Viral: ಮ್ಯಾಟ್ರಿಮೋನಿದಲ್ಲಿ 35ರ ಆಸುಪಾಸಿನ ಮಹಿಳೆಯರನ್ನು ಬಲೆಗೆ ಬೀಳಿಸಿ ಹಣ ದೋಚುತ್ತಿದ್ದ ಭೂಪ
ಮದುವೆಯಾಗುವುದಾಗಿ ನಂಬಿಸಿ ಹಣ, ಒಡವೆ ದೋಚಿಕೊಂಡು ಹೋದ ಖದೀಮರ ಸುದ್ದಿಗಳ ಬಗ್ಗೆ ಆಗಾಗ್ಗೆ ಕೇಳುತ್ತಿರುತ್ತೇವೆ. ಇದೀಗ ಅಂತಹದ್ದೇ ಘಟನೆಯೊಂದು ನಡೆದಿದ್ದು, ಇಲ್ಲೊಬ್ಬ ವ್ಯಕ್ತಿ ಲಕ್ಷ ಲಕ್ಷ ಸಂಬಳ ಬರೋ ಕೆಲಸವನ್ನು ಕಳೆದುಕೊಂಡ ಬಳಿಕ ಸುಲಭದಲ್ಲಿ ಹಣ ಮಾಡಬೇಕೆಂದು ಮ್ಯಾಟ್ರಿಮೋನಿ ಸೈಟ್‌ಗಳಲ್ಲಿ ಮಹಿಳೆಯರನ್ನು ಬಲೆಗೆ ಬೀಳಿಸಿ ಹಣ ದೋಚುತ್ತಿದ್ದ. ಇಲ್ಲಿಯವರೆಗೆ 17 ಮಹಿಳೆಯರಿಗೆ ಈತ ಮೋಸ ಮಾಡಿದ್ದು, ಇದೀಗ ಈತ ಪೊಲೀಸರ ಅತಿಥಿಯಾಗಿದ್ದಾನೆ.

ಐಷಾರಾಮಿ ಜೀವನ ನಡೆಸಲು ಎಂತೆಂಥಾ ಖತರ್ನಾಕ್ ಪ್ಲಾನ್ ಮಾಡುವವರಿದ್ದಾರೆ. ಕೆಲವರು ಕಳ್ಳತನದ ದಾರಿ ಹಿಡಿದ್ರೆ ಇನ್ನೂ ಕೆಲವರು ಮದುವೆಯಾಗುವುದಾಗಿ ನಂಬಿಸಿ ದುಡ್ಡು, ಬಂಗಾರವನ್ನೆಲ್ಲಾ ದೋಚಿ ವಂಚನೆ ಮಾಡುವರಿದ್ದಾರೆ. ಹೀಗೆ ಮದುವೆ ಆಗುವುದಾಗಿ ನಂಬಿಸಿ ಹಣ ದೋಚಿ ಪರಾರಿಯಾದ ಖದೀಮರ ಸುದ್ದಿಗಳು ಕೇಳಿ ಬರುತ್ತಲೇ ಇರುತ್ತವೆ. ಇದೀಗ ಅಂತಹದ್ದೇ ಘಟನೆಯೊಂದು ನಡೆದಿದ್ದು, ಇಲ್ಲೊಬ್ಬ ವ್ಯಕ್ತಿ ಲಕ್ಷ ಲಕ್ಷ ಸಂಬಳ ಬರೋ ಕೆಲಸ ಕಳೆದುಕೊಂಡ ಬಳಿಕ ಸುಲಭದಲ್ಲಿ ಹಣ ಮಾಡಬೇಕೆಂದು ಮ್ಯಾಟ್ರಿಮೋನಿ ಸೈಟ್‌ಗಳಲ್ಲಿ ಮಹಿಳೆಯರನ್ನು ಬಲೆಗೆ ಬೀಳಿಸಿ ಹಣ ದೋಚುತ್ತಿದ್ದ. ಇಲ್ಲಿಯವರೆಗೆ 17 ಮಹಿಳೆಯರಿಗೆ ಈತ ಮೋಸ ಮಾಡಿದ್ದು, ಇದೀಗ ಈತ ಪೊಲೀಸರ ಅತಿಥಿಯಾಗಿದ್ದಾನೆ.
ಈ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದ್ದು, ಮದುವೆಯಾಗುವುದಾಗಿ ನಂಬಿಸಿ ಮಹಿಳೆಯರಿಂದ ಲಕ್ಷ ಲಕ್ಷ ಹಣ ಪೀಕಿ ಪರಾರಿಯಾಗುತ್ತಿದ್ದ ಖದೀಮನನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ವಿಪ್ರೋ ಕಂಪೆನಿಯಲ್ಲಿ 1.37 ಲಕ್ಷ ಸಂಬಳ ಬರುವ ಕೆಲಸ ಮಾಡ್ತಿದ್ದ ರಾಹುಲ್ ಚತುರ್ವೇದಿ ಎಂಬ ಖತರ್ನಾಕ್ ಕೆಲಸ ಕಳೆದುಕೊಂಡ ಬಳಿಕ ಸುಲಭ ದಾರಿಯಲ್ಲಿ ಹಣ ಗಳಿಸಲು ಮ್ಯಾಟ್ರಿಮೋನಿ ಸೈಟ್‌ಗಳಲ್ಲಿ ನಕಲಿ ಖಾತೆ ತೆರೆದು, 35 ರ ಆಸುಪಾಸಿನ ವಯಸ್ಸಿನ ಮಹಿಳೆಯರನ್ನೇ ಟಾರ್ಗೆಟ್ ಮಾಡಿಕೊಂಡು ಅವರನ್ನು ಮದುವೆಯಾಗುವುದಾಗಿ ನಂಬಿಸಿ ಹಣ ದೋಚುತ್ತಿದ್ದ. ಈವರೆಗೆ ಈತ ಮದುವೆಯಾಗುವುದಾಗಿ ನಂಬಿಸಿ ಸುಮಾರು 17 ಮಹಿಳೆಯರಿಗೆ ವಂಚನೆ ಮಾಡಿದ್ದಾನೆ.
ಇದನ್ನೂ ಓದಿ: 70 ಹರೆಯದ ಮುದುಕನನ್ನು ಮದುವೆಯಾದ 20ರ ತರುಣಿ
ವೈರಲ್ ವಿಡಿಯೋ ಇಲ್ಲಿದೆ ನೋಡಿ
ये है राहुल चतुर्वेदी। IIM बेंगलोर से पासआउट है। विप्रो कंपनी बेंगलोर में 1.37 लाख सेलरी पर रीजनल मैनेजर रह चुका है।
वर्तमान धंधा : मैट्रिमोनियल साइट पर प्रोफाइल बनाकर 35 उम्र वाली कुल 17 युवतियों से दोस्ती की, शादी का झांसा देकर उनको ठगा।
नोएडा पुलिस ने धर दबोचा। pic.twitter.com/V1tEVGv9B8
— Sachin Gupta (@SachinGuptaUP) September 24, 2024
ಈ ಬಗ್ಗೆ ವಂಚನೆಗೊಳಗಾದ ಮಹಿಳೆಯೊಬ್ಬರು ದೂರನ್ನು ನೀಡಿದ್ದು, ದೂರಿನ ಆಧಾರ ಮೇರೆಗೆ ನೋಯ್ಡಾ ಪೊಲೀಸರು ಈ ಖದೀಮನನ್ನು ಬಂಧಿಸಿದ್ದಾರೆ. ಪೊಲೀಸ್ ಮೂಲದ ಮಾಹಿತಿಯ ಪ್ರಕಾರ ʼ39 ವರ್ಷದ ರಾಹುಲ್ ಚತುರ್ವೇದಿ ವಿವಿಧ ಮ್ಯಾಟ್ರಿಮೋನಿ ವೆಬ್‌ಸೈಟ್‌ಗಳಲ್ಲಿ ನಕಲಿ ಖಾತೆಯನ್ನು ತೆರೆದು ಸುಮಾರು 35 ರ ಆಸುಪಾಸಿನ ಮಹಿಳೆಯರನ್ನು ಟಾರ್ಗೆಟ್ ಮಾಡಿ ಆ ಮಹಿಳೆಯರನ್ನು ಬಲೆಗೆ ಬೀಳಿಸುತ್ತಿದ್ದ. ನಂತರ ಮದುವೆಯಾಗುವುದಾಗಿ ನಂಬಿಸಿ ಸ್ನೇಹ ಬೆಳೆಸಿ ಕೊನೆಗೆ ವಿವಿಧ ಆಮಿಷ ಒಡ್ಡಿ ಆ ಮಹಿಳೆಯರಿಂದ ಲಕ್ಷಾಂತರ ರೂಪಾಯಿ ಹಣ ವಸೂಲಿ ಮಾಡುತ್ತಿದ್ದ.ʼ ಕೆಲವು ತಿಂಗಳುಗಳಿಂದ ಇಂತಹ ವಂಚನೆಯ ಹಲವಾರು ದೂರುಗಳು ಬಂದಿವೆ ಎಂದು ನೋಯ್ಡಾ ಪೊಲೀಸರು ತಿಳಿಸಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:32 pm, Fri, 27 September 24




