Video: ದೇವರ ಪ್ರಸಾದವೆಂದು ನಿಂಬೆ ರಸ ಕೊಟ್ಟು ಸಹೋದ್ಯೋಗಿ ಮಿತ್ರರನ್ನು ಪ್ರಾಂಕ್ ಮಾಡಿದ ವ್ಯಕ್ತಿ

ಆಫೀಸಿನಲ್ಲಿ ಕೆಲಸದ ನಡುವೆ ಬಿಡುವು ಸಿಕ್ಕಾಗ ಸಹೋದ್ಯೋಗಿಗಳು ಹರಟೆ ಹೊಡೆಯುವುದು, ಕಾಲೆಳೆಯುವುದು ಮಾಮೂಲಿ. ಆದರೆ ಇಲ್ಲೊಬ್ಬ ವ್ಯಕ್ತಿ ತನ್ನ ಸಹೋದ್ಯೋಗಿಗಳಿಗೆ ತೀರ್ಥ ರೂಪದಲ್ಲಿ ನಿಂಬೆ ರಸವನ್ನು ಕೊಟ್ಟು ಪ್ರಾಂಕ್ ಮಾಡಿದ್ದಾನೆ. ನಿಂಬೆ ರಸ ಕುಡಿದು ಸಹೋದ್ಯೋಗಿಗಳು ನೀಡಿದ ಕ್ಯೂಟ್ ರಿಯಾಕ್ಷನ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ದೇವರ ಪ್ರಸಾದವೆಂದು ನಿಂಬೆ ರಸ ಕೊಟ್ಟು ಸಹೋದ್ಯೋಗಿ ಮಿತ್ರರನ್ನು ಪ್ರಾಂಕ್ ಮಾಡಿದ ವ್ಯಕ್ತಿ
ವೈರಲ್‌ ವಿಡಿಯೋ
Image Credit source: Instagram

Updated on: May 28, 2026 | 5:35 PM

ಆಫೀಸಿನಲ್ಲಿ (Office), ಕೆಲಸ ಮಾಡುವ ಸ್ಥಳದಲ್ಲಿ ತಮಾಷೆ ಮಾಡುವ ಸಹೋದ್ಯೋಗಿಗಳಿದ್ದರೆ (colleague) ಸಮಯ ಕಳೆದದ್ದೇ ತಿಳಿಯಲ್ಲ. ಸಹೋದ್ಯೋಗಿಗಳ ನಡುವಿನ ಹರಟೆ ಕೆಲಸದ ವಾತಾವರಣವನ್ನು ಹಗುರವಾಗಿಸುತ್ತದೆ. ತರ್ಲೆ ತಮಾಷೆ ಮಾಡುವವರು ಇದ್ದು ಬಿಟ್ಟರೆ ನಗುವಿಗೇನು ಕೊರತೆ ಇರಲ್ಲ. ವ್ಯಕ್ತಿಯೊಬ್ಬ ಆಫೀಸಿನಲ್ಲಿ ಸಹೋದ್ಯೋಗಿಗಳಿಗೆ ಪ್ರಾಂಕ್ ಮಾಡಿದ್ದಾನೆ. ಹೌದು, ಸಹೋದ್ಯೋಗಿಗಳಿಗೆ ದೇವರ ಪ್ರಸಾದ ಎಂದು ನಿಂಬೆ ರಸ ನೀಡಿರುವ ವಿಡಿಯೋ ವೈರಲ್ ಆಗಿದೆ.

@teambabyorgano ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಆಫೀಸಿನ ಸುಂದರ ಕ್ಷಣದ ವಿಡಿಯೋ ಹಂಚಿಕೊಳ್ಳಲಾಗಿದೆ. ವ್ಯಕ್ತಿಯೊಬ್ಬ ಆಫೀಸಿನಲ್ಲಿ ಸಹೋದ್ಯೋಗಿಗಳಿಗೆ ದೇವರ ಪ್ರಸಾದ ಎಂದು ನಿಂಬೆ ರಸ ನೀಡಿ ಪ್ರಾಂಕ್ ಮಾಡಲು ಮುಂದಾಗಿದ್ದಾನೆ. ಒಬ್ಬೊಬ್ಬರಾಗಿ ಪ್ರಸಾದವೆಂದು ಸ್ವೀಕರಿಸಿ ಕುಡಿಯುತ್ತಿದ್ದಂತೆ ನಿಂಬೆ ರಸ ಎಂದು ತಿಳಿದಿದೆ. ಆಫೀಸಿನ ಸಹೋದ್ಯೋಗಿಗಳು ನೀಡಿದ ರಿಯಾಕ್ಷನ್ ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿದೆ.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಕನಸು ನನಸಾದ ಕ್ಷಣ; ತನ್ನ ಅಜ್ಜಿಯನ್ನು ಮೈಕ್ರೋ ಸಾಫ್ಟ್ ಆಫೀಸ್ ತೋರಿಸಲು ಕರೆದೊಯ್ದ ಉದ್ಯೋಗಿ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ದೇವರ ಮೇಲಿನ ಭಕ್ತಿ ಅಂತಹದ್ದು ಎಂದರೆ, ಮತ್ತೊಬ್ಬರು ಭಾರತೀಯರುವಿಷ ಕೊಟ್ರು ಬೇಡ ಎನ್ನಲ್ಲ ಎಂದಿದ್ದಾರೆ. ಇನ್ನೊಬ್ಬರು, ಪ್ರತಿಯೊಬ್ಬ ಫೇಸ್ ರಿಯಾಕ್ಷನ್ ನೋಡಲು ಖುಷಿಯೆನಿಸುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 5:29 pm, Thu, 28 May 26

Sainandha P

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Follow Us