AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು, ರಿಯಾಧ್ ನಗರಗಳಲ್ಲಿ ಹೆಚ್ಚಾಗಲಿದ್ದಾರೆ ಶತ ಮಿಲಿಯನೇರ್​ಗಳು; ಟಾಪ್-50 ಪಟ್ಟಿಯಲ್ಲಿ ಮುಂಬೈ, ದೆಹಲಿ

Henley & Partners centi-millionaires report: 2040ರ ವೇಳೆಗೆ ಏಷ್ಯಾದ ಹಲವು ನಗರಗಳಲ್ಲಿ 800 ಕೋಟಿ ರೂಗೂ ಹೆಚ್ಚು ಆಸ್ತಿ ಹೊಂದಿರುವ ಶತ ಮಿಲಿಯನೇರ್​ಗಳ ಸಂಖ್ಯೆ ಶೇ. 150ಕ್ಕೂ ಹೆಚ್ಚಲಿದೆ. ಹೆನ್ಲೀ ಅಂಡ್ ಪಾರ್ಟ್ನರ್ಸ್ ಸೆಂಟಿ ಮಿಲಿಯನೇರ್ ರಿಪೋರ್ಟ್​ನಲ್ಲಿ ಈ ಅಂದಾಜು ಮಾಡಲಾಗಿದೆ. ಈ ರೀತಿ ಶ್ರೀಮಂತರು ಗಣನೀಯವಾಗಿ ವೃದ್ಧಿ ಕಾಣುವ ನಗರಗಳಲ್ಲಿ ಬೆಂಗಳೂರೂ ಇದೆ.

ಬೆಂಗಳೂರು, ರಿಯಾಧ್ ನಗರಗಳಲ್ಲಿ ಹೆಚ್ಚಾಗಲಿದ್ದಾರೆ ಶತ ಮಿಲಿಯನೇರ್​ಗಳು; ಟಾಪ್-50 ಪಟ್ಟಿಯಲ್ಲಿ ಮುಂಬೈ, ದೆಹಲಿ
ಶ್ರೀಮಂತರು
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 19, 2024 | 5:23 PM

Share

ನವದೆಹಲಿ, ಸೆಪ್ಟೆಂಬರ್ 19: ಮುಂದಿನ 15-16 ವರ್ಷದಲ್ಲಿ ಏಷ್ಯನ್ ಪ್ರದೇಶಗಳಲ್ಲಿ ಕುಬೇರರ ಸಂಖ್ಯೆ ಗಣನೀಯವಾಗಿ ಹೆಚ್ಚಲಿದೆ. ಇಲ್ಲಿಯ ಬಹಳಷ್ಟು ನಗರಗಳಲ್ಲಿ ಸೆಂಟಿ-ಮಿಲಿಯನೇರ್ಸ್ ಅಥವಾ ಶತ ಮಿಲಿಯನೇರ್​ಗಳ ಸಂಖ್ಯೆ ಶೇ. 150ಕ್ಕೂ ಹೆಚ್ಚಬಹುದು ಎಂದು ಹೆನ್ಲೀ ಅಂಡ್ ಪಾರ್ಟ್ನರ್ಸ್ ಸೆಂಟಿ-ಮಿಲಿಯನೇರ್ ರಿಪೋರ್ಟ್ 2024ನಲ್ಲಿ ಅಂದಾಜು ಮಾಡಲಾಗಿದೆ. ಈ ವರದಿಯಲ್ಲಿ ಬೆಂಗಳೂರು ಮತ್ತು ರಿಯಾಧ್ ನಗರಗಳನ್ನು ಹೈಲೈಟ್ ಮಾಡಲಾಗಿದೆ. ಚೀನಾದ ಹಾಂಗ್​ಝೋ, ಶೆನ್​ಝೆನ್, ಟೈಪೇ, ದುಬೈ, ಅಬುಧಾಬಿ ನಗರಗಳಲ್ಲಿ ಈ ಸೆಂಟಿ-ಮಿಲಿಯನೇರ್ ಶ್ರೀಮಂತರ ಸಂಖ್ಯೆ ಗಣನೀಯವಾಗಿ ಹೆಚ್ಚಲಿದೆ. ಹಾಗೆಯೇ, ಭಾರತದಂತಹ ಎಮರ್ಜಿಂಗ್ ಮಾರ್ಕೆಟ್​ಗಳ ದೇಶಗಳನ್ನು ಪರಿಗಣಿಸಿದರೆ ಬೆಂಗಳೂರು ಮತ್ತು ರಿಯಾಧ್ ನಗರಗಳಲ್ಲೂ (ಸೌದಿ ಅರೇಬಿಯಾದ್ದು) ಈ ಶ್ರೀಮಂತರ ಬಳಗ ಹೆಚ್ಚಲಿದೆ. ಇದು 2040ಕ್ಕೆ ಮಾಡಲಾಗಿರುವ ಅಂದಾಜು.

ಸೆಂಟಿ ಮಿಲಿಯನೇರ್ಸ್ ಎಂದರೆ ಯಾರು?

ಸೆಂಟಿ ಮಿಲಿಯನ್ ಎಂದರೆ ನೂರು ಮಿಲಿಯನ್. ಅಂದರೆ 10 ಕೋಟಿ. ಸೆಂಟಿ ಮಿಲಿಯನೇರ್ ಎನಿಸಿದವರು 100 ಮಿಲಿಯನ್ ಡಾಲರ್ ಮೌಲ್ಯದ ಹೂಡಿಕೆಗರ್ಹವಾದ ಆಸ್ತಿ ಹೊಂದಿರುವವರಾಗಿರುತ್ತಾರೆ. ರುಪಾಯಿ ಲೆಕ್ಕದಲ್ಲಿ 850 ಕೋಟಿ ರೂ ಆಸ್ತಿವಂತರು. ಬಿಲಿಯನೇರ್​ಗಿಂತ ಕಡಿಮೆ ಆಸ್ತಿ ಉಳ್ಳವರು. ಇಲ್ಲಿ ಷೇರು ಮಾರುಕಟ್ಟೆ, ರಿಯಲ್ ಎಸ್ಟೇಟ್ ಪ್ರಾಪರ್ಟಿ, ಕ್ಯಾಷ್, ಬ್ಯಾಂಕ್ ಠೇವಣಿ ಇತ್ಯಾದಿ ಕಡೆ ಹೊಂದಿರುವ ಸಾಲಮುಕ್ತ ಆಸ್ತಿ ಮತ್ತು ಅದರ ಮೌಲ್ಯವನ್ನು ಪರಿಗಣಿಸಲಾಗಿದೆ.

ಇದನ್ನೂ ಓದಿ: ಎಂಎಸ್​ಸಿಐ ಐಎಂಐ ಸೂಚ್ಯಂಕದಲ್ಲಿ ಚೀನಾವನ್ನು ಹಿಂದಿಕ್ಕಿದ ಭಾರತ; ವಿಶ್ವದ ಆರು ಪ್ರಮುಖ ಮಾರುಕಟ್ಟೆಗಳಲ್ಲಿ ಭಾರತ

ಅತಿಹೆಚ್ಚು ಸೆಂಟಿ ಮಿಲಿಯನೇರ್ಸ್ ಇರುವ ಟಾಪ್ 50 ನಗರಗಳು

ಹೆನ್ಲೀ ಅಂಡ್ ಪಾರ್ಟ್ನರ್ಸ್ ಪಟ್ಟಿ ಪ್ರಕಾರ ವಿಶ್ವಾದ್ಯಂತ 29,350 ಶತ ಮಿಲಿಯನೇರ್ಸ್ ಇದ್ದಾರೆ. ಈ ಪೈಕಿ ಅಮೆರಿಕನ್ನರ ಸಂಖ್ಯೆ ಅತಿಹೆಚ್ಚು. ಟಾಪ್-50 ಪಟ್ಟಿಯಲ್ಲಿ 15 ಅಮೆರಿಕನ್ ನಗರಗಳೇ ಇವೆ. ಟಾಪ್-3ಯಲ್ಲಿ ನ್ಯೂಯಾರ್ಕ್, ದಿ ಬೇ ಏರಿಯಾ, ಲಾಸ್ ಏಂಜಲಿಸ್ ಇವೆ. ಈ ಮೂರೂ ಕೂಡ ಅಮೆರಿಕದ ಪ್ರದೇಶಗಳೇ. ಭಾರತದ ಮುಂಬೈ ಮತ್ತು ದೆಹಲಿ ನಗರಗಳು ಈ ಅಗ್ರಮಾನ್ಯ 50ರ ಪಟ್ಟಿಯಲ್ಲಿವೆ. ಈ ಟಾಪ್-50 ಪಟ್ಟಿ ಈ ಕೆಳಕಂಡಂತಿದೆ:

  1. ನ್ಯೂಯಾರ್ಕ್ ಸಿಟಿ, ಅಮೆರಿಕ: 744 ಸೆಂಟಿ ಮಿಲಿಯನೇರ್​ಗಳು
  2. ದಿ ಬೇ ಏರಿಯಾ, ಅಮೆರಿಕ
  3. ಲಾಸ್ ಏಂಜಲಿಸ್, ಅಮೆರಿಕ
  4. ಲಂಡನ್, ಯುಕೆ
  5. ಬೀಜಿಂಗ್, ಚೀನಾ
  6. ಸಿಂಗಾಪುರ್
  7. ಶಾಂಘೈ, ಚೀನಾ
  8. ಹಾಂಕಾಂಗ್
  9. ಚಿಕಾಗೋ, ಅಮೆರಿಕ
  10. ಪ್ಯಾರಿಸ್, ಫ್ರಾನ್ಸ್
  11. ಟೋಕಿಯೋ, ಜಪಾನ್
  12. ಹೂಸ್ಟನ್, ಅಮೆರಿಕ
  13. ಜಿನಿವಾ, ಸ್ವಿಟ್ಜರ್​ಲ್ಯಾಂಡ್
  14. ಮುಂಬೈ, ಭಾರತ: 236 ಸೆಂಟಿ ಮಿಲಿಯನೇರ್​ಗಳು
  15. ದುಬೈ, ಯುಎಇ
  16. ಮಾಸ್ಕೋ, ರಷ್ಯಾ
  17. ಸಿಡ್ನಿ, ಆಸ್ಟ್ರೇಲಿಯಾ
  18. ಜುರಿಚ್, ಸ್ವಿಟ್ಜರ್​ಲ್ಯಾಂಡ್
  19. ಟೊರೊಂಟೋ, ಕೆನಡಾ
  20. ಸೋಲ್, ಸೌತ್ ಕೊರಿಯಾ
  21. ಮೊನಾಕೋ
  22. ಮಿಲನ್, ಇಟಲಿ
  23. ಮಿಯಾಮಿ, ಅಮೆರಿಕ
  24. ಫ್ರಾಂಕ್​ಫುರ್ಟ್, ಜರ್ಮನಿ
  25. ಶೆಂಝೆನ್, ಚೀನಾ
  26. ಸಿಯಾಟಲ್, ಅಮೆರಿಕ
  27. ಡಲ್ಲಾಸ್, ಅಮೆರಿಕ
  28. ದೆಹಲಿ, ಭಾರತ: 123 ಸೆಂಟಿ ಮಿಲಿಯನೇರ್​ಗಳು
  29. ಗ್ರೀನ್​ವಿಚ್ ಅಂಡ್ ಡೇರಿಯೆನ್, ಅಮೆರಿಕ
  30. ಮೆಲ್ಬೋರ್ನ್, ಆಸ್ಟ್ರೇಲಿಯಾ
  31. ಬೋಸ್ಟನ್, ಅಮೆರಿಕ
  32. ಹ್ಯಾಂಗ್​ಝೋ, ಚೀನಾ
  33. ನೈಸ್ ತು ಏಜೆ, ಫ್ರಾನ್ಸ್
  34. ರೋಮ್, ಇಟಲಿ
  35. ಆಸ್ಟಿನ್, ಅಮೆರಿಕ
  36. ಆಮ್ಸ್​ಟರ್​ಡಾಂ, ನೆದರ್​ಲ್ಯಾಂಡ್ಸ್
  37. ವಾಷಿಂಗ್ಟನ್ ಡಿಸಿ, ಅಮೆರಿಕ
  38. ಮುನಿಚ್, ಜರ್ಮನಿ
  39. ತೈಪೆ, ತೈವಾನ್
  40. ಟೆಲ್ ಅವಿವ್, ಇಸ್ರೇಲ್
  41. ಲುಕ್ಸಂಬರ್ಗ್ ಸಿಟಿ
  42. ವಾಂಕೋವರ್, ಕೆನಡಾ
  43. ಸ್ಯಾನ್ ಡಿಯೆಗೊ, ಅಮೆರಿಕ
  44. ಮ್ಯಾಡ್ರಿಡ್, ಸ್ಪೇನ್
  45. ವಿಯೆನ್ನ, ಆಸ್ಟ್ರಿಯಾ
  46. ಗ್ವಾಂಗ್​ಝೋ, ಚೀನಾ
  47. ಲಾಸ್ ವೆಗಾಸ್, ಅಮೆರಿಕ
  48. ಒಸಾಕ, ಜಪಾನ್
  49. ಪಾಮ್ ಬೀಚ್, ಅಮೆರಿಕ
  50. ಅಬುಧಾಬಿ, ಯುಎಇ: 68 ಸೆಂಟಿ ಮಿಲಿಯನೇರ್​ಗಳು

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಬಿಜೆಪಿ ಕಾರ್ಯಕರ್ತೆ ವಿವಸ್ತ್ರ ಕೇಸ್​: ಸಿಎಂ ವಿರುದ್ಧ ಜೋಶಿ ವಾಗ್ದಾಳಿ
ಬಿಜೆಪಿ ಕಾರ್ಯಕರ್ತೆ ವಿವಸ್ತ್ರ ಕೇಸ್​: ಸಿಎಂ ವಿರುದ್ಧ ಜೋಶಿ ವಾಗ್ದಾಳಿ
ಕೆಪಿಸಿಸಿ ಕಚೇರಿಯಲ್ಲೇ ಮೊಳಗಿತು ‘ಮುಂದಿನ ಸಿಎಂ ಡಿಕೆ ಶಿವಕುಮಾರ್’ ಘೋಷಣೆ
ಕೆಪಿಸಿಸಿ ಕಚೇರಿಯಲ್ಲೇ ಮೊಳಗಿತು ‘ಮುಂದಿನ ಸಿಎಂ ಡಿಕೆ ಶಿವಕುಮಾರ್’ ಘೋಷಣೆ
ಹಳೆ ದ್ವೇಷಕ್ಕೆ ರೌಡಿಶೀಟರ್ ಅಪಹರಿಸಿ ಚಿತ್ರಹಿಂಸೆ: ಬೆರಳು ಕತ್ತರಿಸಿ ವಿಕೃತಿ
ಹಳೆ ದ್ವೇಷಕ್ಕೆ ರೌಡಿಶೀಟರ್ ಅಪಹರಿಸಿ ಚಿತ್ರಹಿಂಸೆ: ಬೆರಳು ಕತ್ತರಿಸಿ ವಿಕೃತಿ
ಸಿಎಂ ಕುರ್ಚಿ ಕದನ: ಇಲ್ಲಿದೆ ರಾಜ್ಯ ರಾಜಕೀಯದ ಬಿಗ್​​ ಅಪ್ಡೇಟ್​!
ಸಿಎಂ ಕುರ್ಚಿ ಕದನ: ಇಲ್ಲಿದೆ ರಾಜ್ಯ ರಾಜಕೀಯದ ಬಿಗ್​​ ಅಪ್ಡೇಟ್​!
ಈ ಸರ್ಕಾರಿ ಬಸ್​​ಗಳಿಗೆ ದೇವರೇ ಗತಿ
ಈ ಸರ್ಕಾರಿ ಬಸ್​​ಗಳಿಗೆ ದೇವರೇ ಗತಿ