Viral: ಬಲೆಯಲ್ಲಿ ಸಿಲುಕಿದ 10 ಅಡಿ ಉದ್ದದ ದೈತ್ಯ ಹೆಬ್ಬಾವು; ಪ್ರಾಣ ಭಯಕ್ಕೆ ಹಾವನ್ನು ಕೊಂದ ಸ್ಥಳೀಯರು
ಮಳೆಗಾಲ ಅಥವಾ ಬೇಸಿಗೆಗಾಲದ ಸಮಯದಲ್ಲಿ ಕಾಡಿನಲ್ಲಿರುವ ದೈತ್ಯ ಹಾವುಗಳು ಕೂಡಾ ಜನನಿಬಿಡ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುತ್ತವೆ. ಇದೀಗ ಇಲ್ಲೊಂದು ಕೂಡಾ ಇಂತಹದ್ದೇ ಘಟನೆ ನಡೆದಿದ್ದು, ಕಾಲುವೆಯಲ್ಲಿ ಭಾರೀ ಪ್ರಮಾಣದ ನೀರು ಹರಿದು ಬಂದ ಕಾರಣ ತೋಟದಲ್ಲಿ ದೈತ್ಯ ಹೆಬ್ಬಾವೊಂದು ಕಾಣಿಸಿಕೊಂಡಿದೆ. ಬಲೆಯಲ್ಲಿ ಸಿಲುಕಿದ್ದಂತಹ ಹೆಬ್ಬಾವನ್ನು ಕಂಡು ಪ್ರಾಣ ಭಯದಿಂದ ಸ್ಥಳೀಯರು ಅದನ್ನು ಹೊಡೆದು ಸಾಯಿಸಿದ್ದಾರೆ. ಈ ಕುರಿತ ವಿಡಿಯೋ ಇದೀಗ ವೈರಲ್ ಆಗಿದೆ.
ಹೆಬ್ಬಾವುಗಳಂತಹ ದೈತ್ಯ ಹಾವುಗಳು ಮನುಷ್ಯರನ್ನು ಜೀವಂತವಾಗಿಯೇ ನುಂಗಿ ಹಾಕಿದ ಸಾಕಷ್ಟು ಘಟನೆಗಳು ನಡೆದಿವೆ. ಇದೀ ಕಾರಣಕ್ಕೆ ದೈತ್ಯ ಗಾತ್ರದ ಹಾವುಗಳನ್ನು ಕಂಡ್ರೆ ಬಹುತೇಕ ಎಲ್ರಿಗೂ ಜೀವ ಬಾಯಿಗೆ ಬಂದಂಗೆ ಆಗುತ್ತೆ. ಕೆಲವರಂತೂ ಹಾವುಗಳನ್ನು ಕಂಡರೆ ಕಾಲ್ಕಿತ್ತು ಓಡಿ ಹೋಗುತ್ತಾರೆ. ಅದ್ರೆ ಇಲ್ಲೊಂದು ಗ್ರಾಮದ ಜನ ಪ್ರಾಣ ಭಯದಿಂದ ದೈತ್ಯ ಹೆಬ್ಬಾವನ್ನೇ ಹೊಡೆದು ಸಾಯಿಸಿದ್ದಾರೆ. ಹೌದು ಕಾಲುವೆಯಲ್ಲಿ ಹರಿದು ಬಂದ ಭಾರೀ ಪ್ರಮಾಣದ ನೀರಿನಲ್ಲಿ ತೇಲಿ ಬಂದ 10 ಅಡಿ ಉದ್ದದ ಹೆಬ್ಬಾವೊಂದು ತೋಟದಲ್ಲಿ ಹಾಕಿದ ಬಲೆಯಲ್ಲಿ ಸಿಕ್ಕಿಹಾಕಿಕೊಂಡಿದ್ದು, ಇದರಿಂದ ಬಿಡಿಸಿಕೊಳ್ಳಲು ಪರದಾಡುತ್ತಿದ್ದ ಆ ಹಾವನ್ನು ಸ್ಥಳೀಯರು ದೊಣ್ಣೆಯಲ್ಲಿ ಹೊಡೆದು ಸಾಯಿಸಿದ್ದಾರೆ. ಈ ಕುರಿತ ವಿಡಿಯೋ ಇದೀಗ ವೈರಲ್ ಆಗಿದೆ.
ಈ ಘಟನೆ ಆಂಧ್ರ ಪ್ರದೇಶದ ಕಾಕಿನಾಡ ಜಿಲ್ಲೆಯ ರಾಮಚಂದ್ರಾಪುರ ಗ್ರಾಮದ ಏಟಿಗಟ್ಟು ಎಂಬಲ್ಲಿ ನಡೆದಿದ್ದು, ಬಲೆಯಲ್ಲಿ ಸಿಕ್ಕಿಹಾಕಿಕೊಂಡಿದ್ದಂತಹ 10 ಅಡಿ ಉದ್ದದ ದೈತ್ಯ ಹೆಬ್ಬಾವನ್ನು ಗ್ರಾಮಸ್ಥರು ಹೊಡೆದು ಸಾಯಿಸಿದ್ದಾರೆ. ಇಲ್ಲಿನ ಕಾಲುವೆಯಲ್ಲಿ ಭಾರೀ ಪ್ರಮಾಣದ ನೀರು ಹರಿದು ಬಂದ ಕಾರಣ, ಆ ನೀರಿನಲ್ಲಿ ದೈತ್ಯ ಹೆಬ್ಬಾವೊಂದು ಕೂಡಾ ತೇಲಿ ಬಂದಿದ್ದು, ಆ ಹಾವು ಅಲ್ಲೇ ಪಕ್ಕದ ತೋಟದಲ್ಲಿ ಇದ್ದಂತಹ ಬಲೆಯಲ್ಲಿ ಸಿಕ್ಕಿ ಹಾಕಿಕೊಂಡಿದೆ. ಈ ದೈತ್ಯ ಹಾವನ್ನು ಕಂಡ ಗ್ರಾಮಸ್ಥರು ಪ್ರಾಣ ಭಯದಿಂದ ಹಾವನ್ನು ಹೊಡೆದು ಸಾಯಿಸಿದ್ದಾರೆ.
ChotaNewsTelugu ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಬಲೆಯಲ್ಲಿ ಸಿಕ್ಕಿಹಾಕಿಕೊಂಡಂತಹ 10 ಅಡಿ ಉದ್ದದ ದೈತ್ಯ ಹೆಬ್ಬಾವನ್ನು ಸ್ಥಳೀಯರು ದೊಣ್ಣೆಯಲ್ಲಿ ಹೊಡೆದು ಸಾಯಿಸುವಂತಹ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ; ಮ್ಯಾಟ್ರಿಮೋನಿದಲ್ಲಿ 35ರ ಆಸುಪಾಸಿನ ಮಹಿಳೆಯರನ್ನು ಬಲೆಗೆ ಬೀಳಿಸಿ ಹಣ ದೋಚುತ್ತಿದ್ದ ಭೂಪ
ಸೆಪ್ಟೆಂಬರ್ 26 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಈ ದೃಶ್ಯವನ್ನು ಕಂಡು ನೆಟ್ಟಿಗರು ಬೆಚ್ಚಿ ಬಿದ್ದಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ