ಕೆಲವು ಸಾಹಸಗಳು ಮೈರೋಮಾಂಚನಗೊಳಿಸುತ್ತವೆ. ಆದರೆ ಇನ್ನು ಕೆಲವು ದುಸ್ಸಾಹಸಗಳು ನೋಡುಗರನ್ನು ಭಯಭೀತಿಗೊಳಿಸುತ್ತವೆ. ಅಂತಹ ಒಂದು ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಯೆಟ್ನಾಂನ ಇಬ್ಬರು ಸಹೋದರರ ಸಾಹಸವೊಂದು ಇದೀಗ ಎಲ್ಲೆಡೆ ವೈರಲ್ ಆಗಿದೆ. ಒಬ್ಬರ ಮೇಲೊಬ್ಬರು ನಿಂತುಕೊಂಡು 53 ಸೆಕೆಂಡುಗಳಲ್ಲಿ 100 ಮೆಟ್ಟಿಗಳನ್ನು ಹತ್ತಿ ಗಿನ್ನಿಸ್ ದಾಖಲೆ ಮಾಡಿದ್ದಾರೆ. ಸ್ಪೇನ್ನ ಗಿರೋನಾದಲ್ಲಿರುವ ಸೆಂಟ್ ಮೆರೀಸ್ ಕ್ಯಾಥ್ರೋಡಲ್ನಲ್ಲಿರುವ ಚರ್ಚ್ನ ಹೊರಭಾಗದಲ್ಲಿ ಈ ಚಮತ್ಕಾರಿ ದೃಶ್ಯನೋಡಿ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
37 ವರ್ಷದ ಗಿಯಾಂಗ್ ಕ್ವೋಕ್ ಕೋ ಮತ್ತು 32 ವರ್ಷದ ಆತನ ಸಹೋದರ ಗಿಯಾಂಗ್ ಕ್ವೋಕ್ ಎನ್ಘಿಪ್ ಎನ್ನುವವರು ಒಬ್ಬರ ಈ ಸಾಧನೆ ಮಾಡಿದ್ದಾರೆ. 2016 ರ ಡಿಸೆಂಬರ್ನಲ್ಲಿ ಇದೇ ರೀತಿ ಒಬ್ಬರ ತಲೆಯಮೇಲೆ ಇನ್ನೊಬ್ಬರು ತಲೆಯಿಟ್ಟು ಉಲ್ಟಾ ನಿಂತು 52 ಸೆಕೆಂಡುಗಳಲ್ಲಿ 90 ಮೆಟ್ಟಿಲನ್ನು ಹತ್ತಿದ್ದರು. ಇದೀಗ ಅವರದೇ ದಾಖಲೆಯನ್ನು ಮುರಿದು 53 ಸೆಕೆಂಡುಗಳಲ್ಲಿ 100 ಮೆಟ್ಟಿಗಳನ್ನು ಹತ್ತುವ ಮೂಲಕ ಹೊಸ ಗಿನ್ನಿಸ್ ದಾಖಲೆ ಮಾಡಿದ್ದಾರೆ. ಈ ಬಗ್ಗೆ ಮಾತನಾಡಿದ ಸಹೋದರರು ಪ್ರತಿದಿನ ನಾವು ಅಭ್ಯಾಸವನ್ನು ಮಾಡುತ್ತಿದ್ದೆವು, ಪ್ರತಿಯೊಬ್ಬರೂ ಈ ದಿನವನ್ನು ನೆನಪಿಸಿಕೊಳ್ಳುತ್ತಾರೆ ಎಂದು ಭಾವಿಸುತ್ತೇವೆ ಎಂದಿದ್ದಾರೆ.
ಸದ್ಯ ಈ ವೀಡಿಯೋ ಯುಟ್ಯೂಬ್ನಲ್ಲಿ ವೈರಲ್ ಆಗಿದೆ. ಸಹೋದರರ ಸಾಹಸಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ. ಕ್ಯಾಥ್ರಡೆಲ್ನಲ್ಲಿ 90 ಮೆಟ್ಟಿಲುಳು ಮಾತ್ರ ಇದ್ದ ಕಾರಣ ಇವರ ಸಾಹಸಕ್ಕಾಗಿ ಮತ್ತೆ 10 ಮಟ್ಟಿಗಳನ್ನು ಜೋಡಿಸಲಾಗಿತ್ತು. ಈ ಬಗ್ಗೆ ಅಂತಾರಾಷ್ಟ್ರೀಯ ಮಾಧ್ಯಮಗಳು ವೀಡಿಯೋವನ್ನು ಪ್ರಸಾರ ಮಾಡಿದ್ದವು. ಅದರ ಬಳಿಕ ಜಗತ್ತಿನಾದ್ಯಂತ ವೀಡಿಯೋ ಎಲ್ಲರ ಗಮನಸೆಳೆದಿದೆ.
ಇದನ್ನೂ ಓದಿ: