
ಕಳೆದ ಎರಡು ತಿಂಗಳಿನಿಂದ ಪುಷ್ಪ (Pushpa) ಚಿತ್ರದ ಶ್ರೀವಲ್ಲಿ(Srivalli song) ಹಾಡು ಹೊಸ ಟ್ರೆಂಡ್ಅನ್ನೇ ಸೃಷ್ಟಿ ಮಾಡಿದೆ. ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ನಟನೆಯ ಪುಷ್ಪ ಚಿತ್ರ ಭಾರತ ಮಾತ್ರವಲ್ಲದೆ ವಿದೇಶಗಳ್ಳೂ ಸುದ್ದಿ ಮಾಡಿದ್ದು ತಿಳಿದಿದೆ. ಇದೀಗ ಬ್ಯಾಡ್ಮಿಂಟನ್ ತಾರೆ ಜ್ವಾಲಾಗುಟ್ಟಾ (Jwala Gutta) ಅವರ ತಾಯಿ ಶ್ರೀವಲ್ಲಿ ಹಾಡಿಗೆ ಸಖತ್ ಹೆಜ್ಜೆ ಹಾಕಿದ್ದಾರೆ. ಜ್ವಾಲಾ ಗುಟ್ಟಾ ತಾಯಿ ಯೆಲನಾ ಗುಟ್ಟಾ ಶ್ರೀವಲ್ಲಿ ಹಾಡಿನ ಸಿಗ್ನೇಚರ್ ಸ್ಟೆಪ್ ಹಾಕಿದ್ದಾರೆ. ಇದರ ವಿಡಿಯೋ ವೈರಲ್ ಆಗಿದೆ.
ಜ್ವಾಲಾ ಗುಟ್ಟ ತಮ್ಮ ಟ್ವಿಟರ್ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದು, ನನ್ನ ಅಮ್ಮನಿಗೂ ಪುಷ್ಪ ಮ್ಯಾಡ್ನೆಸ್ ಶುರುವಾಗಿದೆ ಎಂದು ಕ್ಯಾಪ್ಷನ್ ನೀಡಿದ್ದಾರೆ. ವಿಡಿಯೋ ನೋಡಿ ಅಲ್ಲು ಅರ್ಜುನ್ ಕೂಡ ಕಾಮೆಂಟ್ ಮಾಡಿದ್ದಾರೆ. ಯೆಲನಾ ಗುಟ್ಟ ಸ್ಟೆಪ್ ನೋಡಿ ನಗುವ ಎಮೋಜಿಯೊಂದಿಗೆ ಕಾಮೆಂಟ್ ಮಾಡಿದ್ದಾರೆ.
ಟ್ವಿಟರ್ನಲ್ಲಿ ವೈರಲ್ ಆದ ವಿಡಿಯೋ 11 ಸಾವಿರಕ್ಕೂ ಹೆಚ್ಚು ಲೈಕ್ಸ್ ಗಳಿಸಿದ್ದು,ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ಜ್ವಾಲಾಗುಟ್ಟ ಭಾರತೀಯ ಬ್ಯಾಡ್ಮಿಂಟನ್ ಆಟಗಾರ್ತಿ. ಇವರು ನಟ ವಿಷ್ಣು ವಿಶಾಲ್ ಅವರನ್ನು ವಿವಾಹವಾಗಿದ್ದಾರೆ. 199 ರಿಂದ ಭಾರತವನ್ನು ಬ್ಯಾಡ್ಮಿಂಟನ್ನಲ್ಲಿ ಪ್ರತಿನಿಧಿಸುತ್ತಿದ್ದರು.
ಜ್ವಾಲಾಗುಟ್ಟಾ ಮಹಿಳಾ ದಿನಾಚರಣೆಯ ದಿನ ಮಾತನಾಡಿ, ನಾನಿರುವ ರೂಪವನ್ನು ನೋಡಿ ಚೀನಾ ಮೂಲದವರು, ಭಾರತೀಯರೆನ್ನಲು ಪುರಾವೆಗಳನ್ನು ತೋರಿಸಿ ಎನ್ನುವ ಹಲವು ಟೀಕೆಯ ಮಾತುಗಳು ಈ ಹಿಂದೆ ಕೇಳಿಬಂದಿವೆ ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ:
Viral Video: ಲತಾ ಮಂಗೇಶ್ಕರ್ ಹಾಡನ್ನು ಹಾಡಿ ನೆಟ್ಟಿಗರ ಮನಗೆದ್ದ ತಂದೆ ಮಗಳ ಜೋಡಿ