POMIS: ಈ ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆಯಲ್ಲಿ ಪಿಪಿಎಫ್​ಗಿಂತಲೂ ಹೆಚ್ಚು ಬಡ್ಡಿ

POMIS- Post Office Monthly Income Scheme: ನೀವು ಲಂಪ್ಸಮ್ ಆಗಿ ಹಣ ಹೂಡಿಕೆ ಮಾಡಿ ಮಾಸಿಕವಾಗಿ ಬಡ್ಡಿಹಣ ಪಡೆಯಬಯಸುತ್ತಿದ್ದರೆ ಪೋಸ್ಟ್ ಆಫೀಸ್ ಮಂಥ್ಲಿ ಇನ್ಕಮ್ ಸ್ಕೀಮ್ ಹೇಳಿ ಮಾಡಿಸಿದ್ದಾಗಿದೆ. ಪಬ್ಲಿಕ್ ಪ್ರಾವಿಡೆಂಟ್ ಫಂಡ್​ಗಿಂತಲೂ ಹೆಚ್ಚು ಬಡ್ಡಿ ಈ ಮಾಸಿಕ ಆದಾಯ ಯೋಜನೆಯಿಂದ ಸಿಗುತ್ತದೆ. 10 ವರ್ಷದ ಮೇಲ್ಪಟ್ಟ ಯಾವುದೇ ವ್ಯಕ್ತಿಗಳು ಈ ಸ್ಕೀಮ್​ನಲ್ಲಿ ಖಾತೆ ಆರಂಭಿಸಬಹುದು.

POMIS: ಈ ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆಯಲ್ಲಿ ಪಿಪಿಎಫ್​ಗಿಂತಲೂ ಹೆಚ್ಚು ಬಡ್ಡಿ
ಹಣ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 17, 2024 | 4:07 PM

ಮಾರುಕಟ್ಟೆಯ ಅನಿಶ್ಚಿತತೆಯ ನಡುವೆ ಜನರಿಗೆ ತಮ್ಮ ಹಣದ ಸುರಕ್ಷತೆ ಪ್ರಧಾನ ಎನಿಸುತ್ತಿದೆ. ಹೆಚ್ಚು ರಿಸ್ಕ್ ತೆಗೆದುಕೊಳ್ಳಲು ಬಯಸದವರು ಬ್ಯಾಂಕ್ ಠೇವಣಿ ಅಥವಾ ಸಣ್ಣ ಉಳಿತಾಯ ಯೋಜನೆಗಳಲ್ಲಿ ಹಣ ಹೂಡಿಕೆ ಮಾಡಿ ನೆಮ್ಮದಿಯಾಗಿರಬಹುದು. ಅಧಿಕ ಬಡ್ಡಿ, ಸ್ಥಿರ ಆದಾಯ ತರುವ ಹೂಡಿಕೆಗಳಲ್ಲಿ ಅಂಚೆ ಕಚೇರಿಯ ಮಾಸಿಕ ಆದಾಯ ಯೋಜನೆ ಒಂದು. ಸರ್ಕಾರದಿಂದ ನಡೆಸಲಾಗುವ ಪೋಸ್ಟ್ ಆಫೀಸ್ ಮಂಥ್ಲಿ ಇನ್ಕಮ್ ಸ್ಕೀಮ್ (ಪಿಒಎಂಐಎಸ್) ಮೂಲಕ ಪಕ್ಕಾ ಸುರಕ್ಷಿತ ಆದಾಯ ಸೃಷ್ಟಿಸಬಹುದು. ಇತರ ಸಣ್ಣ ಉಳಿತಾಯ ಯೋಜನೆಗಳಂತೆ ಪಿಒ ಮಾಸಿಕ ಆದಾಯ ಯೋಜನೆಯ ಬಡ್ಡಿದರವನ್ನು ಪ್ರತೀ ಕ್ವಾರ್ಟರ್​ನಲ್ಲಿ ಪರಿಷ್ಕರಿಸಲಾಗುತ್ತದೆ. ಸದ್ಯ ಈ ಕ್ವಾರ್ಟರ್​ನಲ್ಲಿ ಶೇ. 7.4ರಷ್ಟು ಬಡ್ಡಿ ಇದೆ. ಪಿಪಿಎಫ್​ನ ಶೇ. 7.1ಕ್ಕಿಂತ ಇದು ಹೆಚ್ಚು ಹೆಚ್ಚು ಬಡ್ಡಿ ನೀಡುತ್ತದೆ.

ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯಲ್ಲಿ ಹೂಡಿಕೆ ಹೇಗೆ?

ಇದು ಏಕಕಾಲಕ್ಕೆ ಮಾಡಲಾಗುವ ಹೂಡಿಕೆ. ಐದು ವರ್ಷದ ಸ್ಕೀಮ್ ಇದು. ಕನಿಷ್ಠ ಹೂಡಿಕೆ 1,000 ರೂ ಇದೆ. ಒಂದು ಖಾತೆಯಲ್ಲಿ ಗರಿಷ್ಠ 9 ಲಕ್ಷ ರೂ ಠೇವಣಿ ಇಡಬಹುದು. ಜಂಟಿ ಖಾತೆಯಾದರೆ 15 ಲಕ್ಷ ರೂವರೆಗೂ ಠೇವಣಿ ಇಡಲು ಅವಕಾಶ ಇರುತ್ತದೆ.

ಒಂದಕ್ಕಿಂತ ಹೆಚ್ಚು ಖಾತೆಗಳಲ್ಲಿ ನೀವು ಮಂಥ್ಲಿ ಇನ್ಕಮ್ ಅಕೌಂಟ್​ಗಳನ್ನು ತೆರೆಯಬಹುದಾದರೂ ಒಟ್ಟಾರೆ ಸೇರಿ ಠೇವಣಿಗಳು 9 ಲಕ್ಷ ರೂ ಮೀರುವಂತಿಲ್ಲ.

ನೀವು 5 ಲಕ್ಷ ರೂ ಠೇವಣಿ ಇರಿಸಿದರೆ ತಿಂಗಳಿಗೆ 3,083 ರೂ ಆದಾಯ ಸಿಗುತ್ತಾ ಹೋಗುತ್ತದೆ.

ಒಂಬತ್ತು ಲಕ್ಷ ರೂ ಠೇವಣಿಗೆ ಮಾಸಿಕ ಆದಾಯ 5,550 ರೂ ಇರುತ್ತದೆ. ಜಂಟಿ ಖಾತೆಯ್ಲಿ 15 ಲಕ್ಷ ರೂ ಡೆಪಾಸಿಟ್ ಇಟ್ಟರೆ 9,250 ರೂ ಮಾಸಿಕ ಆದಾಯ ಸೃಷ್ಟಿಯಾಗುತ್ತದೆ.

ಇದನ್ನೂ ಓದಿ: ಎಸ್​ಐಪಿ ಮತ್ತು ಎಸ್​ಡಬ್ಲ್ಯುಪಿ ಸಂಯೋಜನೆಯಲ್ಲಿ ನಿಮ್ಮ ಜೀವನಕ್ಕೊಂದು ಭದ್ರತೆ ನೀಡುವುದು ಹೇಗೆ?

ನೀವು ಠೇವಣಿ ಇರಿಸಿದ ನಂತರ ತಿಂಗಳಿನಿಂದಲೇ ಬಡ್ಡಿ ಆದಾಯ ಸಿಗುತ್ತಾ ಹೋಗುತ್ತದೆ. ಐದು ವರ್ಷದವರೆಗೂ ನಿಮಗೆ ಸ್ಥಿರ ಆದಾಯ ಪ್ರಾಪ್ತವಾಗುತ್ತದೆ. ಐದು ವರ್ಷದ ಬಳಿಕ ನಿಮ್ಮ ಠೇವಣಿ ನಿಮಗೆ ಮರಳುತ್ತದೆ. ಅಗತ್ಯ ಬಿದ್ದರೆ ನೀವು ಮತ್ತೆ ಆ ಯೋಜನೆ ಮುಂದುವರಿಸಿಕೊಂಡು ಹೋಗಬಹುದು.

ಅವಧಿಗೆ ಮುನ್ನ ಠೇವಣಿ ಹಿಂಪಡೆದರೆ?

ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆಯಲ್ಲಿ ನೀವು ಠೇವಣಿ ಇರಿಸಿದ ಬಳಿಕ ಒಂದು ವರ್ಷದವರೆಗೂ ಠೇವಣಿ ಹಣ ಹಿಂಪಡೆಯಲು ಆಗುವುದಿಲ್ಲ. ಬಡ್ಡಿ ಹಣ ಮಾತ್ರವೇ ಸಿಗುತ್ತಿರುತ್ತದೆ. ಒಂದು ವರ್ಷದ ಬಳಿಕ ನೀವು ಅಕೌಂಟ್ ಮುಚ್ಚಲು ಅವಕಾಶ ಇದೆ.

ಠೇವಣಿ ಇಟ್ಟು ಒಂದು ವರ್ಷದ ಬಳಿಕ ಮತ್ತು ಮೂರು ವರ್ಷದ ಒಳಗೆ ಮುಚ್ಚಲ್ಪಟ್ಟರೆ ಠೇವಣಿ ಮೊತ್ತದ ಶೇ. 2ರಷ್ಟು ಹಣವನ್ನು ಮುರಿದುಕೊಂಡು ಉಳಿದ ಮೊತ್ತವನ್ನು ನೀಡಲಾಗುತ್ತದೆ. ಮೂರು ವರ್ಷದ ಬಳಿಕ ಅಕೌಂಟ್ ಕ್ಲೋಸ್ ಮಾಡಿದರೆ ಶೇ. 1ರಷ್ಟು ಹಣವನ್ನು ಮುರಿದುಕೊಳ್ಳಲಾಗುತ್ತದೆ.

ಇದನ್ನೂ ಓದಿ: ನೀವು ಕೆಲಸ ಮಾಡೋದು ನಿಲ್ಲಿಸಿ ಆರಾಮವಾಗಿ ಬದುಕಬೇಕಾದರೆ ಎಷ್ಟು ಸೇವಿಂಗ್ಸ್ ಹೊಂದಿರಬೇಕು? ತಪ್ಪದೇ ನೋಡಿ ಲೆಕ್ಕಾಚಾರ

ಬಡ್ಡಿ ಹಣ ಪಡೆಯದಿದ್ದರೆ ಏನಾಗುತ್ತೆ?

ಅಂಚೆ ಕಚೇರಿ ಮಾಸಿಕ ಬಡ್ಡಿ ಯೋಜನೆಯಲ್ಲಿ ನೀವು ಠೇವಣಿ ಇಟ್ಟರೆ ಪ್ರತೀ ತಿಂಗಳು ನಿಗದಿತ ಬಡ್ಡಿಯನ್ನು ನೀವು ಪಡೆಯಬಹುದು. ಒಂದು ವೇಳೆ ಬಡ್ಡಿಹಣವನ್ನು ಹಿಂಪಡೆಯದೆ ಹಾಗೇ ಬಿಟ್ಟರೆ ಹಣ ಖಾತೆಯಲ್ಲೇ ಇರುತ್ತದೆ. ಈ ಬಡ್ಡಿ ಹಣಕ್ಕೆ ಚಕ್ರಬಡ್ಡಿ ಸೇರುವುದಿಲ್ಲ. ಹಣಕ್ಕೆ ಹಣ ಬೆಳೆಯುತ್ತಾ ಹೋಗುವುದಿಲ್ಲ. ಆದ್ದರಿಂದ ಬಡ್ಡಿಹಣ ಕಾಲಕಾಲಕ್ಕೆ ಹಿಂಪಡೆಯುವುದು ಸೂಕ್ತ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್