ್ಟಿಯಲ್ಲಿ ಮುಂಬೈ, ದೆಹಲಿ

ಎಲ್ಲರಂತೆಯೇ ನಾವೂ ಇದ್ದೆವು. ಏನೂ ವಿಶೇಷ ಇರಲಿಲ್ಲ. ಮೇಲ್ಮಧ್ಯಮ ವರ್ಗದ ಶೈಲಿಯ ಜೀವನ ನಮ್ಮದಾಗಿತ್ತು. ಅಪ್ಪ ಈಗಲೂ ಕೂಡ ಅದೇ ಮನೆಯಲ್ಲಿ ವಾಸಿಸುತ್ತಿದ್ದಾರೆ ಎಂದು ವಾರನ್ ಬಫೆಟ್ ಮಗಳು ಹೇಳುತ್ತಾರೆ.

ಅಪ್ಪನ ಬಳಿ ಹಣ ಕೇಳಿದಾಗ…

ಸುಸನ್ ಬಫೆಟ್​ಗೆ ಮಗು ಹುಟ್ಟಿದಾಗ ಅಡುಗೆ ಕೋಣೆಯನ್ನು ಮಾರ್ಪಡಿಸುವ ಆಲೋಚನೆ ಬಂತಂತೆ. ಅದಕ್ಕಾಗಿ 41,000 ಡಾಲರ್ (ಸುಮಾರು 30 ಲಕ್ಷ ರೂ) ಹಣವನ್ನು ಸಾಲವಾಗಿ ಕೊಡುವಂತೆ ಅಪ್ಪನಿಗೆ ಕೇಳುತ್ತಾರೆ. ವಾರನ್ ಬಫೆಟ್ ಮಗಳಿಗೆ ಹಣ ಕೊಡಲು ಒಪ್ಪೋದಿಲ್ಲ. ಎಲ್ಲರಂತೆ ಬ್ಯಾಂಕ್​ಗೆ ಹೋಗಿ ಸಾಲಕ್ಕೆ ಅರ್ಜಿ ಸಲ್ಲಿಸು ಎಂದು ಮಗಳಿಗೆ ತಿಳಿಸಿದರಂತೆ. ಹಾಗಂತ ಸುಸಾನ್ ಬಫೆಟ್ ಕೆಲ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Viral: ಸ್ವಿಗ್ಗಿ ಡೆಲಿವರಿ ಬಾಯ್‌ ಆಗಿ ಕೆಲಸ ಮಾಡಿದ ಇಂಜಿನಿಯರ್, ಕೆಲಸ ಸಿಕ್ಕ ಖುಷಿಯಲ್ಲಿ ಟೆಕ್ಕಿ ಹೇಳಿದ್ದೇನು?

ತಾನು ಹಣದ ನೆರವು ಕೇಳಿದ್ದಲ್ಲ. ಸಾಲ ಕೇಳಿದ್ದು. ಆದರೂ ಅಪ್ಪ ಹಾಗಂತ ಹೇಳಿ ಕಳುಹಿಸಿದ್ರು ಅಂತ ಹೆಮ್ಮೆ ಮತ್ತು ಬೇಸರ ಎರಡೂ ಮಿಶ್ರವಾಗಿರುವ ಭಾವದಲ್ಲಿ ಸುಸನ್ ಆ ಘಟನೆ ಸ್ಮರಿಸುತ್ತಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಬಿಗ್ ಬಾಸ್: ನಾಮಿನೇಟ್ ಆದವರಲ್ಲಿ ಈ ವಾರ ಮನೆಯಿಂದ ಹೊರಹೋಗುವವರು ಯಾರು?
ಬಿಗ್ ಬಾಸ್: ನಾಮಿನೇಟ್ ಆದವರಲ್ಲಿ ಈ ವಾರ ಮನೆಯಿಂದ ಹೊರಹೋಗುವವರು ಯಾರು?
ಮೇಷ, ಕರ್ಕಾಟಕ ರಾಶಿಗೆ ಭಾರಿ ಧನಯೋಗ
ಮೇಷ, ಕರ್ಕಾಟಕ ರಾಶಿಗೆ ಭಾರಿ ಧನಯೋಗ
ಎಲ್‌ಎಸಿಯಲ್ಲಿ ಸೈನ್ಯದ ಗಸ್ತು ಮಾದರಿ ಬದಲಾವಣೆ; ಚೀನಾ ನಡೆಗೆ ಭಾರತ ಆಕ್ಷೇಪ
ಎಲ್‌ಎಸಿಯಲ್ಲಿ ಸೈನ್ಯದ ಗಸ್ತು ಮಾದರಿ ಬದಲಾವಣೆ; ಚೀನಾ ನಡೆಗೆ ಭಾರತ ಆಕ್ಷೇಪ
ಕಣ್ಣು ಆಪರೇಷನ್​​ಗೆ ಕರೆದು ಕೇವಲ ಅನಸ್ತೇಷಿಯಾ ಕೊಟ್ಟು ಕಳುಹಿಸಿದ್ರು!
ಕಣ್ಣು ಆಪರೇಷನ್​​ಗೆ ಕರೆದು ಕೇವಲ ಅನಸ್ತೇಷಿಯಾ ಕೊಟ್ಟು ಕಳುಹಿಸಿದ್ರು!
ತಾಂಡವ್ ಕ್ಯಾಪ್ಟನ್ ಆದ್ರೆ ಪ್ರಶಾಂತ್​​ಗೆ ಸಂಕಷ್ಟ: ವಿಡಿಯೋ ನೋಡಿ
ತಾಂಡವ್ ಕ್ಯಾಪ್ಟನ್ ಆದ್ರೆ ಪ್ರಶಾಂತ್​​ಗೆ ಸಂಕಷ್ಟ: ವಿಡಿಯೋ ನೋಡಿ
ದಸರಾದಲ್ಲಿ ಸಚಿವರನ್ನ ತಡೆದ ಮಹತ್ವದ ಬೆಳವಣಿಗೆ: ಸಿಎಂ ಭೇಟಿಯಾದ ಐಪಿಎಸ್
ದಸರಾದಲ್ಲಿ ಸಚಿವರನ್ನ ತಡೆದ ಮಹತ್ವದ ಬೆಳವಣಿಗೆ: ಸಿಎಂ ಭೇಟಿಯಾದ ಐಪಿಎಸ್
ಮತದಾನ ಕೇಂದ್ರದ ಬಳಿಯೇ ಸಚಿವರ ಕಾಲಿಗೆ ನಮಸ್ಕರಿಸಿದ ಬಿಜೆಪಿ ಆಭ್ಯರ್ಥಿ
ಮತದಾನ ಕೇಂದ್ರದ ಬಳಿಯೇ ಸಚಿವರ ಕಾಲಿಗೆ ನಮಸ್ಕರಿಸಿದ ಬಿಜೆಪಿ ಆಭ್ಯರ್ಥಿ
ದೊಡ್ಡಬಳ್ಳಾಪುರದ ತೂಬಗೆರೆಯಲ್ಲಿ ಕಂಪಿಸಿದ ಭೂಮಿ
ದೊಡ್ಡಬಳ್ಳಾಪುರದ ತೂಬಗೆರೆಯಲ್ಲಿ ಕಂಪಿಸಿದ ಭೂಮಿ
ಬಹಳ ದಿನಗಳ ಬಳಿಕ ಸುತ್ತೂರು ಶಕ್ತಿಪೀಠಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ
ಬಹಳ ದಿನಗಳ ಬಳಿಕ ಸುತ್ತೂರು ಶಕ್ತಿಪೀಠಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ
ಮೆಕ್ಕಾದಲ್ಲಿ ಸಿಲುಕಿದ 4,000 ಕನ್ನಡಿಗರು: ನೆರವಿಗೆ ಧಾವಿಸುವಂತೆ CMಗೆ ಮನವಿ
ಮೆಕ್ಕಾದಲ್ಲಿ ಸಿಲುಕಿದ 4,000 ಕನ್ನಡಿಗರು: ನೆರವಿಗೆ ಧಾವಿಸುವಂತೆ CMಗೆ ಮನವಿ