ಎಸ್ಐಪಿ ಮತ್ತು ಎಸ್ಡಬ್ಲ್ಯುಪಿ ಸಂಯೋಜನೆಯಲ್ಲಿ ನಿಮ್ಮ ಜೀವನಕ್ಕೊಂದು ಭದ್ರತೆ ನೀಡುವುದು ಹೇಗೆ?
SIP and SWP combination: ಎಸ್ಐಪಿ ಬಗ್ಗೆ ಸಾಕಷ್ಟು ಜನರು ಕೇಳಿರುತ್ತಾರೆ. ಎಸ್ಡಬ್ಲ್ಯುಪಿ ಬಗ್ಗೆ ಹೆಚ್ಚಿನ ಜನರಿಗೆ ಅರಿವಿಲ್ಲ. ಮ್ಯೂಚುವಲ್ ಫಂಡ್ನಲ್ಲಿ ಹೂಡಿಕೆ ಮಾಡುವಾಗ ಎಸ್ಐಪಿ ಜೊತೆಗೆ ಎಸ್ಡಬ್ಲ್ಯುಪಿ ಫೀಚರ್ ಕೂಡ ಇರುತ್ತದೆ. ಫಂಡ್ನಲ್ಲಿ ನೀವು ಲಂಪ್ಸಮ್ ಆಗಿ ಹೂಡಿಕೆ ಮಾಡಿದಾಗ ಎಸ್ಡಬ್ಲ್ಯುಪಿ ಫೀಚರ್ ಆಯ್ಕೆ ಮಾಡಿಕೊಳ್ಳಬಹುದು. ಫಂಡ್ನಲ್ಲಿ ನಿಮ್ಮ ಹೂಡಿಕೆ ಬೆಳೆಯುವುದರ ಜೊತೆಜೊತೆಗೆ ನಿಮಗೆ ಬೇಕಾದಷ್ಟು ಹಣವನ್ನು ಹಿಂಪಡೆಯಬಹುದು.
ಈಗಂತೂ ಹೂಡಿಕೆದಾರರಿಗೆ ಸಿಸ್ಟಮ್ಯಾಟಿಕ್ ಇನ್ವೆಸ್ಟ್ಮೆಂಟ್ ಪ್ಲಾನ್ ಅಥವಾ ಎಸ್ಐಪಿ ಒಂದು ರೀತಿಯಲ್ಲಿ ಮಂತ್ರದಂತಾಗಿ ಹೋಗಿದೆ. ವಾಸ್ತವವಾಗಿ ಎಸ್ಐಪಿ ನಿಮಗೆ ಹಣಕಾಸು ಬಲ ತಂದುಕೊಡುವ ಸ್ಕೀಮ್ ಎಂಬುದು ನೂರಕ್ಕೆ ನೂರು ಸತ್ಯ. ನಿಮ್ಮ ನಿವೃತ್ತಿ ಜೀವನಕ್ಕೆ ಈಗಲೇ ಪ್ಲಾನ್ ಮಾಡುತ್ತಿದ್ದರೆ ಎಸ್ಐಪಿ ಜೊತೆಗೆ ಎಸ್ಡಬ್ಲ್ಯುಪಿ ಎಂಬುದೂ ನೆನಪಿನಲ್ಲಿರಲಿ. ಎಸ್ಡಬ್ಲ್ಯುಪಿ ಎಂದರೆ ಸಿಸ್ಟಮ್ಯಾಟಿಕ್ ವಿತ್ಡ್ರಾಯಲ್ ಪ್ಲಾನ್. ಇದೂ ಕೂಡ ಮ್ಯೂಚುವಲ್ ಫಂಡ್ಗಳಿಂದ ಆಫರ್ ಮಾಡಲಾಗುವ ಫೀಚರ್ ಆಗಿರುತ್ತದೆ.
ಎಸ್ಐಪಿ ಎಂಬುದು ನಿಮಗೆ ನಿಯಮಿತವಾಗಿ ನಿರ್ದಿಷ್ಟ ಮೊತ್ತದ ಹಣವನ್ನು ಹೂಡಿಕೆ ಮಾಡಲು ಇರುವ ಮಾರ್ಗವಾಗಿದೆ. ಪ್ರತೀ ತಿಂಗಳು ನೀವು ಉಳಿಸಿದ ಹಣವನ್ನು ಎಸ್ಐಪಿ ಮೂಲಕ ಮ್ಯೂಚುವಲ್ ಫಂಡ್ನಲ್ಲಿ ಹೂಡಿಕೆ ಮಾಡಬಹುದು.
ಎಸ್ಡಬ್ಲ್ಯುಪಿ ಎಂಬುದು ಒಂದು ಮ್ಯೂಚುವಲ್ ಫಂಡ್ನಲ್ಲಿ ನಿಮ್ಮ ಹೂಡಿಕೆಯನ್ನು ನಿಯಮಿತವಾಗಿ ಹಿಂಪಡೆಯಲು ಅನುವು ಮಾಡಿಕೊಡುವ ಸ್ಕೀಮ್. ನೀವು ಕೆಲಸ ಮಾಡುವುದನ್ನು ನಿಲ್ಲಿಸಿದ ನಂತರದಿಂದ ನಿಮಗೆ ನಿಯಮಿವಾಗಿ ಇದು ಆದಾಯ ತಂದುಕೊಡುತ್ತದೆ.
ಇದನ್ನೂ ಓದಿ: ಎಸ್ಬಿಐನ ಈ ಫಂಡ್ ಭರ್ಜರಿ ಲಾಭ; ತಿಂಗಳಿಗೆ 10,000 ರೂ ಹೂಡಿಕೆ; 3 ವರ್ಷದಲ್ಲಿ 5 ಲಕ್ಷ ರೂ ಸಂಪತ್ತು
ಎಸ್ಐಪಿ ಮತ್ತು ಎಸ್ಡಬ್ಲ್ಯುಪಿ ಡೆಡ್ಲಿ ಕಾಂಬಿನೇಶನ್..!
ನೀವು ಕೆಲಸ ಮಾಡುವ ಹಂತದಲ್ಲಿ ಎಸ್ಐಪಿ ಚಾಲನೆಯಲ್ಲಿ ಇಟ್ಟಿರುತ್ತೀರಿ. ಒಂದೇ ಮ್ಯೂಚುವಲ್ ಫಂಡ್ ಆಗಿರಬಹುದು, ಹೆಚ್ಚಿನ ಫಂಡ್ಗಳಾಗಿರಬಹುದು, ಒಂದಕ್ಕಿಂತ ಹೆಚ್ಚು ಎಷ್ಟು ಬೇಕಾದರೂ ನೀವು ಎಸ್ಐಪಿ ನಡೆಸಬಹುದು. ನೀವು ಬಿಸಿನೆಸ್ ಅಥವಾ ಉದ್ಯೋಗದಲ್ಲಿ ಗಳಿಸುವ ಆದಾಯದಲ್ಲಿ ಎಷ್ಟು ಸಾಧ್ಯವೋ ಅಷ್ಟು ಹಣ ಉಳಿಸಿ ಎಸ್ಐಪಿಗೆ ಸಾಧ್ಯವಾದಷ್ಟು ಹೆಚ್ಚು ಹೂಡಿಕೆ ಮಾಡುವುದು ಗುರಿಯಾಗಿರಬೇಕು.
ನೀವು ನಿವೃತ್ತಿ ಆಗುವವರೆಗೂ ಎಸ್ಐಪಿ ನಡೆಸಿ ಆ ಬಳಿಕ ನಿಲ್ಲಿಸಬಹುದು. ನಿವೃತ್ತಿ ನಂತರ ನಿಮ್ಮ ಎಲ್ಲಾ ಎಸ್ಐಪಿಗಳ ಹಣವನ್ನು ಒಂದೆಡೆ ಹೂಡಿಕೆ ಮಾಡಿ ಎಸ್ಡಬ್ಲ್ಯುಪಿ ಫೀಚರ್ ಆಯ್ಕೆ ಮಾಡಿಕೊಳ್ಳಬಹುದು.
ಇದನ್ನೂ ಓದಿ: ಹೆಲ್ತ್ ಇನ್ಷೂರೆನ್ಸ್ ಪಾಲಿಸಿ: ನಿಮ್ಮ ಕ್ಲೇಮ್ ರಿಜೆಕ್ಟ್ ಆಗುತ್ತಿದೆಯಾ? ಇಲ್ಲಿವೆ 5 ಕಾರಣಗಳು
ಒಂದು ರೀತಿಯಲ್ಲಿ ನೀವು ಲಂಪ್ಸಮ್ ಆಗಿ ಮ್ಯೂಚುವಲ್ ಫಂಡ್ನಲ್ಲಿ ಹಣ ಹಾಕುತ್ತೀರಿ. ಎಸ್ಡಬ್ಲ್ಯುಪಿ ಫೀಚರ್ನಲ್ಲಿ ನೀವು ತಿಂಗಳಿಗೆ ನಿಮಗೆ ಅಗತ್ಯವಾದ ಎಷ್ಟು ಹಣ ಹಿಂಪಡೆಯಬೇಕು ಎಂಬುದನ್ನು ನಿರ್ದಿಷ್ಟಪಡಿಸಿದರೆ ತನ್ನಂತಾನೆ ನಿಮ್ಮ ಖಾತೆಗೆ ಅಷ್ಟು ಹಣ ಬಂದು ಬೀಳುತ್ತಿರುತ್ತದೆ.
ಅದ್ಭುತ ಏನೆಂದರೆ, ನಿಮ್ಮ ಲಂಪ್ಸಮ್ ಹಣ ಹೆಚ್ಚಿದ್ದು, ಅದರಿಂದ ಬೆಳೆಯುವ ಹಣವು ನೀವು ವಿತ್ಡ್ರಾ ಮಾಡಿಕೊಳ್ಳುವ ಮೊತ್ತಕ್ಕಿಂತ ಹೆಚ್ಚಿದ್ದರೆ ಆಗ ಹೂಡಿಕೆ ಮೊತ್ತ ಅಕ್ಷಯಪಾತ್ರೆಯಂತೆ ಮುಂದುವರಿಯುತ್ತಲೇ ಹೋಗುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ