Video: ಸಣ್ಣ ಪುಟ್ಟ ಕೆಲಸಕ್ಕೂ ಟೈಮ್‌ ಇಲ್ಲ; ಕೆಲಸ ಸಿಕ್ಕ ಮೇಲೆ ಬದಲಾದ ಬದುಕಿನ ಬಗ್ಗೆ ಬೇಸರ ವ್ಯಕ್ತಪಡಿಸಿದ ಯುವತಿ

ಉದ್ಯೋಗಕ್ಕೆ ಸೇರಿದ ಬಳಿಕ ಜವಾಬ್ದಾರಿಗಳು ಹೆಚ್ಚಾಗುತ್ತವೆ. ಸಾಮಾನ್ಯ ವಿಚಾರಗಳು ಕೂಡ ದೊಡ್ಡದಾಗಿ ಕಾಣುತ್ತದೆ. ಇಲ್ಲೊಬ್ಬ ಯುವತಿಗೂ ಇದೇ ಅನುಭವವಾಗಿದೆ. ಕೆಲಸ ಸಿಕ್ಕ ಬಳಿಕ ತಾನು ಇಷ್ಟ ಪಟ್ಟು ಮಾಡುತ್ತಿದ್ದ ಕೆಲಸಗಳನ್ನು ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾಳೆ. ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಸಣ್ಣ ಪುಟ್ಟ ಕೆಲಸಕ್ಕೂ ಟೈಮ್‌ ಇಲ್ಲ; ಕೆಲಸ ಸಿಕ್ಕ ಮೇಲೆ ಬದಲಾದ ಬದುಕಿನ ಬಗ್ಗೆ ಬೇಸರ ವ್ಯಕ್ತಪಡಿಸಿದ ಯುವತಿ
ವೈರಲ್‌ ವಿಡಿಯೋ
Image Credit source: Instagram

Updated on: Oct 04, 2026 | 7:31 PM

ಓದು ಮುಗಿಯುತ್ತಿದ್ದಂತೆ ಉದ್ಯೋಗ (employee) ಹುಡುಕುವತ್ತ ಗಮನ ಹರಿಸುತ್ತಾರೆ. ಆದರೆ ಉದ್ಯೋಗ ಸಿಕ್ಕ ಬಳಿಕ ದಿನಚರಿಗಳೇ ಬದಲಾಗುತ್ತವೆ. ಲೈಫ್ ಎಂಜಾಯ್ ಮಾಡುವುದನ್ನು ಬಿಡಿ, ದಿನನಿತ್ಯದ ಕೆಲಸಗಳಿಗೆ ಸಮಯವಿಲ್ಲ. ಇದೀಗ ಉದ್ಯೋಗ ಸಿಕ್ಕ ಬಳಿಕ ದೈನಂದಿನ ಜೀವನದಲ್ಲಾದ ಪ್ರಮುಖ ಬದಲಾವಣೆಗಳ ಬಗ್ಗೆ ಯುವತಿ ಮಾತನಾಡಿದ್ದಾಳೆ. ನಿದ್ದೆ, ಹವ್ಯಾಸ ಹಾಗೂ ಸಿನಿಮಾ ವೀಕ್ಷಣೆ ಇದ್ಯಾವುದಕ್ಕೂ ಸಮಯವಿಲ್ಲ ಎಂದು ವಾಸ್ತವ ಸ್ಥಿತಿ ವಿವರಿಸಿದ್ದಾಳೆ. ಈ ವಿಡಿಯೋ ಸದ್ಯ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಯುವತಿಯ ಮಾತನ್ನು ನೆಟ್ಟಿಗರು ಒಪ್ಪಿದ್ದಾರೆ.

ಕೆಲಸ ಸಿಕ್ಕ ಮೇಲೆ ಬದುಕೇ ಬದಲಾಯ್ತು

ಕುಲ್ಜೋತ್ ಕೌರ್ (Kuljot Kaur) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಯುವತಿ ತನ್ನ ಜೀವನದಲ್ಲಾದ ಪ್ರಮುಖ ಬದಲಾವಣೆಗಳ ಬಗ್ಗೆ ಮಾತನಾಡಿದ್ದಾಳೆ. ಈ ವಿಡಿಯೋದ ಶೀರ್ಷಿಕೆಯಲ್ಲಿ ಗೋಲ್ಡನ್ ಎರಾ ಎಂದು ಬರೆದುಕೊಂಡಿದ್ದಾಳೆ. ಕೆಲಸಕ್ಕೆ ಸೇರಿದ ಬಳಿಕ ಮಧ್ಯಾಹ್ನದ ನಿದ್ದೆ ಮಾಡಲು ಆಗುತ್ತಿಲ್ಲ. ನಿದ್ದೆ ಎಂಬುದು ಲಕ್ಷುರಿ ಎಂಬುದು ಈಗ ಅರಿವಿಗೆ ಬರುತ್ತಿದೆ. ಜಾಬ್‌ಗೆ ಸೇರುವ ಮುನ್ನ ತನ್ನ ಸ್ನೇಹಿತರನ್ನು ಭೇಟಿಯಾಗುತ್ತಿದ್ದೆ, ಅವರ ಜತೆಗೆ ಶಾಪಿಂಗ್‌ಗೆ ಹೋಗುತ್ತಿದ್ದೆ. ಆದರೆ ಈಗ ವಾರದ ರಜಾ ದಿನಗಳಲ್ಲಿ ಎಲ್ಲಿಗೂ ಹೋಗಲು ಮನಸ್ಸಿಲ್ಲ. ಹಾಸಿಗೆಯಿಂದ ಏಳಲು ಸಾಧ್ಯವಾಗದಷ್ಟು ದೇಹವು ಆಯಾಸಗೊಳ್ಳುತ್ತದೆ ಎಂದಿದ್ದಾಳೆ.

ಕೆಲಸ ಮಾಡಿ ಸುಸ್ತು ಬಿಟ್ಟರೆ ಬೇರೇನೂ ಇಲ್ಲ

ಸಂಜೆ 5 ಗಂಟೆ ನಂತರ ಟೈಮ್ ಸಿಗುತ್ತಿತ್ತು, ಆದರೆ ಈಗ ಟೈಮ್ ಇಲ್ಲ. ಕೆಲಸ ಮುಗಿದ ಬಳಿಕ ಆಯಾಸ ಬಿಟ್ಟರೆ ಏನು ಇಲ್ಲ. ಹಿಂದೆಲ್ಲಾ ಸಿನಿಮಾ ನೋಡುವ ಹುಚ್ಚು ತುಂಬಾ ಇತ್ತು. ಆಗ ಒಂದೇ ಬಾರಿಗೆ ಸಿನಿಮಾ ನೋಡಿ ಮುಗಿಸಲು ಸಮಯವಿಲ್ಲ. ಈ ಸಿನಿಮಾಗಳನ್ನೇ ವೆಬ್ ಸೀರಿಸ್ ಆಗಿ ಪರಿವರ್ತಿಸಿದ್ದೇನೆ ಎಂದು ಹೇಳಿದ್ದಾಳೆ.

ಹವ್ಯಾಸಗಳತ್ತ ಗಮನ ಹರಿಸಲು ಟೈಮ್‌ ಇಲ್ಲ

ಕೆಲಸ ಸಿಗುವ ಮುನ್ನ ನಾನು ಫ್ರೀ ಇದ್ದಾಗ ಸಿಕ್ಕ ಸಮಯದಲ್ಲೇ ಹವ್ಯಾಸಗಳತ್ತ ಗಮನ ಹರಿಸುತ್ತಿದ್ದೆ. ಹೀಗಾಗಿ ಪ್ರತ್ಯೇಕ ಸಮಯ ಮೀಸಲಿಡಬೇಕಾದ ಅಗತ್ಯ ಇರಲಿಲ್ಲ. ಆದರೆ ಈಗ ನನ್ನ ಇಷ್ಟ ಕೆಲಸ ಹಾಗೂ ಹವ್ಯಾಸಗಳತ್ತ ಗಮನ ಹರಿಸಲು ನನಗೆ ಸಮಯವೇ ಸಿಗುತ್ತಿಲ್ಲ ಎಂದು ಇಲ್ಲಿ ಉಲ್ಲೇಖಿಸಿದ್ದಾಳೆ.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಓವರ್‌ಟೈಮ್ ಇಲ್ಲ, ಕ್ವಿಕ್ ಕಾಲ್ ಇಲ್ವೇ ಇಲ್ಲ; ಜರ್ಮನಿಯ ಕೆಲಸದ ಸಂಸ್ಕೃತಿಗೆ ಇಂಡಿಯನ್ ಲೇಡಿ ಫುಲ್‌ ಫಿದಾ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಒಂದೊಂದು ಹಂತದಲ್ಲೂ ಒಂದೊಂದು ರೀತಿ ಅನುಭವವಾಗುತ್ತದೆ ಎಂದಿದ್ದಾರೆ. ಇನ್ನೊಬ್ಬರು, ಎಲ್ಲವನ್ನು ಸಮಾನವಾಗಿ ಸ್ವೀಕರಿಸುವ ಗುಣ ಮುಖ್ಯ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರ, ಇದು ಕೆಲಸ ಸೇರಿದ ಎಲ್ಲಾ ಉದ್ಯೋಗಿಗಳ ಪಾಡು ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Loading...
Unable to load recommendations.
Follow Us