12549555000 ಕೋಟಿ ರೂ. ವೆಚ್ಚದ ಮಾನವ ನಿರ್ಮಿತ ವಿಶ್ವದ ಅತ್ಯಂತ ದುಬಾರಿ ವಸ್ತುವಿದು

Updated on: Sep 28, 2024 | 11:51 AM

ಬಹು ಕೋಟಿ ವೆಚ್ಚದ ಮಾನವ ನಿರ್ಮಿತ ಅತ್ಯಂತ ದುಬಾರಿ ವಸ್ತುವು ಭೂಮಿಯ ಮೇಲೆ ಇಲ್ಲ. ಬದಲಾಗಿ ಇದು ಬಾಹ್ಯಾಕಾಶದಲ್ಲಿದೆ. ಹೌದು.. ವಿಶ್ವದ ಅತ್ಯಂತ ದುಬಾರಿ ವಸ್ತುವೆಂದರೆ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ.

1 / 6
ಇಡೀ ವಿಶ್ವದಲ್ಲೇ ಅತ್ಯಂತ ದುಬಾರಿ ವಸ್ತು ಯಾವುದು ಗೊತ್ತಾ? ಇದನ್ನು ತಯಾರಿಸಲು  ಸುಮಾರು 12 ವರ್ಷಗಳನ್ನು ತೆಗೆದುಕೊಂಡಿದ್ದು, ಆ ವಸ್ತು ಯಾವುದು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಇಡೀ ವಿಶ್ವದಲ್ಲೇ ಅತ್ಯಂತ ದುಬಾರಿ ವಸ್ತು ಯಾವುದು ಗೊತ್ತಾ? ಇದನ್ನು ತಯಾರಿಸಲು ಸುಮಾರು 12 ವರ್ಷಗಳನ್ನು ತೆಗೆದುಕೊಂಡಿದ್ದು, ಆ ವಸ್ತು ಯಾವುದು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

2 / 6

ಮಾನವ ನಿರ್ಮಿತ ಕೋಟಿ ಕೋಟಿ ಬೆಲೆ ಬಾಳುವ ಅತ್ಯಂತ ದುಬಾರಿ ವಸ್ತುವು ಭೂಮಿಯ ಮೇಲೆ ಇಲ್ಲ. ಬದಲಾಗಿ ಇದು ಬಾಹ್ಯಾಕಾಶದಲ್ಲಿದೆ. ಹೌದು.. ವಿಶ್ವದ ಅತ್ಯಂತ ದುಬಾರಿ ವಸ್ತುವೆಂದರೆ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ.

3 / 6

ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS) $150 ಶತಕೋಟಿ ಅಂದರೆ ಸುಮಾರು 12 ಲಕ್ಷ ಕೋಟಿ ರೂ ವೆಚ್ಚದಲ್ಲಿ ತಯಾರಿಸಲಾಗಿದೆ. ಇದನ್ನು ತಯಾರಿಸಲು ವಿಜ್ಞಾನಿ ಸುಮಾರು 12 ವರ್ಷಗಳ ಕಾಲ ಶ್ರಮ ಪಟ್ಟಿದ್ದಾರೆ. ಇದಲ್ಲದೇ ಇದು ವಿಶ್ವದ ಅತ್ಯಂತ ಬೆಲೆಬಾಳುವ ವಸ್ತು ಎಂಬ ಗಿನ್ನೆಸ್ ವಿಶ್ವ ದಾಖಲೆಯನ್ನೂ ಪಡೆದಿದೆ.

4 / 6

CNBC ಪ್ರಕಾರ, ಈ ಬಾಹ್ಯಾಕಾಶ ನಿಲ್ದಾಣವನ್ನು ನಿರ್ವಹಿಸಲು NASA ವಾರ್ಷಿಕವಾಗಿ $4 ಶತಕೋಟಿ ಖರ್ಚು ಮಾಡುತ್ತದೆ. 1980 ರ ದಶಕದ ಆರಂಭದಲ್ಲಿ, ಫ್ರೀಡಮ್ ಎಂಬ ಮಾಡ್ಯುಲರ್ ಬಾಹ್ಯಾಕಾಶ ನಿಲ್ದಾಣವನ್ನು ನಿರ್ಮಿಸುವ ಕಲ್ಪನೆಯನ್ನು NASA ಕಲ್ಪಿಸಿತು.

5 / 6

ಆದರೆ ಒಟ್ಟು ಖರ್ಚು ವೆಚ್ಚವನ್ನು ನಿರ್ವಹಿಸಲು ಸಾಧ್ಯವಾಗದೇ NASA, ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ (ESA), ರಷ್ಯಾದ ರೋಸ್ಕೋಸ್ಮಾಸ್, ಜಪಾನ್‌ನ JAXA ಮತ್ತು ಕೆನಡಿಯನ್ ಬಾಹ್ಯಾಕಾಶ ಸಂಸ್ಥೆ (CSA) ಸೇರಿದಂತೆ ಅಂತರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆಗಳೊಂದಿಗೆ ಪಾಲುದಾರಿಕೆಯನ್ನು ಹೊಂದಿದೆ.

6 / 6

ಈ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS) ಆಫ್ರಿಕನ್ ದೇಶವಾದ ನಮೀಬಿಯಾದಿಂದ 265 ಮೈಲುಗಳಷ್ಟು ಎತ್ತರದಲ್ಲಿ ಇರಿಸಲಾಗಿದೆ. ಬಾಹ್ಯಾಕಾಶಕ್ಕೆ ಹೋಗುವ ಗಗನಯಾತ್ರಿಗಳು ಇದನ್ನು ಬಳಸುತ್ತಾರೆ.

Published On - 11:50 am, Sat, 28 September 24

Loading...
Unable to load recommendations.
Follow Us