AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಪಿಎಫ್ ಅಪ್​ಡೇಟ್; ಸಂಬಳ ಮಿತಿ ಹೆಚ್ಚಳ; ನಿವೃತ್ತಿ ವೇಳೆ ಕೋಟ್ಯಾಧಿಪತಿಯಾಗಲು ಸಾಧ್ಯ; ಏನಿದು ವೇಜ್ ಸೀಲಿಂಗ್?

Wage ceiling updates for EPF members: ಎಂಪ್ಲಾಯೀ ಪ್ರಾವಿಡೆಂಟ್ ಫಂಡ್ ಸಂಸ್ಥೆ ಇಪಿಎಫ್ ಕೊಡುಗೆಗೆ ಉದ್ಯೋಗಿಯ ಮೂಲವೇತನದ ಮಿತಿಯನ್ನು ಹೆಚ್ಚಿಸಲು ಯೋಜಿಸುತ್ತಿದೆ. ಸದ್ಯ 15,000 ರೂ ವೇಜ್ ಸೀಲಿಂಗ್ ಇದೆ. ಇದನ್ನು 21,000 ರೂಗೆ ಏರಿಸುವ ಪ್ರಸ್ತಾಪ ಸರ್ಕಾರದ ಮುಂದಿದೆ ಎಂದು ಕೇಂದ್ರ ಸಚಿವರು ಹೇಳಿದ್ದಾರೆ. ವೇಜ್ ಸೀಲಿಂಗ್ ಹೆಚ್ಚಿಸಿದರೆ 35 ವರ್ಷ ಸೇವಾವಧಿಯಲ್ಲಿ ಕನಿಷ್ಠ ಒಂದು ಕೋಟಿ ರೂ ಮೊತ್ತದ ಪಿಎಫ್ ಕಾರ್ಪಸ್ ಸೃಷ್ಟಿಯಾಗಬಹುದು.

ಇಪಿಎಫ್ ಅಪ್​ಡೇಟ್; ಸಂಬಳ ಮಿತಿ ಹೆಚ್ಚಳ; ನಿವೃತ್ತಿ ವೇಳೆ ಕೋಟ್ಯಾಧಿಪತಿಯಾಗಲು ಸಾಧ್ಯ; ಏನಿದು ವೇಜ್ ಸೀಲಿಂಗ್?
ಹಣದ ಸಾಂದರ್ಭಿಕ ಚಿತ್ರ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 19, 2024 | 3:12 PM

Share

ಇಪಿಎಫ್​ಒ ಸಂಸ್ಥೆ ತನ್ನ ಸದಸ್ಯರ ಅನುಕೂಲತೆಗೆ ಆಗಾಗ್ಗೆ ಸುಧಾರಣೆಗಳನ್ನು ಮಾಡುತ್ತಿರುತ್ತದೆ. ಇವತ್ತು ಆನ್​ಲೈನ್​ನಲ್ಲಿ ಹೆಚ್ಚಿನ ಇಪಿಎಫ್ ಕಾರ್ಯಗಳನ್ನು ಮಾಡಬಹುದು. ಒಂದು ಸಮಯದಲ್ಲಿ ವಿತ್​ಡ್ರಾ ಮಾಡಬಹುದಾದ ಇಪಿಎಫ್ ಹಣವನ್ನು 50,000 ರೂನಿಂದ 1 ಲಕ್ಷ ರೂಗೆ ಹೆಚ್ಚಿಸಲಾಗಿದೆ. ಇದೇ ವೇಳೆ, ಇಪಿಎಫ್ ಕೊಡುಗೆಗೆ ಉದ್ಯೋಗಿಗಳ ವೇತನ ಮಿತಿಯನ್ನು ಹೆಚ್ಚಿಸುವ ಸಾಧ್ಯತೆ ಇದೆ. ಸದ್ಯ ವೇಜ್ ಸೀಲಿಂಗ್ 15,000 ರೂ ಇದೆ. ಇದನ್ನು 21,000 ರೂಗೆ ಹೆಚ್ಚಿಸುವ ಪ್ರಸ್ತಾಪ ಇದೆ ಎಂದು ಕೇಂದ್ರ ಕಾರ್ಮಿಕ ಸಚಿವ ಮನಸುಖ್ ಮಾಂಡವೀಯ ಇತ್ತೀಚೆಗೆ ಮಾಹಿತಿ ನೀಡಿದ್ದಾರೆ.

2014ರಲ್ಲಿ ಇಪಿಎಫ್​ಗೆ ವೇತನ ಮಿತಿ 6,500 ರೂ ಮಾತ್ರ ಇತ್ತು. 2022ರಲ್ಲಿ 15,000 ರೂಗೆ ಏರಿಸಲಾಯಿತು. ಈಗ 21,000 ರೂಗೆ ಏರಿಕೆ ಆಗುವ ಸಾಧ್ಯತೆ ಕಾಣುತ್ತಿದೆ.

ಏನಿದು ವೇತನ ಮಿತಿ?

ಇದು ಇಪಿಎಫ್ ನೀಡಲಾಗುವ ಸಂಬಳದ ಮಿತಿಯಾಗಿರುತ್ತದೆ. ಉದಾಹರಣೆಗೆ, ನಿಮ್ಮ ಮೂಲ ವೇತನ 30,000 ರೂ ಆಗಿದ್ದರೆ 15,000 ರೂ ಅನ್ನು ಇಪಿಎಫ್​ಗೆ ಪರಿಗಣಿಸಲಾಗುತ್ತದೆ. 15,000 ರೂನಲ್ಲಿ ಶೇ. 12ರಷ್ಟು ಹಣ ಉದ್ಯೋಗಿಯ ಕೊಡುಗೆಯಾಗಿರುತ್ತದೆ. ಶೇ. 12ರಷ್ಟು ಕೊಡುಗೆ ಸಂಸ್ಥೆಯದ್ದಾಗಿರುತ್ತದೆ. ಈ ಸಂಸ್ಥೆಯ ಕೊಡುಗೆಯಲ್ಲಿ ಶೇ. 8.33ರಷ್ಟು ಹಣವು ಇಪಿಎಸ್​ಗೆ ಹೋಗುತ್ತದೆ. ಉಳಿದ ಶೇ. 3.67ರಷ್ಟು ಹಣ ಇಪಿಎಫ್ ಅಕೌಂಟ್ ಸೇರುತ್ತದೆ.

ಇದನ್ನೂ ಓದಿ: POMIS: ಈ ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆಯಲ್ಲಿ ಪಿಪಿಎಫ್​ಗಿಂತಲೂ ಹೆಚ್ಚು ಬಡ್ಡಿ

ಈಗ ಮೇಲಿನ 30,000 ರೂ ಮೂಲ ವೇತನದ ವಿಚಾರಕ್ಕೆ ಬಂದರೆ ಇಪಿಎಫ್ ಲೆಕ್ಕ 15,000 ರೂ ಪ್ರಕಾರವೇ ಇರುತ್ತದೆ. 15,000 ರೂ ಮೂಲ ವೇತನಕ್ಕೆ ಕಡಿತವಾಗುವ ಇಪಿಎಫ್ ಮತ್ತು 30,000 ರೂ ಮೂಲವೇತನದವರಿಗೆ ಕಡಿತ ಆಗುವ ಇಪಿಎಫ್ ಎರಡೂ ಸಮಾನವಾಗಿರುತ್ತದೆ.

ಸದ್ಯ ಒಬ್ಬ ಉದ್ಯೋಗಿಯ ಇಪಿಎಫ್ ಕೊಡುಗೆ 1,800 ರೂ ಇರುತ್ತದೆ. ಇದಕ್ಕೆ ಸಂಸ್ಥೆಯಿಂದ ಶೇ. 3.67, ಅಂದರೆ 550.50 ರೂ ಸೇರಿಸಲಾಗುತ್ತದೆ. ಒಟ್ಟು 2,350.50 ರೂ ಆಗುತ್ತದೆ.

ವೇತನ ಮಿತಿಯನ್ನು 21,000 ರೂಗೆ ಏರಿಸಿದರೆ ಉದ್ಯೋಗಿ ವತಿಯಿಂದ 2,520 ರೂ, ಸಂಸ್ಥೆ ವತಿಯಿಂದ 770.70 ರೂ ಸೇರಿ ಒಟ್ಟು 3,290.70 ಆಗುತ್ತದೆ.

ಈಗ ನಿಮ್ಮ ವಯಸ್ಸು 25 ವರ್ಷ ಆಗಿದ್ದು 60 ವರ್ಷದವರೆಗೂ ಉದ್ಯೋಗದಲ್ಲಿ ಇದ್ದಿದ್ದೇ ಆದಲ್ಲಿ ಒಟ್ಟು ಸರ್ವಿಸ್ ಅವಧಿ 35 ವರ್ಷ ಇರುತ್ತದೆ. ಸರ್ಕಾರ ಇಪಿಎಫ್ ಹಣಕ್ಕೆ ವರ್ಷಕ್ಕೆ ಸದ್ಯಕ್ಕೆ ಶೇ. 8.25ರಷ್ಟು ಬಡ್ಡಿ ತುಂಬುತ್ತದೆ. ಇದೇ ಪ್ರಮಾಣದಲ್ಲಿ ಬಡ್ಡಿ ಸೇರುತ್ತಾ ಹೋದರೆ 10.71 ಲಕ್ಷ ಅಸಲು, 60.84 ಲಕ್ಷ ಬಡ್ಡಿ ಸೇರಿ ಒಟ್ಟು 71.55 ಲಕ್ಷ ರೂ ಸಂಪತ್ತು ಸೇರಿರುತ್ತದೆ. ಇದು 15,000 ರೂ ವೇಜ್ ಸೀಲಿಂಗ್ ಇದ್ದಾಗ.

ಇದನ್ನೂ ಓದಿ: ನೀವು ಕೆಲಸ ಮಾಡೋದು ನಿಲ್ಲಿಸಿ ಆರಾಮವಾಗಿ ಬದುಕಬೇಕಾದರೆ ಎಷ್ಟು ಸೇವಿಂಗ್ಸ್ ಹೊಂದಿರಬೇಕು? ತಪ್ಪದೇ ನೋಡಿ ಲೆಕ್ಕಾಚಾರ

ಒಂದು ವೇಳೆ ವೇಜ್ ಸೀಲಿಂಗ್ 21,000 ರೂಗೆ ಏರಿದಾಗ, ಇಪಿಎಫ್ ಫಂಡ್​ನಲ್ಲಿ 28 ಲಕ್ಷ ರೂ ಹೆಚ್ಚುವರಿ ಸೇರ್ಪಡೆಯಾಗುತ್ತದೆ. ನೀವು ನಿವೃತ್ತಿ ಹೊಂದುವ ವೇಳೆಗೆ ಒಂದು ಕೋಟಿಗೂ ಹೆಚ್ಚು ಹಣ ನಿಮ್ಮ ಇಪಿಎಫ್ ಅಕೌಂಟ್​ನಲ್ಲಿ ಇರುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ