Viral: ಮಂಗಳಮುಖಿಯಂತೆ ವೇಷ ತೊಟ್ಟು ಬಸ್ನಲ್ಲಿ ಭಿಕ್ಷಾಟನೆಗೆ ಬಂದು ಪ್ರಯಾಣಿಕರ ಕೈಯಲ್ಲಿ ತಗ್ಲಾಕೊಂಡ ಯುವಕ
ಮಂಗಳಮುಖಿಯಂತೆ ವೇಷ ಧರಿಸಿ ಹಣ ಪೀಕುವ ಕಾಯಕದಲ್ಲಿ ತೊಡಗಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಘಟನೆಗಳು ಈ ಹಿಂದೆಯೂ ನಡೆದಿವೆ. ಅದೇ ರೀತಿಯ ಘಟನೆಯೊಂದು ಇದೀಗ ನಡೆದಿದ್ದು, ಸೋಮಾರಿ ಯುವಕನೊಬ್ಬ ಮಂಗಳಮುಖಿಯಂತೆ ವೇಷ ತೊಟ್ಟು ಬಸ್ ಒಳಗೆ ಭಿಕ್ಷೆ ಬೇಡಲು ಹೋಗಿ ಸಿಕ್ಕಿಬಿದ್ದಿದ್ದಾನೆ. ಮೈ ಬಗ್ಗಿಸಿ ದುಡಿಯುವ ಬದಲು ಈ ರೀತಿ ಸುಳ್ಳು ಹೇಳಿ ಭಿಕ್ಷಾಟನೆ ಮಾಡ್ತಿಯಾ ಮಗ್ನೇ ಎಂದು ಬಸ್ಸಿನಲ್ಲಿದ್ದ ಪ್ರಯಾಣಿಕರು ಆತನಿಗೆ ಧರ್ಮದೇಟು ಕೊಟ್ಟು ಬಸ್ಸಿಂದ ಹೊರ ಹಾಕಿದ್ದಾರೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಕೆಲ ಸೋಮಾರಿಗಳು ಕೈ ಕಾಲುಗಳು ಸರಿ ಇದ್ರೂ ಕೂಡಾ ದುಡಿಯಲು ಮನಸ್ಸಿಲ್ಲದೆ ಭಿಕ್ಷೆ ಬೇಡುತ್ತಾ ಜೀವನ ಸಾಗಿಸುವ ಕಾಯಕಕ್ಕೆ ಕೈ ಹಾಕುತ್ತಾರೆ. ಹೀಗೆ ಮಂಗಳಮುಖಿಯಂತೆ ವೇಷತೊಟ್ಟು, ಅಂಗವಿಕಲನಂತೆ ನಟಿಸಿ ಸುಳ್ಳು ಹೇಳುತ್ತಾ ಭಿಕ್ಷೆ ಬೇಡುವಾಗ ಸಿಕ್ಕಿಬಿದ್ದ ಅನೇಕ ಘಟನೆಗಳು ಕೂಡಾ ನಡೆದಿವೆ. ಇದೀಗ ಅಂತಹದ್ದೇ ಘಟನೆಯೊಂದು ನಡೆದಿದ್ದು, ಯುವಕನೊಬ್ಬ ಮಂಗಳಮುಖಿಯಂತೆ ವೇಷ ತೊಟ್ಟು ಬಸ್ ಒಳಗೆ ಭಿಕ್ಷೆ ಬೇಡಲು ಹೋಗಿ ಸಿಕ್ಕಿಬಿದ್ದಿದ್ದಾನೆ. ಮೈ ಬಗ್ಗಿಸಿ ದುಡಿಯುವ ಬದಲು ಈ ರೀತಿ ಸುಳ್ಳು ಹೇಳಿ ಭಿಕ್ಷಾಟನೆ ಮಾಡ್ತಿಯಾ ಮಗ್ನೇ ಎಂದು ಬಸ್ಸಿನಲ್ಲಿದ್ದ ಪ್ರಯಾಣಿಕರು ಆತನಿಗೆ ಧರ್ಮದೇಟು ಕೊಟ್ಟು ಬಸ್ಸಿಂದ ಒದ್ದು ಹೊರ ಹಾಕಿದ್ದಾರೆ.
gharkekalesh ಹೆಸರಿನ ಎಕ್ಸ್ ಖಾತೆಯಲ್ಲಿ ಈ ಕುರಿತ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, “ಮಂಗಳಮುಖಿಯಂತೆ ವೇಷ ಧರಿಸಿ ಬಸ್ಸಿನೊಳಗೆ ಭಿಕ್ಷೆ ಬೇಡಲು ಬಂದಾಗ ಸಿಕ್ಕಿಬಿದ್ದ ಯುವಕ” ಎಂಬ ಶಿರ್ಷಿಕೆಯನ್ನು ಬರೆದುಕೊಳ್ಳಲಾಗಿದೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಯುವಕನೊಬ್ಬನಿಗೆ ಬಸ್ಸಿನೊಳಗೆ ಪ್ರಯಾಣಿಕರು ಹಿಗ್ಗಾಮುಗ್ಗಾ ಥಳಿಸುತ್ತಿರುವ ದೃಶ್ಯವನ್ನು ಕಾಣಬಹುದು. ಯುವಕನೊಬ್ಬ ಮಂಗಳಮುಖಿಯಂತೆ ವೇಷ ತೊಟ್ಟು ಬಸ್ಸಿನೊಳಗೆ ಭಿಕ್ಷೆ ಬೇಡಲು ಬಂದ ಸಂದರ್ಭದಲ್ಲಿ ಆತನ ಬಣ್ಣ ಬಯಲಾಗಿದ್ದು, ಮೈ ಬಗ್ಗಿಸಿ ದುಡಿಯುವ ಬದಲು ಈ ರೀತಿ ಸುಳ್ಳು ಹೇಳಿ ಭಿಕ್ಷಾಟನೆ ಮಾಡ್ತಿಯಾ ಮಗ್ನೇ ಎಂದು ಬಸ್ಸಿನಲ್ಲಿದ್ದ ಎಲ್ಲಾ ಪ್ರಯಾಣಿಕರು ಆತನಿಗೆ ಧರ್ಮದೇಟು ನೀಡಿ ಕೊನೆಗೆ ಬಸ್ಸಿನಿಂದ ಒದ್ದು ಹೊರ ಹಾಕಿದ್ದಾರೆ.
ಇದನ್ನೂ ಓದಿ: ಬಲೆಯಲ್ಲಿ ಸಿಲುಕಿದ 10 ಅಡಿ ಉದ್ದದ ದೈತ್ಯ ಹೆಬ್ಬಾವು; ಪ್ರಾಣ ಭಯಕ್ಕೆ ಹಾವನ್ನು ಕೊಂದ ಸ್ಥಳೀಯರು
ವೈರಲ್ ವಿಡಿಯೋ ಇಲ್ಲಿದೆ ನೋಡಿ
Kalesh over this Guy disguised as a Transgender to ask money from Everyone inside Bus pic.twitter.com/MA6WirBXXT
— Ghar Ke Kalesh (@gharkekalesh) September 26, 2024
ಸೆಪ್ಟೆಂಬರ್ 26 ರಂದು ಹಂಚಿಕೊಳ್ಳಲಾದ ಈ ಪೋಸ್ಟ್ 2 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಕೈ ಕಾಲು ಸರಿ ಇರುವಾಗ ಕಷ್ಟಪಟ್ಟು ದುಡಿಯುವ ಬದಲು ಭಿಕ್ಷೆ ಬೇಡುವ ಅವಶ್ಯಕತೆ ಇತ್ತಾʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼರೈಲಿನಲ್ಲಿ ಇಂತಹ ಘಟನೆಗಳು ಪ್ರತಿನಿತ್ಯ ನಡೆಯುತ್ತಲೇ ಇರುತ್ತವೆʼ ಎಂದು ಹೇಳಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ