Long Nosed Snake: ಉದ್ದ ಮೂಗು ಹೊಂದಿರುವ ಹೊಸ ಜಾತಿಯ ಹಾವು ಪತ್ತೆ

|

Updated on: Sep 12, 2024 | 6:21 PM

ಸಂಶೋಧಕರ ತಂಡ ನೀಡಿರುವ ವಿವರಗಳ ಪ್ರಕಾರ ಇದುವರೆಗೆ ಈ ಹಾವು ಬಿಹಾರ ಮತ್ತು ಮೇಘಾಲಯದಲ್ಲಿ ಎರಡು ಕಡೆ ಮಾತ್ರ ಕಾಣಿಸಿಕೊಂಡಿದೆ. ಈ ಹಾವಿನ ಉದ್ದ 4 ಅಡಿಗಳವರೆಗೆ ಇರುತ್ತದೆ. ಇದರ ತಲೆ ತ್ರಿಕೋನ ಆಕಾರ ಮತ್ತು ಮೂಗು ತುಂಬಾ ಉದ್ದವಾಗಿದ್ದು, ಇದು ಸಂಪೂರ್ಣವಾಗಿ ಹೊಸ ಜಾತಿಯ ಹಾವು ಎಂದು ಘೋಷಿಸಿದ್ದಾರೆ.

Long Nosed Snake: ಉದ್ದ ಮೂಗು ಹೊಂದಿರುವ ಹೊಸ ಜಾತಿಯ ಹಾವು ಪತ್ತೆ
Long Nosed Snake
Follow us on

ಬಿಹಾರದ ಪಶ್ಚಿಮ ಚಂಪಾರಣ್‌ನ ವಾಲ್ಮೀಕಿ ಹುಲಿ ಸಂರಕ್ಷಿತ ಪ್ರದೇಶದ ಬಳಿ ಸಂಶೋಧಕರು ಹೊಸ ಜಾತಿಯ ಹಾವನ್ನು ಗುರುತಿಸಿದ್ದಾರೆ. ಈ ಹಾವಿನ ವಿಶಿಷ್ಟತೆಯೆಂದರೆ, ಈ ಹಾವು ಉದ್ದವಾದ ಮೂಗನ್ನು ಹೊಂದಿದ್ದು, ಇದಕ್ಕೆ ಅಹತುಲ್ಲಾ ಲಾಂಗಿರೋಸ್ಟ್ರಿಸ್ ಎಂದು ಹೆಸರಿಟ್ಟಿದ್ದಾರೆ. ಇದರ ಅರ್ಥ ಉದ್ದ ಮೂಗಿನ ಹಾವು. ವಾಲ್ಮೀಕಿ ಹುಲಿ ಸಂರಕ್ಷಿತ ಪ್ರದೇಶದ ಬಳಿ ಹಾವು ಸಾವನ್ನಪ್ಪಿದೆ. ಈ ಹಾವಿನ ಜಾತಿಯನ್ನು ನಿರ್ಧರಿಸಲು ಡಿಎನ್‌ಎ ಪರೀಕ್ಷೆಯನ್ನು ಮಾಡಲಾಯಿತು, ಆದರೆ ಡಿಎನ್‌ಎ ಪರೀಕ್ಷೆಯಲ್ಲಿ ಇದು ಸಂಪೂರ್ಣವಾಗಿ ಹೊಸ ಜಾತಿಯ ಹಾವು ಎಂದು ತಿಳಿದುಬಂದಿದೆ. ಆವಿಷ್ಕಾರವನ್ನು ‘ಜರ್ನಲ್ ಆಫ್ ಏಷ್ಯಾ-ಪೆಸಿಫಿಕ್ ಬಯೋಡೈವರ್ಸಿಟಿ’ ನಲ್ಲಿ ಪ್ರಕಟಿಸಲಾಗಿದೆ.

‘ಜರ್ನಲ್ ಆಫ್ ಏಷ್ಯಾ-ಪೆಸಿಫಿಕ್ ಬಯೋಡೈವರ್ಸಿಟಿ’ ಯಲ್ಲಿ ಪ್ರಕಟವಾದ ವರದಿಯ ಪ್ರಕಾರ, ಡಿಸೆಂಬರ್ 2021 ರಲ್ಲಿ, ವಿಜ್ಞಾನಿಗಳಾದ ಸೌರಭ್ ವರ್ಮಾ ಮತ್ತು ಸೋಹಂ ಪಟೇಕರ್ ಅವರು ವಾಲ್ಮೀಕಿ ಹುಲಿ ಸಂರಕ್ಷಿತ ಪ್ರದೇಶದ ಬಳಿ ತನಿಖೆ ನಡೆಸುತ್ತಿದ್ದಾಗ ಸತ್ತ ಹಾವೊಂದು ಪತ್ತೆಯಾಗಿದೆ. ಈ ಹಾವಿನ ಮೂಗು ಅಸಾಮಾನ್ಯವಾಗಿ ಉದ್ದವಾಗಿರುವುದನ್ನು ಗಮನಿಸಿದ್ದು, ಈ ಹಾವು ಅವರ ಗಮನ ಸೆಳೆದಿದೆ. ಅವರು ಹಾವಿನ ಮಾದರಿಗಳನ್ನು ಸಂಗ್ರಹಿಸಿ ಡಿಎನ್ಎ ಪರೀಕ್ಷೆಯನ್ನು ಪ್ರಾರಂಭಿಸಿ, ಇದು ಸಂಪೂರ್ಣ ಹೊಸ ಜಾತಿಯ ಹಾವು ಎಂಬುದು ದೃಢಪಟ್ಟಿಸಿದ್ದಾರೆ.

ಇದನ್ನೂ ಓದಿ: ಕೇಕ್​​ ಕಟ್​​​ ಮಾಡಿ ಬೈಕ್ ಬರ್ತ್‌ಡೇ ಆಚರಿಸಿದ ವ್ಯಕ್ತಿ; ವಿಡಿಯೋ ವೈರಲ್​​

ಸಂಶೋಧಕರ ತಂಡ ನೀಡಿರುವ ವಿವರಗಳ ಪ್ರಕಾರ.. ಇದುವರೆಗೆ ಈ ಹಾವು ಬಿಹಾರ ಮತ್ತು ಮೇಘಾಲಯದಲ್ಲಿ ಎರಡು ಕಡೆ ಮಾತ್ರ ಕಾಣಿಸಿಕೊಂಡಿದೆ. ಈ ಹಾವಿನ ಉದ್ದ 4 ಅಡಿಗಳವರೆಗೆ ಇರುತ್ತದೆ. ಇದರ ತಲೆ ತ್ರಿಕೋನ ಆಕಾರದಲ್ಲಿದೆ. ಇದರ ಮೂಗು ತುಂಬಾ ಉದ್ದವಾಗಿದೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:20 pm, Thu, 12 September 24