
ಗಂಡ ಹೆಂಡಿರ (husband- wife)ನಡುವೆ ಸಣ್ಣ ಪುಟ್ಟ ಮನಸ್ತಾಪಗಳು ಸರ್ವೇ ಸಾಮಾನ್ಯ. ಹೀಗಾದಾಗ ಕುಳಿತು ಬಗೆಹರಿಸುವ ಬದಲು ಕೋರ್ಟ್ ಮೆಟ್ಟಿಲೇರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಆದರೆ ಇಲ್ಲೊಬ್ಬ ವ್ಯಕ್ತಿ ತನ್ನ ಮಾಜಿ ಪತ್ನಿಯ ಮದುವೆಗೆ ಮಗನನ್ನು ಕರೆದುಕೊಂಡು ಬಂದಿದ್ದಾರೆ. ಆದರೆ ತನ್ನ ತಾಯಿಯನ್ನು ಭೇಟಿಯಾಗಲು ಮಗನು ಹಿಂದೇಟು ಹಾಕಿದ್ದಾನೆ. ತಂದೆ ತನ್ನ ಮಗನ ಮನವೊಲಿಸಿ ಮಾಜಿ ಪತ್ನಿಗೆ ಶುಭಾಶಯ ತಿಳಿಸಲು ವೇದಿಕೆ ಹತ್ತಿದ್ದಾರೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಯುವರ್ ಪೇನ್ (Your pain) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ತಾಯಿಯಿಂದ ಮಗನನ್ನು ದೂರ ಮಾಡದಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಹೌದು, ತಂದೆ ತನ್ನ ಮಗನನ್ನು ಹೊಸ ಜೀವನಕ್ಕೆ ಕಾಲಿಟ್ಟ ತನ್ನ ಮಾಜಿ ಪತ್ನಿಯ ಬಳಿಗೆ ಕರೆದ್ಯೊಯ್ದಿದ್ದಾರೆ. ಹೊಸ ಜೀವನ ಆರಂಭಿಸುತ್ತಿರುವ ತನ್ನ ಮಾಜಿ ಪತ್ನಿಗೆ ಶುಭ ಹಾರೈಸಿ, ಆಕೆಯ ಪತಿಯನ್ನು ಅಪ್ಪಿಕೊಂಡಿರುವುದನ್ನು ಕಾಣಬಹುದು. ಈ ಮಹಿಳೆ ತನ್ನ ಮಗನನ್ನು ಕಂಡೊಡನೆ ಭಾವುಕರಾಗಿದ್ದಾರೆ.
ಇದನ್ನೂ ಓದಿ: ಪ್ರೀತಿಸಿದವಳ ಕೈ ಹಿಡಿಯಲು ಮಗನಿಗೆ ಷರತ್ತು ಹಾಕಿದ ಪೋಷಕರು; ಬೇಸರ ವ್ಯಕ್ತಪಡಿಸಿದ ಯುವಕ
ಈ ವಿಡಿಯೋ ಅಧಿಕ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಯಾವ ಮಕ್ಕಳಿಗೂ ಇಂತಹ ಪರಿಸ್ಥಿತಿ ಬರಬಾರದು ಎಂದಿದ್ದಾರೆ. ಇನ್ನೊಬ್ಬರು, ಮಗ ದೃಷ್ಟಿಯಲ್ಲಿ ತಾಯಿ ಯಾವತ್ತು ಕೆಟ್ಟವಳೇ ಆಗಿ ಉಳಿಯುತ್ತಾಳೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವಾಗುವುದು ಅಂದ್ರೆ ಇದೇ ನೋಡಿ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ