ಬಡವರ ಅಕ್ಕಿ ಬಡವರಿಗೆ ಹೋಗ್ಬೇಕು ಅಷ್ಟೆ, ಅನ್ನ ಭಾಗ್ಯ ಅಕ್ಕಿ ಕಳ್ಳ ಮಾರಾಟ ಮಾಡುವಂತಿಲ್ಲ ಎಚ್ಚರಿಕೆ ನೀಡಿದ ಕರ್ನಾಟಕ ಹೈಕೋರ್ಟ್
ಕರ್ನಾಟಕ ಹೈಕೋರ್ಟ್‌ನಲ್ಲಿ ನಡೆಯುವ ಕೋರ್ಟ್ ಕೇಸ್‌ಗಳಿಗೆ ಸಂಬಂಧಪಟ್ಟ ಕೆಲವೊಂದು ಇಂಟರೆಸ್ಟಿಂಗ್ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಪ್ರತಿ ಬಾರಿಯೂ ಜಡ್ಜ್ ಸಾಹೇಬ್ರ ನ್ಯಾಯದ ಪರವಾದ ತೀರ್ಪು ತೂಕ ಬದ್ಧ ಮಾತುಗಳು ಎಲ್ಲರ ಗಮನ ಸೆಳೆಯುತ್ತಿರುತ್ತವೆ. ಇದೀಗ ಅಂತಹದ್ದೇ ವಿಡಿಯೋವೊಂದು ವೈರಲ್ ಆಗಿದ್ದು, ಬಡವರ ಅಕ್ಕಿ ಬಡವರಿಗೆ ಸೇರ್ಬೇಕು, ಅನ್ನ ಭಾಗ್ಯ ಅಕ್ಕಿಯನ್ನು ಕಳ್ಳ ಮಾರಾಟ ಮಾಡುವಂತಿಲ್ಲ ಎಂದು ಬಡವರ ಪರವಾಗಿ ಅದ್ಭುತವಾಗಿ ಮಾತನಾಡಿದ್ದಾರೆ.
ಬಡವರಿಗೆ ಅನುಕೂಲವಾಗಬೇಕು ಹಾಗೂ ಹಸಿವು ಮುಕ್ತ ರಾಜ್ಯ ಮಾಡುವ ಗುರಿಯನ್ನಿಟ್ಟುಕೊಂಡು ಸರ್ಕಾರ ಬಡವರಿಗಾಗಿ ಅನ್ನ ಭಾಗ್ಯ ಯೋಜನೆಯನ್ನು ಜಾರಿಗೆ ತಂದಿದೆ. ಆದ್ರೆ ಅದೆಷ್ಟೋ ಕಡೆ ಅನ್ನ ಭಾಗ್ಯ ಯೋಜನೆಯಡಿ ಬಡವರಿಗೆ ವಿತರಿಸಬೇಕಿದ್ದ ಅಕ್ಕಿ ಸೇರಿದಂತೆ ಇತರೆ ಆಹಾರ ಧಾನ್ಯ, ದಾಸ್ತಾನು ಕಳ್ಳಸಾಗಣಿಕೆಯಿಂದ ಇತರರ ಪಾಲಾಗುತ್ತಿದೆ. ಹೌದು ಅನ್ನ ಭಾಗ್ಯ ಅಕ್ಕಿಯನ್ನು ಹೊಟೇಲ್‌ನವರಿಗೆ ದುಡ್ಡಿಗಾಗಿ ಮಾರಾಟ ಮಾಡುವ ಕೆಲಸ ನಡೆಯುತ್ತಿದೆ. ಈ ಬಗ್ಗೆ ಕೋರ್ಟ್ ವಿಚಾರಣೆಯ ವೇಳೆ ಮಾತನಾಡಿದ ನ್ಯಾಯಾಧೀಶರು ಬಡವರ ಅಕ್ಕಿ ಬಡವರಿಗೆ ಸೇರ್ಬೇಕು, ಅನ್ನ ಭಾಗ್ಯ ಅಕ್ಕಿಯನ್ನು ಕಳ್ಳ ಮಾರಾಟ ಮಾಡುವಂತಿಲ್ಲ ಎಂದು ಬಡವರ ಪರವಾಗಿ ಅದ್ಭುತವಾಗಿ ಮಾತನಾಡಿದ್ದಾರೆ. ಈ ಕುರಿತ ವಿಡಿಯೋವೊಂದು ಇದೀಗ ಸಖತ್ ವೈರಲ್ ಆಗುತ್ತಿದೆ.
ಕೋರ್ಟ್ ಕಲಾಪದ ವೇಳೆ ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶರು ಅನ್ನ ಭಾಗ್ಯ ಯೋಜನೆ ಸರ್ಕಾರ ಬಡ ಜನರಿಗಾಗಿ ಮಾಡಿದ್ದು, ಆ ಯೋಜನೆಯಿಂದ ಸಿಗುವ ಅಕ್ಕಿ ಬಡವರಿಗೆಯೇ ಸೇರ್ಬೇಕು, ಅದನ್ನು ಯಾರು ಕೂಡಾ ಕಳ್ಳ ಮಾರಾಟ ಮಾಡುವಂತಿಲ್ಲ ಎಂದು ಹೇಳಿದ್ದಾರೆ. ಈ ಕುರಿತ ಪೋಸ್ಟ್ ಒಂದನ್ನು trending__btz ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಬಡವರ ಬಗ್ಗೆ ತಿಳಿದಿರುವ ಜಡ್ಜ್” ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
View this post on Instagram
ವೈರಲ್ ವಿಡಿಯೋದಲ್ಲಿ ಕೋರ್ಟ್ ಕಲಾಪದಲ್ಲಿ ಅನ್ನ ಭಾಗ್ಯ ಸ್ಕೀಮ್ ಸರ್ಕಾರ ಬಡವರಿಗಾಗಿ ತಂದಿದ್ದು, ಆದ್ರೆ ಈ ಅಕ್ಕಿಯನ್ನು ಹೊಟೇಲ್‌ನವರಿಗೆ 15 ರೂಪಾಯಿಗೆ ಮಾರಾಟ ಮಾಡುವ ಕಳ್ಳ ಕೆಲಸ ನಡೆಯುತ್ತಿದೆ. ಬಡವರ ಅಕ್ಕಿ ಬಡವರಿಗೆಯೇ ಸೇರ್ಬೇಕು ಎಂದು ಬಡ ಜನರ ಪರವಾಗಿ ಮಾತನಾಡುವ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: 70 ಎಕರೆ ಹೊಲ, ಟ್ರ್ಯಾಕ್ಟ್ರು, ಕಾರು ಇಷ್ಟೆಲ್ಲಾ ಇದ್ರೂ, ಬಾಳೆಹಣ್ಣು ಮಾರಿ ತುತ್ತು ಅನ್ನ ತಿನ್ನುತ್ತಾರಂತೆ ಈ ಸ್ವಾಭಿಮಾನಿ ತಾತ
ಒಂದು ದಿನದ ಹಿಂದೆ ಹಂಚಿಕೊಳ್ಳಲಾದ ಈ ಪೋಸ್ಟ್ 5 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಸರ್ಕಾರ ಬಡವರಿಗಾಗಿ ಕೊಡುವ ಅಕ್ಕಿಯನ್ನೂ ಕಳ್ಳತನ ಮಾಡೋರಿಗೆ ಏನ್ ಹೇಳೋದು ದೇವ್ರೆʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼನಮ್ಮ ದೇಶಕ್ಕೆ ನಿಮ್ಮಂತ ನ್ಯಾಯಾಧೀಶರ ಅವಶ್ಯಕತೆ ಇದೆ ಸರ್ʼ ಎಂದು ಹೇಳಿದ್ದಾರೆ.
ವೈರಲ್ ಸ್ಟೋರಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ