Viral Video : ಲತಾ ಮಂಗೇಶ್ಕರ್ ‘ಕ್ರಾಂತಿ’ ಹಾಡಿಗೆ ವೃದ್ಧದಂಪತಿ ಲಿಪ್​ ಸಿಂಕ್; 2 ಮಿಲಿಯನ್​ ವೀಕ್ಷಣೆ​

Kranthi : ಇರುವುದೊಂದೇ ಜೀವನ. ಕ್ಷಣಕ್ಷಣಕ್ಕೂ ಜೀವಂತಿಕೆಯಿಂದ ನಿಮ್ಮ ಮನಸ್ಸಿಗೆ ಒಪ್ಪುವಂತೆ ಬದುಕುವುದು ಮುಖ್ಯ. ಏಕೆಂದರೆ, ನೀವು ಹಾದು ಬಂದ ಹಾದಿ ನಿಮಗೇ ಗೊತ್ತು! ಈ ರೀಲ್ಸ್ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ.

Viral Video : ಲತಾ ಮಂಗೇಶ್ಕರ್ ಕ್ರಾಂತಿ ಹಾಡಿಗೆ ವೃದ್ಧದಂಪತಿ ಲಿಪ್​ ಸಿಂಕ್; 2 ಮಿಲಿಯನ್​ ವೀಕ್ಷಣೆ​
ನಂದಾ ಚೌಹಾಣ ದಂಪತಿ
Edited By: ಶ್ರೀದೇವಿ ಕಳಸದ

Updated on: May 22, 2023 | 1:21 PM

Old Couple : ಮಕ್ಕಳೆಲ್ಲ ದೊಡ್ಡವರಾದಂತೆ ಅವರವರ ವೃತ್ತಿ, ಸಂಸಾರದೊಳಗೆ ಮುಳುಗಿಬಿಡುತ್ತಾರೆ. ಮಕ್ಕಳನ್ನು ಸಾಕಿಸಲುಹಿ ಅವರನ್ನು ಒಂದು ಹಂತಕ್ಕೆ ತಂದ ಮೇಲೆ ಪೋಷಕರು ಒಂಟಿತನ ಅನುಭವಿಸಲು ಶುರುಮಾಡುತ್ತಾರೆ. ವಯೋಸಹಜ ಮತ್ತು ಮನೋಸಹಜ ಏರಿಳಿತಗಳು ಅವರನ್ನು ಹಣ್ಣಾಗಿಸುತ್ತವೆ. ಸಮಾನಮನಸ್ಕರಿಗಾಗಿ ಪರಿತಪಿಸುತ್ತ ಎಷ್ಟೋ ಸಲ ತಮ್ಮ ತಮ್ಮ ಗೂಡುಗಳಲ್ಲಿಯೇ ಉಳಿದುಬಿಡುತ್ತಾರೆ. ಆದರೆ ಇಂಥವರಿಗೆ ಉಸಿರಾಡಲು ಇಂದು ನೆರವಾಗಿರುವುದು ಮೊಬೈಲ್​ ಮೂಲಕ ಸಾಮಾಜಿಕ ಜಾಲತಾಣಗಳೊಂದಿಗೆ ಸಂಪರ್ಕ ಸಾಧಿಸುವುದು. ಇದೀಗ ವೈರಲ್ ಆಗಿರುವ ಈ ಕೆಳಗಿನ ವಿಡಿಯೋ ನೋಡಿ.

 

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಕ್ರಾಂತಿ ಸಿನೆಮಾದಲ್ಲಿ ಲತಾ ಮಂಗೇಶ್ಕರ್ ಮತ್ತು ನಿತಿನ್​ ಮುಖೇಶ್​ ಹಾಡಿರುವ ಈ ಹಾಡಿಗೆ ಈ ವೃದ್ಧದಂಪತಿ ಲಿಪ್​ ಸಿಂಕ್​ ಮಾಡಿದ್ದಾರೆ. ಇವರಿಬ್ಬರ ಲವಲವಿಕೆಯ ಈ ವಿಡಿಯೋ ಅನ್ನು ಈಗಾಗಲೇ 2 ಮಿಲಿಯನ್​ಗಿಂತಲೂ ಹೆಚ್ಚು ಜನರು ನೋಡಿದ್ದಾರೆ. ನಂದಾ ಚೌಹಾಣ್​ ಎಂಬುವವರು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ಈ ಖಾತೆಯಲ್ಲಿ ಈ ದಂಪತಿಯ ಸಾಕಷ್ಟು ವಿಡಿಯೋಗಳನ್ನು ನೋಡಬಹುದಾಗಿದೆ.

ನೆಟ್ಟಿಗರು ಈ ಸೋಮವಾರ ಇಂಥಾ ಒಳ್ಳೆಯ ರೀಲ್ಸ್​ ನೋಡಿ ಮೂಡ್ ಫ್ರೆಷ್ ಆಯಿತು ಎಂದು ಉತ್ಸಾಹಗೊಂಡಿದ್ದಾರೆ. ನಿಮ್ಮಿಬ್ಬರನ್ನೂ ಆ ದೇವರು ಮತ್ತಷ್ಟು ಆರೋಗ್ಯ, ಆಯಸ್ಸು ಕೊಟ್ಟು ಕಾಪಾಡಲಿ. ನೀವು ಹೀಗೇ ಖುಷಿಯಿಂದ ಇರಿ ಎಂದು ಅನೇಕರು ಹಾರೈಸಿದ್ಧಾರೆ. ಇದು ನಿಜವಾದ ಪ್ರೀತಿ. ಅವರ ಪತ್ನಿಯ ಉತ್ಸಾಹ ನಿಜಕ್ಕೂ ಶ್ಲಾಘನೀಯ ಎಂದಿದ್ದಾರೆ ಇನ್ನೂ ಕೆಲವರು.

ಈ ಹಾಡು ಕೂಡ ಮನಸ್ಸು ತಟ್ಟುವಂತಿದೆ. ಹಾಗೆಯೇ ಈ ಹಿರಿಯರ ಅಭಿನಯವೂ. ವಾಹ್​ ಆಂಟೀ, ನಿಮ್ಮಂತೆ ನನ್ನ ತಾಯಿಯೂ ರೀಲ್ಸ್ ಮಾಡಲು ಇಚ್ಛಿಸುತ್ತಾರೆ. ಆದರೆ ನನ್ನ ತಂದೆ ಇದಕ್ಕೆ ಸಹಕರಿಸುವುದಿಲ್ಲ. ನಿಮ್ಮನ್ನು ನೋಡಿ ಬಹಳ ಖುಷಿ ಆಗುತ್ತಿದೆ ಎಂದು ಒಬ್ಬರು ಹೇಳಿದ್ದಾರೆ.

ಇರುವುದೊಂದೇ ಜೀವನ. ಕ್ಷಣಕ್ಷಣಕ್ಕೂ ಜೀವಂತಿಕೆಯಿಂದ ನಿಮ್ಮ ಮನಸ್ಸಿಗೆ ಒಪ್ಪುವಂತೆ ಬದುಕುವುದು ಮುಖ್ಯ. ಏಕೆಂದರೆ, ನೀವು ಹಾದು ಬಂದ ಹಾದಿ ನಿಮಗೇ ಗೊತ್ತು! ಏನಂತೀರಿ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

 

Web contact

TV9 Kannada

Read More
Follow Us