Viral Video: 60 ಅಡಿ ಎತ್ತರದ ನೀರಿನ ಟ್ಯಾಂಕ್ ಹತ್ತಿದ ಹೋರಿ

ಅಲ್ಲೆಲ್ಲೋ ಅಡ್ಡಾಡುತ್ತಿರುವ ಜನರು ಯಾಕೋ ಟ್ಯಾಂಕಿನ ಕಡೆಗೆ ಕಣ್ಣುಹಾಯಿಸಿದಾಗ ಅಲ್ಲಿದ್ದ ಹೋರಿಯನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಮೆಟ್ಟಿಲುಗಳನ್ನು ಹತ್ತುತ್ತಾ ಅದು 60 ಅಡಿಗಳಷ್ಟು ಎತ್ತರಕ್ಕೆ ಏರಿತ್ತು. ರಾಜಸ್ಥಾನದ ಅಜ್ಮೀರ್​ನಲ್ಲಿ ಘಟನೆ ನಡೆದಿದೆ. ಕ್ರೇನ್ ಬಳಸಿ ಅದ್ಹೇಗೋ ಗಂಟೆಗಳ ಬಳಿಕ ಹೋರಿಯನ್ನು ರಕ್ಷಿಸಲಾಗಿದೆ. ಎತ್ತರದ ಟ್ಯಾಂಕ್ ಮೇಲೆ ನಿಂತಿರುವ ಗೂಳಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Viral Video: 60 ಅಡಿ ಎತ್ತರದ ನೀರಿನ ಟ್ಯಾಂಕ್ ಹತ್ತಿದ ಹೋರಿ
ಟ್ಯಾಂಕ್

Updated on: Jan 11, 2026 | 2:32 PM

ಅಜ್ಮೀರ್, ಜನವರಿ 11: ಅಲ್ಲೆಲ್ಲೋ ಅಡ್ಡಾಡುತ್ತಿರುವ ಜನರು ಯಾಕೋ ಟ್ಯಾಂಕಿನ ಕಡೆಗೆ ಕಣ್ಣುಹಾಯಿಸಿದಾಗ ಅಲ್ಲಿದ್ದ ಹೋರಿಯನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಮೆಟ್ಟಿಲುಗಳನ್ನು ಹತ್ತುತ್ತಾ ಅದು 60 ಅಡಿಗಳಷ್ಟು ಎತ್ತರಕ್ಕೆ ಏರಿತ್ತು. ರಾಜಸ್ಥಾನದ ಅಜ್ಮೀರ್​ನಲ್ಲಿ ಘಟನೆ ನಡೆದಿದೆ. ಕ್ರೇನ್ ಬಳಸಿ ಅದ್ಹೇಗೋ ಗಂಟೆಗಳ ಬಳಿಕ ಹೋರಿಯನ್ನು ರಕ್ಷಿಸಲಾಗಿದೆ. ಎತ್ತರದ ಟ್ಯಾಂಕ್ ಮೇಲೆ ನಿಂತಿರುವ ಗೂಳಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ನೀರಿನ ಟ್ಯಾಂಕ್‌ನ ಮೆಟ್ಟಿಲುಗಳ ಮೇಲೆ ಕಪ್ಪು ಬಣ್ಣದ ಹೋರಿಯೊಂದು ನಿಂತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ನೀರಿನ ಟ್ಯಾಂಕ್ ಮೇಲೆ ಅಷ್ಟು ಎತ್ತರಕ್ಕೆ ತಲುಪಿದ ಬೀದಿ ಹೋರಿಯ ಬಗ್ಗೆ ಜನರು ಆಘಾತ ವ್ಯಕ್ತಪಡಿಸುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದು. ಸಂಜೆ 5 ಟಂಕವಾಸ್ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ.

ಗ್ರಾಮಸ್ಥರು ಟ್ಯಾಂಕ್ ಮೇಲೆ ಹೋರಿ ಬಿದ್ದಿರುವುದನ್ನು ಕಂಡ ತಕ್ಷಣ ಆಡಳಿತಕ್ಕೆ ಮಾಹಿತಿ ನೀಡಿದರು. ಹೋರಿಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಮತ್ತು ನಾಗರಿಕ ರಕ್ಷಣಾ ತಂಡದ ಸದಸ್ಯರು ಸ್ಥಳಕ್ಕೆ ಧಾವಿಸಿದರು. ರಕ್ಷಣಾ ತಂಡವು ಹೋರಿಯ ಬಳಿ ಹೋಗಲು ಪ್ರಯತ್ನಿಸಿದಾಗ, ಅದು ಭಯಪಟ್ಟಿತ್ತು, ಅಷ್ಟು ಎತ್ತರದಿಂದ ಕೆಳಗೆ ಹಾರಲು ಸಹ ಪ್ರಯತ್ನಿಸಿತ್ತು. ಇದರಿಂದಾಗಿ ರಕ್ಷಣಾ ತಂಡವು ಕಾರ್ಯಾಚರಣೆಯನ್ನು ನಿಲ್ಲಿಸಬೇಕಾಯಿತು ಮತ್ತು ಪ್ರಾಣಿಗಳ ಸುರಕ್ಷತೆಗಾಗಿ ಅವರು ಹಿಂದಕ್ಕೆ ಸರಿಯಬೇಕಾಯಿತು.

ಮತ್ತಷ್ಟು ಓದಿ: ತಡರಾತ್ರಿ ಇಲಿ ಪಾಷಾಣ ಆರ್ಡರ್ ಮಾಡಿದ ಮಹಿಳೆಯ ಜೀವ ಉಳಿಸಿದ ಡೆಲಿವರಿ ಬಾಯ್!

ನಂತರ, ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆಗಾಗಿ ಕ್ರೇನ್ ತರಲು ನಿರ್ಧರಿಸಿದರು. ಆದರೆ, ಕ್ರೇನ್ ಸ್ಥಳಕ್ಕೆ ತಲುಪುವ ಹೊತ್ತಿಗೆ ಕತ್ತಲೆಯಾಗಿತ್ತು. ಕಾರ್ಯಾಚರಣೆಯನ್ನು ಮರುದಿನ ಬೆಳಗ್ಗೆಗೆ ಮುಂದೂಡಲಾಯಿತು.

ಆದರೆ, ರಕ್ಷಣಾ ಕಾರ್ಯಾಚರಣೆ ಆರಂಭವಾಗುವ ಮರುದಿನವೇ ಹೋರಿ ತನ್ನಷ್ಟಕ್ಕೆ ತಾನೇ ಕೆಳಗೆ ಇಳಿಯುವಲ್ಲಿ ಯಶಸ್ವಿಯಾಯಿತು. ಅದು ಶಾಂತವಾಗಿ ಕೆಳಗೆ ಬಂದು ನಡೆದುಕೊಂಡು ಹೋಯಿತು. ರಕ್ಷಣಾ ಕಾರ್ಯಾಚರಣೆ ಕೊನೆಗೊಂಡು ಕ್ರೇನ್ ಕಾರ್ಯಾಚರಣೆಯಲ್ಲಿ ಬಳಸದೆ ಹಿಂತಿರುಗಿತು.

 

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ